ಬೆಂಗಳೂರಿಗರೇ ಇಲ್ಲಿ ಕೇಳಿ.. ಇನ್ಮಂದೆ ನೀರು ಬಳಕೆ ಮಾಡುವವಾಗ ಎಚ್ಚರದಿಂದ ಸದುಪಯೋಗ ಮಾಡಿಕೊಳ್ಳಿ ಯಾಕೆಂದರೆ ಕೆಆರ್ ಪುರಂ ಮತ್ತು ಮಹದೇವಪುರ ಸೇರಿದಂತೆ 80 ನಿರ್ಣಾಯಕ ವಾರ್ಡ್‌ಗಳಲ್ಲಿ ವಿಶೇಷವಾಗಿ ನೀರಿನಮಟ್ಟ ಕುಸಿತವನ್ನು ಕಾಣುತ್ತಿವೆ ಎಂದು ಅಧ್ಯಯನದ ವರದಿ ಮಾಹಿತಿಯನ್ನು ತಿಳಿಸಿದೆ. ಹಾಗಿದ್ರೆ ಯಾವ ಭಾಗದಲ್ಲಿ ನೀರಿನ ಮಟ್ಟ ಕುಸಿತ ಕಂಡಿದೆ ಇದಕ್ಕೆ ಕಾರಣವೇನು ಎಂಬ ಹೆಚ್ಚಿನ ಮಾಹಿತಿ ಇಲ್ಲಿದೆ.
ಹೌದು, ಬೆಂಗಳೂರಿನ ಕೆಲವು ಪ್ರದೇಶಗಳಲ್ಲಿ ಅಂತರ್ಜಲ ಮಟ್ಟವು 20 ರಿಂದ 25 ಮೀಟರ್‌ಗಳಷ್ಟು ಕುಸಿಯುವ ನಿರೀಕ್ಷೆಯಿದೆ ಎಂದು ವರದಿಯಲ್ಲಿ ಮಾಹಿತಿಯನ್ನು ತಿಳಿಸಲಾಗಿದೆ. ಬೆಂಗಳೂರಿಗರು ವಿಶೇಷವಾಗಿ ಕೆಲ ಪ್ರದೇಶಗಳಲ್ಲಿ ಈ ಬೇಸಿಗೆ ಸಮಯದಲ್ಲಿ ಆತಂಕಕಾರಿ ನೀರಿನ ಬಿಕ್ಕಟ್ಟನ್ನು ಎದುರಿಸಬಹುದು ಎಂಬ ವರದಿಗಳನ್ನು ಪ್ರಕಟ ಮಾಡಿದೆ.

