ಬೆಂಗಳೂರು, ಏಪ್ರಿಲ್ 19: ಇತ್ತೀಚಿನ ದಿನಮಾನಗಳಲ್ಲಿ ಸಾಲ ಎಂಬುದು ಸರ್ವೇ ಸಾಮಾನ್ಯವಾಗಿದೆ. ಬಹುತೇಕ ಮಂದಿಗೆ ತಮ್ಮ ಜೀವನದ ಅವಶ್ಯಕತೆಗಳನ್ನು ಪೂರೈಸಿಕೊಳ್ಳಲು ಒಂದಲ್ಲ ಒಂದು ಸಂದರ್ಭದಲ್ಲಿ ಸಾಲದ ಅವಶ್ಯಕತೆ ಇದ್ದೇ ಇರುತ್ತದೆ . ಹೀಗಾಗಿ ಕೆಲವರು ಕೈ ಸಾಲಕ್ಕೆ ಮೊರೆ ಹೋದರೆ ಇನ್ನು ಕೆಲವರು ಬ್ಯಾಂಕ್ ಸಾಲಗಳಿಗೆ ಮೊರೆ ಹೋಗುತ್ತಾರೆ.
ಕ್ಲಿಷ್ಟ ಸಂದರ್ಭಗಳಲ್ಲಿ ಅನಿವಾರ್ಯವಾಗಿ ಸಾಲ ಬೇಕಾಗಿದ್ದಾಗ ಹೆಚ್ಚು ಸಮಯ ವ್ಯಯಿಸಲು ಸಾಧ್ಯವಿರುವುದಿಲ್ಲ. ಹೀಗಾಗಿ ಬಹಳಷ್ಟು ಮಂದಿ ಕೈ ಸಾಲಗಳಿಗೆ ಮೊರೆ ಹೋಗುತ್ತಾರೆ . ಆದರೆ ಈ ಕೈ ಸಾಲಗಳಲ್ಲಿ ಬಡ್ಡಿಯ ದರ ಬಹಳ ಹೆಚ್ಚಾಗಿರುತ್ತೆ. ಹೀಗಾಗಿ ಕೈ ಸಾಲಕ್ಕಿಂತಲೂ ಬ್ಯಾಂಕ್ ನ ಪರ್ಸನಲ್ ಲೋನ್ ಸಾಲಗಳೇ ಉತ್ತಮ ಎಂದು ಭಾವಿಸುವವರು ಇದ್ದಾರೆ . ಆದರೆ ಅದಕ್ಕಿಂತಲೂ ಉತ್ತಮ ಆಯ್ಕೆಯೊಂದಿದೆ. ಅದುವೆ lic ಪಾಲಿಸಿ ಮೇಲಿನ ಸಾಲ.

ಕೈ ಸಾಲವನ್ನು ಮಾಡದೆ ಬ್ಯಾಂಕ್ ಪರ್ಸನಲ್ ಲೋನ್ ಗೂ ಕೈ ಹಾಕದೆ ತುರ್ತು ಸಂದರ್ಭದಲ್ಲಿ ಸಾಲ ಪಡೆಯಲು ಒಂದು ಮಾರ್ಗವಿದೆ . ಅದೇ ನಿಮ್ಮ ಪಾಲಿಸಿ ಮೇಲೆ ಸಾಲ ಪಡೆದುಕೊಳ್ಳುವುದು . ಕೇವಲ 2 ರಿಂದ 3 ದಿನದಲ್ಲಿ ಸಾಲದ ಮೊತ್ತ ನಿಮ್ಮ ಕೈ ಸೇರಿರುತ್ತೆ, ಬಡ್ಡಿಯೂ ಬಹಳ ಕಡಿಮೆ ಇರುತ್ತೆ ಹಾಗೂ ಇಎಂಐ ಪಾವತಿ ಮಾಡಿ ಈ ಸಾಲವನ್ನು ತೀರಿಸಬೇಕು ಎಂಬ ಗೋಜಿಗೂ ಕೂಡ ನೀವು ಸಿಲುಕಿಕೊಳ್ಳುವುದಿಲ್ಲ.
