ಬೆಳಗ್ಗೆ ಎದ್ದ ಕ್ಷಣದಿಂದ ಮಲಗುವವರೆಗೂ ವಾಟ್ಸಾಪ್‌ನಲ್ಲಿ (WhatsApp) ಮುಳುಗಿರುವವರು ಜನರೇ ಹೆಚ್ಚು. ವಾಟ್ಸಾಪ್ ಇಲ್ಲದೆ ಕೆಲಸ ಮಾಡಲು ಸಾಧ್ಯವಿಲ್ಲ ಎಂಬ ಪರಿಸ್ಥಿತಿಯೂ ಇದೆ. ಆದರೆ, ಈ ಒಂದು ಸಣ್ಣ ತಪ್ಪಿನಿಂದ 99 ಲಕ್ಷ ವಾಟ್ಸಾಪ್ ಖಾತೆಗಳು ಬ್ಯಾನ್ ಆಗಿವೆ. ಯಾಕೆ ಎಂಬ ಹೆಚ್ಚಿನ ವಿವರವನ್ನು ಈ ಲೇಖನದಲ್ಲಿ ತಿಳಿಯೋಣ ಬನ್ನಿ...
ಹೌದು, ಒಂದಲ್ಲ..ಎರಡಲ್ಲ... 99 ಲಕ್ಷಕ್ಕೂ ಹೆಚ್ಚು ವಾಟ್ಸಾಪ್ ಅಕೌಂಟ್‌ಗಳು ಬ್ಯಾನ್ ಆಗಿದೆ.ಈ ಮೂಲಕ ವಾಟ್ಸಾಪ್ ಭಾರತೀಯರಿಗೆ ದೊಡ್ಡ ಆಘಾತ ನೀಡಿದೆ.ಈ ವರ್ಷದ ಜನವರಿಯಲ್ಲಿ 9.9 ಮಿಲಿಯನ್ ಖಾತೆಗಳನ್ನು ನಿಷೇಧಿಸಲಾಗಿದೆ (WhatsApp Ban) ಎಂದು ವಾಟ್ಸಾಪ್ ತನ್ನ ಮಾಸಿಕ ವರದಿಯಲ್ಲಿ ಬಹಿರಂಗಪಡಿಸಿದೆ.

ವಾಟ್ಸಾಪ್ ನಂಬರ್ ಒನ್ ಮೆಸೇಜಿಂಗ್ ಅಪ್ಲಿಕೇಶನ್ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯವಾಗಿದೆ. ವಾಟ್ಸಾಪ್ ಅನ್ನು ಇಂದು ಪ್ರಪಂಚದಾದ್ಯಂತ ಲಕ್ಷಾಂತರ ಜನರು ಬಳಸುತ್ತಾರೆ. ಭಾರತದಲ್ಲಿ ವಾಟ್ಸಾಪ್ ಅತಿ ಹೆಚ್ಚು ಬಳಕೆದಾರರನ್ನು ಹೊಂದಿದೆ. ಆದರೆ, ಹೆಚ್ಚುತ್ತಿರುವ ಹಗರಣಗಳು, ಸ್ಪ್ಯಾಮ್ ಮತ್ತು ಕಾನೂನುಬಾಹಿರ ಚಟುವಟಿಕೆಗಳನ್ನು ನಿಲ್ಲಿಸಲು ಈ ವರ್ಷದ ಜನವರಿಯಲ್ಲಿ 9.9 ಮಿಲಿಯನ್ ಖಾತೆಗಳನ್ನು ನಿಷೇಧಿಸಲು ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ವಾಟ್ಸಾಪ್ ಕಂಪನಿ ಮಾಹಿತಿಯನ್ನು ತಿಳಿಸಿದೆ.
ಮುಂದಿನ ಭವಿಷ್ಯದಲ್ಲಿ ಹೆಚ್ಚಿನ ಅಕೌಂಟ್ ಬ್ಯಾನ್ ಮಾಡಲಾಗಿದೆ.
ಯಾವುದೇ ಬಳಕೆದಾರರು ನಿಯಮಗಳನ್ನು ಉಲ್ಲಂಘಿಸಿದರೆ, ಭವಿಷ್ಯದಲ್ಲಿ ಹೆಚ್ಚಿನ ಖಾತೆಗಳನ್ನು ನಿಷೇಧಿಸಲಾಗುವುದು ಎಂದು ಮೆಟಾ ಮಾಲೀಕತ್ವದ ವಾಟ್ಸಾಪ್ ಮಾಹಿತಿಯನ್ನು ತಿಳಿಸಿದೆ. ಐಟಿ ಕಾಯ್ದೆಯ ಪ್ರಕಾರ, ವಾಟ್ಸಾಪ್ ನಿಯಮಿತವಾಗಿ ವರದಿಗಳನ್ನು ಸಲ್ಲಿಸಬೇಕಾಗುತ್ತದೆ.ಇದರಲ್ಲಿ ಕಂಪನಿಯು ತನ್ನ ಬಳಕೆದಾರರಿಗೆ ಸುರಕ್ಷಿತ ಮತ್ತು ಸುಭದ್ರ ವೇದಿಕೆಯನ್ನು ಒದಗಿಸಲು ತೆಗೆದುಕೊಂಡ ಕ್ರಮಗಳ ಬಗ್ಗೆ ಮಾಹಿಯನ್ನು ಒದಗಿಸಲಾಗುತ್ತದೆ.