ಅಂತರ್ಜಲ ಮಟ್ಟವು ಫೆಬ್ರವರಿ ಮಾರ್ಚ್ ಮತ್ತು ಏಪ್ರಿಲ್ ವೇಳೆಗೆ ಇನ್ನಷ್ಟು ಹದಗೆಡುತ್ತದೆ ಎಂದು ಮಾಹಿತಿಯನ್ನು ತಿಳಿಸಲಾಗಿದೆ. ವರದಿಯ ಪ್ರಕಾರ ಭಾರತೀಯ ವಿಜ್ಞಾನ ಸಂಸ್ಥೆ (IISC) ಸಹಯೋಗದೊಂದಿಗೆ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ನಡೆಸಿದ ಸಮಗ್ರ ಅಧ್ಯಯನದ ಭಾಗವಾಗಿ ಈ ವರದಿ ಪ್ರಕಟ ಮಾಡಿದೆ.
80 ವಾರ್ಡ್‌ಗಳಲ್ಲಿ ನೀರಿನಮಟ್ಟ ದುರ್ಬಲವಾಗುವ ಸಾಧ್ಯತೆ
ಬೆಂಗಳೂರಿನಲ್ಲಿ 80 ವಾರ್ಡ್‌ಗಳು ಸೇರಿದಂತೆ ಕೆಆರ್ ಪುರಂ ಮತ್ತು ಮಹದೇವಪುರ ಸೇರಿದಂತೆ ನೀರಿನಮಟ್ಟ ದುರ್ಬಲವಾಗಿವೆ ಎಂದು ಅಧ್ಯಯನ ವರದಿ ತಿಳಿಸಿದೆ. ಕೆಲವು ಪ್ರದೇಶಗಳಲ್ಲಿ ಅಂತರ್ಜಲ ಮಟ್ಟವು 20 ರಿಂದ 25 ಮೀಟರ್‌ಗಳಷ್ಟು ಕುಸಿಯುವ ನಿರೀಕ್ಷೆಯಿದೆ ಎಂದು ವರದಿಯಲ್ಲಿ ಮಾಹಿತಿಯನ್ನು ತಿಳಿಸಲಾಗಿದೆ.
800 ಮಿಲಿಯನ್ ಲೀಟರ್ ನೀರು
ಬೆಂಗಳೂರಿನ ಹೊರಮಾವು, ರಾಮಮೂರ್ತಿ ನಗರ ಮತ್ತು ಜಕ್ಕೂರ್‌ನಂತಹ ಹೊರ ಪ್ರದೇಶಗಳು ಬೋರ್‌ವೆಲ್‌ಗಳ ಮೇಲೆ ಹೆಚ್ಚು ಅವಲಂಬಿತವಾಗಿದ್ದು, ಪ್ರತಿದಿನ ಅಂದಾಜು 800 ಮಿಲಿಯನ್ ಲೀಟರ್ ನೀರನ್ನು ತೆಗೆಯಲಾಗುತ್ತಿದೆ ಎಂದು ವರದಿಯಲ್ಲಿ ಮಾಹಿತಿ೩ಯನ್ನು ತಿಳಿಸಿದೆ. BWSSB ನೀರಿನ ವಿತರಣಾ ಜಾಲವು ಈ ಹಲವು ಪ್ರದೇಶಗಳಲ್ಲಿ ಇನ್ನೂ ಅಪೂರ್ಣವಾಗಿಯೇ ಇದೆ.
ಮೂಲಸೌಕರ್ಯ ಯೋಜನೆಗಳು ಸ್ಥಗಿತ
ಪೈಪ್ ನೀರಿನ ಲಭ್ಯತೆಯಿಂದಾಗಿ ಎನ್‌ಆರ್‌ಐ ಲೇಔಟ್‌ನಲ್ಲಿ ನೆಲಮಟ್ಟದ ಜಲಾಶಯ ಮತ್ತು ರಾಂಪುರದಲ್ಲಿನ ಒಳಚರಂಡಿ ಸಂಸ್ಕರಣಾ ಘಟಕದಂತಹ ಪ್ರಮುಖ ಮೂಲಸೌಕರ್ಯ ಯೋಜನೆಗಳು ಸ್ಥಗಿತಗೊಂಡಿವೆ. ಬಂಜಾರಾ ಲೇಔಟ್‌ನಂತಹ ಪ್ರದೇಶಗಳಲ್ಲಿನ ನಿವಾಸಿಗಳಿಗೆ ಕಾವೇರಿ ನೀರಿನ ಸಂಪರ್ಕದ ಭರವಸೆ ಇಲ್ಲವಾಗಿದೆ. ಇನ್ನು, ಬೆಂಗಳೂರಿನ ನೀರಿನ ಕೊರತೆಯ ಬಗ್ಗೆ BWSSB ಹಾಗೂ IISc ವಿಜ್ಞಾನಿಗಳು ಮತ್ತು ಅಂತರ್ಜಲ ತಜ್ಞರನ್ನು ಒಳಗೊಂಡಂತೆ ವಿಶೇಷ ಕಾರ್ಯಪಡೆಯನ್ನು ರಚಿಸುವ ಸಾಧ್ಯತೆಯಿದೆ.
WSSB ಅಧ್ಯಕ್ಷರು ಈ ಕುರಿತು ಹೇಳಿದ್ದೇನು?
