ದೇಶದಲ್ಲಿ ಭವಿಷ್ಯದಲ್ಲಿ ಇನ್ನೇನಿದ್ದರೂ ಎಲೆಕ್ಟ್ರಿಕ್ ಕಾರುಗಳದ್ದೇ ಹವಾ. ಕೇಂದ್ರ ಸರ್ಕಾರ ಕೂಡ ಎಲೆಕ್ಟ್ರಿಕ್ ಕಾರು ತಯಾರಿಕಾ ಕಂಪನಿಗಳಿಗೆ ಹೆಚ್ಚಿನ ಉತ್ತೇಜನ ನೀಡುತ್ತಿದೆ. ಈಗ ಭಾರತದ ಅತಿ ದೊಡ್ಡ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಭಾರತದ ಮೊದಲ ಹಸಿರು ಸಾಲವನ್ನು ನೀಡುತ್ತಿದೆ.
ಟ್ವಿಟರ್‌ನಲ್ಲಿ ಈ ಕುರಿತು ಸ್ಪಷ್ಟಪಡಿಸಿರುವ ಎಸ್‌ಬಿಐ '' ಭಾರತದ ಹಸಿರು ಭವಿಷ್ಯವನ್ನು ಚಾರ್ಜ್ ಮಾಡಲಾಗುತ್ತಿದೆ! ಜನರು ತಮ್ಮ ಇಂಗಾಲದ ಹೆಜ್ಜೆ ಗುರುತನ್ನು ಕಮ್ಮಿ ಮಾಡಲು ಮತ್ತು ಎಲೆಕ್ಟ್ರಿಕ್ ವಾಹನಗಳನ್ನು ಆಯ್ಕೆ ಮಾಡಲು ಪ್ರೋತ್ಸಾಹಿಸಲು ಭಾರತದ ಮೊದಲ ಹಸಿರು ಕಾರು ಸಾಲವನ್ನು ನೀಡಲು ಹೆಮ್ಮೆ ಪಡುತ್ತೇವೆ'' ಎಂದು ಹೇಳಿದೆ.

ಎಸ್‌ಬಿಐ ಗ್ರೀನ್ ಕಾರ್ ಲೋನ್ ಮೂಲಕ ಕಡಿಮೆ ಬಡ್ಡಿದರ ಮತ್ತು ದೀರ್ಘಾವಧಿಯ ಸಾಲ ಪಡೆಯಬಹುದಾಗಿದೆ. ಅಲ್ಲದೆ ಸಂಸ್ಕರಣಾ ಶುಲ್ಕವನ್ನು ಮನ್ನಾ ಮಾಡಲಾಗಿದೆ ಎಂದು ಎಸ್‌ಬಿಐ ಹೇಳುತ್ತದೆ.
ಎಸ್‌ಬಿಐ ಗ್ರೀನ್ ಕಾರ್ ಲೋನ್‌ನ ಪ್ರಮುಖ ಅಂಶಗಳು ಈ ಕೆಳಕಂಡಂತಿದೆ:
- ಎಲೆಕ್ಟ್ರಿಕ್ ಕಾರು ಖರೀದಿ ಮಾಡುವವರಿಗೆ ಪ್ರಸ್ತುತ ಇರುವ ಕಾರ್ ಲೋನ್‌ಗಳಿಗಿಂತ 20bps ಕಡಿಮೆ ಬಡ್ಡಿ ದರದಲ್ಲಿ ಲೋನ್ ನೀಡಲಾಗುವುದು
- ಪ್ರಾರಂಭದ ಮೊದಲ ಆರು ತಿಂಗಳವರೆಗೆ ಶುಲ್ಕ ವಿನಾಯಿತಿ ಪ್ರಕ್ರಿಯೆಗೊಳಿಸಲಾಗುತ್ತಿದೆ (Processing Fee)
- ಎಂಟು ವರ್ಷಗಳವರೆಗೆ ದೀರ್ಘಾವಧಿಯ ಸಾಲದ ಅವಧಿ
- ಇಎಂಐ ಕಡಿಮೆ 96 ತಿಂಗಳುಗಳಿಗೆ ರುಪಾಯಿ 1468 ಕ್ಕೆ , 84 ತಿಂಗಳವರೆಗೆ ರುಪಾಯಿ 1622 ರಿಂದ ಆರಂಭ(ಅಸ್ತಿತ್ವದಲ್ಲಿರುವ ಯೋಜನೆಯ ಪ್ರಕಾರ ಗರಿಷ್ಠ ಟೆನರ್)


Click it and Unblock the Notifications