For Quick Alerts
ALLOW NOTIFICATIONS  
For Daily Alerts

ವೋಕ್ಸ್‌ವ್ಯಾಗನ್ ಟೈಗನ್ ಭಾರತದಲ್ಲಿ ಬಿಡುಗಡೆ: ಬೆಲೆ, ವೈಶಿಷ್ಟ್ಯತೆ ತಿಳಿದುಕೊಳ್ಳಿ

|

ಬಹುನಿರೀಕ್ಷಿತ ವೋಕ್ಸ್‌ವ್ಯಾಗನ್ ಟೈಗನ್ ಭಾರತದ ಮಾರುಕಟ್ಟೆ ಪ್ರವೇಶಿಸಿದ್ದು, 10.50 ಲಕ್ಷ ರೂ. ಆರಂಭಿಕ ಬೆಲೆಯೊಂದಿಗೆ ಬಿಡುಗಡೆಯಾಗಿದೆ. ಇದನ್ನು ನಾಲ್ಕು ರೂಪಾಂತರಗಳು, ಐದು ಬಣ್ಣ ಆಯ್ಕೆಗಳು ಮತ್ತು ಸಾಕಷ್ಟು ವೈಶಿಷ್ಟ್ಯಗಳಲ್ಲಿ ತರಲಾಗಿದೆ.

 

ಇದರೊಂದಿಗೆ ಈ ಎಸ್‌ಯುವಿಗೆ ಎರಡು ಎಂಜಿನ್ ಮತ್ತು ಗೇರ್ ಬಾಕ್ಸ್ ಆಯ್ಕೆ ನೀಡಲಾಗಿದೆ. ಇದರ ಬುಕಿಂಗ್ ಅನ್ನು ಆಗಸ್ಟ್‌ನಲ್ಲಿ ಆರಂಭಿಸಲಾಯಿತು ಮತ್ತು ಈಗ ಈ ಎಸ್‌ಯುವಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಾಗಿದೆ.

ವೋಕ್ಸ್‌ವ್ಯಾಗನ್ ಟೈಗನ್ ಬೆಲೆ ಎಷ್ಟು?

ವೋಕ್ಸ್‌ವ್ಯಾಗನ್ ಟೈಗನ್ ಬೆಲೆ ಎಷ್ಟು?

Comfortline MT: 10,49,900 ರೂಪಾಯಿ

Highline MT: 12,79,900 ರೂಪಾಯಿ

Highline AT: 14,09,900 ರೂಪಾಯಿ

Topline MT: 14,56,900 ರೂಪಾಯಿ

Topline AT: 15,90,900 ರೂಪಾಯಿ

GT MT: 14,99,900 ರೂಪಾಯಿ

GT Plus DSG: 17,49,900 ರೂಪಾಯಿ

 

ಬಣ್ಣಗಳ ಆಯ್ಕೆ ಏನಿದೆ?

ಬಣ್ಣಗಳ ಆಯ್ಕೆ ಏನಿದೆ?

ವೋಕ್ಸ್‌ವ್ಯಾಗನ್ ಟೈಗನ್ ಹಳದಿ, ವೈಲ್ಡ್ ಚೆರ್ರಿ ರೆಡ್, ಕ್ಯಾಂಡಿ ವೈಟ್ ರಿಫ್ಲೆಕ್ಸ್ ಸಿಲ್ವರ್, ಕಾರ್ಬನ್ ಸ್ಟೀಲ್ ಗ್ರೇ ಆಯ್ಕೆಯನ್ನು ಹೊಂದಿದೆ.

ನೀವು ಈ ಎಸ್‌ಯುವಿಯನ್ನು ಖರೀದಿಸಲು ಬಯಸದಿದ್ದರೆ, ಚಂದಾದಾರಿಕೆ ಆಧಾರಿತ ಪ್ರೋಗ್ರಾಂ ಮೂಲಕ ನೀವು ಅದನ್ನು ನಿಮ್ಮದಾಗಿಸಿಕೊಳ್ಳಬಹುದು. ಮೊದಲ ಹಂತದ ಭಾಗವಾಗಿ, ಈ ಚಂದಾದಾರಿಕೆ ಆಧಾರಿತ ಕಾರ್ಯಕ್ರಮವು ದೆಹಲಿ-ಎನ್‌ಸಿಆರ್, ಮುಂಬೈ, ಪುಣೆ, ಅಹಮದಾಬಾದ್, ಬೆಂಗಳೂರು, ಚೆನ್ನೈ ಮತ್ತು ಹೈದರಾಬಾದ್‌ನ 30 ಮಳಿಗೆಗಳಲ್ಲಿ ಲಭ್ಯವಿರುತ್ತದೆ.

ಕಾರಿನ ಔಟ್‌ಲುಕ್ ಹೇಗಿದೆ ?
 

ಕಾರಿನ ಔಟ್‌ಲುಕ್ ಹೇಗಿದೆ ?

ಸ್ಕ್ವೇರ್ ಎಲ್ಇಡಿ ಹೆಡ್ ಲ್ಯಾಂಪ್ಸ್, ಎಲ್ಇಡಿ ಡಿಆರ್ ಎಲ್ ಲೈಟ್ ಗಳಿರುವ 17 ಇಂಚಿನ ಅಲಾಯ್ ವ್ಹೀಲ್ ಗಳು, ಎಲ್ಇಡಿ ಟೈಲ್ ಲೈಟ್ಸ್ ಮತ್ತು ಸುತ್ತಲೂ ಪ್ಲಾಸ್ಟಿಕ್ ಕ್ಲಾಡಿಂಗ್ ನೀಡಲಾಗಿದೆ. ಇದನ್ನು ಕಂಪನಿಯ MQB-AO-IN ಪ್ಲಾಟ್‌ಫಾರ್ಮ್‌ನಲ್ಲಿ ನಿರ್ಮಿಸಲಾಗಿದೆ.

