ರಾಜ್ಯದ ಜನರಿಗೆ ಸಾಲು ಸಾಲು ಶಾಕಿಂಗ್ ನ್ಯೂಸ್..! ಗಾಯದ ಮೇಲೆ ಬರೆ ಎಳೆಯುವುದು ಅಂದರೆ, ಇದೇ ಇರಬೇಕು. ಯೆಸ್.. ಮೆಟ್ರೋ ಪ್ರಯಾಣ ದರ ಆಯ್ತು, ಬಸ್ ದರ ಆಯ್ತು, ಕಸದಲ್ಲೂ ಹಣವನ್ನು ವಸೂಲಿ ಮಾಡಿ ಆಯ್ತು.. ಹಾಲು, ಡೀಸೆಲ್ ದರ ಹೆಚ್ಚಳವೂ ಆಯ್ತು.. ಬೆಲೆ ಏರಿಕೆಯಿಂದ ಬೇಸತ್ತ ಜನರಿಗೆ ಸರ್ಕಾರ ಮತ್ತೊಂದು ದರ ಏರಿಕೆಗೆ ಶಾಕ್ ನೀಡಲು ಸಿದ್ದತೆ ನಡೆಸಿದೆ. ಸದ್ಯದಲ್ಲೇ ನೀರಿನ ಬೆಲೆ ಏರಿಕೆಯ (Water pice hike) ಬಿಸಿ ತಟ್ಟಲಿದೆ. ಸರ್ಕಾರ ಕುಡಿಯುವ ನೀರಿನ ಮೇಲೂ ಕಣ್ಣಿಟ್ಟಿದೆ.
ಹೌದು,ಬೆಂಗಳೂರಿನಲ್ಲಿ ಕಾವೇರಿ ನೀರು ಪೂರೈಕೆ ದರ ಪ್ರತಿ ಲೀಟರ್ ನೀರಿಗೆ 1 ಪೈಸೆಯಷ್ಟು ಬೆಲೆ ಏರಿಕೆಯನ್ನು ಮಾಡಲು ಸರ್ಕಾರ ಮುಂದಾಗಿದೆ. ಕಾಂಗ್ರೆಸ್ ಸರ್ಕಾರ ಒಂದು ಕಡೆ ಗ್ಯಾರಂಟಿ ಮೂಲಕ ಫಲಾನುಭವಿಗಳಿಗೆ ಅನುಕೂಲ ಕಲ್ಪಿಸಿದರೆ ಮತ್ತೊಂದು ಕಡೆ ಬೆಲೆ ಏರಿಕೆ ಮೂಲಕ ಜನರ ಜೋಬನ್ನು ರಾಜ್ಯ ಸರ್ಕಾರ ಬರಿದು ಮಾಡುತ್ತಿದೆ.

ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು, ಬೆಂಗಳೂರಿನಲ್ಲಿ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿಡಬ್ಲ್ಯೂಎಸ್‌ಎಸ್‌ಬಿ) ವತಿಯಿಂದ ನೀರಿನ ದರವನ್ನು
ಏರಿಕೆ ಮಾಡುವುದಕ್ಕೆ ತಯಾರಿ ನಡೆಯುತ್ತಿದೆ. ನೀರಿನ ದರವನ್ನು ಹೆಚ್ಚು ಮಾಡುವುದು ಅನಿವಾರ್ಯವಾಗಿದೆ. ಈ ನಿಟ್ಟಿನಲ್ಲಿ ಮಂಡಳಿಯ ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ. ಈ ದರ ಹೆಚ್ಚಳದ ಕ್ರಮ ಅತಿ ಶೀಘ್ರದಲ್ಲೇ ಜಾರಿಗೆ ಬರುತ್ತದೆ ಎಂದು ಹೇಳಿದ್ದರು.
ಬಿಡಬ್ಲ್ಯೂಎಸ್‌ಎಸ್‌ಬಿ ನೀರಿನ ದರವನ್ನು ಲೀಟರ್‌ಗೆ ಒಂದು ಪೈಸೆ ಹೆಚ್ಚಿಸುವುದು ಅನಿವಾರ್ಯವಾಗಿದ್ದು, ಜನರ ಮೇಲೆ ಹೊರೆಯಾಗದಂತೆ ಬಿಡಬ್ಲ್ಯೂಎಸ್‌ಎಸ್‌ಬಿ ಅಧಿಕಾರಿಗಳಿಗೆ ಸೂಚನೆ ನಾವು ನೀಡಿದ್ದೇವೆ ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹೇಲಿದ್ದಾರೆ.
