ಜನವರಿ 1ರಿಂದ ಏನೆಲ್ಲ ಬದಲಾವಣೆ? ಇಲ್ಲಿದೆ ಹೆಚ್ಚಿನ ಮಾಹಿತಿ

2024ನೇ ವರ್ಷಕ್ಕೆ ವಿದಾಯ ಹೇಳಿ ಹೊಸ ವರ್ಷವನ್ನು ಅದ್ಧೂರಿಯಾಗಿ ಸ್ವಾಗತ ಮಾಡಿಕೊಳ್ಳಲು ಇನ್ನೂ ಕೆಲವು ದಿನಗಳು ಮಾತ್ರ ಬಾಕಿ ಇದೆ. ಅದರೆ ಹೊಸ ವರ್ಷದ ಜನವರಿ 1ರಿಂದ ದೇಶಾದ್ಯಂತ ಹಲವು ಮಹತ್ವದ ಬದಲಾವಣೆಗಳು ಜಾರಿಗೆ ಬರಲಿವೆ. ಜಿಎಸ್‌ಟಿಯಲ್ಲಿ ಹೊಸ ವರ್ಷಕ್ಕೆ ಹೊಸ ನಿಯಮಗಳು ಜಾರಿಗೆ ಬರುತ್ತಾವೆ ಹಾಗಿದ್ರೆ ಜನವರಿ 1 ಏನೆಲ್ಲಾ ಬದಲಾವಣೆಗಳು ಬರಲಿವೆ ಎಂಬ ಹೆಚ್ಚಿನ ಮಾಹಿತಿ ಇಲ್ಲಿದೆ...

ಮಲ್ಟಿ-ಫ್ಯಾಕ್ಟರ್ ಅಥೆಂಟಿಕೇಶನ್ (MFA): ಜಿಎಸ್‌ಟಿ ಪೋರ್ಟಲ್‌ಗಳಲ್ಲಿ ಭದ್ರತೆ ಹೆಚ್ಚಿಸುವ ಸಲುವಾಗಿ ಎಲ್ಲಾ ತೆರಿಗೆದಾರರಿಗೆ ಬಹು ಅಂಶದ ದೃಢೀಕರಣ ವ್ಯವಸ್ಥೆ ಕಡ್ಡಾಯ ಮಾಡಲಾಗುತ್ತದೆ.

 ಜನವರಿ 1ರಿಂದ ಏನೆಲ್ಲ ಬದಲಾವಣೆ?

ಇ-ವೇ ಬಿಲ್ ನಿರ್ಬಂಧಗಳು: ಇ-ವೇ ಬಿಲ್‌ಗಳನ್ನು ಈಗ 180 ದಿನಗಳಿಗಿಂತ ಹಳೆಯದಾದ ಮೂಲ ದಾಖಲೆಗಳ ಮೇಲೆ ಮಾತ್ರ ರಚಿಸಲಾಗುತ್ತದೆ. ಇದರ ವಂಚನೆಗಳನ್ನು ಕಡಿಮೆ ಮಾಡಲು ಈ ನೀತಿಯನ್ನು ಜಾರಿಗೆ ತರಲಾಗುತ್ತದೆ.

ಥಾಯ್ಲೆಂಡ್​ ವೀಸಾ: ವಿಶ್ವದ ಯಾವುದೇ ದೇಶದ ಸಂದರ್ಶಕರು ಅಧಿಕೃತ ವೆಬ್‌ಸೈಟ್ www.thaievisa.go.th ಮೂಲಕ ಥಾಯ್ಲೆಂಡ್​ ಇ - ವೀಸಾಕ್ಕೆ ಅರ್ಜಿ ಸಲ್ಲಿಸಬಹುದು. ಈ ಹಿಂದೆ, ಇ - ವೀಸಾ ವ್ಯವಸ್ಥೆಯು ಕೆಲವು ಪ್ರದೇಶಗಳ ಪ್ರಯಾಣಿಕರಿಗೆ ಮಾತ್ರವೇ ಲಭ್ಯವಿತ್ತು. ಈಗ ಇತರ ಪ್ರಜೆಗಳು ಸೇರಿದಂತೆ ಭಾರತೀಯರು ಎಲ್ಲಿಂದಲಾದರೂ ಆನ್‌ಲೈನ್‌ನಲ್ಲಿ ಇ - ವೀಸಾಕ್ಕೆ ಅರ್ಜಿ ಸಲ್ಲಿಸಬಹುದು. ಪ್ರವಾಸಿಗರು ಈಗ ಸುಲಭವಾಗಿ ಥಾಯ್ಲೆಂಡ್​​ಗೆ ಪ್ರಯಾಣ ಬೆಳೆಸಬಹುದು.

ಅಮೆರಿಕದ ವೀಸಾ ನಿಯಮಗಳಲ್ಲಿ ಬದಲಾವಣೆ: ಜನವರಿ 1, 2025 ರಿಂದ ಅಮೆರಿಕದ ವೀಸಾ ನಿಯಮಗಳಲ್ಲಿ ಬದಲಾಣೆಗಳು ಜಾರಿಗೆ ಬರುತ್ತವೆ. ವಲಸೆ - ಅಲ್ಲದ ವೀಸಾ ಅರ್ಜಿದಾರರು ತಮ್ಮ US ವೀಸಾ ನೇಮಕಾತಿಗಳನ್ನು ಹೆಚ್ಚುವರಿ ಶುಲ್ಕವಿಲ್ಲದೇ ಮತ್ತೆ ಮರು ಹೊಂದಿಸಿಕೊಳ್ಳಬಹುದು. ಹೆಚ್ಚುವರಿ ಮರು ಹೊಂದಿಕೆಗಳಿಗಾಗಿ ಅರ್ಜಿ ಶುಲ್ಕಗಳು ಮತ್ತು ಇತರ ಶುಲ್ಕಗಳನ್ನು ಪಾವತಿಸಬೇಕಾಗುತ್ತದೆ.

