ಹಿಂದೂ ಹಬ್ಬಗಳಲ್ಲಿ (Hindu Festival) ಮಕರ ಸಂಕ್ರಾಂತಿ ಹಬ್ಬ ಬಹಳ ಮಹತ್ವವನ್ನು ಪಡೆದುಕೊಂಡಿದೆ. ಭಾರತದಲ್ಲಿ ಬಹಳಷ್ಟು ಮಂದಿ ಆಚರಿಸುವ ಹಬ್ಬಗಳಲ್ಲಿ ಮಕರ ಸಂಕ್ರಾಂತಿಯೂ ಒಂದು. ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುದ ಭಾರತ, ಪ್ರತೀ ಹಬ್ಬ, ವಿಶೇಷ ದಿನಗಳನ್ನು ಬಹಳ ಸಂಭ್ರಮದಿಂದ ಆಚರಿಸುತ್ತದೆ. ಇನ್ನು ಮಕರ ಸಂಕ್ರಾಂತಿಯನ್ನು ಒಂದೊಂದು ಕಡೆ ಒಂದೊಂದು ಹೆಸರಲ್ಲಿ ಆಚರಿಸಲಾಗುತ್ತದೆ. ಕರ್ನಾಟಕದಲ್ಲಿ ಮಕರ ಸಂಕ್ರಾಂತಿ (Makara Sankranti) ಎಂದರೆ, ಆಂಧ್ರಪ್ರದೇಶ ತಮಿಳುನಾಡಿನಲ್ಲಿ ಪೊಂಗಲ್ (Pongal), ಪಂಜಾಬ್-ಹರಿಯಾಣದಲ್ಲಿ ಲೋಹರಿ, ಅಸ್ಸಾಂನಲ್ಲಿ ಮಘಾ ಬಿಹು, ಬಿಹಾರದಲ್ಲಿ ಕಿಚಡಿ ಎಂದು ಆಚರಿಸಲಾಗುತ್ತದೆ.

ಮಕರ ಸಂಕ್ರಾಂತಿಯು ಭಾರತದಲ್ಲಿ ಆಚರಿಸಲಾಗುವ ಒಂದು ಪ್ರಮುಖ ಧಾರ್ಮಿಕ ಹಬ್ಬ. ಇದನ್ನು ಉತ್ತರಾಯಣ ಎಂದೂ ಕರೆಯಲಾಗುತ್ತದೆ. ಸೂರ್ಯನು ಮಕರ ರಾಶಿಗೆ ಪ್ರವೇಶಿಸುವುದನ್ನು ಸೂಚಿಸುವ ಈ ಹಬ್ಬ, ಚಳಿಗಾಲದ ಅಂತ್ಯ ಮತ್ತು ಬಿಸಿಲು ಹೆಚ್ಚಾಗುವ ಹೊಸ ಋತುವಿನ ಆರಂಭವನ್ನು ಸೂಚಿಸುತ್ತದೆ. ಇದು ಸೂರ್ಯ ದೇವರು, ಸೂರ್ಯನನ್ನು ಗೌರವಿಸುವ ದಿನವನ್ನಾಗಿ ಪರಿಗಣಿಸಲಾಗಿದೆ.
ಯಾವಾಗ ಆಚರಿಸಲಾಗುತ್ತೆ ಮಕರ ಸಂಕ್ರಾಂತಿ?
- 2026ರಲ್ಲಿ ಮಕರ ಸಂಕ್ರಾಂತಿಯನ್ನು ಜನವರಿ 14, ಬುಧವಾರದಂದು ಆಚರಿಸಲಾಗುತ್ತದೆ. ದೃಕ್ ಪಂಚಾಂಗದ ಪ್ರಕಾರ, ಈ ಕೆಳಗಿನ ಸಮಯಗಳು ಶುಭಕರವಾಗಿವೆ:
- ಮಕರ ಸಂಕ್ರಾಂತಿ ಪುಣ್ಯಕಾಲ ಮಧ್ಯಾಹ್ನ 03:13 ರಿಂದ ಸಂಜೆ 06:15 ರವರೆಗೆ ಇರಲಿದೆ (03 ಗಂಟೆ 02 ನಿಮಿಷಗಳು).
- ಮಕರ ಸಂಕ್ರಾಂತಿ ಮಹಾ ಪುಣ್ಯಕಾಲ ಮಧ್ಯಾಹ್ನ 03:13 ರಿಂದ ಸಂಜೆ 05:02 ರವರೆಗೆ (01 ಗಂಟೆ 49 ನಿಮಿಷಗಳು).
