ಎಲ್ಲ ಜನರಿಗೂ ನಮ್ಮ ಮೆಟ್ರೋ ಸೌಲಭ್ಯದ ಪ್ರಯೋಜನ ಲಭ್ಯವಾಗುವಂತೆ ವಿಸ್ತರಣೆ ಮಾಡಲಾಗುತ್ತಿದೆ. ಈ ವಿಸ್ತರಣೆ ಭಾಗವಾಗಿ ಯೆಲ್ಲೋ ಮೆಟ್ರೋ ಆರಂಭ ಕಾರ್ಯಾಚರಣೆ ನಡೆಯುತ್ತಿದೆ. ಈ ಹಿಂದೆ ಫೆಬ್ರವರಿ 2024 ರಲ್ಲಿ ಆರಂಭವಾಗಲಿದೆ ಎಂದು ವರದಿಯಾಗಿತ್ತು. ಆದರೆ ಈಗ ಆ ತಿಂಗಳು ಆರಂಭವಾಗುವುದಿಲ್ಲ ಎಂದು ವರದಿಯಾಗಿದೆ.
ಫೆಬ್ರವರಿ 2024 ರ ಇತ್ತೀಚಿನ ಗಡುವಿನ ಬದಲಾಗಿ ಸಾರ್ವತ್ರಿಕ ಚುನಾವಣೆಯ ನಂತರವೇ ಎಲೆಕ್ಟ್ರಾನಿಕ್ಸ್ ಸಿಟಿ ಮತ್ತು ದಕ್ಷಿಣ ಬೆಂಗಳೂರಿನ ಇತರ ಭಾಗಗಳು ಮೆಟ್ರೋ ಸಂಪರ್ಕವನ್ನು ಪಡೆಯುತ್ತವೆ ಎಂದು ವರದಿಯಾಗಿದೆ. ಬೆಂಗಳೂರು ಮೆಟ್ರೋ ರೈಲ್ ಕಾರ್ಪೊರೇಷನ್ ಲಿಮಿಟೆಡ್ (ಬಿಎಂಆರ್‌ಸಿಎಲ್) ಪ್ರಕಾರ ಹಳದಿ ಮಾರ್ಗದ ಮೂಲಮಾದರಿಯ ರೈಲು ಗುರುವಾರ ಚೀನಾದಿಂದ ರವಾನೆಯಾಗಲಿದೆ. ಜನವರಿಯಲ್ಲಿ ನಗರವನ್ನು ತಲುಪಲಿದೆ ಎಂದು ನಿರೀಕ್ಷಿಸಲಾಗಿದೆ.

ಆರು ಬೋಗಿಗಳ ರೈಲು ಸೆಟ್‌ನ ಸಾಗಣೆಗೆ ಡೆಕ್‌ಗಳನ್ನು ತೆರವುಗೊಳಿಸಲಾಗಿದೆ ಎಂದು ಬಿಎಂಆರ್‌ಸಿಎಲ್‌ನ ಹಿರಿಯ ಅಧಿಕಾರಿಯೊಬ್ಬರು ಖಚಿತಪಡಿಸಿದ್ದಾರೆ. ಮೂಲಮಾದರಿ ರೈಲನ್ನು ಸ್ವೀಕರಿಸಿದ ನಂತರ, ಬಿಎಂಆರ್‌ಸಿಎಲ್ ಪ್ರಾಯೋಗಿಕವಾಗಿ ರೈಲು ಚಲಾವಣೆ ನಡೆಸಿದ ಪರಿಶೀಲನೆ ಮಾಡಬೇಕಾಗುತ್ತದೆ. ಉಳಿದಂತೆ ವಾಣಿಜ್ಯ ಕಾರ್ಯಾಚರಣೆಗಳಿಗೆ ಅನುಮೋದನೆ ಪಡೆಯಲು ಕನಿಷ್ಠ ಮೂರು ತಿಂಗಳ ಅಗತ್ಯವಿದೆ ಎಂದು ಅದರ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಬಿಎಲ್ ಯಶವಂತ ಚವಾಣ್ ಹೇಳಿದ್ದಾರೆ.
ಲೋಕಸಭೆ ಚುನಾವಣೆ ಬಳಿಕ ಆರಂಭ
ಆದರೆ ಲೋಕಸಭಾ ಚುನಾವಣೆಯ ಕಾರಣ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಬಿಎಂಆರ್‌ಸಿಎಲ್‌ಗೆ ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ವಾಣಿಜ್ಯವಾಗಿ ಯೆಲ್ಲೋ ಲೇನ್ ಮೆಟ್ರೋ ಕಾರ್ಯಾಚರಣೆಯನ್ನು ಪ್ರಾರಂಭಿಸಲು ಸಾಧ್ಯವಾಗುವುದಿಲ್ಲ.
ಈ ಲೇನ್‌ನ ಮಹತ್ವವೇನು?
19.15-ಕಿಮೀ ಆಗಿರುವ ಳದಿ ಮಾರ್ಗವು ನಿರ್ಣಾಯಕ ಪ್ರಾಮುಖ್ಯತೆಯನ್ನು ಹೊಂದಿದೆ. ಈ ಮೆಟ್ರೋ ಲೇನ್ ಆರ್‌ವಿ ರಸ್ತೆಯನ್ನು ಬೊಮ್ಮಸಂದ್ರದಿಂದ ಸಿಲ್ಕ್ ಬೋರ್ಡ್ ಜಂಕ್ಷನ್ ಮತ್ತು ಎಲೆಕ್ಟ್ರಾನಿಕ್ಸ್ ಸಿಟಿ ಮೂಲಕ ಸಂಪರ್ಕಿಸುತ್ತದೆ. ಆದ್ದರಿಂದಾಗಿ ಇದು ಅತೀ ಮಹತ್ವವನ್ನು ಪಡೆದುಕೊಂಡಿದೆ.
