ನವದೆಹಲಿ, ಏಪ್ರಿಲ್ 11: ಪತಂಜಲಿಯ ಔಷಧೀಯ ಉತ್ಪನ್ನಗಳ ತಪ್ಪುದಾರಿಗೆಳೆಯುವ ಜಾಹೀರಾತುಗಳಿಗೆ ಸಂಬಂಧಿಸಿದಂತೆ ಬಾಬಾ ರಾಮ್‌ದೇವ್ ಮತ್ತು ಆಚಾರ್ಯ ಬಾಲಕೃಷ್ಣ ಅವರ "ಬೇಷರತ್ ಕ್ಷಮೆ"ಯನ್ನು ಸುಪ್ರೀಂ ಕೋರ್ಟ್ ಬುಧವಾರ ತಿರಸ್ಕರಿಸಿದೆ.
ನ್ಯಾಯಮೂರ್ತಿಗಳಾದ ಹಿಮಾ ಕೊಹ್ಲಿ ಮತ್ತು ಅಹ್ಸಾನುದ್ದೀನ್ ಅಮಾನುಲ್ಲಾ ಅವರ ಪೀಠವು ಪತಂಜಲಿ ವಿರುದ್ಧ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದು, ನಿಮ್ಮ ಧೋರಣೆ"ಉದ್ದೇಶಪೂರ್ವಕ ಮತ್ತು ಪುನರಾವರ್ತಿತ ಉಲ್ಲಂಘನೆಯಾಗಿದೆ" ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಪೀಠವು ಪತಂಜಲಿ ಮತ್ತು ಅದರ ಎಂಡಿ ಸಲ್ಲಿಸಿದ ಇತ್ತೀಚಿನ ಅಫಿಡವಿಟ್ ಅನ್ನು ಸ್ವೀಕರಿಸಲು ನಿರಾಕರಿಸಿದ್ದು ಕಳೆದ ವರ್ಷ ನವೆಂಬರ್‌ನಲ್ಲಿ ನ್ಯಾಯಾಲಯಕ್ಕೆ ನೀಡಲಾದ ಒಪ್ಪಂದವನ್ನು ಉಲ್ಲಂಘಿಸಿ ಜಾಹೀರಾತುಗಳನ್ನು ಪ್ರಸಾರ ಮಾಡಿದ್ದಕ್ಕಾಗಿ ನಾಮಕಾವಸ್ತೆಗೆ ಕ್ಷಮೆಯಾಚಿಸಿದಂತಿದೆ. ಏನೋ ತಪ್ಪಿಸಿಕೊಳ್ಳಬೇಕೆಂದು ಇದನ್ನು ಮಾಡಿದಂತಿದೆ. ನಿಮ್ಮ ಅಫಿಡವಿಟ್ ಅನ್ನು ಒಪ್ಪಲು ನಿರಾಕರಿಸುತ್ತೇವೆ. ನಮ್ಮ ಆದೇಶಗಳನ್ನು ಬೇಕಂತಲೇ ಬಾರಿ ಬಾರಿ ಉಲ್ಲಂಘನೆ ಮಾಡಿದ್ದೀರಿ ಎಂದು ಭಾವಿಸುತ್ತೇನೆ' ಎಂದು ಎಚ್ಚರಿಕೆ ನೀಡಿದೆ.
ಪತಂಜಲಿ ಸಂಸ್ಥಾಪಕರ ಪರ ವಾದ ಮಂಡಿಸಿದ ಹಿರಿಯ ವಕೀಲ ಮುಕುಲ್ ರೋಹಟಗಿ, ಜನರು ಜೀವನದಲ್ಲಿ ತಪ್ಪುಗಳನ್ನು ಮಾಡುತ್ತಾರೆ. ಆದರೆ, ಅಂತಹ ಪ್ರಕರಣಗಳಲ್ಲಿ ವ್ಯಕ್ತಿಗಳು ತೊಂದರೆ ಅನುಭವಿಸಬೇಕಾಗುತ್ತದೆ ಎಂದು ಪ್ರತಿಕ್ರಿಯಿಸಿದಾಗ ಸುಪ್ರೀಂ ಕೋರ್ಟ್ ವಕೀಲರಿಗೆ ಛೀಮಾರಿ ಹಾಕಿದ್ದು. "ನಾವು ಕುರುಡರಲ್ಲ... ಈ ಪ್ರಕರಣದಲ್ಲಿ ನಾವು ಉದಾರವಾಗಿರಲು ಬಯಸುವುದಿಲ್ಲ" ಎಂದು ಪೀಠ ಹೇಳಿದ್ದು ನ್ಯಾಯಾಂಗ ನಿಂದನೆ ಮೊಕದ್ದಮೆ ಎದುರಿಸುತ್ತಿರುವ ಪತಂಜಲಿ ಸಹ ಸಂಸ್ಥಾಪಕ ಬಾಬಾ ರಾಮ್‌ದೇವ್ ಅವರು ಸಲ್ಲಿಸಿರುವ ಕ್ಷಮಾಪಣೆ ಅಫಿಡವಿಟ್ ಅನ್ನು ಸ್ವೀಕರಿಸಲು ನಿರಾಕರಿಸಿದೆ.