ಮಕರ ಸಂಕ್ರಾಂತಿ ಹಬ್ಬದ ಮಹತ್ವ:
ಮಕರ ಸಂಕ್ರಾಂತಿ ಹಬ್ಬವನ್ನು ಸೂರ್ಯ ದೇವನಿಗಾಗಿ ಆಚರಿಸಲಾಗುತ್ತದೆ. ಈ ಹಬ್ಬವು ಹಿಂದೂ ಕ್ಯಾಲೆಂಡರ್‌ನಲ್ಲಿ ಉತ್ತರಾಯಣ ಅವಧಿ ಎಂದು ಕರೆಯಲ್ಪಡುತ್ತದೆ. ಆಧ್ಯಾತ್ಮಿಕವಾಗಿ ಈ ಅವಧಿಯನ್ನು ತುಂಬಾ ಒಳ್ಳೆಯದು ಎಂದು ಪರಿಗಣಿಸಲಾಗುತ್ತದೆ. ಇನ್ನು ಮಕರ ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ಲಕ್ಷಾಂತರ ಜನರು ಗಂಗಾ ಮತ್ತು ಯಮುನಾ ನದಿಗಳು ಸಂಗಮವಾಗುವ ಸ್ಥಳದಲ್ಲಿ ಪವಿತ್ರ ಸ್ನಾನವನ್ನು ಕೈಗೊಳ್ಳುತ್ತಾರೆ. ಈ ಪವಿತ್ರ ಸ್ನಾನದಿಂದಾಗಿ ಹಿಂದಿನ ಪಾಪಗಳಿಗೆಲ್ಲಾ ಪರಿಹಾರ ಸಿಗುತ್ತದೆ ಎಂಬುದು ನಂಬಿಕೆ.
ಇನ್ನು ಹಿಂದೂ ಕ್ಯಾಲೆಂಡರ್ ಪ್ರಕಾರ, ಪ್ರತೀ ತಿಂಗಳಿನಂತೆ, ಒಂದು ವರ್ಷದಲ್ಲಿ 12 ಸಂಕ್ರಾಂತಿಗಳಿವೆ. ಆದ್ರೆ ಮಕರ ಸಂಕ್ರಾಂತಿ ಬಹಳ ಮಹತ್ವ ನೀಡಲಾಗುತ್ತದೆ.
ಪುರಾಣಗಳ ಪ್ರಕಾರ, ಸಂಕ್ರಾಂತಿ ಎಂಬ ದೇವತೆಯು (ಸೂರ್ಯನ ಶಕ್ತಿಯಿಂದ ಉಗಮವಾದ ದೇವಿ) ಭೂಮಿಯ ಮೇಳೆ ಭಯ ಹುಟ್ಟಿಸುತ್ತಿದ್ದ ಶಂಕರಾಸುರ ಎಂಬ ರಾಕ್ಷಸನನ್ನು ವಧಿಸಿದಳು. ಈ ರಾಕ್ಷಸನು ಜನರಿಗೆ ಹಿಂಸೆ ನೀಡುತ್ತಿದ್ದನು. ಇದೇ ಕಾರಣದಿಂದ ದೇವಿ ಈ ದುಷ್ಟ ರಾಕ್ಷಸನನ್ನು ಸಂಹರಿಸಿ ಭೂಮಿಯನ್ನು ರಕ್ಷಿಸಿದಳು. ಇದೇ ಕಾರಣಕ್ಕೆ ಈ ದಿನವನ್ನು ಮಕರ ಸಂಕ್ರಾಂತಿ ಎಂದು ಆಚರಿಸಲಾಗುತ್ತದೆ. ಇನ್ನು ಮರುದಿನವನ್ನು ಕಿಂಕ್ರಾಂತ್ ಅಥವಾ ಕರಿದಿನ ಎಂದೂ ಕರೆಯುತ್ತಾರೆ.
ಪೂಜಾ ವಿಧಾನ:
ಮಕರ ಸಂಕ್ರಾಂತಿಯಂದು ಭಕ್ತರು ಸೂರ್ಯೋದಯಕ್ಕೂ ಮುನ್ನ ಎದ್ದು ಗಂಗಾ, ಕಾವೇರಿ, ಕೃಷ್ಣಾ ಮುಂತಾದ ಪವಿತ್ರ ನದಿಗಳಲ್ಲಿ ಸ್ನಾನ ಮಾಡುತ್ತಾರೆ. ಪ್ರಾರ್ಥನೆ ಮತ್ತು ಮಂತ್ರ ಪಠಣದೊಂದಿಗೆ ಈ ಸ್ನಾನ ಪಾಪಗಳನ್ನು ತೊಳೆದು ಶುಭ ತರುತ್ತದೆ ಎಂಬ ನಂಬಿಕೆಯಿದೆ. ಶುಭ ದಿನವಾದ್ದರಿಂದ, ಈ ದಿನ ದಾನ ಧರ್ಮಗಳನ್ನು ಮಾಡುವುದರಿಂದ ಆತ್ಮ ಶುದ್ಧಿ ಮತ್ತು ಸಕಾರಾತ್ಮಕ ಕರ್ಮ ಲಭಿಸುತ್ತದೆ ಎಂಬ ನಂಬಿಕೆಯಿದೆ.


Click it and Unblock the Notifications