ಮೂಲಸೌಕರ್ಯ ಯೋಜನೆಗಳಿಗೆ ನೀರಿನ ದರ ಏರಿಕೆ
ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಒತ್ತಡದಲ್ಲಿ ಇದೆ. ನಗರದಲ್ಲಿ ಮೂಲಸೌಕರ್ಯ ಯೋಜನೆಗಳನ್ನು ಅಭಿವೃದ್ದಿ ಮಾಡಲು ನೀರಿನ ಬೆಲೆ ಏರಿಕೆಯ ಅಗತ್ಯವಂತೂ ಇದ್ದೇ ಇದೆ.
ಜಲಮಂಡಳಿಗೆ ವಾರ್ಷಿಕ 1 ಸಾವಿರ ಕೋಟಿ ರೂ. ನಷ್ಟ
ಜಲಮಂಡಳಿಗೆ ವಾರ್ಷಿಕ 1 ಸಾವಿರ ಕೋಟಿ ರೂ. ನಷ್ಟದಲ್ಲಿ ಇದೆ. ದರ ಏರಿಕೆ ಅನಿವಾರ್ಯವಾಗಿದೆ. ಪ್ರತಿ ವರ್ಷ 1 ಸಾವಿರ ಕೋಟಿ ರೂ. ನಷ್ಟವನ್ನು ಜಲಮಂಡಳಿ ಅನುಭವಿಸುತ್ತಿದೆ ಎಂದು ವರದಿಯಾಗಿದೆ. ಮುಂದಿನ ಹಂತದ ಯೋಜನೆಗಳನ್ನು ಅನುಷ್ಠಾನಗೊಳಿಸಲು ನೀರು ದರವನ್ನು ಹೆಚ್ಚಿಸುವುದು ಅನಿವಾರ್ಯವಾಗಿದೆ ಎಂದು ಅಧಿಕಾರಿಗಳು ಈ ಕುರಿತು ಮಾಹಿತಿಯನ್ನು ತಿಳಿಸಿದ್ದಾರೆ ಎಂದು ಹೇಳಿದ್ದಾರೆ.
ಹೀಗಾಗಿ, ಲೀಟರ್‌ಗೆ 7 ಪೈಸೆ ದರ ಹೆಚ್ಚಿಸಲು ಜಲಮಂಡಳಿ ಮುಂಚಿತವಾಗಿ ವಿಚಾರಣೆ ಮಾಡಿದ್ದರೂ, ಅಧಿಕಾರಿಗಳು ಕೇವಲ 1 ಪೈಸೆ ದರ ಹೆಚ್ಚಿಸುವಂತೆ ಮನವೊಲಿಸಿದ್ದಾರೆ. ಆಗಾಗ್ಗೆ, ಜನರು ನೀರಿನ ಪ್ರಾಮುಖ್ಯತೆ ಅರಿತು, ಹೆಚ್ಚು ಜವಾಬ್ದಾರಿಯುತವಾಗಿ ನೀರನ್ನು ಬಳಕೆ ಮಡಬೇಕು ಎಂದರು.
ಜನರೂ ನೀರಿನ ಪ್ರಾಮುಖ್ಯತೆ ಅರಿಯಬೇಕು
ನೀರಿನ ದರ ಏರಿಕೆ ಕಳೆದ 13 ವರ್ಷಗಳಲ್ಲಿ ಯಾವುದೇ ಹೆಚ್ಚಳವಾಗದ ಕಾರಣ ಸುಂಕವನ್ನು ಲೀಟರ್‌ಗೆ 7 ಪೈಸೆ ಹೆಚ್ಚಿಸಲು ಮಂಡಳಿ ನಿರ್ಧಾರವನ್ನು ಮಾಡಿದೆ. ಆದರೆ, ಕೇವಲ ಒಂದು ಪೈಸೆ ದರ ಹೆಚ್ಚಿಸುವಂತೆ ಅಧಿಕಾರಿಗಳ ಮನವೊಲಿಸಲಾಗಿದೆ ಎಂದು ಡಿ.ಕೆ ಶಿವಕುಮಾರ್ ಮಾಹಿತಿಯನ್ನು ತಿಳಿಸಿದ್ದರು.
