ಎಚ್ಚರ ಎಚ್ಚರ.. ತಂಬಾಕಿನಷ್ಟೇ ಡೇಂಜರ್ ಸಮೋಸ್-ಜಿಲೇಬಿ..! ಆರೋಗ್ಯ ಇಲಾಖೆ ಸೂಚನೆ ಇಲ್ಲಿದೆ

ಚಿಕ್ಕ ಮಕ್ಕಳಿಂದಿಡಿದು ದೊಡ್ಡವರ ವರೆಗೂ ಬಾಯಿ ಚಪ್ಪರಿಸಿಕೊಂಡು ತಿನ್ನುವಂತಹ ಆಹಾರಗಳಾದ ಸಮೋಸಾ ಹಾಗೂ ಜಿಲೇಬಿಗಳು ಬೊಜ್ಜುತನಕ್ಕೆ ಕಾರಣವಾಗುತ್ತದೆ. ಇದು ತಂಬಾಕಿನಷ್ಟೇ ಅಪಾಯ ಎಂದು ಆರೋಗ್ಯ ಇಲಾಖೆ
ಎಚ್ಚರಿಕೆಯ ಆದೇಶವನ್ನು ನೀಡಿದೆ ಆರೋಗ್ಯದ ಎಚ್ಚರಿಕೆಯ ಪಟ್ಟಿಗೆ ಸೇರ್ಪಡೆಯನ್ನು ಮಾಡಲಾಗಿದೆ.

ಎಚ್ಚರ ಎಚ್ಚರ.. ತಂಬಾಕಿನಷ್ಟೇ ಡೇಂಜರ್ ಸಮೋಸ್-ಜಿಲೇಬಿ..!

ಹೌದು, ಬಾಯಿಯ ಆಸೆಗಾಗಿ ನಾವು ಅತಿ ಹೆಚ್ಚಾಗಿ ಸೇವನೆ ಮಾಡವಂತಹ ಆಹಾರಗಳನ್ನು ನಮ್ಮ ಆರೋಗ್ಯಕ್ಕೆ ಕುತ್ತು ತರಬಹುದು. ನಮ್ಮ ದಿನನಿತ್ಯದ ಜೀವನ ಶೈಲಿಯಲ್ಲಿ ಹೆಚ್ಚುತ್ತಿರುವ ಬೊಜ್ಜುತನವನ್ನು ಎದುರಿಸಲು, ಆರೋಗ್ಯ ಸಚಿವಾಲಯವು ಸಮೋಸಾ ಮತ್ತು ಜಿಲೇಬಿಗಳಂತಹ ಡೀಪ್-ಫ್ರೈಡ್ ತಿಂಡಿಗಳ ಮೇಲೆ ಸಿಗರೇಟ್ ಪ್ಯಾಕ್‌ಗಳಲ್ಲಿರುವಂತೆಯೇ ಆರೋಗ್ಯ ಹಾನಿಯನ್ನು ಮಾಡುತ್ತದೆ ಎಂದು ಹೇಳಿದೆ.

ನಾಗಪುರ ಏಮ್ಸ್ ಸೇರಿದಂತೆ ಎಲ್ಲಾ ಕೇಂದ್ರೀಯ ಸಂಸ್ಥೆಗಳು ಸಾರ್ವಜನಿಕರ ದಿನನಿತ್ಯದ ಆಹಾರದಲ್ಲಿ ಅಡಗಿರುವ ಕೊಬ್ಬು ಮತ್ತು ಸಕ್ಕರೆಯ ಅಂಶಗಳ ಬಗ್ಗೆ ಮಾಹಿತಿ ಫಲಕಗಳನ್ನು ಹಾಕಬೇಕು ಎಂದು ಆರೋಗ್ಯ ಸಚಿವಾಲಯ ಆದೇಶಿಸಿದೆ. ಜಂಕ್ ಫುಡ್ ಉತ್ಪನ್ನಗಳನ್ನು ತಂಬಾಕು ಉತ್ಪನ್ನಗಳ ಸಾಲಿಗೆ ಸೇರಿಸುವ ನಿಟ್ಟಿನಲ್ಲಿ ಇದು ಮೊದಲನೆಯ ಹೆಜ್ಜೆಯಾಗಿದೆ ಎಂದು ಟೈಮ್ಸ್ ಆಫ್ ಇಂಡಿಯಾದ ವರದಿ ಮಾಡಿದೆ.

