77ನೇ ಗಣರಾಜ್ಯೋತ್ಸವ ಆಚರಣೆಗೆ (Republic Day) ಇಡೀ ದೇಶವೇ ಸಜ್ಜಾಗಿ ನಿಂತಿದೆ. ದೆಹಲಿಯಂತೆಯೇ ಬೆಂಗಳೂರಿನಲ್ಲೂ (Bengaluru) ಕರ್ನಾಟಕ ರಾಜ್ಯ ಮಟ್ಟದಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮವನ್ನು ಆಚರಿಸಲಾಗುತ್ತದೆ. ಪ್ರತೀ ವರ್ಷ ಬೆಂಗಳೂರಿನಲ್ಲೂ ಗಣರಾಜ್ಯೋತ್ಸವ ಪರೇಡ್ ನಡೆಸಲಾಗುತ್ತದೆ, ಈ ಪರೇಡ್‌ಗೆ ಮುಖ್ಯಮಂತ್ರಿ, ರಾಜ್ಯಪಾಲರು, ರಾಜ್ಯದ ಗೌರವಾನ್ವಿತ ಅತಿಥಿಗಳು, ಇತರ ಗಣ್ಯರು ಭಾಗವಹಿಸುತ್ತಾರೆ. ಇನ್ನು ಈ ಪರೇಡ್ ವೀಕ್ಷಿಸಲು ಸಾರ್ವಜನಿಕರೂ ಹೋಗುವ ಅವಕಾಶ ನೀಡಲಾಗುತ್ತದೆ. ಆದರೆ ಅದಕ್ಕಾಗಿ ಇ-ಪಾಸ್ ಸೌಲಭ್ಯವನ್ನು ಸಹ ನೀಡಲಾಗುತ್ತದೆ.

