2024 ಮುಗಿದು 2025ಕ್ಕೆ ಕಾಲಿಡಲು ಕೇವಲ ಎರಡೇ ದಿನ ಮಾತ್ರ ಬಾಕಿಯಿದೆ. ಹೊಸ ವರ್ಷವನ್ನು ಅದ್ದೂರಿಯಾಗಿ ಸ್ವಾಗತಿಸಲು ಇಡೀ ವಿಶ್ವವೇ ಕಾತರದಿಂದ ಕಾಯುತ್ತಿದೆ. ಆದರೆ ಈ ದಿನದಂದು ವಾಟ್ಸಾಪ್ ಬಳಕೆದಾರರಿಗೆ ಇದು ದೊಡ್ಡ ಶಾಕಿಂಗ್ ಸುದ್ದಿಯಿದೆ.ಹೌದು, ಜನವರಿ 1 ರಿಂದ ಈ ಫೋನ್‌ಗಳಲ್ಲಿ ವಾಟ್ಸಾಪ್ (WhatsApp) ಕೆಲಸ ಮಾಡುವುದಿಲ್ಲ.ಹಾಗಾದ್ರೆ, ಯಾವ್ಯಾವ ಫೋನ್‌ಗಳಲ್ಲಿ ವಾಟ್ಸಾಪ್ ಕೆಲಸ ನಿಲ್ಲಿಸಲಿದೆ? ಆ ಪಟ್ಟಿಯಲ್ಲಿ ನಿಮ್ಮ ಮೊಬೈಲ್ ಸಹ ಇದೆಯೇ? ಈಗಲೇ ಚಕ್ ಮಾಡಿಕೊಳ್ಳಿ..
ಹೊಸವರ್ಷದಂದು ಸುಮಾರು 20ಕ್ಕೂ ಹೆಚ್ಚು ಸ್ಮಾರ್ಟ್‌ಫೋನ್‌ಗಳಲ್ಲಿ ವಾಟ್ಸಾಪ್ ತನ್ನ ಸೇವೆಯನ್ನು ನಿಲ್ಲಿಸಲಿದೆ. ಸ್ಯಾಮ್‌ಸಂಗ್, ಮೊಟೊ, ಸೋನಿ ಮತ್ತು ಎಲ್‌ಜಿ ಸೇರಿದಂತೆ ಕೆಲವು ಪ್ರಸಿದ್ಧ ಕಂಪನಿಗಳ ಹಳೆಯ ಸ್ಮಾರ್ಟ್‌ಫೋನ್‌ಗಳಲ್ಲಿ ವಾಟ್ಸಾಪ್ ಕೆಲಸ ಮಾಡುವುದನ್ನು ನಿಲ್ಲಿಸಲಿದೆ.

ಹೊಸ ವರ್ಷದಂದು ಹೊಸ ಹೊಸ ಫೀಚರ್ಸ್ ಪರಿಚಯ
ವಿಶ್ವಾದ್ಯಂತ ಹೆಚ್ಚು ಬಳಕೆಯಾಗುವ ಆಪ್ ಎಂದರೆ ಅದು ವಾಟ್ಸಾಪ್. ಪ್ರತಿ ದಿ ವಾಟ್ಸಾಪ್.ನ ಹೊಸ ಹೊಸ ಫೀಚರ್ಸ್ ಪರಿಚಯಿಸುತ್ತಿದೆ. ಆದರೆ, ಈ ಇನ್‌ಸ್ಟಂಟ್ ಮೆಸೇಜ್ ಆಪ್ ಜನವರಿ 1, 2025 ರಿಂದ ಅನೇಕ ಫೋನ್‌ಗಳಲ್ಲಿ ತನ್ನ ಸೇವೆಯನ್ನು ನಿಲ್ಲಿಸಲಿದೆ. ಮಾಹಿತಿಯ ಪ್ರಕಾರ, ಹೊಸ ವರ್ಷದ ಮೊದಲ ದಿನದಿಂದ, ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್ 20ಕ್ಕೂ ಹೆಚ್ಚು ಸ್ಮಾರ್ಟ್‌ಫೋನ್‌ಗಳಲ್ಲಿ ವರ್ಕ್ ಆಗಲ್ಲ. ಹೀಗಾಗಿ, ನಿಮ್ಮ ಸ್ಮಾರ್ಟ್‌ಫೋನ್ ಯಾವುದು? ಯಾವ ವರ್ಶನ್? ಹಳೆಯದೋ ಅಥವಾ ಹೊಸದೋ? ತಕ್ಷಣವೇ ಸೆಟ್ಟಿಂಗ್ ಕ್ಲಿಕ್ ಮಾಡಿ ಪರಿಶೀಲನೆ ಮಾಡಿಕೊಳ್ಳಿ.
