For Quick Alerts
ALLOW NOTIFICATIONS  
For Daily Alerts

ಭಾರತ, ಚೀನಾದಂತೆ ನಮ್ಮನ್ನು ಅಭಿವೃದ್ಧಿ ಶೀಲ ರಾಷ್ಟ್ರವನ್ನಾಗಿ ನೋಡುತ್ತಿಲ್ಲ-WTO ವಿರುದ್ಧ ಟ್ರಂಪ್ ಆರೋಪ

|

'ಭಾರತ ಮತ್ತು ಚೀನಾವನ್ನು ಅಭಿವೃದ್ಧಿ ಶೀಲ ರಾಷ್ಟ್ರವನ್ನಾಗಿ ಪರಿಗಣಿಸಿ ಹೆಚ್ಚಿನ ಅವಕಾಶಗಳನ್ನು ಕಲ್ಪಿಸಿಕೊಡುವ ವಿಶ್ವ ವಾಣಿಜ್ಯ ಸಂಸ್ಥೆ (WTO) ನಮ್ಮನ್ನು ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ' ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಆರೋಪಿಸಿದ್ದಾರೆ.

ಸ್ವಿಟ್ಜರ್ಲೆಂಡ್‌ನ ದಾವೋಸ್‌ನಲ್ಲಿ ನಡೆಯುತ್ತಿರುವ ವಿಶ್ವ ಆರ್ಥಿಕ ಶೃಂಗದಲ್ಲಿ ಬುಧವಾರ ಮಾತನಾಡಿದ ಟ್ರಂಪ್ ''WTO ನಮ್ಮನ್ನು ಸೂಕ್ತವಾಗಿ ಪರಿಗಣಿಸಿಲ್ಲ. ಚೀನಾವನ್ನು, ಭಾರತವನ್ನು ಅಭಿವೃದ್ಧಿ ಶೀಲ ರಾಷ್ಟ್ರವನ್ನಾಗಿ WTO ನೋಡುತ್ತಿದೆ. ಆದರೆ ನಮ್ಮನ್ನು ಹಾಗೆ ನೋಡುವುದೇ ಇಲ್ಲ. ಹೀಗಾಗಿ ಅದರೊಂದಿಗೆ ನನ್ನ ಭಿನ್ನಾಭಿಪ್ರಾಯಗಳನ್ನು ಹೊಂದಿದ್ದೇನೆ'' ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಭಾರತ,ಚೀನಾದಂತೆ ನಮ್ಮನ್ನು ಅಭಿವೃದ್ಧಿ ಶೀಲ ರಾಷ್ಟ್ರವಾಗಿ ನೋಡುತ್ತಿಲ್ಲ

ಭಾರತ ಮತ್ತು ಚೀನಾ ರಾಷ್ಟ್ರಗಳು ಅಭಿವೃದ್ಧಿ ಶೀಲ ಎಂಬ ಹೆಸರಿನಲ್ಲಿ ಅಪರಿಮಿತ ಅನುಕೂಲ ಪಡೆಯುತ್ತಿವೆ. ನಮಗೆ ಅನುಕೂಲಗಳು ಇಲ್ಲವಾಗಿವೆ. ನನ್ನ ಮಟ್ಟಿಗೆ ಅಮೆರಿಕಾ ಕೂಡ ಅಭಿವೃದ್ಧಿ ರಾಷ್ಟ್ರವೇ? ಅವರಿಗೆ ಅನುಕೂಲಗಳಾಗುವುದಿದ್ದರೆ ನಮಗೂ ಆಗಲಿ. ಇಲ್ಲದಿದ್ದರೆ ಅವರಿಗೂ ಬೇಡ. ಹೀಗಾಗಿ ಈ ವ್ಯವಸ್ಥೆ ಬದಲಾಗಬೇಕು ಎಂದು ಒತ್ತಾಯಿಸಿದ್ದಾರೆ.

ಈ ಹಿಂದೆ ಟ್ರಂಪ್ WTO ನಿಯಮಗಳ ಪ್ರಕಾರ ಚೀನಾ ಮತ್ತು ಭಾರತದಂತಹ ದೊಡ್ಡ ಅಭಿವೃದ್ಧಿಶೀಲ ರಾಷ್ಟ್ರಗಳು ಅನುಭವಿಸುತ್ತಿರುವ ವಿಶೇಷ ಮತ್ತು ಭೇದಾತ್ಮಕ ಸ್ಥಾನಮಾನವನ್ನು ಗುರಿಯಾಗಿಸಿಕೊಂಡು, ಅಗತ್ಯ ಕ್ರಮ ಕೈಗೊಳ್ಳುವಂತೆ WTO ವನ್ನು ಕೇಳಿಕೊಂಡಿದ್ದರು.

English summary

We Are A Developing Nation Too Said Trump

US President Donald Trump on Wednesday said India and China have taken “tremendous advantage" because of their developing country status
Story first published: Thursday, January 23, 2020, 10:08 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X