ಇದೀಗ ಬೆಂಗಳೂರಿನ ಫೀಲ್ಡ್ ಮಾರ್ಷಲ್ ಮಾಣೆಕ್ ಷಾ ಪರೇಡ್ ಗ್ರೌಂಡ್‌ನಲ್ಲಿ ಜನವರಿ 26 ರಂದು ನಡೆಯುವ 77ನೇ ಗಣರಾಜ್ಯೋತ್ಸವ ದಿನಾಚರಣೆ ಕಾರ್ಯಕ್ರಮ ವೀಕ್ಷಿಸಲು ಸಾರ್ವಜನಿಕರಿಗೆ ಇ-ಪಾಸ್ ವ್ಯವಸ್ಥೆ ನೀಡಲಾಗಿದೆ. ಹಾಗಿದ್ರೆ ಇ-ಪಾಸ್ ಪಡೆಯುವುದು ಹೇಗೆ? ಎಲ್ಲಿ ಅರ್ಜಿ ಸಲ್ಲಿಸಬೇಕು? ಈ ಕುರಿತು ಸಂಪೂರ್ಣ ಮಾಹಿತಿ ಈ ಲೇಖನದಲ್ಲಿದೆ ಓದಿ.
ಏನಿದು ಇ-ಪಾಸ್ ವ್ಯವಸ್ಥೆ?
2026ರಲ್ಲಿ 77ನೇ ವರ್ಷದ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಬೆಂಗಳೂರಿನ ಫೀಲ್ಡ್ ಮಾರ್ಷಲ್ ಮಾಣೆಕ್ ಷಾ ಪರೇಡ್ ಗ್ರೌಂಡ್‌ನಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಸಾರ್ವಜಇಕ ಪ್ರವೇಶಕ್ಕಾಗಿ ನೀಡಲಾಗುವ ಪಾಸ್ ವ್ಯವಸ್ಥೆ. ಇದರಿಂದ ಕಾರ್ಯಕ್ರಮದ ಸುರಕ್ಷತೆ ಮತ್ತು ವ್ಯವಸ್ಥೆಯನ್ನು ಉತ್ತಮಗೊಳಿಸಬಹುದಾಗಿದೆ. ಇದೇ ಉದ್ದೇಶದಿಂದ ಇ-ಪಾಸ್ ವ್ಯವಸ್ಥೆಯನ್ನು ಸಾರ್ವಜನಿಕರಿಗಾಗಿ ತರಲಾಗಿದೆ. ಇನ್ನು ಜನವರಿ 14 ರಿಂದ ಜನವರಿ 24 ರವರೆಗೆ (ಸಂಜೆ 5 ಗಂಟೆಯವರೆಗೆ) ಇ-ಪಾಸ್‌ಗಾಗಿ ಅರ್ಜಿ ಸಲ್ಲಿಸಬಹುದು. ಪ್ರಸ್ತುತ ಅರ್ಜಿ ಪ್ರಕ್ರಿಯೆ ನಡೆಯುತ್ತಿದ್ದು, ನಾಳೆ (ಜ.24) ಕೊನೆಯ ದಿನವಾಗಿದೆ.
ಬೆಂಗಳೂರು ಗಣರಾಜ್ಯೋತ್ಸವ ದಿನಾಚರಣೆಯ ವಿವರ:
- ದಿನಾಂಕ ಮತ್ತು ಸಮಯ: ಜನವರಿ 26, 2026 (ಸೋಮವಾರ), ಬೆಳಿಗ್ಗೆ 9 ಗಂಟೆಯಿಂದ ಆರಂಭವಾಗಲಿದೆ. ಕಾರ್ಯಕ್ರಮದಲ್ಲಿ ಪರೇಡ್, ಸಾಂಸ್ಕೃತಿಕ ಕಾರ್ಯಕ್ರಮಗಳು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಭಾಷಣೆ ಮತ್ತು ಇತರ ಆಚರಣೆಗಳು ನಡೆಯಲಿದೆ.
- ಸ್ಥಳ: ಫೀಲ್ಡ್ ಮಾರ್ಷಲ್ ಮಾನೇಕ್‌ಷಾ ಪರೇಡ್ ಗ್ರೌಂಡ್, ಬೆಂಗಳೂರು.
- ಪ್ರವೇಶ ಗೇಟ್: ಇನ್ನು ಇ-ಪಾಸ್ ಹೊಂರಿರುವವರಿಗೆ ಗೇಟ್ ನಂಬರ್ 5 ರ ಮೂಲಕ ಮಾತ್ರ ಪ್ರವೇಶವಿರುತ್ತದೆ. ಪ್ರಿಂಟೆಡ್ ಅಥವಾ ಡಿಜಿಟಲ್ ಪಾಸ್ ತೋರಿಸಬಹುದು.
- ನಿಯಮ ಕಡ್ಡಾಯ: ಪ್ರವೇಶ ಉಚಿತ. ಇಪಾಸ್ ಇದ್ದರೆ ಮಾತ್ರ ಅವಕಾಶ. ಸಾರ್ವಜನಿಕರಿಗೆ ಸೀಮಿತ ಸೀಟುಗಳು ಲಭ್ಯ.
ಆನ್‌ಲೈನ್‌ನಲ್ಲಿ ಇ-ಪಾಸ್ ಹೀಗೆ ಪಡೆಯಿರಿ:
- ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬಹುದು. ಅದಕ್ಕಾಗಿ ಕೆಲವು ಟ್ರಿಕ್ಸ್ ಫಾಲೋ ಮಾಡಬೇಕು.
- ವೆಬ್‌ಸೈಟ್ www.sevasindhu.karnataka.gov.in ಗೆ ಭೇಟಿ ನೀಡಿ ಅಥವಾ ಸೇವಾ ಸಿಂಧು ಆಪ್ ಡೌನ್‌ಲೋಡ್ ಮಾಡಬಹುದು
- ರಿಜಿಸ್ಟರ್ ಮಾಡಿ: ಮೊದಲ ಬಾರಿಗೆ ಸೇವಾ ಸಿಂಧು ಬಳಸುವುದಾದ್ರೆ, ಮೊಬೈಲ್ ನಂಬರ್ ಅಥವಾ ಆಧಾರ್ ಕಾರ್ಡ್ ಬಳಸಿ ರಿಜಿಸ್ಟರ್ ಮಾಡಿಕೊಳ್ಳಿ.
- ಸರ್ವಿಸ್ ಸರ್ಚ್ ಮಾಡಿ: ಸರ್ಚ್ ಬಾರ್‌ನಲ್ಲಿ "Republic Day E-Pass" ಎಂದು ಸರ್ಚ್ ಮಾಡಿ.
- ಅಲ್ಲಿ ನೀವು ಅರ್ಜಿ ಫಾರ್ಮ್ ಭರ್ತಿ ಮಾಡಬೇಕು.
- ವೈಯಕ್ತಿಕ ವಿವರ, ಆಧಾರ್ ವಿವರ, ಕುಟುಂಬದ ಸದಸ್ಯರ ವಿವರ, ಫೋಟೋ ಅಪ್‌ಲೋಡ್ ಮಾಡಬೇಕು.
- ಆ ನಂತರ ಸಬ್‌ಮಿಟ್ ಕ್ಲಿಕ್ ಮಾಡಬೇಕು.
- ಒಂದೆರಡು ದಿನದ ನಂತರ ಪಾಸ್ ಡೌನ್‌ಲೋಡ್ ಅವಕಾಶವಿರುತ್ತದೆ.
More From GoodReturns

