ವರ್ಷದ ಆರಂಭದಲ್ಲಿ ಆಚರಿಸುವ ಮಕರ ಸಂಕ್ರಾಂತಿ ಹಬ್ಬಕ್ಕೆ ಸಾಕಷ್ಟು ಮಹತ್ವವಿದೆ. ಸಂಕ್ರಾಂತಿ ಹಬ್ಬವನ್ನ ಸಿಗ್ಗಿ ಹಬ್ಬ ಎಂದು ಕರೆಯುತ್ತಾರೆ. ಈ ಹಬ್ಬವನ್ನ ಜನವರಿ 14 ರಂದು ಆಚರಣೆ ಮಾಡುತ್ತಾರೆ. ಹಾಗೆ ಈ ಹಬ್ಬವನ್ನ ಉತ್ತರಾಯಣ ಹಬ್ಬವೆಂದೂ ಕರೆಯುತ್ತಾರೆ. ಏಕೆಂದರೆ ಮಕರ ಸಂಕ್ರಾಂತಿಯಂದು ಸೂರ್ಯ ತನ್ನ ಪಥವನ್ನ ಬದಲಾಯಿಸುತ್ತಾನೆ. ದಕ್ಷಿಣಾಯಣದಿಂದ ಉತ್ತರಾಯಣಕ್ಕೆ ಬದಲಾಗುತ್ತಾನೆ. ಹೀಗಾಗಿ ಇದನ್ನು ಉತ್ತಾರಾಯಣ ಹಬ್ಬ ಎಂದು ಕರೆಯುತ್ತಾರೆ. ಹಿಂದೂ ಧರ್ಮದ ಪ್ರಕಾರ ಸಂಕ್ರಾಂತಿ ಹಬ್ಬಕ್ಕೆ ಸಾಕಷ್ಟು ಮಹತ್ವವಿದೆ. ಇನ್ನು ಈ ಹಬ್ಬದ ವಿಧಿ ವಿಧಾನಗಳೇನು ಹಾಗೆ ಈ ಹಬ್ಬದ ಸಮಯದಲ್ಲಿ ದಾನವನ್ನ ಏಕೆ ಮಾಡಬೇಕು ಎನ್ನುವುದನ್ನು ಇಲ್ಲಿ ತಿಳಿಯಿರಿ.
ಸಂಕ್ರಾಂತಿ ಹಬ್ಬದ ವಿಶೇಷ
ಮಕರ ಸಂಕ್ರಾಂತಿ ಹಬ್ಬವನ್ನ ಸುಗ್ಗಿ ಹಬ್ಬ ಎನ್ನುತ್ತಾರೆ. ಈ ಹಬ್ಬದಂದು ರೈತ ತಾನು ಬೆಳದ ಬೆಳೆಯನ್ನ ತಂದು ರಾಶಿ ಹಾಕಿ ಸಂಭ್ರಮಿಸುತ್ತಾನೆ. ಇನ್ನು ಈ ಹಬ್ಬವನ್ನ ಹಲವೆಡೆ ಹಲವು ಹೆಸರುಗಳಲ್ಲಿ ಆಚರಣೆ ಮಾಡುತ್ತಾರೆ. ಸಂಕ್ರಾಂತಿಯಂದು ಸೂರ್ಯ ದೇವನ ಪೂಜೆಯನ್ನ ಮಾಡುತ್ತಾರೆ. ಮಕರ ಸಂಕ್ರಾಂತಿಯು ಕೃಷಿಯ ಮಹತ್ವ ಜೊತೆಗೆ ಆಳವಾದ ಸಾಂಸ್ಕೃತಿಕ ಹಿನ್ನಲೆಯನ್ನ ಹೊಂದಿದೆ. ಇದು ಚಳಿಗಾಲದ ಅಂತ್ಯ ಹಾಗು ವಸಂತಕಾಲದ ಆರಂಭವನ್ನ ಸೂಚಿಸುತ್ತದೆ. ಪ್ರಕೃತಿಗೆ ರೈತ ಕೃತಜ್ಞತೆಯನ್ನ ಸೂಚಿಸುವ ಸಂದರ್ಭ ಇದಾಗಿದೆ. ಹೀಗಾಗಿ ಈ ಹಬ್ಬವನ್ನ ಸಮೃದ್ಧಿಯನ್ನ ಸೂಚಿಸುತ್ತದೆ.