ವಾಸ್ತವವಾಗಿ, ಹಳೆಯ ಆಪರೇಟಿಂಗ್ ಸಿಸ್ಟಮ್ ಹೊಂದಿರುವ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಿಗೆ ವಾಟ್ಸಾಪ್ ತನ್ನ ಸಪೋರ್ಟ್ ಮಾಡುವುದಿಲ್ಲ. ಇದು ಬಹುತೇಕ ಪ್ರತಿ ವರ್ಷವೂ ಕಂಡುಬರುತ್ತದೆ. ಇದರ ಹಿಂದಿನ ಕಾರಣವೆಂದರೆ ಹಳೆಯ ಆಪರೇಟಿಂಗ್ ಸಿಸ್ಟಮ್‌ಗಳಿಗೆ ವಾಟ್ಸಾಪ್ ತನ್ನ ಸಪೋರ್ಟ್ ನಿಲ್ಲಿಸಿದಾಗ, ಹೊಸ ವೈಶಿಷ್ಟ್ಯಗಳು ಹಳೆಯ ಆಪರೇಟಿಂಗ್ ಸಿಸ್ಟಮ್‌ಗಳಲ್ಲಿ ಕೆಲಸ ಮಾಡುವುದನ್ನು ನಿಲ್ಲಿಸುತ್ತವೆ. ಹೀಗಾಗಿ, ಭದ್ರತಾ ಕಾರಣಗಳನ್ನು ಗಮನದಲ್ಲಿಟ್ಟುಕೊಂಡು ಇದನ್ನು ಮಾಡಲಾಗುತ್ತದೆ. ಕೆಲ ಹಳೆಯ ಆಂಡ್ರಾಯ್ಡ್ ಫೋನ್‌ಗಳಲ್ಲಿ ಇನ್ಮುಂದೆ ವಾಟ್ಸಾಪ್ ಕೆಲಸ ಮಾಡುವುದಿಲ್ಲ.
ಆಂಡ್ರಾಯ್ಡ್‌ನ ಈ ಆವೃತ್ತಿಯಲ್ಲಿ ವಾಟ್ಸಾಪ್ ಕೆಲಸ ಮಾಡಲ್ಲ
ಒಂದು ವೇಳೆ ನೀವು, ಆಂಡ್ರಾಯ್ಡ್‌ನ KitKat ಆವೃತ್ತಿ ಬಳಸುತ್ತಿದ್ದರೆ, ನಿಮಗಿದು ಬೇಸರದದ ವಿಷಯ. 10 ವರ್ಷಗಳ ಹಿಂದೆ ಬಿಡುಗಡೆಯಾದ ಈ ಇನ್‌ಸ್ಟಂಟ್ ಮೆಸೇಜ್ ಆಪ್ ಈ ಆವೃತ್ತಿಯನ್ನು ಹೊಸ ವರ್ಷದಿಂದ ಬೆಂಬಲಿಸುವುದಿಲ್ಲ. ಅಂದರೆ, ಜನವರಿ 1ರ (2025) ನಂತರ ಕಿಟ್‌ಕ್ಯಾಟ್ ಆವೃತ್ತಿಯ ಫೋನ್‌ಗಳಲ್ಲಿ ವಾಟ್ಸಾಪ್ ಕೆಲಸ ನಿರ್ವಹಿಸುವುದನ್ನು ನಿಲ್ಲಿಸುತ್ತದೆ. ನೀವು ಅದನ್ನು ನಿಲ್ಲಿಸಲು ಬಯಸಿದರೆ, ಆಪರೇಟಿಂಗ್ ಸಿಸ್ಟಮ್ ಅನ್ನು ಅಪ್ಡೇಟ್ ಮಾಡಬೇಕು ಅಥವಾ ಹೊಸ ಫೋನ್ ಖರೀದಿಸಬೇಕು.