Karnataka weather: ರಾಜ್ಯದ ಹಲವೆಡೆ ಆಲಿಕಲ್ಲು ಮಳೆ; ಮಾರ್ಚ್ 23ರವರೆಗೂ ಈ ಭಾಗದಲ್ಲಿ ಮಳೆ ಮುಂದುವರಿಕೆ

Bank Holiday: ನಾಳೆ ಕರ್ನಾಟಕದಲ್ಲಿ ಬ್ಯಾಂಕ್ ತೆರೆದಿರುತ್ತೋ, ಇಲ್ಲವೋ? ಸ್ಪಷ್ಟ ಮಾಹಿತಿ ತಿಳಿಯಿರಿ

Ballari Airport: ಬಳ್ಳಾರಿ ವಿಮಾನ ನಿಲ್ದಾಣಕ್ಕೆ ಈ ವಿಚಾರಕ್ಕೆ ಅಡ್ಡಿಯಾಗ್ತಿದ್ಯಾ-ಏನದು ಹೊಸ ವಿಚಾರ ತಿಳಿಯಿರಿ

Bengaluru: ಬೀದಿ ಬದಿ ವ್ಯಾಪಾರಕ್ಕೆ ಅವಕಾಶವಿಲ್ಲ; ಈ ರಸ್ತೆಯ ವ್ಯಾಪಾರಿಗಳಿಗೆ ದೊಡ್ಡ ಸಂಕಷ್ಟ

Karnataka Rain: ರಾಜ್ಯದಲ್ಲಿ ಸದ್ಯಕ್ಕೆ ನಿಲ್ಲಲ್ಲ ವರುಣಾರ್ಭಟ; ಎಷ್ಟು ದಿನ ಈ ಮಳೆ ಎಂದು ತಿಳಿಯಿರಿ

Good Friday 2026: ಈ ವರ್ಷ ಗುಡ್ ಫ್ರೈಡೇ ಯಾವಾಗ? ಈಸ್ಟರ್ ದಿನಾಂಕ ಮತ್ತು ಸಂಪೂರ್ಣ ಮಾಹಿತಿ ತಿಳಿಯಿರಿ

Karnataka Rain: ಕರ್ನಾಟಕದಲ್ಲಿ ಇನ್ನೆರಡು ದಿನ ಮಳೆಯಾರ್ಭಟ ಫಿಕ್ಸ್; ಜನರೇ ಎಚ್ಚರ!

Mysore Road: ಮೈಸೂರು ರೋಡ್ ಟ್ರಾಫಿಕ್ಗೆ ಆದಷ್ಟು ಬೇಗ ಮುಕ್ತಿ; 810 ಕೋಟಿ ವೆಚ್ಚದಲ್ಲಿ ಬರಲಿದೆ ಈ ಯೋಜನೆ

KOMUL Milk Price: ಕೋಲಾರ ರೈತರಿಗೆ ಯುಗಾದಿ ಗಿಫ್ಟ್; ಕೋಮುಲ್ ಹಾಲು ದರ 39.85 ರೂ.ಗೆ ಏರಿಕೆ

Karnataka SSLC Exam: ಇಂದಿನಿಂದ ಕರ್ನಾಟಕದಲ್ಲಿ SSLC ಪರೀಕ್ಷೆ; ವಿದ್ಯಾರ್ಥಿಗಳು ಈ ವಿಷಯ ದಿಳಿದೇ ಎಕ್ಸಾಂಗೆ ಹೋಗಿ

Gold Price Bengaluru: ಯುಗಾದಿಗೂ ಮುನ್ನ ಚಿನ್ನದ ಬೆಲೆ ಇಳಿಕೆ; ನಿನ್ನೆಗಿಂತ 3,300 ರೂ. ಕುಸಿತ



Click it and Unblock the Notifications