karnataka budget 2025: ಆನೆ ಗಾತ್ರದ ಬಜೆಟ್‌ನಲ್ಲಿ ಸಾಮಾನ್ಯ ವರ್ಗದ ಜನರಿಗೆ ಇರುವೆಯಷ್ಟೂ ಲಾಭವಿಲ್ಲ.. !

ಸಿಎಂ ಸಿದ್ದರಾಮಯ್ಯ ಕನ್ನಡಿಗರಿಗೆ ಸಿನಿಮಾ ನೋಡೋಕೆ ಟಿಕೆಟ್ ದರ ಕಡಿಮೆ ಮಾಡಿದ್ದನ್ನು ಹೊರತುಪಡಿಸಿದ್ರೆ, ಈ ಬಾರಿಯ ಬಜೆಟ್‌(Budget 2025) ಘೋಷಣೆಯಲ್ಲಿ ನಿರಾಸೆಯ ಅಲೆಯನ್ನೇ ಹರಿಸಿದ್ದಾರೆ. ಅಂದರೆ ಈ ಬಾರಿ ಬಜೆಟ್ ಗಾತ್ರ 4 ಲಕ್ಷಕ್ಕಿಂತ ಹೆಚ್ಚಾಗಿದ್ದರೂ ಸಾಮಾನ್ಯ ಜನರಿಗೆ ಮಾತ್ರ, ಬಿಡುಗಾಸಿನ ಉಪಯೋಗ ಸಿಕ್ಕಿಲ್ಲ. ಬಡವರ ಬಂಧು, ಅನ್ನ ರಾಮಯ್ಯ ಎಂದು ಕರೆಯುತ್ತಿದ್ದ ಜನರು ಇಂದು ಕಿಡಿ ಕಾರುವಂತ ಬಜೆಟ್ ಘೋಷಣೆ ಮಾಡಿದ್ದಾರೆ.

ಆನೆ ಗಾತ್ರದ ಬಜೆಟ್‌ನಲ್ಲಿ ಸಾಮಾನ್ಯ ವರ್ಗದ ಜನರಿಗೆ ಇರುವೆಯಷ್ಟೂ ಲಾಭವಿಲ್ಲ. ಎಲ್ಲಾ ಅನುದಾನವನ್ನೂ ಅಭಿವೃದ್ಧಿಯ ಬಗ್ಗೆಯೇ ಘೋಷಣೆಯಾಗಿದೆ. ಈಗಾಗಲೇ ಬೆಲೆ ಏರಿಕೆಯಿಂದ ಈಗಾಗಲೇ ಕಂಗೆಟ್ಟು ಕುಳಿತಿರುವ ಜನರು, ಬಜೆಟ್‌ನಿಂದ ಉಪಯೋಗವಾಗುವ ಘೋಷಣೆ ಏನಾದರೂ ಬರುತ್ತದಾ ಎಂದು ಕಾದು ಕುಳಿತಿದ್ದರು ಆದರೆ ಅದು ಈಗ ನಿರಾಸೆಯಾಗಿದೆ.

Budget 2025: ಸಾಮಾನ್ಯ ಜನರಿಗೆ ರಾಜ್ಯ ಬಜೆಟ್‌ನಲ್ಲಿ ಸಿಕ್ಕಿದೇನು..?

ಇಂದು ತಮ್ಮ 16ನೇ ಬಜೆಟ್ ಮಂಡನೆಯಲ್ಲಿ ಸಿಎಂ ಸಿದ್ದರಾಮಯ್ಯ, ಅಭಿವೃದ್ಧಿಗಳು, ಮಹಿಳೆಯರ ಉತ್ತೇಜನ, ಅಲ್ಪಸಂಖ್ಯಾತರ ಬೆಂಬಲವನ್ನು ಪ್ರತಿನಿಧಿಸುವ ಯೋಜನೆಗಳಿಗೇ ಹೆಚ್ಚು ಒತ್ತು ನೀಡಿದ್ದಾರೆ. ಬೆಂಗಳೂರಿನಲ್ಲಿ ಟ್ರಾಫಿಕ್ ನಿಯಂತ್ರಿಸಲು ಮೆಟ್ರೋ ಸಂಪರ್ಕ ವಿಸ್ತರಣೆ ಬಗ್ಗೆ ಘೋಷಣೆ ಸಹ ಮಾಡಿದ್ದರು. ಆದರೆ ಬಜೆಟ್‌ನಲ್ಲಿ ಹೊಸತನವೆಂಬುದು ಇಲ್ಲವೇ ಇಲ್ಲ..