ಬೊಜ್ಜುತನವನ್ನು ನಿಭಾಯಿಸಲು ಕ್ರಮ

ಭಾರತವು 2050 ರ ವೇಳೆಗೆ ವಿಶ್ವದ ಎರಡನೇ ಅತಿದೊಡ್ಡ ಬೊಜ್ಜು ಕೇಂದ್ರವಾಗಬಹುದು ಎಂದು ಆರೋಗ್ಯ ಸಚಿವಾಲಯವು ಹೇಳಿದೆ. 44.9 ಕೋಟಿ ಜನರು ಅಧಿಕವಾಗಿ ತೂಕವನ್ನು ಹೊಂದುವಂತಹ ಸಾಧ್ಯತೆ ಹೆಚ್ಚಾಗಿದೆ.
ಆದ್ದರಿಂದ, ಮಧುಮೇಹ, ಅಧಿಕ ರಕ್ತದೊತ್ತಡ ಮತ್ತು ಹೃದಯ ಕಾಯಿಲೆಗಳಂತಹ ಸಾಂಕ್ರಾಮಿಕವಲ್ಲದ ಕಾಯಿಲೆಗಳನ್ನು ಎದುರಿಸಲು ಈ ಉಪಕ್ರಮವನ್ನು ಕೈಗೊಳ್ಳಲಾಗಿದೆ.

ಅತಿ ಹೆಚ್ಚಾಗಿ ಮಳೆಗಾಲದಲ್ಲಿ ಜಂಕ್ ಮತ್ತು ಡೀಪ್-ಫ್ರೈ ಆಹಾರಗಳಿಗೆ ಬೇಡಿಕೆ ಹೆಚ್ಚಾಗಿ ಇತ್ತು.ಇದರಿಂದ ದೇಹದ ಬೋಜ್ಜುತನ ಹೆಚ್ಚಾಗುತ್ತದೆ. ಶೀಘ್ರದಲ್ಲೇ ಕೆಫೆಟೇರಿಯಾಗಳು ಮತ್ತು ಸಾರ್ವಜನಿಕ ಪ್ರದೇಶಗಳಲ್ಲಿ ನಿರ್ದೇಶನಗಳ ಪ್ರಕಾರ ಎಚ್ಚರಿಕೆಯ ಸೂಚಕವನ್ನು ಪ್ರದರ್ಶಿಸಲು ಪ್ರಾರಂಭಿಸುವ ನಿರೀಕ್ಷೆ ಇದೆ. ಲಡ್ಡು, ವಡಾ-ಪಾವ್, ಪಕೋಡಾದಂಥ ತಿನಸುಗಳ ಮೇಲೆಯೂ ನಿಗಾ ವಹಿಸಲಾಗುತ್ತದೆ.

ಈ ಎಚ್ಚರಿಕೆಯನ್ನು ನೀಡುವ ಫಲಕಗಳನ್ನು ಕೆಫೆಟೇರಿಯಾ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಅಳವಡಿಸಲಾಗುವುದು ಎಂದು ಮಾಹಿತಿಯನ್ನು ಸ್ಷಷ್ಟಪಡಿಸಲಾಗಿದೆ.

ಆಗಸ್ಟ್ 2019 ರಲ್ಲಿ, ಪ್ರಧಾನಿ ಮೋದಿ ನೇತೃತ್ವದ ಸರ್ಕಾರವು ಫಿಟ್ನೆಸ್ ಅನ್ನು ನಮ್ಮ ದೈನಂದಿನ ಜೀವನದ ಅವಿಭಾಜ್ಯ ಅಂಗವನ್ನಾಗಿ ಮಾಡಲು ಫಿಟ್ ಇಂಡಿಯಾ ಆಂದೋಲನವನ್ನು ಪ್ರಾರಂಭಿಸಿತು. ನಡವಳಿಕೆಯ ಬದಲಾವಣೆಗಳನ್ನು ತರುವುದು ಮತ್ತು ಹೆಚ್ಚು ದೈಹಿಕವಾಗಿ ಸಕ್ರಿಯ ಜೀವನಶೈಲಿಯತ್ತ ಸಾಗುವುದು ಆಂದೋಲನದ ಧ್ಯೇಯವಾಗಿದೆ.

