ರಾಜ್ಯದಲ್ಲಿ ಚಳಿ ಪ್ರಮಾಣ ಹಾಗೆ ಮುಂದುವರೆದಿದೆ. ಇದರ ಜೊತೆಗೆ ರಾಜ್ಯದ ಕೆಲವೆಡೆ ಮಳೆ ಆಗುವ ಸಾಧ್ಯತೆ ಇದೆ. ನಿನ್ನೆ ಬೆಂಗಳೂರು ಸೇರಿದಂತೆ ಕರ್ನಾಟಕ ದಕ್ಷಿಣ ಬಾಗದಲ್ಲಿ ತುಂತು ಮಳೆ ಆಗಿತ್ತು. ಇಂದು ಕೂಡ ಅದೇ ವಾತವರಣ ಮುಂದುವರೆಯಲಿದೆ. ಚಳಿ ಜೊತೆ ಜೊತೆಗೆ ಮಳೆ ಆಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಬೆಂಗಳೂರಿನಲ್ಲಿ ಈ ತಿಂಗಳ ಆರಂಭಕ್ಕೆ ಹೋಲಿಸಿದರೆ ಈ ಸಮಯದಲ್ಲಿ ಕನಿಷ್ಠ ಉಷ್ಠಾಂಶ ಏರಿಕೆಯಾಗಿದೆ. ಆದ್ರೂ ಕೂಡ ಬೆಂಗಳೂರಿನಲ್ಲಿ ಮುಂಜಾನೆಯ ಚಳಿ ಪ್ರಮಾಣದಲ್ಲಿ ಮಾತ್ರ ಯಾವುದೇ ವ್ಯತ್ಯಾಸವಿಲ್ಲ. ಹಾಗೆ ಬೆಂಗಳೂರಿನಲ್ಲಿ ಇಂದು ಮೋಡ ಕವಿದ ವಾತವರಣ ಇರಲಿದ್ದು, ಒಣ ಹವೆ ಹಾಗೆ ಮುಂದುವರೆಯಲಿದೆ.

ಬಂಗಾಳಕೊಲ್ಲಿಯಲ್ಲಿ ಚಂಡಮಾರುತದ ಪರಿಚಲನೆ ಉಂಟಾಗಿದ್ದು ಇದು ಇದರ ಪ್ರಭಾವ ಕರ್ನಾಟಕದ ಮೆಲೂ ಉಂಟಾಗಿದೆ. ಅಲ್ಲದೆ ನಿನ್ನೆ ಕಾರವಳಿ ಭಾಗದಲ್ಲಿ ಹಲವೆಡೆ ಮಳೆ ಉಂಟಾಗಿದೆ. ಹೀಗೆ ಇಂದು ಕೂಡ ಮಳೆ ಮುನ್ಸೂಚನೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ರಾಯಚೂರು, ವಿಜಯನಗರ, ಶಿವಮೊಗ್ಗ, ಕಲಬುರಗಿ, ರಾಮನಗರ, ಮಂಡ್ಯ, ಕೋಲಾರ, ದಾವಣಗೆರೆ, ಚಿತ್ರದುರ್ಗ, ಗದಗ, ಬೆಳಗಾವಿ, ಯಾದಗಿರಿ, ಕೊಪ್ಪಳ, ಬೀದರ್, ಬಾಗಲಕೋಟೆ, ತುಮಕೂರು, ಹಾವೇರಿ, ಧಾರವಾಡಯಲ್ಲಿ ಒಣಹವೆ ಇರಲಿದ್ದು, ಚಿಕ್ಕಮಗಳೂರು, ಹಾಸನ, ಕೊಡಗು, ದಕ್ಷಿಣ ಕನ್ನಡ, ಉಡುಪಿ, ಚಾಮಾರಜನಗರ, ಮೈಸೂರಿನಲ್ಲಿ ಮಳೆಯಾಗುವ ಸಾಧ್ಯತೆ ಇದೆ.
ರಾಜ್ಯದ ಉತ್ತರ ಒಳನಾಡಿನಲ್ಲಿ ಚಳಿ ಮತ್ತೆ ಹೆಚ್ಚಾಗಲಿದೆ. ಶೀತಗಾಳಿ ಹೆಚ್ಚು ಬೀಸುವುದರಿಂದ ಬೆಳಗ್ಗೆ ಚಳಿ ಪ್ರಮಾಣ ಹೆಚ್ಚಿರಲಿದೆ. ಹಾಗೆ ಬೆಂಗಳೂರರಿನ ಕೆಲ ನಗರಗಳಲ್ಲಿ ತಾಪಮಾನ ಏರಿಕೆಯಾಗಿದೆ. ಹಾಗೆ ಒಂದೇ ದಿನ ಕನಿಷ್ಠ ತಾಪಮಾನ 16.97 ಡಿಗ್ರಿ ಸೆಲ್ಸಿಯಸ್ ಇದೆ. ಹಾಗೆ ಗರಿಷ್ಠ 28 °C ಮತ್ತು ಕನಿಷ್ಠ 20 °C ನಡುವೆ ಇರಲಿದೆ. ಕರ್ನಾಟಕದ ದಕ್ಷಿನ ಭಾಗಗಳಲ್ಲೂ ಕೂಡ ಲಘು ಮಳೆಯಾಗಿದೆ. ಇಂದು ಬೆಂಗಳೂರಿನಲ್ಲಿ ಮೋಡ ಕವಿದ ವಾತವರಣ ಇರಲಿದೆ. ಚಳಿ ಪ್ರಮಾಣ ಮಾತ್ರ ಮೊದಲಿನಂತೆಯೇ ಇದೆ.
