ನವದೆಹಲಿ, ಜೂನ್ 2: ಗೋಲ್ಡ್ ಬಾಂಡ್ ಗಳ ಮೇಲೆ ಈ ಹಣಕಾಸು ವರ್ಷದಲ್ಲಿ 27 ಸಾವಿರ ಕೋಟಿ ರೂ ಹೂಡಿಕೆ ಮಾಡಲಾಗಿದೆ ಎನ್ನುವ ಮಾಹಿತಿಯನ್ನು ಭಾರತೀಯ ರಿಸರ್ವ್ ಬ್ಯಾಂಕ್ ನೀಡಿದೆ. ಹಾಗಿದ್ದರೆ ಈ ಚಿನ್ನದ ಬಾಂಡ್ ಗಳ ಮೇಲೆ ಹೂಡಿಕೆ ಮಾಡಿದರೆ ಎಷ್ಟು ತೆರಿಗೆ ಕಟ್ಟಬೇಕಾಗುತ್ತದೆ ಎನ್ನುವುದನ್ನು ತಿಳಿದುಕೊಳ್ಳಬೇಕಾಗುತ್ತದೆ. ಸಾವರಿನ್ ಗೋಲ್ಡ್ ಬಾಂಡ್ ಗಳ ಮೇಲೆ ಸಿಗುವ ಬಡ್ಡಿಗೆ ಇರುವ ತೆರಿಗೆ ಲೆಕ್ಕಾಚಾರ ಏನು? ಇದೆಲ್ಲವನ್ನು ತಿಳಿದುಕೊಳ್ಳೋಣ.
ಈಗ ಈ ಬಾಂಡ್ಗಳ ಮೇಲೆ ಸಿಗೋ ಬಡ್ಡಿಯ ತೆರಿಗೆ ಬಗ್ಗೆ ತಿಳಿದುಕೊಳ್ಳೋಣ? ಎಸ್ಜಿಬಿಗಳ ಮೇಲೆ ವಾರ್ಷಿಕ ಶೇಕಡ 2.5 ರಷ್ಟು ಬಡ್ಡಿ ಸಿಗುತ್ತೆ. ಇದನ್ನು ಹೂಡಿಕೆದಾರರ ಆದಾಯಕ್ಕೆ ಸೇರಿಸಲಾಗುತ್ತದೆ. ಅವರ ಆದಾಯಕ್ಕೆ ತಕ್ಕ ಸ್ಲ್ಯಾಬ್ ಗೆ ಅನುಗುಣವಾಗಿ ತೆರಿಗೆ ಪಾವತಿಸಬೇಕಾಗುತ್ತದೆ. ಈ ಗೋಲ್ಡ್ ಬಾಂಡ್ಗಳ ಮೆಚ್ಯುರಿಟಿ ಅವಧಿ 8 ವರ್ಷ. ಈ ಮೆಚ್ಯುರಿಟಿಯಲ್ಲಿ ಸಿಗುವ ಹಣಕ್ಕೆ ಯಾವುದೇ ತೆರಿಗೆ ಇರುವುದಿಲ್ಲ. ಸಾವರಿನ್ ಗೋಲ್ಡ್ ಬಾಂಡ್ಗಳನ್ನ ಮೆಚ್ಯುರಿಟಿಗೂ ಮೊದಲೇ ವಿತ್ ಡ್ರಾ ಮಾಡಿಕೊಳ್ಳುವ ಅವಕಾಶ ಇದೆ.. 5 ವರ್ಷಗಳ ನಂತರ ಪ್ರಿ-ಮೆಚ್ಯೂರ್ ವಿತ್ ಡ್ರಾ ಮಾಡಬಹುದು.