ಇನ್ನು ಈ ಹಬ್ಬ ಸಾಕಷ್ಟು ಪೌರಾಣಿಕ ಮಹತ್ವವನ್ನ ಕೂಡ ಒಳಗೊಂಡಿದೆ. ಮಕರ ಸಂಕ್ರಾಂತಿಯ ವೇಳೆ ಸೂರ್ಯದೇವ ಹಾಗು ಸೂರ್ಯದೇವನ ಪುತ್ರ ಶನಿಯ ಪುನರ್ಮಿಲನವನ್ನ ಸೂಚಿಸುತ್ತದೆ. ಅಲ್ಲದೆ ಹಿಂದೂ ಪುರಾಣದ ಪ್ರಾಕಾರ ಈ ಹಬ್ಬದ ಸಮಯದಲ್ಲೇ ಭಗೀರಥನು ಗಂಗೆಯನ್ನ ಭೂಮಿಗೆ ಇಳಿಸಿದ್ದನು ಎನ್ನಲಾಗುತ್ತದೆ. ಹೀಗಾಗಿ ಇದು ಶುದ್ಧೀಕರಣ ಮತ್ತು ಪುನರ್ಜನ್ಮವನ್ನ ಸೂಚಿಸುತ್ತದೆ. ಹಾಗೆ ಭಗವಾನ್ ಶ್ರೀ ವಿಷ್ಟು ಇದೇ ಸಮಯದಲ್ಲಿ ರಾಕ್ಷಸರನ್ನ ಸೋಲಿಸಿ ವಿಜಯವನ್ನ ಪಡೆದ ದಿನ ಇದಾಗಿದೆ.
ಸಂಕ್ರಾಂತಿ ಪೂಜೆ ವಿಧಿವಿಧಾನಗಳೇನು?
ಮಕರ ಸಂಕ್ರಾಂತಿಯನ್ನ ಜನವರಿ 14 ರಂದು ಆಚರಣೆ ಮಾಡುತ್ತಾರೆ. ಅಂದು ಜನರು ಹಲವು ಆಚರಣೆಗಳನ್ನ ಮಾಡುತ್ತಾರೆ. ಜೊತೆಗೆ ವಿವಿಧ ರೀತಿಯಲ್ಲಿ ಪೂಜೆಗಳನ್ನ ಮಾಡುತ್ತಾರೆ. ಈ ಹಬ್ಬದದಂದು ಜನರು ಕೆಲವು ಪೂಜಾ ವಿಧಿವಿಧಾನಗಳನ್ನ ಅನುಸರಿಸಬೇಕಾಗುತ್ತದೆ.
ಹಬ್ಬದ ದಿನದಂದು ಬೆಳಿಗ್ಗೆ ಬೇಗ ಎದ್ದು ಪವಿತ್ರ ಸ್ನಾನವನ್ನ ಮಾಡಬೇಕು. ಗಂಗಾ, ಯಮುನಾ ನದಿಗಳಂತಹ ಪವಿತ್ರ ನದಿಗಳಲ್ಲಿ ಸ್ನಾನ ಮಾಡಬೇಕು. ಪವಿತ್ರ ಸ್ನಾನ ಸಾಧ್ಯವಾಗದೆ ಹೋದ್ರೆ ಮನೆಯಲ್ಲಿ ಗಂಗಾಜಲವನ್ನ ನೀರಿನಲ್ಲಿ ಸ್ನಾನದ ಬೆರೆಸಿ ಸ್ನಾನ ಮಾಡಬೇಕು.
ನಂತರ ದೇವರ ಕೋಣೆಯನ್ನ ಶುಭ್ರಗೊಳಿಸಿ ದೇವರ ಪೂಜೆ ಮಾಡಬೇಕು. ಹಾಗೆ ಸುರ್ಯ ದೇವರ ಪ್ರಾರ್ಥನೆಗಳನ್ನ ಮಾಡಬೇಕು. ಪೂಜೆಯ ವೇಳೆ ದೇವರಿಗಾಗಿ ನೈವೇದ್ಯೆಯನ್ನ ಮಾಡಬೇಕು. ಎಳ್ಳು ಬೆಲ್ಲದ ಮಿಶ್ರಣ ಅಥವಾ ಖಿಚಡಿ ಮತ್ತು ಪೊಂಗಲ್ ಇಂತಹ ಭಕ್ಷ್ಯಗಳನ್ನ ದೇವರಿಗೆ ನೈವೇದ್ಯೆಯನ್ನ ಮಾಡಬೇಕು. ಹಾಗೆ ಈ ಹಬ್ಬದಂದು ದಾನವನ್ನ ಮಾಡುವುದು ಕೂಡ ತುಂಬಾ ಒಳ್ಳೆಯದು.
ಇನ್ನು ಉಪವಾಸವನ್ನ ಮಾಡುವವರು ಪುಣ್ಯ ಕಾಲ ಮುಹೂರ್ತದಲ್ಲಿ ಮುರಿಯುತ್ತಾರೆ. ಅಂದರೆ ಈ ಮುಹೂರ್ತ ಬೆಳಿಗ್ಗೆ 9:03 ರಿಂದ ಸಂಜೆ 5:46 ರವರೆಗೆ ಇರುತ್ತದೆ. ಆ ವೇಳೆಯಲ್ಲಿ ಉಪವಾಸವನ್ನ ಮುರಿಯಬಹುದು.