ಸ್ಯಾಮ್‌ಸಂಗ್‌ನ ಈ ಫೋನ್‌ಗಳಲ್ಲಿ ವಾಟ್ಸಪ್ ಕೆಲಸ ಮಾಡಲ್ಲ
ಇನ್ನು, ಯಾವ್ಯಾವ ಸ್ಮಾರ್ಟ್‌ಫೋನ್‌ಗಳಲ್ಲಿ ವಾಟ್ಸಪ್ ತನ್ನ ಸಪೋರ್ಟ್ ನಿಲ್ಲಿಸಲಿದೆ ಗೊತ್ತಾ..? ಆ 20ಕ್ಕೂ ಹೆಚ್ಚು ಮೊಬೈಲ್‌ಗಳ ಪಟ್ಟಿ ಇಲ್ಲಿದೆ ನೋಡಿ.
ಈ ಸ್ಯಾಮ್‌ಸಂಗ್ ಫೋನ್‌ಗಳಲ್ಲಿ ವಾಟ್ಸಪ್ ವರ್ಕ್ ಆಗಲ್ಲ
Samsung Galaxy S3, Galaxy Note 2, Galaxy Ace 3, Galaxy S4 Mini ವರ್ಕ್ ಆಗಲ್ಲ.
HTC ಯಾವ ಫೋನ್‌ಗಳಲ್ಲಿ ವಾಟ್ಸಪ್ ಕೆಲಸ ಮಾಡಲ್ಲ
One X, One X+, Desire 500, Desire 600 ಫೋನ್‌ಗಳಲ್ಲಿ ವಾಟ್ಸಪ್ ಕೆಲಸ ಮಾಡಲ್ಲ.
ಈ ಸೋನಿ ಸ್ಮಾರ್ಟ್‌ಫೋನ್‌ಗಳಲ್ಲಿಯೂ ಸಹ ಕೆಲಸ ನಿರ್ವಹಿಸುವುದಿಲ್ಲ
Sony Xperia Z, Xperia SP,Xperia T, Xperia V ಸಹ ಕೆಲಸ ನಿರ್ವಹಿಸುವುದಿಲ್ಲ.
ಈ LG ಫೋನ್‌ಗಳಲ್ಲಿಯೂ ಸಹ ವಾಟ್ಸಪ್ ಲಭ್ಯವಿರಲ್ಲ
Optimus G, Nexus 4, G2 Mini, L90 ವಾಟ್ಸಪ್ ಲಭ್ಯವಿರಲ್ಲ.
ಮೊಟೊರೊಲಾ ಈ ಫೋನ್‌ಗಳಲ್ಲಿ ವಾಟ್ಸಪ್ ಸೇವೆ ಸ್ಥಗಿತ
Moto G, Moto Razr HD, Moto E 2014 ಸೇವೆ ಸ್ಥಗಿತ
ಹಳೆಯ ಚಾಟ್‌ಗಳನ್ನು ಬ್ಯಾಕಪ್ ಮಾಡಿ
ನೀವು, ಈ ಫೋನ್‌ಗಳಲ್ಲಿ ಯಾವುದಾದರೂ ಒಂದನ್ನು ಬಳಸುತ್ತಿದ್ದರೆ, ಖಂಡಿತ ವಾಟ್ಸಪ್ ಸಪೋರ್ಟ್ ಮಾಡಲ್ಲ. ಇದು ಖಚಿತವಾಗಿದೆ. ಹೀಗಾಗಿ, ನೀವು ಹೊಸ ಫೋನ್ ಖರೀದಿಸಲು ಬಯಸಿದರೆ, ತಪ್ಪದೇ ನಿಮ್ಮ ಹಳೆಯ ಚಾಟ್‌ಗಳನ್ನು ಬ್ಯಾಕಪ್ ಮಾಡಿಕೊಳ್ಳಿ.
More From GoodReturns

ಓಮ್ ಪವರ್ ಟ್ರಾನ್ಸ್ಮಿಷನ್ ಐಪಿಒ: ಸೋಮವಾರ ಹೂಡಿಕೆದಾರರಿಗೆ ಅಗ್ನಿಪರೀಕ್ಷೆ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?



Click it and Unblock the Notifications