ಐದು ವರ್ಷಗಳ ನಂತರ, ರಿಸರ್ವ್ ಬ್ಯಾಂಕ್ನಿಂದ ಪಡೆದಿರುವ ಸಾವರಿನ್ ಗೋಲ್ಡ್ ಬಾಂಡ್ ಗಳ ರಿಡಮ್ಷನ್ ಮೇಲಿನ ಲಾಭಕ್ಕೆ ಯಾವುದೇ ತೆರಿಗೆ ಪಾವತಿಸಬೇಕಾಗುವುದಿಲ್ಲ. ಒಂದು ವೇಳೆ, ನೀವು ಬಾಂಡ್ ಗಳನ್ನ ವರ್ಗಾವಣೆ ಮಾಡಿದ್ದರೆ, ನಿಮ್ಮ ಹೋಲ್ಡಿಂಗ್ ಅವಧಿ ಆಧರಿಸಿ ಕ್ಯಾಪಿಟಲ್ ಗೇನ್ಸ್ ಟ್ಯಾಕ್ಸ್ ಪಾವತಿಸಬೇಕು. ನೀವು ಸ್ಟಾಕ್ ಎಕ್ಸ್ ಚೇಂಜ್ ಮೂಲಕ ಎಸ್ಜಿಬಿಗಳನ್ನ ಮಾರಾಟ ಮಾಡಿದರೆ ಕೂಡ ನಿಮ್ಮ ಹೋಲ್ಡಿಂಗ್ ಪೀರಿಯಡ್ ಅಂದರೆ ನೀವು ಎಷ್ಟು ಅವಧಿಗೆ ಆ ಬಾಂಡ್ ಇತ್ತು ಎನ್ನುವುದನ್ನು ಆಧರಿಸಿ ತೆರಿಗೆ ಪಾವತಿಸಬೇಕು.
ಒಂದು ವೇಳೆ ನಿಮ್ಮ ಹೋಲ್ಡಿಂಗ್ ಅವಧಿ 3 ವರ್ಷಕ್ಕಿಂತ ಕಡಿಮೆಯಿದ್ದರೆ ಈ ಬಾಂಡ್ಗಳ ಮಾರಾಟದಿಂದ ಸಿಗುವ ಲಾಭವನ್ನು ಶಾರ್ಟ್ ಟರ್ಮ್ ಕ್ಯಾಪಿಟಲ್ ಗೇನ್ ಎಂದು ಪರಿಗಣಿಸಲಾಗುತ್ತದೆ. ಇದರಿಂದ ಸಿಗೋ ಲಾಭ ನಿಮ್ಮ ಆದಾಯಕ್ಕೆ ಸೇರುತ್ತದೆ. ಆ ಮೊತ್ತದ ಮೇಲೆ ನಿಮ್ಮ ಆದಾಯಕ್ಕೆ ಅನ್ವಯವಾಗೋ ಸ್ಲ್ಯಾಬ್ ಪ್ರಕಾರ ತೆರಿಗೆ ಕಟ್ಟಬೇಕಾಗುತ್ತದೆ.
ಸಾವರಿನ್ ಗೋಲ್ಡ್ ಬಾಂಡ್ಗಳನ್ನ ಖರೀದಿಸಿದ 36 ತಿಂಗಳ ನಂತರ ಅದನ್ನ ಮಾರಾಟ ಮಾಡಿದರೆ ಆಗ ಸಿಗುವ ಲಾಭ ಲಾಂಗ್ ಟರ್ಮ್ ಕ್ಯಾಪಿಟಲ್ ಗೇನ್ ಎಂದು ಪರಿಗಣಿತವಾಗುತ್ತದೆ. ಇಂಡೆಕ್ಸೇಷನ್ ನಂತರ ಸಿಗುವ ಮೊತ್ತದ ಮೇಲೆ ಶೇಕಡ 20 ರಷ್ಟು ತೆರಿಗೆ ವಿಧಿಸಲಾಗುತ್ತದೆ.
ನಿಮ್ಮ ಇನ್ವೆಸ್ಟ್ ಮೆಂಟ್ ನ ಕೆಲ ಪಾಲನ್ನು ಚಿನ್ನದಲ್ಲಿ ಇಡಬೇಕು ಎಂದು ಹೂಡಿಕೆ ಪರಿಣಿತರು ಸಲಹೆ ನೀಡುತ್ತಾರೆ. ಫಿಸಿಕಲ್ ಗೋಲ್ಡ್ ನಲ್ಲಿ ಹೂಡಿಕೆ ಮಾಡಿದರೆ ಅದರ ರಕ್ಷಣೆ ಮತ್ತು ಭದ್ರತೆಯ ಜವಾಬ್ದಾರಿ ಸಹ ಇರುತ್ತದೆ. ಆದರೆ ಈ ಸಾವರಿನ್ ಗೋಲ್ಡ್ ಬಾಂಡ್ ಡಿಜಿಟಲ್ ಮಾದರಿಯಲ್ಲಿ ಇರುವುದರಿಂದ ನಿಮಗೆ ಕಳ್ಳತನದ ಭಯವೂ ಇರುವುದಿಲ್ಲ.


Click it and Unblock the Notifications