ದಾನದ ಮಹತ್ವವೇನು ತಿಳಿಯಿರಿ
ಮಕರ ಸಂಕ್ರಾಂತಿ ವೇಳೆ ದಾನವನ್ನ ಮಾಡುವುದು ತುಂಬಾ ಒಳ್ಳೆಯದು. ಸಮಕ್ರಾಂತಿಯೆಂದು ಸಹಜವಾಗಿ ಎಳ್ಳು ಬೆಲ್ಲದ ಮಿಶ್ರಣವನ್ನ ಮಾಡಿ ಜನರಿಗೆ ಹಂಚಲಾಗುತ್ತದೆ. ಎಳ್ಳು ಬೆಲ್ಲವನ್ನ ತಿಂದು ಒಳ್ಳೇದು ಮಾತನಾಡಿ ಎಂದು ಹೇಳುವ ಮೂಲಕ ಇದನ್ನ ನೀಡಲಾಗುತ್ತದೆ. ವಿಶೇಷವಾಗಿ ಸಂಕ್ರಾಂತಿಯನ್ನ ಎಳ್ಳು ಸಂಕ್ರಾಂತಿ ಎಂದೇ ನಾವು ಕರೆಯುತ್ತೇವೆ. ಎಳ್ಳಿನ ದಾನವನ್ನ ಮಾಡುವುದು ಶುಭವೆಂದು ಪರಿಗಣಿಸುತ್ತಾರೆ. ಹಾಗೆ ಆ ದಿನ ಎಳ್ಳನ್ನು ದಾನ ಮಾಡುವುದರಿಂದ ಶನಿ ದೋಷ ಕೂಡ ನಾಶವಾಗುತ್ತದೆ ಎನ್ನುವುದು ನಂಬಿಕೆ. ಹಾಗೆ ಬೆಲ್ಲವನ್ನ ಕೂಡ ದಾನ ಮಾಡಬಹುದು. ಹಬ್ಬದಂದು ಎಳ್ಳು ಬೆಲ್ಲದ ಉಂಡೆ ಹಾಗೆ ಮಂಡಕ್ಕಿಯನ್ನ ಕೂಡ ದಾನ ಮಾಡಬಹುದು.
ಇದರ ಜೊತೆಗೆ ಸಂಕ್ರಾಂತಿಯಂದು ವಸ್ತ್ರವನ್ನ ದಾನ ಮಾಡುವುದು ಶುಭ ಎನ್ನುತ್ತಾರೆ. ವಸ್ತ್ರಗಳನ್ನ ಬಡವರಿಗೆ ನೀಡಬೇಕು. ಹಾಗೆ ಹಬ್ಬದ ಸಮಯದಲ್ಲಿ ಕಂಬಳಿಯನ್ನ ದಾನ ಮಾಡುವುದು ತುಂಬಾ ಒಳ್ಳೆಯದು. ಇದರಿಮದ ಕೂಡ ನಿಮ್ಮ ದೋಗಳು ಪರಿಹಾರವಾಗುತ್ತವೆ. ಬಡವರಿಗೆ ಕಂಬಳಿಯನ್ನ ದಾನ ಮಾಡುವುದರಿಂದ ದೇವರು ನಿಮಗೆ ಆಶೀರ್ವಾದ ಮಾಡುತ್ತಾನೆ.
ಮಕರ ಸಂಕ್ರಾಂತಿಯಂದು ಕಿಚಡಿ ಮತ್ತು ತುಪ್ಪವನ್ನ ದಾನ ಮಾಡುವುದು ಕೂಡ ಉತ್ತಮ. ಅಕ್ಕಿ ಮತ್ತು ಉದ್ದಿನ ಬೇಳೆಯಲ್ಲಿ ಕಿಚಡಿಯನ್ನ ಮಾಡಿ ದಾನ ಮಾಡಬೇಕು. ಈ ಹಬ್ಬದ ಸಮಯದಲ್ಲಿ ಅಕ್ಕಿ ದಾನ ಮಾಡುವುದರಿಂದ ನೀವು ಪುಣ್ಯವನ್ನ ಪಡೆಯುತ್ತೀರಿ. ಹಾಗೆ ತುಪ್ಪವನ್ನ ದಾನ ಮಾಡಬೇಕು. ತುಪ್ಪವನ್ನ ದಾನ ಮಾಡುವುದರಿಂದ ನೀವು ಎಲ್ಲಾ ರೀತಿಯ ದೈಹಿಕ ಸೌಲಭ್ಯಗಳನ್ನ ಪಡೆಯುತ್ತೀರಿ. ಹೀಗೆ ಈ ಎಲ್ಲಾ ದಾನಗಳ ಮೂಲಕ ನೀವು ದೇವರ ಆಶೀರ್ವಾದವನ್ನ ಪಡೆಯಬಹುದು.
More From GoodReturns

