Waqf land: 8.72 ಲಕ್ಷ ವಕ್ಫ್ ಆಸ್ತಿಗಳು.. 38 ಲಕ್ಷ ಎಕರೆ ಭೂಮಿ.. ಯಾವ ರಾಜ್ಯದಲ್ಲಿ ಎಷ್ಟು? ಇಲ್ಲಿದೆ ಪಕ್ಕಾ ಮಾಹಿತಿ

ವಕ್ಸ್ ಭೂಮಿಯನ್ನು(Waqf land) ನೂರಾರು ವರ್ಷಗಳಿಂದ ದೇವರ ಹೆಸರಿನಲ್ಲಿ ಮುಸ್ಲಿಮ್ ದಾನಿಗಳು ಸಮುದಾಯದ ಅಭಿವೃದ್ಧಿಗಾಗಿ ದಾನ ಮಾಡುತ್ತಿದ್ದಾರೆ. ಈ ಭೂಮಿ ಬಗ್ಗೆ ಸಂಸತ್ತು ಹಾಗೂ ರಾಜ್ಯಸಭೆಗಳಲ್ಲಿ ಹೆಚ್ಚಿನ ಚರ್ಚೆಗಳು ಜೋರಾಗಿ ನಡೆಯುತ್ತಿತ್ತು. ಈ ಹಿಂದೆ ಕೂಡ ಈ ವಿಚಾರವಾಗಿ ಹಲವಾರು ಚರ್ಚೆಗಳು ಪ್ರತಿಭಟನೆಗಳು ನಡೆದಿದ್ದೇವೆ. ಆದರೆ ಇದೆಲ್ಲದರ ನಡುವೆ ವಕ್ಸ್ ಮಸೂದೆಯನ್ನು ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಅಂಗೀಕಾರವನ್ನು ಮಾಡಿದೆ.

ಹೌದು,ಎರಡೂ ಸದನಗಳಲ್ಲಿ ಒಟ್ಟು 25 ಗಂಟೆಗಳಿಗೂ ಹೆಚ್ಚು ಕಾಲ ನಡೆದ ಎರಡು ದಿನಗಳ ತೀವ್ರ ಚರ್ಚೆಯ ನಂತರ, ಸಂಸತ್ತಿನಲ್ಲಿ ಇಂದು ವಕ್ಫ್ ತಿದ್ದುಪಡಿ ಮಸೂದೆಯನ್ನು ಅಂಗೀಕರಿಸಿತು.ಇದು ಕಾಯಿದೆಯಾಗುವ ಮೊದಲು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಅನುಮೋದನೆಯನ್ನು ಪಡೆಯಬೇಕಾಗುತ್ತದೆ.

Waqf land: 8.72 ಲಕ್ಷ ವಕ್ಫ್ ಆಸ್ತಿಗಳು..ಯಾವ ರಾಜ್ಯದಲ್ಲಿ ಎಷ್ಟು?

ಈ ವಸೂದದೆಯ ಅಗೀಕಾರದ ಕುರಿತು ಮಹಾರಾಷ್ಟ್ರದ ನಾಗ್ಪುರದ ಮೋಮಿನ್‌ಪುರ ಪ್ರದೇಶದಲ್ಲಿ ವಕ್ಫ್ (ತಿದ್ದುಪಡಿ) ಮಸೂದೆಯ ವಿರುದ್ಧ ಮುಸ್ಲಿಂ ಸಮುದಾಯದ ಜನರು ಪ್ರತಿಭಟನೆಯನ್ನು ನಡೆಸುತ್ತಿದ್ದಾರೆ.

