School Holiday: ಕರ್ನಾಟಕದಲ್ಲಿ ದೀಪಾವಳಿ ಪ್ರಯುಕ್ತ ಶಾಲೆಗಳಿಗೆ ಯಾವಾಗ ಮತ್ತು ಎಷ್ಟು ದಿನ ರಜೆ? ಇಲ್ಲಿದೆ ಸಂಪೂರ್ಣ ಮಾಹಿತಿ

ದೇಶದಲ್ಲಿ ಇನ್ನೇನು ಕೆಲವೇ ದಿನಗಳಲ್ಲಿ ಬೆಳಕಿನ ಹಬ್ಬ ದೀಪಾವಳಿ ಸಂಭ್ರಮ (Deepavali Festival) ಮನೆ ಮಾಡಲಿದೆ. ಭಾರತದಲ್ಲಿ ವಿಶೇಷವಾಗಿ ದೀಪಾವಳಿ ಹಬ್ಬವನ್ನು ಮೂರು ದಿನ ಆಚರಿಸಲಾಗುತ್ತದೆ. ಈಗಾಗಲೇ ಕರ್ನಾಟಕದಲ್ಲಿ ರಾಜ್ಯ ಸರ್ಕಾರದ ಕನಸಿನ ಸಮೀಕ್ಷೆ ಜಾತಿಗಣತಿಯನ್ನು (Caste Census) ನಡೆಸುವ ಉದ್ದೇಶದಿಂದ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಅಲ್ಲದೇ ಅಕ್ಟೋಬರ್‌ 18 ರವರೆಗೆ ರಜೆಯನ್ನು ವಿಸ್ತರಿಸಲಾಗಿದೆ. ಈ ಮಧ್ಯೆ ಮಕ್ಕಳಿಗೆ ದೀಪಾವಳಿಗೆ ರಜೆ (School Holiday) ಇರುತ್ತಾ? ಇದ್ರೆ ಯಾವಾಗ ಇರುತ್ತೆ? ಎಂಬ ಗೊಂದಲ ಶುರುವಾಗಿದೆ.

ದೀಪಾವಳಿ ಪ್ರಯುಕ್ತ ಶಾಲೆಗಳಿಗೆ ಯಾವಾಗ ಮತ್ತು ಎಷ್ಟು ದಿನ ರಜೆ?

ದೀಪಾವಳಿ ರಜೆ ಯಾವಾಗ?
ಅಕ್ಟೋಬರ್ 20, ಸೋಮವಾರದಂದು ದೀಪಾವಳಿ ಹಬ್ಬವನ್ನು ಆಚರಿಸಲಾಗುತ್ತದೆ. ಆದ್ದರಿಂದ ಭಾರತದಾದ್ಯಂತದ ಹೆಚ್ಚಿನ ಶಾಲೆಗಳಿಗೆ ಸೋಮವಾರವೇ ರಜೆ ಘೋಷಿಸಲಾಗಿದೆ. ಆದರೆ, ಕೆಲವು ಪ್ರದೇಶಗಳಲ್ಲಿ ಅಕ್ಟೋಬರ್ 20 ರಂದು ಶಾಲೆಗಳು ರಜೆ ನೀಡುತ್ತವೆಯೇ ಅಥವಾ ಗೋ ಪೂಜೆಗಾಗಿ ಅಕ್ಟೋಬರ್ 21 ಕ್ಕೆ ರಜೆಯನ್ನು ನೀಡುತ್ತಾ ಎಂಬ ಗೊಂದಲು ಉಂಟಾಗಿದೆ,

ಇನ್ನು ಶಾಲಾ ರಜಾದಿನಗಳಲ್ಲಿ ಗೊಂದಲ ಉಂಟಾಗಲು ಮುಖ್ಯ ಕಾರಣ ಕೆಲವು ರಾಜ್ಯಗಳ ಆಚರಣೆ ಮತು ರಜಾ ಕ್ಯಾಲೆಂಡರ್.‌ ಇದರ ಜೊತೆಗೆ ಅಲ್ಲಿನ ಶಾಲಾ ಮಂಡಳಿಯ ನಿರ್ಧಾರ. ಸಿಬಿಎಸ್‌ಇ ಮತ್ತು ಐಸಿಎಸ್‌ಇ ಶಾಲೆಗಳು ಸಾಮಾನ್ಯವಾಗಿ ಒಂದು ನಿರ್ದಿಷ್ಟ ರಾಷ್ಟ್ರೀಯ ವೇಳಾಪಟ್ಟಿಯನ್ನು ಫಾಲೋ ಮಾಡುತ್ತದೆ. ಆದ್ರೆ ಹಲವಾರು ರಾಜ್ಯ ಮಂಡಳಿಗಳು ವಿಸ್ತೃತ ರಜೆಗಳನ್ನು ಘೋಷಿಸುತ್ತವೆ.