Natural Gas Supply: ದೇಶದಲ್ಲಿ ಅನಿಲ ಕೊರತೆ..ಹೊಸ ಆದೇಶದ ಪ್ರಕಾರ ಯಾರಿಗೆ ಮೊದಲ ಆದ್ಯತೆ ಎಂದು ತಿಳಿಯಿರಿ

Silver Rate Today: ಭಾರತದಲ್ಲಿ ಸ್ಥಿರವಾದ ಬೆಳ್ಳಿ ದರ; ಎಷ್ಟಿದೆ ಗೊತ್ತಾ ಇಂದಿನ ದರ?

Bengaluru Gold: ಬೆಂಗಳೂರಿನ ಚಿನ್ನ ಪ್ರಿಯರಿಗೆ ಶಾಕ್; ದಿಢೀರ್ 7000 ರೂ. ಏರಿಕೆ ಕಂಡ ಬಂಗಾರ

Karnataka Budget 2026: 4.49 ಲಕ್ಷ ಕೋಟಿಯ ದಾಖಲೆ ಬಜೆಟ್…ಈ ಬಜೆಟ್ನಲ್ಲಿ ಜನಸಾಮಾನ್ಯರಿಗೆ ಸಿಕ್ಕ ಕೊಡುಗೆ ಏನು?

Karnataka Budget 2026 Live Updates: ಕರ್ನಾಟಕ ಬಜೆಟ್ನ ಪ್ರಮುಖ ಘೋಷಣೆಗಳೇನು? ಇಲ್ಲಿದೆ ಸಂಪೂರ್ಣ ಮಾಹಿತಿ

LPG ಪೂರೈಕೆಯಲ್ಲಿ ಕೊರತೆ; ದೇಶದಲ್ಲಿ ಎಲ್ಪಿಜಿ ಉತ್ಪಾದನೆ 10% ಹೆಚ್ಚಳ

Karnataka Weather: ರಾಜ್ಯದ ಜನರಿಗೆ ಬಿಸಿಲಿನ ಕಂಟಕ! ಹವಾಮಾನ ಇಲಾಖೆಯಿಂದ ಎಚ್ಚರಿಕೆ

Karnataka Budget: ಏರಿಕೆಯಾಗುತ್ತಿರುವ ಸಾಲ, ಹೆಚ್ಚುತ್ತಿರುವ ವೆಚ್ಚ...ಬಜೆಟ್ನಲ್ಲಿ ಸಮತೋಲನ ಸಾಧಿಸುವುದು ಸಾಧ್ಯವೇ?

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Egg Price Down: ಬೆಂಗಳೂರು ಮೊಟ್ಟೆ ಪ್ರಿಯರಿಗೆ ಗುಡ್ ನ್ಯೂಸ್; ಬೆಲೆ ಭಾರೀ ಇಳಿಕೆ

India Oil: ಇಸ್ರೇಲ್, ಯುಎಸ್ ಮತ್ತು ಇರಾನ್ ನಡುವೆ ವಾರ್! ಭಾರತದ ಕಚ್ಚಾ ತೈಲದ ಮೇಲೆ ಪರಿಣಾಮ ಬೀರಿದ್ದು ಹೇಗೆ?



Click it and Unblock the Notifications