ಬಜೆಟ್‌ನಲ್ಲಿ ಗ್ಯಾರಂಟಿ ಯೋಜನೆಗಳ ನಿರ್ವಹಣೆಗೆ 51,034 ಕೋಟಿ ರೂ. ಮೀಸಲಿಡಲಾಗಿದೆ.ಈ ಪೈಕಿ ಶಕ್ತಿ ಯೋಜನೆಗೆ 5,300 ಕೋಟಿ, ಗೃಹ ಜ್ಯೋತಿಗೆ 10,100 ಕೋಟಿ,ಗೃಹಲಕ್ಷ್ಮೀ ಯೋಜನೆಗೆ 28 ಸಾವಿರ ಕೋಟಿ ಅನುದಾನ ಮೀಸಲಿಡಲಾಗಿದೆ. ಈ ವರ್ಷದ ಬಜೆಟ್‌ನಲ್ಲಿ ಪಂಚ ಗ್ಯಾರಂಟಿ ಮಾತ್ರ ಉಳಿಸಿಕೊಂಡಿದ್ದಾರೆ ಹೊರತು ಮಾಧ್ಯಮ ವರ್ಗದವರ ನಿರೀಕ್ಷೆಗಳನ್ನು ಗಾಳಿಗೆ ತೋರಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್‌ನಲ್ಲಿ ಅಬಕಾರಿ ಇಲಾಖೆಗೆ 36,500 ಕೋಟಿ ರೂ. ಆದಾಯದ ಗುರಿ ನಿಗದಿ ಮಾಡಿದ್ದಾರೆ. ಇದರಿಂದಾಗಿ ರಾಜ್ಯದಲ್ಲಿ ಮದ್ಯದ ಬೆಲೆ ಏರಿಕೆಯಾಗಲಿದೆ.ರಾಜ್ಯ ಸರ್ಕಾರ ಅಬಕಾರಿ ಸ್ಲ್ಯಾಬ್ ಪರಿಷ್ಕರಣೆಗೆ ನಿರ್ಧರಿಸಿದೆ ಆದರೆ ಕುಡಿಯುವವರ ಸಂಖ್ಯೆ ಹೆಚ್ಚಾಗುತ್ತೆ ಹೊರತು ಕಡಿಮೆಯಾಗುವುದಿಂದ ಇದರಿಂದ ಸರ್ಕಾರ ಹಣ ಹೋಗುತ್ತೆ ಆದರೆ ಬಡವರ ಮನೆ ದಿವಾಳಿಯಾಗುತ್ತೆ..

ಬೆಲೆ ಏರಿಕೆಯೂ ಕಡಿಮೆಯಾಗಬಹುದು ಎಂದು ಬಡವರ್ಗದವರು ನಿರೀಕ್ಷೆಯನ್ನು ಇಟ್ಟಿಕೊಂಡಿದ್ದರೂ ಆದರೆ ಅದು ಸಹ
ಬಜೆಟ್‌ನಲ್ಲಿ ಹುಸಿಯಾಗಿದೆ.

ದುಡಿಮೆಗಾಗಿ ನಗರ ಸೇರಿದ ಜನರು ಬಾಡಿಗೆ ಹಣ ಕಡಿಮೆಯಾಗಲೇ ಎಂದು ಭರವಸೆಯನ್ನು ಇಟ್ಟಿಕೊಂಡಿದ್ದಾರೆ. ಅದರೆ ಸಿದ್ದರಾಮಯ್ಯ ಬಜೆಟ್‌ನ್ನು ಯಾವುದೇ ಸಾಲದ ಹೊರೆಯನ್ನು ಕನ್ನಡಿಗರ ಮೇಲೆ ಹೊರೆಸಿದ್ದಾರೆ ಅಷ್ಟೇ.. ಇದರಿಂದ ಜನಸಾಮಾನ್ಯರಿಗೆ ಯಾವುದೇ ಪ್ರಯೋಜನವಾಗಿಲ್ಲ..