ಸಾಮಾನ್ಯವಾಗಿ, ಧನ್ತೇರಸ್, ನರಕ ಚತುರ್ದಶಿ, ದೀಪಾವಳಿ, ಗೋ ಪೂಜೆಗಳ ಸಮಯದಲ್ಲಿ ಸಾಮಾನ್ಯವಾಗಿ ರಜೆ ಘೋಷಣೆಗಳನ್ನು ಮಾಡಲಾಗುತ್ತದೆ. ಆದ್ದರಿಂದ ಈ ಸಮಯದಲ್ಲಿ ಸಿಬಿಎಸ್‌ಇ, ಐಸಿಎಸ್‌ಇ ಮತ್ತು ವಿವಿಧ ರಾಜ್ಯ ಮಂಡಳಿಗಳ ವಿದ್ಯಾರ್ಥಿಗಳಿಗೆ ರಜೆ ನೀಡುವ ಸಾಧ್ಯತೆ ಹೆಚ್ಚಿದೆ.

2025ರ ರಜಾ ಪಟ್ಟಿ:
2025 ರಲ್ಲಿ ಸಾಮಾನ್ಯವಾಗಿ ದೀಪಾವಳಿ ರಜೆಯು ಅಕ್ಟೋಬರ್ 18 ರಂದು ಪ್ರಾರಂಭವಾಗಿ ಅಕ್ಟೋಬರ್ 23 ರಂದು ಕೊನೆಗೊಳ್ಳುತ್ತದೆ. ಆದರೆ ಶಾಲಾ ಮಂಡಳಿಗಳು ಯಾವ ರೀತಿ ರಜೆ ನೀಡುತ್ತವೆ ಎಂಬುದನ್ನು ಗಮನಿಸಬೇಕು.

ಸ್ಥಳೀಯ ಅಧಿಕಾರಿಗಳ ಬದಲಾವಣೆ ಮೇರೆಗೆ, ಹೆಚ್ಚಿನ ಸಿಬಿಎಸ್‌ಇ ಮತ್ತು ಐಸಿಎಸ್‌ಇ ಶಾಲೆಗಳು ಈ ದಿನಗಳಲ್ಲಿ ರಜೆ ನೀಡುವ ಸಾಧ್ಯತೆ ಇದೆ.

  • ರಾಜಸ್ಥಾನ: ಅಕ್ಟೋಬರ್ 13 ರಿಂದ ಅಕ್ಟೋಬರ್ 23 (12 ದಿನಗಳ ರಜೆ ಈಗಾಗಲೇ ಜಾರಿಯಲ್ಲಿದೆ)
  • ಬಿಹಾರ: ಅಕ್ಟೋಬರ್ 18-ಅಕ್ಟೋಬರ್ 29 (ಛತ್ ಪೂಜಾ ಕೂಡಾ ಇದರಲ್ಲಿ ಒಳಗೊಂಡಿದೆ)
  • ಕರ್ನಾಟಕ: ಅಕ್ಟೋಬರ್ 8-ಅಕ್ಟೋಬರ್ 18 (ಜಾತಿ ಸಮೀಕ್ಷೆಯಿಂದಾಗಿ ಈಗಾಗಲೇ ರಜೆ ನೀಡಲಾಗಿದೆ. ಇನ್ನು ಅಕ್ಟೋಬರ್ 20 ಮತ್ತು 22 ರಂದು ಹೆಚ್ಚುವರಿ ರಜೆ ನೀಡಲಾಗಿದೆ)
  • ಉತ್ತರ ಪ್ರದೇಶ: ಅಕ್ಟೋಬರ್ 20-ಅಕ್ಟೋಬರ್ 23
  • ದೆಹಲಿ-ಎನ್‌ಸಿಆರ್: ಅಕ್ಟೋಬರ್ 19-ಅಕ್ಟೋಬರ್ 23

ಇದು ಸದ್ಯದ ಮಾಹಿತಿಯಾಗಿದ್ದು, ಇನ್ನು ರಜೆ ಘೋಷಣೆ ಮಾಡೋದು ಆಯಾ ಶಾಲಾ ಮಂಡಳಿಗೆ ಸಂಬಂಧಿಸಿದ್ದಕ್ಕಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+