ಬೆಂಗಳೂರಿನಲ್ಲಿ ಗಾಳಿ ಗುಣ ಮಟ್ಟವನ್ನ ನೋಡುವುದಾದ್ರೆ AQI ಮಟ್ಟವು 55.0 ಇದೆ. ಇದು ನಗರದಲ್ಲಿ ಉತ್ತಮ ಗಾಳಿಯನ್ನ ಸೂಚಿಸುತ್ತದೆ. ಇನ್ನು ಬೆಂಗಳೂರಿನಲ್ಲಿ 7 ದಿನಗಳ ಕಾಲ ಹವಾಮಾನದಲ್ಲಿ ಸಾಕಷ್ಟು ಏರಿಳಿತಗಳಾಗುವ ಸಾಧ್ಯತೆ ಇದೆ.
ಕರಾವಳಿಯಲ್ಲಿ ಮಳೆ ಸಾಧ್ಯತೆ
ನೈರುತ್ಯ ಬಂಗಾಳಕೊಲ್ಲಿಯಲಲಲ್ಲಿ ಚಂಡಮಾರುತ ಕಂಡುಬಂದಿದ್ದು, ಈ ಹಿನ್ನೆಲೆ ಕರ್ನಾಟಕದ ದಕ್ಷಿಣ ಭಾಗದಲ್ಲಿ ಮೋಡ ಕವಿದ ವಾತವರಣ ಇರಲಿದೆ. ಹಾಗೆ ಕನಿಷ್ಠ ತಾಪಮಾನ ಸಹಜವಾಗಿ ಹೆಚ್ಚಿರಲಿದೆ. ಎಮದು ಬೆಂಗಳೂರು ಪ್ರದೇಶಿಕ ಹವಾಮಾನ ಇಲಾಖೆ ತಿಳಿಸಿದೆ.
ಕರಾವಳಿ ಭಾಗದಲ್ಲಿ ಮಳೆ ಮುನ್ಸೂಚನೆ ಇದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ಕೋಲಾರ, ಕೊಡಗು, ಮಂಡ್ಯ, ರಾಮನಗರ, ಮೈಸೂರು, ಶಿವಮೊಗ್ಗ, ತುಮಕೂರಿನಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಹಾಗೆ ಬಲುಸೀಮೆ ಪ್ರದೇಶಗಳಾದ ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಬಳ್ಳಾರಿ, ಚಿತ್ರದುರ್ಗ, ದಾವಣಗೆರೆಯಲ್ಲಿ ಚಳಿ ಕಡಿಮೆಯಾಗಿ ಒಣಹವೆ ಮುಂದುವರೆಯಲಿದೆ ಎಮದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ವಿಜಯಪುರದಲ್ಲಿ 30.2 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ಇದೆ. ಸಧ್ಯಕ್ಕೆ ಚಳಿ ಪ್ರಮಾಣ ಇಳಿಕೆಯಾಗಿದೆ. ಹಾಗೆ ವಿಜಯಪುರದಲ್ಲಿ ಕನಿಷ್ಠ ತಾಪಮಾನ 15.0 ಡಿಗ್ರಿ ಸೆಲ್ಸಿಯಸ್ ಇದೆ. ಬೀದರ್‌ನಲ್ಲಿ 28.2 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ಇದ್ದರೆ, 15.6 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ ಇದೆ. ಬಾಗಲಕೋಟೆಯಲ್ಲಿ ಗರಿಷ್ಠ ತಾಪಮಾನ 31.3 ಡಿಗ್ರಿ ಸೆಲ್ಸಿಯಸ್ ಇದ್ದರೆ, ಕನಿಷ್ಠ ತಾಪಮಾನ 17.9 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.
ಧಾರವಾಡದಲ್ಲಿ ಗರಿಷ್ಠ ತಾಪಮಾನ 30.0 ಡಿಗ್ರಿ ಸೆಲ್ಸಿಯಸ್ ಇದೆ, ಜೊತೆಗೆ ಕನಿಷ್ಠ ತಾಪಮಾನ 16.0 ಡಿಗ್ರಿ ಸೆಲ್ಸಿಯಸ್ ಇದೆ. ಗರಿಷ್ಠ ತಾಪಮಾನ ಹಾವೇರಿಯಲ್ಲಿ 30.2 ಡಿಗ್ರಿ ಸೆಲ್ಸಿಯಸ್ ಇದೆ. ಇತ್ತ ಕನಿಷ್ಠ ತಾಪಮಾನ 19.8 ಡಿಗ್ರಿ ಸೆಲ್ಸಿಯಸ್ ಇದೆ. ಕಲಬುರಗಿಯಲ್ಲಿ ಗರಿಷ್ಠ ತಾಪಮಾನ 33.0 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ತಾಪಮಾನ 19.7 ಡಿಗ್ರಿ ಸೆಲ್ಸಿಯಸ್ ಇದೆ. ಗದಗದಲ್ಲಿ 30.4 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ಇದ್ದರೆ, 17.8 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ ಇದೆ.


Click it and Unblock the Notifications