ಎಷ್ಟು ಕಾಮಗಾರಿ ಪೂರ್ಣ?
ಸಿವಿಲ್ ಕಾಮಗಾರಿಗಳು (ವಾಯಡಕ್ಟ್‌ಗಳು ಮತ್ತು ನಿಲ್ದಾಣಗಳ ನಿರ್ಮಾಣ) ಶೇಕಡ 99.7 ರಷ್ಟು ಪೂರ್ಣಗೊಂಡಿದ್ದರೂ, ರೈಲುಸೆಟ್‌ಗಳ ಕೊರತೆಯಿಂದ ಮಾರ್ಗದ ಪ್ರಾರಂಭವನ್ನು ತಡೆಹಿಡಿಯಲಾಗಿದೆ. ಫೆಬ್ರವರಿ 2020 ರಲ್ಲಿ, ಚೀನಾದ ಸರ್ಕಾರಿ ಸ್ವಾಮ್ಯದ ಸಿಆರ್‌ಆರ್‌ಸಿ ನಾನ್‌ಜಿಂಗ್ ಪುಜೆನ್ ಕೋ ಲಿಮಿಟೆಡ್ ಸುಮಾರು ನಾಲ್ಕು ವರ್ಷಗಳಲ್ಲಿ ಬಿಎಂಆರ್‌ಸಿಎಲ್‌ಗೆ 216 ಕೋಚ್‌ಗಳನ್ನು (36 ರೈಲುಸೆಟ್‌ಗಳು) ಪೂರೈಸುವ ಒಪ್ಪಂದವನ್ನು ಗೆದ್ದಿದೆ.
ಈ ರೈಲುಸೆಟ್‌ಗಳಲ್ಲಿ ಇಪ್ಪತ್ತೊಂದು ಪರ್ಪಲ್ ಮತ್ತು ಗ್ರೀನ್ ಲೈನ್‌ಗಳಲ್ಲಿ ಮತ್ತು ಉಳಿದವುಗಳನ್ನು ಹಳದಿ ಲೈನ್‌ನಲ್ಲಿ ನಿಯೋಜಿಸಲಾಗಿತ್ತು. ಆದರೆ ಸಂಸ್ಥೆಯು ಸಮಯಕ್ಕೆ ಸರಿಯಾಗಿ ಪೂರೈಕೆಯನ್ನು ಮಾಡಿಲ್ಲ. ಈ ಸಂಸ್ಥೆಯು ಸ್ಥಳೀಯವಾಗಿ ಶೇಕಡ 75 ರಷ್ಟು ಭಾಗಗಳನ್ನು ತಯಾರಿಸಲು ಭಾರತೀಯ ಕಂಪನಿಯು ಲಭ್ಯವಾಗದ ಕಾರಣ ನೀಡಿ ಒಪ್ಪಂದದಂತೆ ಸಮಯಕ್ಕೆ ಸರಿಯಾಗಿ ಪೂರೈಕೆ ಮಾಡಿಲ್ಲ.
ಕಳೆದ ವರ್ಷವಷ್ಟೇ ಚೀನಾದ ಸಿಆರ್‌ಆರ್‌ಸಿ ನಾನ್‌ಜಿಂಗ್ ಪುಜೆನ್ ಕೋ ಲಿಮಿಟೆಡ್ ಸಂಸ್ಥೆ 204 ಕೋಚ್‌ಗಳನ್ನು ತಯಾರಿಸಲು ಬಂಗಾಳ ಮೂಲದ ಟಿಟಾಗರ್ ವ್ಯಾಗನ್ಸ್ ಲಿಮಿಟೆಡ್‌ನೊಂದಿಗೆ ಒಪ್ಪಂದ ಮಾಡಿಕೊಂಡಿತ್ತು. ಸಿಆರ್‌ಆರ್‌ಸಿ ಮೂಲಮಾದರಿಯ ರೈಲು ಸೆಟ್ ಅನ್ನು ಮಾತ್ರ ಸಿದ್ಧಪಡಿಸಿಲ್ಲ. ಆದರೆ ಎರಡು ರೈಲುಸೆಟ್‌ಗಳ ಬಾಡಿಶೆಲ್‌ಗಳನ್ನು ಕಳುಹಿಸಿದೆ.
ಮೂಲಮಾದರಿಯ ರೈಲನ್ನು ಪ್ರಾಯೋಗಿಕ ರನ್‌ಗಳಿಗೆ ಬಳಸಲಾಗುವುದು. ಸಿಆರ್‌ಆರ್‌ಸಿ ಟಿಟಾಘರ್ ಬಾಡಿಶೆಲ್‌ಗಳನ್ನು ಬಿಎಂಆರ್‌ಸಿಎಲ್ ಮುಂದಿನ ಕೆಲವು ತಿಂಗಳುಗಳಲ್ಲಿ ಎರಡು ಪೂರ್ಣ ಪ್ರಮಾಣದ ರೈಲುಸೆಟ್‌ಗಳಾಗಿ ಪರಿವರ್ತಿಸುವ ಸಾಧ್ಯತೆಯಿದೆ. "ಪ್ರೊಟೊಟೈಪ್ ರೈಲು ಸಾಗಣೆಗೆ ಸಿದ್ಧವಾಗಿದೆ. ಅದು ಇಲ್ಲಿಗೆ ಬಂದ ನಂತರ, ನಾವು ಅಗತ್ಯ ಪರೀಕ್ಷೆಯನ್ನು ನಡೆಸುತ್ತೇವೆ," ಎಂದು ಚವಾಣ್ ಹೇಳಿದ್ದಾರೆ.


Click it and Unblock the Notifications