ಬೆಂಗಳೂರು, ಮಾರ್ಚ್ 18: ಬೆಂಗಳೂರಿನ ಹೊರವಲಯದಲ್ಲಿರುವ ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳು ನಗರಕ್ಕೆ ತರಕಾರಿ ಮತ್ತು ಹಣ್ಣುಗಳ ಪ್ರಮುಖ ಪೂರೈಕೆದಾರರಾಗಿದ್ದು, ನೀರಿನ ಕೊರತೆಯಿಂದ ನಗರಕ್ಕೆ ತರಕಾರಿ ಪೂರೈಕೆಯಲ್ಲಿ ಕುಸಿತ ಉಂಟಾಗಲಿದೆ ಎಂದು ಡಿಎಚ್ ವರದಿ ಮಾಡಿದೆ.
ನೀರಿನ ಬಿಕ್ಕಟ್ಟು ತಲೆದೋರುತ್ತಿದ್ದಂತೆ ಈ ಜಿಲ್ಲೆಗಳಲ್ಲಿ ಲಕ್ಷಾಂತರ ಬೋರ್‌ವೆಲ್‌ಗಳು ಕೃಷಿ ಮತ್ತು ಕುಡಿಯುವ ಅಗತ್ಯಗಳಿಗೆ ನೀರಿನ ಮೂಲದಲ್ಲಿ ಒದಗಿಸಲು ಹೆಣಗಾಡಬೇಕಾಗಿದೆ. ಚಿಕ್ಕಬಳ್ಳಾಪುರ ಮತ್ತು ಕೋಲಾರದ ಜನರ ಕುಡಿಯುವ ನೀರಿನ ಭದ್ರತೆ ಮತ್ತು ಬೆಂಗಳೂರಿಗೆ ತರಕಾರಿ ಪೂರೈಕೆಗೆ ಕುತ್ತು ಬೀಳಲಿದೆ.

ಚಿಕ್ಕಬಳ್ಳಾಪುರ ಪಟ್ಟಣದ ಹೊರವಲಯದ ರೈತರು ಮೂರು ದಶಕಗಳಿಂದ 14 ಕೊಳವೆಬಾವಿಗಳ ನೀರನ್ನು ಬಳಸಿದ್ದು, ಆರು ಬೋರ್‌ವೆಲ್‌ಗಳಿಗೆ ವಿಫಲವಾಗಿವೆ ಎಂದು ತಿಳಿಸಿದ್ದಾರೆ. ಹನಿ ನೀರಾವರಿ ಸೇರಿದಂತೆ ನೀರಿನ ಬಳಕೆಯನ್ನು ಕಡಿಮೆ ಮಾಡಲು ರೈತ ಕುಟುಂಬವು ಎಲ್ಲವನ್ನೂ ಪ್ರಯತ್ನಿಸಿವೆ.
ಇದೀಗ ನಾಲ್ಕು ಬೋರ್‌ವೆಲ್‌ಗಳು ಮಾತ್ರ ಕಾರ್ಯನಿರ್ವಹಿಸುತ್ತಿವೆ. ಹವಾಮಾನವು ತುಂಬಾ ಶುಷ್ಕವಾಗಿರುತ್ತದೆ ಮತ್ತು ಮಣ್ಣಿನ ತೇವಾಂಶವು ತುಂಬಾ ಕಡಿಮೆಯಾಗಿದೆ. ನೀರಾವರಿ ಇಲ್ಲದೆ ನಮ್ಮ ಬೆಳೆಗಳು ಉಳಿಯುತ್ತದೋ ಇಲ್ಲವೋ ಗೊತ್ತಿಲ್ಲ ಎಂದು ರೈತರೊಬ್ಬರು ಅಳು ತೋಡಿಕೊಂಡಿದ್ದಾರೆ.