ಮಾರ್ಚ್ 2025 ರಲ್ಲಿ, ಪ್ರಧಾನ ಮಂತ್ರಿ ಮೋದಿ ಅವರು ಬೊಜ್ಜು ಕಡಿಮೆ ಮಾಡಲು, ವಿಶೇಷವಾಗಿ ಖಾದ್ಯ ತೈಲ ಸೇವನೆಯನ್ನು ಕಡಿಮೆ ಮಾಡುವ ಮೂಲಕ ರಾಷ್ಟ್ರವ್ಯಾಪಿ ಜಾಗೃತಿ ಮತ್ತು ಸಾಮೂಹಿಕ ಕ್ರಮದ ಅಗತ್ಯದ ಬಗ್ಗೆ ಹೇಳಿದ್ದರು.

ಬೊಜ್ಜು ಎಂದರೇನು?

ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ, ಬೊಜ್ಜುತನವನ್ನು ಆರೋಗ್ಯಕ್ಕೆ ಅಪಾಯವನ್ನುಂಟುಮಾಡುವ ಅಸಹಜ ಅಥವಾ ಅತಿಯಾದ ಕೊಬ್ಬಿನ ಶೇಖರಣೆ ಎಂದು ವ್ಯಾಖ್ಯಾನವನ್ನು ನೀಡಲಾಗಿದೆ. ಬೊಜ್ಜನ್ನು ವರ್ಗೀಕರಿಸಲು ಸಾಮಾನ್ಯವಾಗಿ ಬಳಸುವ ಮೆಟ್ರಿಕ್ ಬಾಡಿ ಮಾಸ್ ಇಂಡೆಕ್ಸ್ (BMI), ಇದರಲ್ಲಿ 25 ಅಥವಾ ಅದಕ್ಕಿಂತ ಹೆಚ್ಚಿನ BMI ಅನ್ನು ಅಧಿಕ ತೂಕ ಎಂದು ಪರಿಗಣಿಸಲಾಗುತ್ತದೆ ಮತ್ತು 30 ಅಥವಾ ಅದಕ್ಕಿಂತ ಹೆಚ್ಚಿನ BMI ಅನ್ನು ಬೊಜ್ಜು ಎಂದು ವರ್ಗೀಕರಿಸಲಾಗುತ್ತದೆ.

ಭಾರತದಲ್ಲಿ, ಒಬ್ಬ ವ್ಯಕ್ತಿಯ ಬಾಡಿ ಮಾಸ್ ಇಂಡೆಕ್ಸ್ (BMI) 23.0 ಮತ್ತು 24.9 kg/m² ನಡುವೆ ಇದ್ದರೆ ಅವರನ್ನು ಅಧಿಕ ತೂಕ ಎಂದು ಪರಿಗಣಿಸಲಾಗುತ್ತದೆ ಮತ್ತು ಅವರ BMI 25 kg/m² ಅಥವಾ ಹೆಚ್ಚಿನದಾಗಿದ್ದರೆ ಅವರನ್ನು ಬೊಜ್ಜು ಎಂದು ಪರಿಗಣಿಸಲಾಗುತ್ತದೆ. ವ್ಯಕ್ತಿಯ BMI 35 ಅಥವಾ ಅದಕ್ಕಿಂತ ಹೆಚ್ಚಿನದಾಗಿದ್ದಾಗ ಅನಾರೋಗ್ಯಕರ ಬೊಜ್ಜು ಉಂಟಾಗುತ್ತದೆ.

ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ (NFHS)-5 (2019-21) ಪ್ರಕಾರ, ಒಟ್ಟಾರೆಯಾಗಿ, ಭಾರತೀಯ ಮಹಿಳೆಯರಲ್ಲಿ ಶೇ 24 ಮತ್ತು ಭಾರತೀಯ ಪುರುಷರಲ್ಲಿ ಶೇ. 23ಅಧಿಕ ತೂಕ ಅಥವಾ ಬೊಜ್ಜುನ್ನು ಹೊಂದಿರುತ್ತಾರೆ.

ಒಟ್ಟಾರೆಯಾಗಿ ಹೇಳುವುದಾರೆ, ನಾವು ತಿನ್ನುವಂತಹ ಆಹಾರದ ನ್ಮಮ ದೇಹಕ್ಕೆ ಎಷ್ಟು ಒಳಿತು ಕೆಡಕು ನೀಡಬಹುದು ಎಮದು ತಿಳಿದುಕೊಂಡು ನಾವು ಆಹಾರವನ್ನು ಸೇವೆನೆ ಮಾಡಬೇಕು ಎಂಬುವುದು ಮುಖ್ಯ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+