H-1B ವೀಸಾ: ಈ ವೀಸಾದ ಕೂಲಂಕಷ ಪರೀಕ್ಷೆಯು ಜನವರಿ 17 2025 ರಿಂದ ಜಾರಿಗೆ ಬರಲಿದೆ. ಇದು H-1B ವೀಸಾವನ್ನು ನವೀಕರಿಸುವ ಕೆಲಸವನ್ನು ಸುಲಭಗೊಳಿಸುತ್ತದೆ. ಆದರೆ, ಇಲ್ಲಿ ಒಂದು ವಿಷಯ ನೆನಪಿಡಬೇಕು, ಭಾರತದಲ್ಲಿ ವೀಸಾ ನೇಮಕಾತಿಗಾಗಿ ಕಾಯುವ ಸಮಯವು ಬಹಳ ಸಮಯವನ್ನು ತೆಗೆದುಕೊಳ್ಳುತ್ತದೆ. ನಿರ್ದಿಷ್ಟವಾಗಿ B1/B2 ವೀಸಾಗಳು ಸರಾಸರಿ 400 ದಿನಗಳಿಗಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ.

LPG ಸಿಲಿಂಡರ್ ಬೆಲೆಗಳಲ್ಲಿ ಬದಲಾವಣೆ: ತೈಲ ಕಂಪನಿಗಳು LPG ಸಿಲಿಂಡರ್ ಬೆಲೆಗಳನ್ನು ಪ್ರತಿ ತಿಂಗಳ 1 ರಂದು ಮರು ಪರಿಶೀಲನೆಗೆ ಒಳಪಡಿಸುತ್ತವೆ ಎಂಬುದು ತಿಳಿದೆ. ಕಳೆದ ಐದು ತಿಂಗಳಿಂದ 19 ಕೆಜಿ ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆಯಾಗುತ್ತಿದೆ. ಆದರೆ, 14.2 ಕೆಜಿಯ ಮನೆ ಬಳಕೆ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆ ಇಲ್ಲ.

ಟೆಲಿಕಾಂ ಹೊಸ ನಿಯಮಗಳು: ದೂರಸಂಪರ್ಕ ಇಲಾಖೆ (ರೈಟ್ ಆಫ್ ವೇ) ನಿಯಮಗಳು ಜನವರಿ 1 ರಿಂದ ಜಾರಿಗೆ ಬರಲಿವೆ. ಭೂಗತ ಸಂವಹನ ಮೂಲಸೌಕರ್ಯಗಳ ಸ್ಥಾಪನೆ ಮತ್ತು ನಿರ್ವಹಣೆ ಇನ್ಮುಂದೆ ಸುಲಭವಾಗಲಿದೆ. ಹೀಗಾಗಿ ಜಿಯೋ, ಏರ್‌ಟೆಲ್, ವೊಡಾಫೋನ್, ಬಿಎಸ್‌ಎನ್‌ಎಲ್‌ನಂತಹ ಟೆಲಿಕಾಂ ಕಂಪನಿಗಳ ಸೇವೆಗಳಲ್ಲಿ ಭಾರಿ ಸುಧಾರಣೆ ಕಾಣುವ ಸಾಧ್ಯತೆಗಳಿವೆ.

ಜನವರಿ 1ರಂದು ಈ ಫೋನ್‌ಗಳಲ್ಲಿ ವಾಟ್ಸ್ ಆಪ್ ನಿಷೇಧ: ಹಳೆಯ ಹಲವು Android ಫೋನ್‌ಗಳಲ್ಲಿ ವಾಟ್ಸ್ ಆಪ್ ಕಾರ್ಯನಿರ್ವಹಿಸುವುದಿಲ್ಲ. Samsung Galaxy S3, Galaxy S3, Galaxy S4 Mini, HTC One X, One X Plus, Sony Xperia Z, Xperia T, LG Optimus G, Nexus 4, Moto G, Moto E 2014 ನಲ್ಲಿ ವಾಟ್ಸ್ ಆಪ್ ಕಾರ್ಯನಿರ್ವಹಿಸುವುದಿಲ್ಲ.

ಕಾರುಗಳ ಬೆಲೆಗಳಲ್ಲಿ ಹೆಚ್ಚಳ: ಮಾರುತಿ ಸುಜುಕಿ, ಮರ್ಸಿಡಿಸ್ ಬೆಂಜ್, ಬಿಎಂಡಬ್ಲ್ಯು, ಆಡಿ, ಹ್ಯುಂಡೈ, ಮಹೀಂದ್ರಾ, ಹೋಂಡಾ, ಕಿಯಾ ಇತ್ಯಾದಿ ಕಂಪನಿಗಳ ಕಾರುಗಳ ಬೆಲೆ ಶೇ.2-4ರಷ್ಟು ಹೆಚ್ಚಾಗುವ ಸಾಧ್ಯತೆ ಇದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+