99 ಲಕ್ಷ 67 ಸಾವಿರ ವಾಟ್ಸಾಪ್ ಅಕೌಂಟ್ ಬಂದ್
ಈ ವರ್ಷದಲ್ಲಿ ಜನವರಿ 1 ರಿಂದ ಜನವರಿ 30 ರವರೆಗೆ ಒಟ್ಟು 99 ಲಕ್ಷ 67 ಸಾವಿರ ಖಾತೆಗಳನ್ನು ನಿರ್ಬಂಧಿಸಲಾಗಿದೆ ಎಂದು ವಾಟ್ಸಾಪ್ (WhatsApp) ಮಾಹಿತಿಯನ್ನು ತಿಳಿಸಿದೆ. ಇವುಗಳಲ್ಲಿ 13.27 ಲಕ್ಷ ಖಾತೆಗಳನ್ನು ಯಾವುದೇ ದೂರು ಬರುವ ಮೊದಲೇ ನಿಷೇಧಿಸಲಾಗಿದೆ. ಜನವರಿಯಲ್ಲಿ ವಾಟ್ಸಾಪ್ ತನ್ನ ಬಳಕೆದಾರರಿಂದ 9,474 ದೂರುಗಳನ್ನು ಸ್ವೀಕರಿಸಿದೆ. ಇವುಗಳಲ್ಲಿ 239 ಖಾತೆಗಳ ಮೇಲೆ ಕಂಪನಿಯು ಕ್ರಮ ಕೈಗೊಂಡಿದೆ. ಖಾತೆಗಳನ್ನು ನಿರ್ಬಂಧಿಸುವುದು ಸೇರಿದಂತೆ ಇತರೆ ಕ್ರಮಗಳನ್ನು ವಾಟ್ಸಾಪ್ ಈ ಕ್ರಮವನ್ನು ತೆಗೆದುಕೊಂಡಿದೆ.
ಈ ಮೂರು ವಿಧಗಳಲ್ಲಿ ವಾಟ್ಸಾಪ್ ಅಕೌಂಟ್ ಬ್ಯಾನ್
ದುರುದ್ದೇಶಪೂರಿತ ಚಟುವಟಿಕೆಯಲ್ಲಿ ತೊಡಗಿರುವ ಖಾತೆಗಳನ್ನು ಗುರುತಿಸಲು ಮತ್ತು ನಿಷೇಧಿಸಲು ವಿವಿಧ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದು ವಾಟ್ಸಾಪ್ ಕಂಪನಿ ಹೇಳಿದೆ. ಇದರ ಗುರುತಿಸುವಿಕೆ ವ್ಯವಸ್ಥೆಯು ಸೈನ್ ಅಪ್ ಸಮಯದಲ್ಲಿ ಅನುಮಾನಾಸ್ಪದ ಅಕೌಂಟ್‌ಗಳನ್ನು ನಿಷೇಧಿಸುತ್ತದೆ. ಇದಲ್ಲದೆ, ಈ ವ್ಯವಸ್ಥೆಯು ಬೃಹತ್ ಅಥವಾ ಸ್ಪ್ಯಾಮ್ ಸಂದೇಶಗಳನ್ನು ಕಳುಹಿಸುವ ಖಾತೆಗಳನ್ನು ಗುರುತಿಸುತ್ತದೆ. ಅವುಗಳನ್ನು ನಿರ್ಬಂಧಿಸುತ್ತದೆ. ಮೂರನೆಯ ವಿಧಾನವೆಂದರೆ ಬಳಕೆದಾರರ ಪ್ರತಿಕ್ರಿಯೆ. ಬಳಕೆದಾರರಿಂದ ದೂರುಗಳು ಬಂದರೆ, ತನಿಖೆ ನಡೆಸಿ ಖಾತೆಗಳನ್ನು ನಿರ್ಬಂಧಿಸುತ್ತದೆ.
ಎಚ್ಚರ.. ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಅಕೌಂಟ್ ಬ್ಯಾನ್!
ನೀವು ವಾಟ್ಸಾಪ್ ನೀತಿಗಳನ್ನು ಉಲ್ಲಂಘಿಸಿದರೆ, ನಿಮ್ಮ ಅಕೌಂಟ್ ಸಹ ಬ್ಯಾನ್ ಆಗುತ್ತದೆ. ವಾಟ್ಸಾಪ್ ಕಂಪನಿಯು ದುರುದ್ದೇಶಪೂರಿತ ಅಥವಾ ಸ್ಪ್ಯಾಮ್ ಸಂದೇಶಗಳನ್ನು ಕಳುಹಿಸುವ, ವಂಚನೆಗೆ ಪ್ರಯತ್ನಿಸುವ ಮತ್ತು ವದಂತಿಗಳನ್ನು ಹರಡುವ ಅಕೌಂಟ್‌ಗಳ ಬಗ್ಗೆ ವಿಶೇಷ ಗಮನ ಹರಿಸುತ್ತದೆ. ಇವುಗಳನ್ನು ತಕ್ಷಣವೇ ನಿರ್ಬಂಧಿಸಲಾಗುತ್ತದೆ. ಅದಕ್ಕಾಗಿಯೇ ನೀವು ಯಾರಿಗಾದರೂ ಸಂದೇಶ ಕಳುಹಿಸುವ ಮೊದಲು ಅಥವಾ ವಾಟ್ಸಾಪ್‌ನಲ್ಲಿ ಯಾವುದೇ ಸಂದೇಶವನ್ನು ಫಾರ್ವರ್ಡ್ ಮಾಡುವ ಮೊದಲು ಜಾಗರೂಕರಾಗಿರಬೇಕು. ಇಲ್ಲದಿದ್ದರೆ, ನಿಮ್ಮ ಅಕೌಂಟ್ ಬ್ಯಾನ್ ಆಗುವುದು ಖಚಿತ.


Click it and Unblock the Notifications