ಅಲ್ಪಸಂಖ್ಯಾತರ ಉತ್ತೇಜನಕ್ಕೂ ಸಿಎಂ ಸಿದ್ದರಾಮಯ್ಯ ಬಜೆಟ್‌ನಲ್ಲಿ ಮಹತ್ವದ ಒತ್ತು ನೀಡಿದ್ದಾರೆ. ಬೆಂಗಳೂರಿನಲ್ಲಿ ಹಜ್ ಭವನ ನಿರ್ಮಾಣಕ್ಕೆ ಅನುದಾನ ಘೋಷಿಸಲಾಗಿದೆ. 100 ಉರ್ದು ಶಾಲೆಗಳ ಉನ್ನತೀಕರಣಕ್ಕೆ 100 ಕೋಟಿ ರೂಪಾಯಿ ಅನುದಾನ ಘೋಷಿಸಲಾಗಿದೆ. ವಕ್ಫ್ ಖಾಲಿ ನಿವಾಸಗಳಲ್ಲಿ 16 ಮಹಿಳಾ ಕಾಲೇಜುಗಳನ್ನು ಸ್ಥಾಪಿಸಲಾಗುವುದು. ಆರ್ಥಿಕವಾಗಿ ಹಿಂದುಳಿದ ಮುಸ್ಲಿಂ ಮಹಿಳೆಯ ವಿವಾಹಕ್ಕೆ 50 ಸಾವಿರ ರೂ. ನೀಡಲಾಗುವುದು.ಜೈನ, ಮುಸ್ಲಿಂ, ಸಿಕ್ ಧರ್ಮಗುರುಗಳಿಗೆ 6000 ಮಾಸಿನ ಧನ ನೀಡಲಾಗಿದೆ ಎಂದು ಘೋಷಣೆ ಮಾಡಿದ್ದರೆ ಆದರೆ ಇನ್ನು ಯಾವುದೇ ಮಾರ್ಗಕ್ಕೆ ತೃಪ್ತಿಕರ ಯೋಜನೆಗಳನ್ನು ನೀಡಿಲ್ಲ...

ಮನೆ ಖರೀದಿಗೆ ಸಹಾಯ, ಹೌಸಿಂಗ್ ಸಬ್ಸಿಡಿಗಳು ಮತ್ತು ಲೋನ್ ಅನುಕೂಲಗಳು ಬಡ್ಡಿದರ ಕಡಿಮೆ ಮಾಡುವಂತಹ ಯಾವುದೇ ಅನುಕೂಲಗಳನ್ನು ಮಧ್ಯಮ ವರ್ಗದ ಕುಟುಂಬಗಳಿಗೆ ನೀಡಿಲ್ಲ. ಬಜೆಟ್‌ ನಂತರ ಹಾಲಿನ ದರವನ್ನು ಸಹ ಏರಿಕೆ ಮಾಡಲು ಚರ್ಚೆಗಳು ಸಹ ನಡೆಯತ್ತಿದ್ದು ಬೆಲೆ ಏರಿಕೆಯಾದರೆ ಅದು ಸಹ ಜನರಿಗೆ ಮತ್ತುಷ್ಟು ಹೊರೆಯಾಗಲಿದೆ.

2025-26ರ ಸಾಲಿನಲ್ಲಿ 1,20,000 ಕೋಟಿ ರೂ. ತೆರಿಗೆ ಸಂಗ್ರಹಿಸುವ ಗುರಿ ಹೊಂದಲಾಗಿದೆ. ಫೆಬ್ರವರಿ ತಿಂಗಳ ವೃತ್ತಿ ತೆರಿಗೆ 200 ರೂ.ನಿಂದ 300 ರೂ.ಗೆ ಏರಿಕೆ ಮಾಡಲಾಗಿದೆ.

ಸಾಮಾನ್ಯ ಜನರಿಗೆ ಬಸ್‌ ದರ, ಕಾವೇರಿ ನೀರಿನ ದರ ಏರಿಕೆ, ಮೆಟ್ರೋ ದರ ಏರಿಕೆಗಳು ಈಗಾಗಲೇ ಜನರರಿಗೆ ಹೊರೆಯಾಗಿದ್ದು, ಬಜೆಟ್‌ ಸಹ ಅವರಿಗೆ ಯಾವುದೇ ಇರುವೆಯಷ್ಟೂ ಸಹ ಉಪಯೋಗವಾಗಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+