BWSSB ಅಧ್ಯಕ್ಷರಾದ ಡಾ. ರಾಮ್ ಪ್ರಸಾತ್ ಮನೋಹರ್, ಹೆಚ್ಚಿನ ಅಪಾಯದ ವಾರ್ಡ್‌ಗಳ ನಿವಾಸಿಗಳು ಬೋರ್‌ವೆಲ್‌ಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಮತ್ತು ಕಾವೇರಿ ನೀರಿನ ಸಂಪರ್ಕಗಳಿಗೆ ಬದಲಾಯಿಸುವಂತೆ ಒತ್ತಾಯ ಮಾಡಿದ್ದಾರೆ.
ವಿಶೇಷವಾಗಿ ಕಾವೇರಿ ಹಂತ 5 ಯೋಜನೆಯಡಿಯಲ್ಲಿ ಹೆಚ್ಚಿದ ಲಭ್ಯತೆಯೊಂದಿಗೆ ವಿತರಣಾ ಸವಾಲುಗಳು ಮುಂದುವರೆಯಲಿದ್ದು,ಕೆಲವು ಪ್ರದೇಶಗಳಲ್ಲಿ ಇನ್ನೂ ಫೀಡರ್ ಮತ್ತು ಉಪ-ಫೀಡರ್ ಲೈನ್‌ಗಳಿಲ್ಲ ಎಂದು ಹೇಳಿಕೆಯನ್ನು ನೀಡಿದ್ದಾರೆ
ಬೆಂಗಳೂರಲ್ಲಿ ಕೆರೆಗಳ ನಿರ್ಲ್ಯಕ್ಷ ಅತಿ ಹೆಚ್ಚಾಗಿದೆ.
ಬೆಳ್ಳಂದೂರು ಮತ್ತು ವರ್ತೂರಿನಂತಹ ಪ್ರಮುಖ ಜಲಮೂಲಗಳು ತಲಾ 800 ಎಕರೆಗಳಷ್ಟು ವ್ಯಾಪಿಸಿದ್ದು, ವರ್ಷಗಳ ಭರವಸೆಗಳ ಹೊರತಾಗಿಯೂ ಕಳಪೆ ಸ್ಥಿತಿಯಲ್ಲಿವೆ. ಈ ಕೆರೆಗಳು ಪುನರುಜ್ಜೀವನಗೊಂಡರೆ,ನಗರದ ಹೆಚ್ಚುತ್ತಿರುವ ನೀರಿನ ಬಿಕ್ಕಟ್ಟನ್ನು ಪರಿಹರಿಸುವಲ್ಲಿ ಪ್ರಮುಖ ಪಾತ್ರ ವಹಿಸಬಹುದು ಎನ್ನಲಾಗಿದೆ.
ನಗರದ ಕೆರೆಗಳಿಗೆ ಕಾಯಕಲ್ಪ ನೀಡುವ ಮೂಲಕ ಅಂತರ್ಜಲ ತುಂಬಿಸುವ ನಿಟ್ಟಿನಲ್ಲಿ ಬಿಬಿಎಂಪಿ ಹಾಗೂ ಬಿಡಿಎ ಪ್ರಯತ್ನಗಳ ಕೊರತೆಯನ್ನು ತಜ್ಞರು ಟೀಕೆ ಮಾಡುತ್ತಿದ್ದಾರೆ.
ನೀರು ಹಂಚಿಕೆಯಲ್ಲಿನ ಸವಾಲುಗಳು
ಈ ಸುಧಾರಣೆಗಳ ಹೊರತಾಗಿಯೂ, ಫೀಡರ್ ಮತ್ತು ಉಪ-ಫೀಡರ್ ಮಾರ್ಗಗಳಿಲ್ಲದ ಕಾರಣ ಕೆಲವು ಪ್ರದೇಶಗಳಲ್ಲಿ ನಿವಾಸಿಗಳು ಕಾವೇರಿ ನೀರಿನ ಸಂಪರ್ಕವಿಲ್ಲದೆ ಉಳಿದಿದ್ದಾರೆ.
ಉದಾಹರಣೆಗೆ ಕಳೆದ ವರ್ಷ ಅಕ್ಟೋಬರ್‌ನಿಂದ ಬಿಡಬ್ಲ್ಯುಎಸ್‌ಎಸ್‌ಬಿ ಭರವಸೆ ನೀಡಿದರೂ ನಮಗೆ ಒಂದು ಹನಿ ನೀರು ಇಲ್ಲ.
ಈ ವಾರ್ಡ್‌ಗಳಲ್ಲಿ ಕೋಣನಕುಂಟೆ, ಟಿ.ದಾಸರಹಳ್ಳಿ, ವಿ.ನಾಗೇನಹಳ್ಳಿ, ಹೊರಮಾವು, ರಾಮಮೂರ್ತಿ ನಗರ, ಕಮ್ಮನಹಳ್ಳಿ, ಕಾಡುಗೊಂಡನಹಳ್ಳಿ, ಮತ್ತು ಜಕ್ಕೂರಿನ್ಲಿ ನೀರಿನ ಕೊರತೆ ಹೆಚ್ಚುವ ಸಾಧ್ಯತೆ ಇದೆ ಎನ್ನಲಾಗಿದೆ. ಬೇಸಿಗೆ ಸಮೀಪಿಸುತ್ತಿರುವುದರಿಂದ ಬೆಂಗಳೂರಿನ ನಿವಾಸಿಗಳು ನೀರೀಗಾಗಿ ಇನ್ನಷ್ಟು ಸಂಕಷ್ಟಕ್ಕೆ ಒಳಗಾಬಹುದು ಎನ್ನಲಾಗಿದೆ.
ಮುಂದಿನ ತಿಂಗಳು ಬೆಂಗಳೂರಿನಲ್ಲಿ ನೀರಿನ ಬಿಕಟ್ಟು ಎದುರಾಗುವ ಸಾಧ್ಯತೆ ಹೆಚ್ಚಿದೆ.
More From GoodReturns