ಮಹಾರಾಷ್ಟ್ರದ ನಾಗ್ಪುರದ ಮೋಮಿನ್‌ಪುರ ಪ್ರದೇಶದಲ್ಲಿ ವಕ್ಫ್ (ತಿದ್ದುಪಡಿ) ಮಸೂದೆಯ ವಿರುದ್ಧ ಮುಸ್ಲಿಂ ಸಮುದಾಯದ ಜನರು ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ವರದಿಗಳು ಆಗಿವೆ. ಎರಡೂ ಸದನಗಳಲ್ಲಿ ಒಟ್ಟು 25 ಗಂಟೆಗಳಿಗೂ ಹೆಚ್ಚು ಕಾಲ ನಡೆದ ಎರಡು ದಿನಗಳ ತೀವ್ರ ಚರ್ಚೆಯ ನಂತರ, ಸಂಸತ್ತಿನಲ್ಲಿವಕ್ಫ್ ತಿದ್ದುಪಡಿ ಮಸೂದೆಯನ್ನು ಅಂಗೀಕರಿಸಿತು. ಇದು ಕಾಯಿದೆಯಾಗುವ ಮೊದಲು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಅನುಮೋದನೆ ನೀಡಬೇಕಾಗುತ್ತದೆ.

ಪ್ರಧಾನಿ ನರೇಂದ್ರ ಮೋದಿಯವರು ಈ ಮಸೂದೆಯ ಕುರಿತು ಭಾರತದಲ್ಲಿನ ವಕ್ಫ್ ಆಸ್ತಿಗಳ ನಿರ್ವಹಣೆ ಮತ್ತು ಮೇಲ್ವಿಚಾರಣೆಗೆ ಒಂದು ಮಹತ್ವದ ಕ್ಷಣವಾಗಿದೆ ಎಂದು ಹೇಳಿದ್ದಾರೆ.

ರಾಜ್ಯಸಭೆಯಲ್ಲಿ 13 ಗಂಟೆಗಳ ಕಾಲ ನಡೆದ ವಕ್ಫ್ ಮಸೂದೆಯ ಚರ್ಚೆಗೆ ವಿರೋಧ ಪಕ್ಷಗಳಿಂದ ತೀವ್ರ ಆಕ್ಷೇಪಣೆಗಳು ವ್ಯಕ್ತವಾಗಿದ್ದವು. ಮಸೂದೆಯನ್ನು "ಮುಸ್ಲಿಂ ವಿರೋಧಿ" ಮತ್ತು "ಅಸಂವಿಧಾನಿಕ" ಎಂದು ವಿರೋಧ ಪಕ್ಷಗಳು ಟೀಕೆಯನ್ನು ಮಾಡಿದ್ದವು. ಈ ಕುರಿತು ಮಸೂದೆಯು "ಐತಿಹಾಸಿಕ ಸುಧಾರಣೆ" ಅಲ್ಪಸಂಖ್ಯಾತ ಸಮುದಾಯಕ್ಕೆ ಪ್ರಯೋಜನವನ್ನು ನೀಡುತ್ತದೆ ಎಂದು ಸರ್ಕಾರ ಪ್ರತಿಕ್ರಿಯೆಯನ್ನು ಸಹ ನೀಡಿದೆ.

ರಾಜ್ಯಸಭೆಯಲ್ಲಿ ವಕ್ಫ್ ಮಸೂದೆಯನ್ನು ಅಂಗೀಕರಿಸಲಾಯಿತು, 128 ಸದಸ್ಯರು ಪರವಾಗಿ ಮತ್ತು 95 ಸದಸ್ಯರು ವಿರೋಧಿಸಿದರು. ಗುರುವಾರ ಮುಂಜಾನೆ ಲೋಕಸಭೆಯಲ್ಲಿ 288 ಸದಸ್ಯರು ಇದನ್ನು ಬೆಂಬಲಿಸಿದರು ಮತ್ತು 232 ಸದಸ್ಯರು ವಿರೋಧವನ್ನು ಸಹ ಮಾಡಿದ್ದರು.

ನಿನ್ನೆ( ಏಪ್ರಿಲ್‌ 3)ರ ಗುರುವಾರ ಮಸೂದೆಯ ಮೇಲಿನ ಚರ್ಚೆಯ ಸಂದರ್ಭದಲ್ಲಿ, ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯವು ಭಾರತದಲ್ಲಿ ವಕ್ಫ್ ಇತಿಹಾಸ, ಅದು ಹೊಂದಿರುವ ಒಟ್ಟು ಆಸ್ತಿಗಳ ಸಂಖ್ಯೆ ಮತ್ತು ರಾಜ್ಯವಾರು ಸಂಖ್ಯೆಗಳು ಮತ್ತು ವಕ್ಫ್ ಆಸ್ತಿಗಳ ವಿಸ್ತೀರ್ಣದ ಕುರಿತು ವಿವರವಾದ ಟಿಪ್ಪಣಿಯನ್ನು ಬಿಡುಗಡೆ ಮಾಡಿತು.