ನೀರಿನ ಬೆಲೆ ಏರಿಕೆಗೆ ಕೆಲವು ಕಾರಣಗಳು
ಜಲಮಂಡಳಿಗೆ ವಾರ್ಷಿಕ ನಷ್ಟ ಮತ್ತು ವ್ಯವಸ್ಥಾಪನಾ ವೆಚ್ಚಗಳು
ಜಲಮಂಡಳಿಗೆ ವಾರ್ಷಿಕ ನಷ್ಟ ಇದರಿಂದ ನಿಯಮಿತ ಕಾರ್ಯಚಟುವಟಿಕೆಗಳನ್ನು ನಿರ್ವಹಿಸುವುದಕ್ಕೆ ಹೆಚ್ಚಿನ ವೆಚ್ಚಗಳು ಅಗತ್ಯವಾಗುತ್ತವೆ. ನೀರಿನ ಪೂರೈಕೆ, ಶುದ್ಧೀಕರಣ, ಮತ್ತು ಸಾಗಣೆ ಇವುಗಳಿಂದ ಉಂಟಾಗುವ ವೆಚ್ಚಗಳು ಹೆಚ್ಚುತ್ತಿರುವುದರಿಂದ ದರ ಏರಿಕೆಗೆ ಅವಶ್ಯಕತೆ ಇದೆ.
ನೀರಿನ ಉಳಿತಾಯ
ನಗರಗಳಲ್ಲಿ ಮತ್ತು ಹಳ್ಳಿಗಳಲ್ಲಿ ಹೆಚ್ಚುತ್ತಿರುವ ಜನಸಂಖ್ಯೆ ಹಾಗೂ ಆಗಾಗ್ಗೆ ಬರುವ ಅನಾಹುತಗಳು (ಉದಾಹರಣೆಗೆ, ಅವಧಿಯ ಅನಾನುಕೂಲವಾಡಿದ ಹವಾಮಾನ) ನೀರಿನ ಹಂಚಿಕೆಯನ್ನು ಕಷ್ಟಮಾಡುತ್ತದೆ. ಇದರಿಂದ, ನೀರಿನ ಸರಿಯಾದ ಬಳಕೆಗೆ ಹೆಚ್ಚು ಖರ್ಚು ಮಾಡಬೇಕಾಗುತ್ತದೆ.
ನೀರಿನ ಶುದ್ಧೀಕರಣ ವೆಚ್ಚಗಳು
ನೀರನ್ನು ಶುದ್ಧಗೊಳಿಸುವುದು ಪ್ರಗತಿಗೆ ಅಗತ್ಯವಾಗಿದೆ. ಈ ಪ್ರಕ್ರಿಯೆಯಲ್ಲಿ ಉಪಯೋಗಿಸುವ ರಾಸಾಯನಿಕಗಳು, ಯಂತ್ರಗಳು ಮತ್ತು ಕಾರ್ಯಗಾರಿಗಳು ಹೆಚ್ಚಿನ ವೆಚ್ಚವನ್ನುಂಟುಮಾಡುತ್ತವೆ.
ಜಲ ಸಂಪನ್ಮೂಲಗಳ ಕೊರತೆ
ಬದಲಾಗುವ ಹವಾಮಾನದಿಂದಾಗಿ ಜಲ ಸಂಪನ್ಮೂಲಗಳು ಕಡಿಮೆಯಾಗುತ್ತಿದ್ದಿವೆ. ಇದರಿಂದಾಗಿ ನೀರಿನ ಬೇಡಿಕೆ ಹೆಚ್ಚುತ್ತಿದೆ, ಆದರೆ ಪೂರೈಕೆ ಸರಳವಾಗಿ ನಡೆಯುವುದಿಲ್ಲ, ಆದ್ದರಿಂದ ಬೆಲೆ ಏರಿಕೆ ಅವಶ್ಯಕವಾಗಿದೆ.
ಸರ್ಕಾರಿ ಯೋಜನೆಗಳು ಮತ್ತು ಹೊಸ ಯೋಜನೆಗಳು
ಹೊಸ ಜಲ ಯೋಜನೆಗಳು (ನಿರ್ವಹಣೆ, ಪರಿಸರ ಶುದ್ಧೀಕರಣ, ಟ್ಯಾಂಕರ್ ಸೇವೆಗಳನ್ನು ವಿಸ್ತರಿಸುವುದಕ್ಕೆ) ಅನ್ನು ಅನುಷ್ಠಾನಗೊಳಿಸಲು, ಸರ್ಕಾರವು ವ್ಯಯ ಮಾಡಬೇಕು. ಈ ವೆಚ್ಚಗಳನ್ನು ಬಲಪಡಿಸಲು ದರ ಏರಿಕೆಯನ್ನು ರೂಪಿಸಲಾಗುತ್ತದೆ.
ಈ ಕಾರಣಗಳಿದರಿಂದ, ನೀರಿನ ದರ ಏರಿಕೆಗೆ ಅವಶ್ಯಕವಾಗಿದೆ.


Click it and Unblock the Notifications