"ಬೆಂಗಳೂರಿಗೆ ಹೆಚ್ಚಿನ ತರಕಾರಿಗಳು ಹತ್ತಿರದ ಮಾಲೂರು ಮತ್ತು ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ಇತರ ತಾಲ್ಲೂಕುಗಳಿಂದ ಸರಬರಾಜು ಆಗುತ್ತವೆ. ಸಾಮೀಪ್ಯ ಮತ್ತು ಬೆಂಗಳೂರಿನಿಂದ ಬೃಹತ್ ಪ್ರಮಾಣದ ಬೇಡಿಕೆಯಿಂದಾಗಿ, ಈ ಪ್ರದೇಶಗಳು ಪ್ರಾಮುಖ್ಯತೆಯನ್ನು ಪಡೆದಿವೆ, ಈಗ ನೀರಿನ ಕೊರತೆ ಉಂಟಾದರೆ ಪರಿಸ್ಥಿತಿ ಬಿಗಡಾಯಿಸಲಿದೆ" ಎಂದು ಕೃಷಿ ವಿಜ್ಞಾನ ವಿಶ್ವವಿದ್ಯಾಲಯದ ಕೃಷಿ ಅರ್ಥಶಾಸ್ತ್ರ ವಿಭಾಗದ ನಿವೃತ್ತ ಪ್ರಾಧ್ಯಾಪಕ ಮತ್ತು ಕರ್ನಾಟಕ ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷ ಪ್ರಕಾಶ್ ಕಮ್ಮರಡಿ ಹೇಳುತ್ತಾರೆ.
ಐತಿಹಾಸಿಕವಾಗಿ, ಕೋಲಾರ ಮತ್ತು ಚಿಕ್ಕಬಳ್ಳಾಪುರ ನೀರಾವರಿಗಾಗಿ ಅಂತರ್ಜಲವನ್ನು ಅವಲಂಬಿಸಿವೆ. ಅನೇಕ ರೈತ ಕುಟುಂಬಗಳು ಬೋರ್‌ವೆಲ್‌ಗಳ ಮೇಲೆಯೇ ಅವಲಂಬಿತವಾಗಿದೆ. ಅಂತರ್ಜಲ ಮಟ್ಟ ಕಡಿಮೆಯಾಗಿದೆ ಎಂದು ಕೋಲಾರ ಜಿಲ್ಲೆ ಕಲ್ವಮನಲಿ ಗ್ರಾಮದ ರೈತ ರಾಮು ಶಿವಣ್ಣ ವಿವರಿಸುತ್ತಾರೆ. ಶಿವಣ್ಣ ತಮ್ಮ ಐದು ಎಕರೆ ಜಮೀನಿನಲ್ಲಿ ಟೊಮೇಟೊ, ಆಲೂಗಡ್ಡೆ ಬೆಳೆಯುತ್ತಿದ್ದಾರೆ.
"ವಾರದಲ್ಲಿ ಎರಡು ದಿನ ಮಾತ್ರ ಹನಿ ನೀರಾವರಿ ಮೂಲಕ ನೀರು ಕೊಡುತ್ತೇವೆ. ಇದು ಹೂಬಿಡುವಿಕೆಯನ್ನು ತಡೆಯುತ್ತದೆ. ಅಲ್ಲದೆ ಕೆಲವು ಸಸ್ಯಗಳು ಒಣಗಲು ಶುರುವಾಗುತ್ತದೆ. ಇದರಿಂದ ಉತ್ಪಾದನೆಯು ಕಡಿಮೆಯಾಗಿದೆ" ಎಂದು ಅವರು ಹೇಳುತ್ತಾರೆ.
'ಡೈನಾಮಿಕ್ ಗ್ರೌಂಡ್‌ವಾಟರ್ ರಿಸೋರ್ಸಸ್ ಅಸೆಸ್‌ಮೆಂಟ್ ಆಫ್ ಇಂಡಿಯಾ' ಎಂಬ ಶೀರ್ಷಿಕೆಯ ವರದಿಯಲ್ಲಿ ಕೋಲಾರವನ್ನು ಅಂತರ್ಜಲದ ಅತಿಯಾದ (199%) ಜಿಲ್ಲೆ ಎಂದು ವರ್ಗೀಕರಿಸಲಾಗಿದೆ. ನಂತರ ಚಿಕ್ಕಬಳ್ಳಾಪುರ (145%) ಮತ್ತು ಬೆಂಗಳೂರು ಗ್ರಾಮಾಂತರ (137%) ಇದೆ.


Click it and Unblock the Notifications