ಮಾತ್ರವಲ್ಲದೇ ಕ್ಷಮಾಪಣೆಯು ಕಾಗದದ ಮೇಲಿದೆ. ಇದು ಉದ್ದೇಶಪೂರ್ವಕ ಉಲ್ಲಂಘನೆ ಎಂದು ನಾವು ಪರಿಗಣಿಸುತ್ತೇವೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.ಪತಂಜಲಿ ಸಂಸ್ಥಾಪಕರ ಕ್ಷಮೆ ಯಾಚನೆ ಬಗ್ಗೆ ಕೋರ್ಟ್ ಅಸಮಾಧನ ವ್ಯಕ್ತಪಡಿಸಲು ಕಾರಣ ಇದ್ದು. ಬಾಬಾ ರಾಮದೇವ್ ಮತ್ತು ಬಾಲಕೃಷ್ಣ ಅವರು ಕೋರ್ಟ್ಗೆ ಅಫಿಡವಿಟ್ ಸಲ್ಲಿಸುವ ಮುನ್ನ ಮಾಧ್ಯಮಗಳ ಮುಂದೆ ಹೋಗಿ ಮೊದಲು ಕ್ಷಮೆಯಾಚನೆಯ ವಿಚಾರವನ್ನು ಬಹಿರಂಗಪಡಿಸಿದ್ದು ಕೋರ್ಟ್ ಕೆಂಗಣ್ಣಿಗೆ ಕಾರಣವಾಗಿದೆ.
ತಮ್ಮ ಕ್ಷಮಾಪಣೆಯ ಅಫಿಡವಿಟ್ ಅನ್ನು ನ್ಯಾಯಾಲಯಕ್ಕೆ ಸಲ್ಲಿಸುವ ಬದಲು ನೀವು ಸಾರ್ವಜನಿಕರಿಗೆ ಮೊದಲು ಬಿಡುಗಡೆ ಮಾಡಿದ್ದೀರಿ. ಮೊದಲು ಮಾಧ್ಯಮಗಳಿಗೆ ಕಳುಹಿಸಿದ್ದಾರೆ, ನಿನ್ನೆ ಸಂಜೆ 7.30 ರವರೆಗೆ ಅದನ್ನು ನಮಗೆ ಅಪ್‌ಲೋಡ್ ಮಾಡಲಾಗಿಲ್ಲ, ಹೀಗಾಗಿ ಇದರಲ್ಲೂ ನೀವು ಪ್ರಚಾರ ಗೀಳು ಉಳ್ಳವರು ಎಂದು ನಂಬುತ್ತೇವೆ" ಎಂದು ನ್ಯಾಯಪೀಠ ಗುಡುಗಿದೆ.
ಪತಂಜಲಿ ಉತ್ಪನ್ನಗಳಿಗೆ ಪರವಾನಗಿ ನೀಡಿದ್ದಕ್ಕಾಗಿ ಉತ್ತರಾಖಂಡ ಸರ್ಕಾರವನ್ನು ತೀವ್ರ್ ತರಾಟೆಗೆ ತೆಗೆದುಕೊಂಡ ಸುಪ್ರೀಂ ಕೋರ್ಟ್ ಔಷಧಿ ಪರವಾನಗಿ ನೀಡಿದ ಮೂವರು ಅಧಿಕಾರಿಗಳನ್ನು ತಕ್ಷಣವೇ ಅಮಾನತುಗೊಳಿಸಬೇಕು ಎಂದು ಹೇಳಿದೆ. ಮಾತ್ರವಲ್ಲದೇ ಸುಪ್ರೀಂ ಕೋರ್ಟ್ ಎಂಬುವುದು ನಿಮಗೆ ಅಣಕವಾಗಿದೆ ಎಂದು ಪೀಠವು ಪರವಾನಗಿ ಪ್ರಾಧಿಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಪ್ರಕರಣದ ಮುಂದಿನ ವಿಚಾರಣೆ ಏಪ್ರಿಲ್ 16 ರಂದು ನಡೆಯಲಿದ್ದು, ಬಾಬಾ ರಾಮ್‌ದೇವ್ ಮತ್ತು ಆಚಾರ್ಯ ಬಾಲಕೃಷ್ಣ ಅವರ ಮುಂದೆ ಹಾಜರಾಗುವಂತೆ ಸುಪ್ರೀಂ ಕೋರ್ಟ್ ಹೇಳಿದೆ.


Click it and Unblock the Notifications