'ರೈಟ್ ಇಶ್ಯೂ' ಎಂದರೇನು? ರಿಲಯನ್ಸ್ ಇಂಡಸ್ಟ್ರೀಸ್ ಏಕೆ ಘೋಷಿಸಿತು?

ದೇಶದ ಖಾಸಗಿ ಕಂಪನಿಗಳ ಇತಿಹಾಸದಲ್ಲೇ ಮೊದಲ ಬಾರಿಗೆ ಅತಿದೊಡ್ಡ 'ರೈಟ್ ಇಶ್ಯೂ' ಘೋಷಿಸಿದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಭಾರೀ ಚರ್ಚೆಗೆ ಎಡೆ ಮಾಡಿಕೊಟ್ಟಿದೆ. ಕೊರೊನಾ ಬಿಕಟ್ಟಿನ ಸಂದರ್ಭದಲ್ಲಿ ಇಷ್ಟು ದೊಡ್ಡ ಮಟ್ಟದಲ್ಲಿ ರೈಟ್ ಇಶ್ಯೂ ಏತಕ್ಕೆ ಎಂದು ಆಶ್ಚರ್ಯ ಸೃಷ್ಟಿಸಿದೆ.

ರಿಲಯನ್ಸ್ ಇಂಡಸ್ಟ್ರೀಸ್ ಈ ರೈಟ್ ಇಶ್ಯೂ ಘೋಷಿಸಲು ಪ್ರಮುಖ ಕಾರಣ ತನ್ನ ನಷ್ಟವನ್ನು ಸರಿದೂಗಿಸಲು ಮತ್ತಷ್ಟು ಬಂಡವಾಳ ಸಂಗ್ರಹಿಸುವುದೇ ಆಗಿದೆ. ಹೀಗಾಗಿ ರಿಲಯನ್ಸ್ ಬರೋಬ್ಬರಿ 53,125 ಕೋಟಿ ರುಪಾಯಿ ಮೌಲ್ಯದ 'ರೈಟ್ಸ್ ಇಶ್ಯೂ' ಮಾಡಿದೆ. ಅಂದರೆ ರಿಲಯನ್ಸ್ ಷೇರುಗಳ ಮೇಲೆ 14 ಪರ್ಸೆಂಟ್‌ರಷ್ಟು ರಿಯಾಯ್ತಿ ಘೋಷಿಸಿದ್ದು, ಚರ್ಚೆಗೆ ಕಾರಣವಾಗಿದೆ.

'ರೈಟ್ ಇಶ್ಯೂ' ಎಂದರೇನು? ರಿಲಯನ್ಸ್ ಇಂಡಸ್ಟ್ರೀಸ್ ಏಕೆ ಘೋಷಿಸಿತು?

RIL ಸದ್ಯ ಹೊರಡಿಸಿರುವ 'ರೈಟ್ಸ್ ಇಶ್ಯೂ' ಪ್ರಕಾರ ಪ್ರತಿ ಷೇರಿನ ಮೇಲೆ 14 ಪರ್ಸೆಂಟ್ ರಿಯಾಯ್ತಿಯಂತೆ ಪ್ರತಿ ಷೇರಿಗೆ 210 ರೂ. ಕಡಿತ ಮಾಡುವ ಮೂಲಕ ಪ್ರತಿ ಷೇರನ್ನು 1,257 ರೂ.ಗೆ ಮಾರಾಟ ಮಾಡುವುದಾಗಿ ಹೇಳಿದೆ.

'ರೈಟ್ ಇಶ್ಯೂ' ಎಂದರೇನು?
ಒಂದು ವೇಳೆ ನಿರ್ದಿಷ್ಟ ಕಂಪನಿ ಹೆಚ್ಚುವರಿ ಬಂಡವಾಳವನ್ನು ಸಂಗ್ರಹಿಸಲು ಬಯಸಿದರೆ, ತನ್ನ ಇಕ್ವಿಟಿ ಷೇರುದಾರರಿಗೆ 'ರೈಟ್ಸ್ ಇಶ್ಯೂ'ಗಳನ್ನು ಬಿಡುಗಡೆ ಮಾಡುತ್ತದೆ. ಸಾಮಾನ್ಯವಾಗಿ ರಿಯಾಯ್ತಿಗಳನ್ನು ಘೋಷಿಸಿಯೇ 'ರೈಟ್ಸ್ ಇಶ್ಯೂ'ಗಳನ್ನು ಹೊರಡಿಸಲಾಗುತ್ತದೆ. ಆಸಕ್ತ ಇಕ್ವಿಟಿ ಷೇರುದಾರರು ಈ 'ರೈಟ್ಸ್ ಇಶ್ಯೂ'ಗಳನ್ನು ಪಡೆದು ನಿರ್ದಿಷ್ಟ ಷೇರುಗಳನ್ನು ಪಡೆಯಬಹುದಾಗಿದೆ. ರಿಲಯನ್ಸ್ ಇದೀಗ 14 ಪರ್ಸೆಂಟ್ ರಿಯಾಯಿತಿ ನೀಡಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+