ಹೌದು ಸಾಮಾನ್ಯವಾಗಿ ಈಗ ಪ್ರತಿಯೊಬ್ಬರೂ ಎಲ್ಐಸಿ ಪಾಲಿಸಿಗಳನ್ನ , ಬಾಂಡ್ ಗಳನ್ನ ಹೊಂದಿರುವವರೇ ಇರುತ್ತಾರೆ. ಈ ಎಲ್ಐಸಿ ಪಾಲಿಸಿಗಳು ಬಾಂಡ್ ಗಳ ಆಧಾರದ ಮೇಲೆ ತ್ವರಿತವಾಗಿ ನೀವು ಸಾಲ ಪಡೆದುಕೊಳ್ಳಬಹುದು . ನಿಮ್ಮ ಒಟ್ಟಾರೆ ಬಾಂಡ್ ನ ಮೌಲ್ಯ ಎಷ್ಟಿದೆ ಅದರ ಶೇಕಡ 80 ರಿಂದ 90 ರಷ್ಟು ಮೊತ್ತವನ್ನು ಸಾಲದ ರೂಪದಲ್ಲಿ ಮೂರ್ನಾಲ್ಕು ದಿನದೊಳಗೆ ನಿಮಗೆ ನೀಡಲಾಗುತ್ತೆ.
ನೀವು ಎಲ್ಐಸಿ ಲೈಫ್ ಇನ್ಸೂರೆನ್ಸ್ ಪಾಲಿಸಿ ಹೊಂದಿದ್ದರೆ ಅದರ ಆಧಾರದ ಮೇಲೆ ತುರ್ತು ಲೋನ್ ಪಡೆದುಕೊಳ್ಳಬಹುದು .ಇಲ್ಲಿ ಲೋನ್ ನೀಡುವುದಕ್ಕಾಗಿ ಪ್ರೊಸೆಸಿಂಗ್ ಫೀಸ್ ಅಂತ ಹೆಚ್ಚುವರಿ ಶುಲ್ಕ ವಿಧಿಸುವುದಿಲ್ಲ, ಹೆಚ್ಚಿಗೆ ದಾಖಲಾತಿಗಳನ್ನು ಕೇಳುವುದಿಲ್ಲ . ಎಲ್ಐಸಿ ವೆಬ್ಸೈಟ್ ಗೆ ವಿಸಿಟ್ ಮಾಡಿ ನಿಮ್ಮ ಕೆ ವೈ ಸಿ ಡಾಕ್ಯುಮೆಂಟ್ ಅಪ್ಲೋಡ್ ಮಾಡಿದರೆ ಸಾಕು ,ಕನಿಷ್ಠ ಮೂರರಿಂದ ಗರಿಷ್ಠ ಆರು ದಿನದ ಒಳಗೆ ನಿಮಗೆ ಸಾಲದ ಮೊತ್ತ ಲಭ್ಯವಿರುತ್ತೆ.
ಇದಕ್ಕಾಗಿ ನೀವು www.licindia.in ವೆಬ್ಸೈಟ್‌ಗೆ ಲಾಗಿನ್ ಆಗಿ ನಿಮ್ಮ ಕೆವೈಸಿ ಮಾಹಿತಿಗಳನ್ನ ಅಪ್ಲೋಡ್ ಮಾಡಿದರೆ ಮೂರರಿಂದ ಆರು ದಿನದ ಒಳಗೆ ನಿಮ್ಮ ಖಾತೆಗೆ ಸಾಲದ ಮೊತ್ತ ಬಂದು ತಲುಪಿರುತ್ತೆ . ಕಡಿಮೆ ಬಡ್ಡಿಯಲ್ಲಿ ತ್ವರಿತವಾಗಿ ಸಾಲ ಪಡೆದುಕೊಳ್ಳುವ ಏಕೈಕ ಉತ್ತಮ ಆಯ್ಕೆ ಎಂದರೆ ನಿಮ್ಮ ಇನ್ಸೂರೆನ್ಸ್ ಪಾಲಿಸಿ ಮೇಲೆ ಪಡೆಯಬಹುದಾದ ಈ ಸಾಲ ಎಂದೇ ಹೇಳಬಹುದು.


Click it and Unblock the Notifications