ವಾಟ್ಸ್ ಆ್ಯಪ್ ಭಾರತದಲ್ಲಿ ಅತಿ ಹೆಚ್ಚು ಸಕ್ರಿಯ ಬಳಕೆದಾರರನ್ನು ಹೊಂದಿರುವ ಮೆಸೆಜಿಂಗ್ ಅಪ್ಲಿಕೇಶನ್. ಎಲ್ಲಾ ವಯಸ್ಸಿನವರು ವಾಟ್ಸ್ಆ್ಯಪ್ ಅಪ್ಲಿಕೇಶನ್‌ಗೆ ಮಾರು ಹೋಗಿದ್ದಾರೆ. ಹೊಸ ಹೊಸ ಅಪ್‌ಡೇಟ್‌ಗಳನ್ನು ಮಾಡುವ ಮೂಲಕ ಮತ್ತಷ್ಟು ಜನರಿಗೆ ಹತ್ತಿರವಾಗುತ್ತಿದೆ. ಆದರೆ ಮುಂದಿನ ಕೆಲವೇ ವಾರಗಳಲ್ಲಿ ಅನೇಕ ಸ್ಮಾರ್ಟ್‌ಫೋನ್‌ಗಳಲ್ಲಿ ವಾಟ್ಸ್ಆ್ಯಪ್ ಕಾರ್ಯ ನಿರ್ವಹಿಸುವುದಿಲ್ಲ.
ಹಳೆಯ ಆ್ಯಂಡ್ರಾಯ್ಡ್, ಐಒಎಸ್ ಫೋನ್‌ಗಳು
ನೀವು ಹಳೆಯ ಆ್ಯಂಡ್ರಾಯ್ಡ್, ಐಒಎಸ್ ಫೋನ್‌ಗಳನ್ನು ಬಳಸುತ್ತಿದ್ದೀರಾ? ಹಾಗಿದ್ರೆ ಅದರಲ್ಲಿ ಫೆಬ್ರವರಿಯಿಂದ 1ರಿಂದ ವಾಟ್ಸ್ ಆ್ಯಪ್ ಕಾರ್ಯ ನಿರ್ವಹಿಸುವುದಿಲ್ಲ. ಹೊಸ ಮಾದರಿಯಲ್ಲಿ ವಾಟ್ಸ್ ಆ್ಯಪ್ ಅಪ್ಲಿಕೇಶನ್ ನವೀಕರಿಸುತ್ತಿರುವುದರ ಜೊತೆಗೆ ಈ ಮೊಬೈಲ್‌ಗಳಲ್ಲಿ ಸಪೋರ್ಟ್ ಮಾಡುವಂತಹ ಬೆಂಬಲವನ್ನು ಹಿಂಪಡೆಯುತ್ತಿರುವುದರಿಂದ ವಾಟ್ಸ್ ಆ್ಯಪ್ ಕಾರ್ಯ ನಿರ್ವಹಿಸುವುದಿಲ್ಲ.
ಈ ಮೊಬೈಲ್‌ಗಳಲ್ಲಿ ವಾಟ್ಸ್ ಆ್ಯಪ್ ಕಾರ್ಯ ನಿರ್ವಹಿಸುವುದಿಲ್ಲ
ವಾಟ್ಸ್ ಆ್ಯಪ್ FAQ(ಪದೇ ಪದೇ ಕೇಳಲಾದ ಪ್ರಶ್ನೆಗಳು) ವಿಭಾಗದ ಮಾಹಿತಿಯ ಪ್ರಕಾರ ಆ್ಯಂಡ್ರಾಯ್ಡ್ 2.3.7 ಆಪರೇಟಿಂಗ್ ಸಿಸ್ಟಮ್‌ನಲ್ಲಿ ಹಾಗೂ ಐಒಎಸ್ 7 ಆಪರೇಟಿಂಗ್ ಸಿಸ್ಟಮ್ ಹೊಂದಿರುವ ಐಫೋನ್‌ಗಳು ಮುಂದಿನ ದಿನಗಳಲ್ಲಿ ವಾಟ್ಸ್ ಆ್ಯಪ್‌ಗೆ ಸಹಕರಿಸುವುದಿಲ್ಲ. ಅಂದರೆ ಈ ಮೊಬೈಲ್‌ಗಳು ವಾಟ್ಸ್ ಆ್ಯಪ್‌ಗೆ ಸಪೋರ್ಟ್ ಮಾಡುವುದಿಲ್ಲ.
ಹೊಸ ಖಾತೆಯನ್ನು ರಚಿಸಲು ಸಾಧ್ಯವಿಲ್ಲ!
ಹಳೆಯ ಮೊಬೈಲ್‌ಗಳಲ್ಲಿ ವಾಟ್ಸ್ ಆ್ಯಪ್ ಸಪೋರ್ಟ್ ಮಾಡುವುದಿಲ್ಲ. ಇದಲ್ಲದೆ, ಹಳೆಯ ಆವೃತ್ತಿಯ ಆ್ಯಂಡ್ರಾಯ್ಡ್ ಮತ್ತು ಐಒಎಸ್ ಆಪರೇಟಿಂಗ್ ಸಿಸ್ಟಮ್ ಹೊಂದಿರುವ ಮೊಬೈಲ್‌ಗಳಲ್ಲಿ ಹೊಸದಾಗಿ ಖಾತೆಯನ್ನು ರಚಿಸಲು ಸಾಧ್ಯವಿಲ್ಲ. ಫೆಬ್ರವರಿ 1, 2020ರ ನಂತರ ಸದ್ಯ ಇರುವಂತಹ ಖಾತೆಯನ್ನು ಮರು ಪರಿಶೀಲಿಸಲು(Re-verify) ಸಾಧ್ಯವಿಲ್ಲ ಎಂದು FAQ ಹೇಳಿದೆ.
ವಿಂಡೋಸ್ ಫೋನ್‌ಗಳಲ್ಲಿ ಇದೇ ವರ್ಷ ಕೊನೆ!
ಡಿಸೆಂಬರ್ 31, 2019ರಿಂದ ಎಲ್ಲಾ ವಿಂಡೋಸ್ ಫೋನ್‌ಗಳಲ್ಲಿ ಕಾರ್ಯ ನಿರ್ವಹಣೆಗೆ ನೀಡಿದ್ದ ಬೆಂಬಲವನ್ನು ವಾಟ್ಸ್ ಆ್ಯಪ್ ಹಿಂಪಡೆದುಕೊಳ್ಳಲಿದೆ. ಅಂದರೆ, ನಂತರದ ದಿನಗಳಲ್ಲಿ ವಿಂಡೋಸ್ ಫೋನ್‌ಗಳಲ್ಲೂ ವಾಟ್ಸ್ ಆ್ಯಪ್ ಕಾರ್ಯ ನಿರ್ವಹಿಸುವುದಿಲ್ಲ.
More From GoodReturns