ಇದು ಕ್ರೋಮ್ ಸ್ಲೇಟ್‌ನೊಂದಿಗೆ ಬರುವ ಕಪ್ಪು ಬಣ್ಣದ ಗ್ರಿಲ್ ಅನ್ನು ಪಡೆಯುತ್ತದೆ. ಇದಕ್ಕೆ ಶಾರ್ಕ್ ಫಿನ್ ಆಂಟೆನಾ, ರೂಫ್ ರೇಲ್ಸ್, ಡ್ಯುಯಲ್ ಟೋನ್ ORVM ನೀಡಲಾಗಿದೆ.

 

ಕಾರಿನ ವೈಶಿಷ್ಟ್ಯಗಳು

ಕಾರಿನ ವೈಶಿಷ್ಟ್ಯಗಳು

ಈ ಎಸ್‌ಯುವಿಯು ಸಾಕಷ್ಟು ವೈಶಿಷ್ಟ್ಯಗಳು ಮತ್ತು ಸಲಕರಣೆಗಳೊಂದಿಗೆ ಬರುತ್ತದೆ. ಒಳಾಂಗಣವನ್ನು ಡ್ಯುಯಲ್ ಟೋನ್ ಕಲರ್ ಸ್ಕೀಮ್‌ನಲ್ಲಿ ಇರಿಸಲಾಗಿದ್ದು ಡ್ಯಾಶ್‌ಬೋರ್ಡ್‌ನಲ್ಲಿ ಬೆಳ್ಳಿಯ ಪಟ್ಟಿಯನ್ನು ಕಾಣಬಹುದು. ಇದು ಫ್ಲಾಟ್ ಬಾಟಮ್ ಸ್ಟೀರಿಂಗ್ ಮತ್ತು ಅದರ ಸುತ್ತ ನಿಯಂತ್ರಣ ಬಟನ್ ಹೊಂದಿದೆ. ಇದು 10 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಬ್ಲೂಟೂತ್ ಸ್ಮಾರ್ಟ್‌ಫೋನ್ ಸಂಪರ್ಕ, ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಕನೆಕ್ಟಿವಿಟಿ ಹೊಂದಿದೆ.

ಇತರೆ ವೈಶಿಷ್ಟ್ಯಗಳು
ವೈರ್‌ಲೆಸ್ ಸ್ಮಾರ್ಟ್‌ಫೋನ್ ಚಾರ್ಜರ್, ರಿಯರ್ ಎಸಿ ವೆಂಟ್ಸ್ ಫ್ರಂಟ್ ಮತ್ತು ರಿಯರ್ ಸ್ಮಾರ್ಟ್‌ಫೋನ್ ಚಾರ್ಜಿಂಗ್ ಪೋರ್ಟ್ ಸೆಂಟ್ರಲ್, ಆರ್ಮ್‌ರೆಸ್ಟ್ ಕ್ಲೈಮೇಟ್ ಕಂಟ್ರೋಲ್ ಎಲೆಕ್ಟ್ರಿಕ್ ಸನ್ ರೂಫ್, ರೆಡ್ ಆಂಬಿಯೆಂಟ್ ಲೈಟಿಂಗ್, ಸ್ಮಾರ್ಟ್ ಟಚ್ ಕ್ಲೈಮೆಟ್ರೋನಿಕ್ ಆಟೋ ಎಸಿ ಹೊಂದಿದೆ.

ಎರಡು ಎಂಜಿನ್ ಆಯ್ಕೆಗಳು

ಎರಡು ಎಂಜಿನ್ ಆಯ್ಕೆಗಳು

ಇದರ ಮೊದಲ ಎಂಜಿನ್ 1.0-ಲೀಟರ್ TSI ಟರ್ಬೊ ಪೆಟ್ರೋಲ್ ಎಂಜಿನ್ ಆಗಿದ್ದು, ಇದು 113 ಬಿಎಚ್‌ಪಿ ಪವರ್ ಮತ್ತು 175 ಎನ್ಎಂ ಗರಿಷ್ಠ ಟಾರ್ಕ್ ಉತ್ಪಾದಿಸುತ್ತದೆ. ಇದನ್ನು 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ನೀಡಬಹುದು.

ಎರಡನೇ ಎಂಜಿನ್ ಆಯ್ಕೆಯು 1.5-ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಆಗಿದ್ದು ಅದು 148 ಬಿಎಚ್‌ಪಿ ಪವರ್ ಮತ್ತು 250 ಎನ್ಎಂ ಗರಿಷ್ಠ ಟಾರ್ಕ್ ಅನ್ನು ಹೊರಹಾಕುತ್ತದೆ. 6-ಸ್ಪೀಡ್ ಆಟೋಮ್ಯಾಟಿಕ್ ಮತ್ತು 7-ಸ್ಪೀಡ್ DSG ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆ ಇರುತ್ತದೆ.

 

Read more about: car price ಕಾರು ಬೆಲೆ
English summary

Volkswagen Taigun SUV launched in India: Check price, specifications and features in kannada

Volkswagen taigun has been finally launched in india at Rs 10.5 lakh (ex-showroom). We say finally because the SUV was showcased at Auto expo 2020, albeit in concept form and we had expected it to hit the markets sooner.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X