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Bengaluru - Stock Market: ಷೇರು ಮಾರುಕಟ್ಟೆಯಲ್ಲಿ ಭಾರೀ ನಷ್ಟ; ಮನನೊಂದು ಬೆಂಗಳೂರಿನ ವ್ಯಕ್ತಿ ಆತ್ಮಹತ್ಯೆ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Bengaluru: ಬೆಂಗಳೂರಿಗೆ 5,000 ರೂ. ಕೋಟಿ ಪ್ರವಾಹ ಯೋಜನೆ, 41 ಕಿ.ಮೀ ಮೆಟ್ರೋ, 450 ಕಿ.ಮೀ ರಸ್ತೆ ಅಭಿವೃದ್ಧಿ!

Bengaluru: ಬೆಂಗಳೂರು ಮೂಲಸೌಕರ್ಯ ಮತ್ತು ಸ್ಮಾರ್ಟ್ ಸಿಟಿ ಯೋಜನೆಗಳಿಗೆ 7000 ಕೋಟಿ ರೂ. ಹೂಡಿಕೆ!

BMTC Bus: ಬೆಂಗಳೂರು-ರಾಮನಗರ ಮತ್ತು ಕನಕಪುರಕ್ಕೆ ಬಿಎಂಟಿಸಿ ಬಸ್… ಬಸ್ ನಿಲ್ದಾಣಗಳ ಬಗ್ಗೆ ತಿಳಿಯಿರಿ

Bengaluru-Mangaluru Flight: ಬೆಂಗಳೂರು-ಮಂಗಳೂರು ವಿಮಾನ ಪ್ರಯಾಣಿಕರಿಗೆ ಬಂಪರ್ ಸುದ್ದಿ! ಇನ್ಮೇಲೆ ತಡರಾತ್ರಿಯೂ ವಿಮಾನ ಸೇವೆ

Bengaluru Special Trains: ಮಾರ್ಚ್ 11 ರಿಂದ ಬೆಂಗಳೂರಿಗೆ ಬರಲಿದೆ ಮತ್ತೊಂದು ಸ್ಪೆಷಲ್ ರೈಲು! ಎಲ್ಲಿಂದ ಎಲ್ಲಿಗೆ?

Karnataka Weather: ರಾಜ್ಯದ ಜನರಿಗೆ ಬಿಸಿಲಿನ ಕಂಟಕ! ಹವಾಮಾನ ಇಲಾಖೆಯಿಂದ ಎಚ್ಚರಿಕೆ



Click it and Unblock the Notifications