NSE ಆಯಿಲ್ ಫ್ಯೂಚರ್ಸ್ ಆರಂಭ: ಹೂಡಿಕೆದಾರರಿಗೆ ಸಿಗಲಿದೆ ಭಾರಿ ಲಾಭ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಸಗಟು ಬೆಲೆ ಸೂಚ್ಯಂಕ: ನಿಮ್ಮ ಜೇಬಿಗೆ ಕಾದಿದೆಯಾ ಶಾಕ್?

ಚಿನ್ನದ ಬೆಲೆ ಏರಿಕೆ: ಅಕ್ಷಯ ತೃತೀಯಕ್ಕೆ ಹೂಡಿಕೆ ಮಾಡುವುದು ಹೇಗೆ?

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಅಂಬೇಡ್ಕರ್ ಜಯಂತಿ ರಜೆ: ನಿಮ್ಮ ಎಸ್ಐಪಿ ಹಣಕ್ಕೆ ಕಾದಿದೆಯಾ ಸಂಕಷ್ಟ?

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!

ಸಾವರಿನ್ ಗೋಲ್ಡ್ ಬಾಂಡ್ ಹೂಡಿಕೆದಾರರೇ, ಇಂದೇ ನಗದೀಕರಿಸಿಕೊಳ್ಳಿ ನಿಮ್ಮ ಲಾಭ!



Click it and Unblock the Notifications