ವಕ್ಫ್ ಇತಿಹಾಸದ ವಿವರ

ಭಾರತದಲ್ಲಿನ ವಕ್ಫ್ ಆಸ್ತಿಗಳನ್ನು ನಿರ್ವಹಣೆಯನ್ನು ಸುಧಾರಿಸಲು ಮತ್ತು ದುರುಪಯೋಗವನ್ನು ತಡೆಗಟ್ಟಲು ವಿವಿಧ ಕಾನೂನುಗಳಿಂದ ನಿಯಂತ್ರಿಸಲಾಗುತ್ತದೆ. ಇದು ಮುಸಲ್ಮಾನ್ ವಕ್ಫ್ ಮೌಲ್ಯೀಕರಣ ಕಾಯ್ದೆ, 1913 ರಿಂದ ಪ್ರಾರಂಭವಾಗಿ, ಕುಟುಂಬ ವಕ್ಫ್‌ಗಳನ್ನು ಅಂತಿಮವಾಗಿ ದತ್ತಿ ಬಳಕೆಗೆ ಅನುಮತಿಯನ್ನು ನೀಡಲಾಗುತ್ತದೆ.

1923 ಮತ್ತು 1930ರ ಕಾಯಿದೆಗಳು ಕಾನೂನು ಸಿಂಧುತ್ವವನ್ನು ಬಲಪಡಿಸಿದವು. 1954ರ ವಕ್ಫ್ ಕಾಯಿದೆಯು ರಾಜ್ಯ ವಕ್ಫ್ ಮಂಡಳಿಗಳು ಮತ್ತು ಕೇಂದ್ರ ವಕ್ಫ್ ಮಂಡಳಿಯನ್ನು ( 1964)ರಲ್ಲಿ ರಚನೆಯನ್ನು ಮಾಡಲಾಗಿತು. ನಂತರ 19995 ರ ಸಮಗ್ರ ವಕ್ಫ್ ಕಾಯಿದೆಯಿಂದ ಇದನ್ನು ಬದಲಾವಣೆಯನ್ನು ಮಾಡಲಾಗಿತು. ಇದು ಸಿವಿಲ್ ನ್ಯಾಯಾಲಯದ ಅಧಿಕಾರಗಳೊಂದಿಗೆ ವಕ್ಫ್ ನ್ಯಾಯಮಂಡಳಿಗಳನ್ನು ಪರಿಚಯಿಸಿತು.

2013ರ ವಕ್ಫ್ (ತಿದ್ದುಪಡಿ) ಕಾಯ್ದೆಯು ಮುಸ್ಲಿಂ ಕಾನೂನು ತಜ್ಞರು, ಪ್ರತಿ ಮಂಡಳಿಯಲ್ಲಿ ಇಬ್ಬರು ಮಹಿಳಾ ಸದಸ್ಯರನ್ನು ಹೊಂದಿರುವ ಮೂವರು ಸದಸ್ಯರ ನ್ಯಾಯಮಂಡಳಿಗಳನ್ನು ಕಡ್ಡಾಯಗೊಳಿಸಿತು, ವಕ್ಫ್ ಆಸ್ತಿಗಳ ಮಾರಾಟ ಅಥವಾ ಉಡುಗೊರೆಯನ್ನು ನಿಷೇಧಿಸಿತು ಮತ್ತು ಗುತ್ತಿಗೆ ಅವಧಿಯನ್ನು 30 ವರ್ಷಗಳವರೆಗೆ ವಿಸ್ತರಣೆಯನ್ನು ಮಾಡಲಾಗಿತು.ಈಗ, ಸರ್ಕಾರದ ಪ್ರಕಾರ, ವಕ್ಫ್ ತಿದ್ದುಪಡಿ ಮಸೂದೆ, 2025 ಮತ್ತು ಮುಸಲ್ಮಾನ್ ವಕ್ಫ್ (ರದ್ದತಿ) ಮಸೂದೆ, 2024 ವಕ್ಫ್ ಆಡಳಿತವನ್ನು ಆಧುನೀಕರಿಸುವ ಮತ್ತು ಕಾನೂನು ಸವಾಲುಗಳನ್ನು ಪರಿಹರಿಸುವ ಗುರಿಯನ್ನು ಹೊಂದಿವೆ.

ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯವು ಕ್ವಾಮಿ ವಕ್ಫ್ ಮಂಡಳಿಯ ತರಕ್ಖಿಯಾತಿ ಯೋಜನೆ (QWBTS) ಮತ್ತು ಶಹರಿ ವಕ್ಫ್ ಸಂಪತ್ತಿ ವಿಕಾಸ ಯೋಜನೆ (SWSVY) ಗಳನ್ನು ಜಾರಿಗೊಳಿಸುತ್ತಿದ್ದು, ವಕ್ಫ್ ಭೂಮಿಯಲ್ಲಿ ದಾಖಲೆಗಳನ್ನು ಡಿಜಿಟಲೀಕರಣಗೊಳಿಸಲು ಮತ್ತು ವಾಣಿಜ್ಯ ಅಭಿವೃದ್ಧಿಗೆ ಹಣಕಾಸು ಒದಗಿಸುತ್ತಿದೆ.

ಭಾರತದಲ್ಲಿ ವಕ್ಫ್ ಆಸ್ತಿಗಳು

ವಕ್ಫ್ ಮ್ಯಾನೇಜ್ಮೆಂಟ್ ಸಿಸ್ಟಮ್ ಆಫ್ ಇಂಡಿಯಾ (WAMSI) ಪೋರ್ಟಲ್‌ನ ಮಾಹಿತಿಯ ಪ್ರಕಾರ ಮಾರ್ಚ್ 14, 2025 ರ ಹೊತ್ತಿಗೆ, ಭಾರತವು 38 ಲಕ್ಷ ಎಕರೆಗಳಿಗೂ ಹೆಚ್ಚು ಪ್ರದೇಶದಲ್ಲಿ 8.72 ಲಕ್ಷ ನೋಂದಾಯಿತ ವಕ್ಫ್ ಆಸ್ತಿಗಳನ್ನು ಹೊಂದಿದೆ.
ಇವುಗಳಲ್ಲಿ 4.02 ಲಕ್ಷ ಬಳಕೆದಾರರಿಂದ ವಕ್ಫ್ ಆಗಿವೆ.ಕೇವಲ 9,279 ಪ್ರಕರಣಗಳಿಗೆ ಮಾತ್ರ ಮಾಲೀಕತ್ವದ ದಾಖಲೆಗಳನ್ನು ಅಪ್‌ಲೋಡ್ ಮಾಡಲಾಗಿದೆ ಮತ್ತು ಕೇವಲ 1,083 ಪ್ರಕರಣಗಳಿಗೆ ಮಾತ್ರ ಅನುಗುಣವಾದ ವಕ್ಫ್ ಡೀಡ್‌ಗಳಿವೆ.

ಅತಿ ಹೆಚ್ಚು ವಕ್ಫ್ ಹಿಡುವಳಿ ಹೊಂದಿರುವ ರಾಜ್ಯಗಳು

ವಕ್ಫ್ ಭೂಮಿ ಒಟ್ಟು ವಿಸ್ತೀರ್ಣದ ಅಂಕಿಅಂಶಗಳು ಲಭ್ಯವಿಲ್ಲದಿದ್ದರೂ, ಉತ್ತರ ಪ್ರದೇಶ (ಸುನ್ನಿ) 2.17 ಲಕ್ಷ ಆಸ್ತಿಗಳ ಸಂಖ್ಯೆಯಲ್ಲಿ ಮುಂಚೂಣಿಯಲ್ಲಿದೆ. ಅದರ ನಂತರ ಪಶ್ಚಿಮ ಬಂಗಾಳ (80,480 ಆಸ್ತಿಗಳು), ಪಂಜಾಬ್ (75,965), ತಮಿಳುನಾಡು (66,092) ಮತ್ತು ಕರ್ನಾಟಕ (62,830) ಇವೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+