ಮಕರ ಸಂಕ್ರಾಂತಿ (Makar Sankranti) ಹಬ್ಬದ ಆಚರಣೆಗೆ ಈಗಾಗಲೇ ಕರ್ನಾಟಕ ಸಜ್ಜಾಗಿದೆ. ಧಾರ್ಮಿಕ ಆಚರಣೆಗಳಲ್ಲಿ ಮಕರ ಸಂಕ್ರಾಂತಿ ಹಬ್ಬಕ್ಕೆ ಬಹಳ ಮಹತ್ವವನ್ನು ನೀಡಲಾಗುತ್ತದೆ. ಪ್ರತೀ ವರ್ಷವೂ ಸಾಮಾನ್ಯವಾಗಿ ಜನವರಿ 14 ರಂದು ಮಕರ ಸಂಕ್ರಾಂತಿಯನ್ನು ಆಚರಿಸಲಾಗುತ್ತದೆ. ಅದೇ ರೀತಿ ಈ ಬಾರಿಯೂ ಹಿಂದೂ ಕ್ಯಾಲೆಂಡರ್ ಪ್ರಕಾರ ಜನವರಿ 14 ರಂದೇ ಮಕರ ಸಂಕ್ರಾಂತಿ ಹಬ್ಬವನ್ನು ಆಚರಿಸಲಾಗುತ್ತಿದೆ. ಆದ್ರೆ ಇದೀಗ ಶಾಲಾ-ಕಾಲೇಜು ರಜಾ ದಿನಗಳಲ್ಲಿ ಭಾರೀ ಗೊಂದಲ ಉಂಟಾಗಿದೆ. ಕೆಲವು ಸಂಸ್ಥೆಗಳಲ್ಲಿ ಜನವರಿ 14 ರಂದು ರಜೆ ನೀಡಿದ್ರೆ, ಇನ್ನೂ ಕೆಲವು ಸಂಸ್ಥೆಗಳಲ್ಲಿ ಜನವರಿ 15ರಂದು ರಜೆ (School-College Holidays) ಘೋಷಣೆ ಮಾಡಲಾಗಿದೆ.

ಉತ್ತರಾಯಣದ ಆರಂಭವನ್ನು ಸೂಚಿಸುವ ಮಕರ ಸಂಕ್ರಾಂತಿ ಹಬ್ಬವನ್ನು ರಾಜ್ಯದಲ್ಲಿ ಭಾರೀ ಸಂಭ್ರಮದಿಂದ, ಎಳ್ಳು-ಬೆಲ್ಲದೊಂದಿಗೆ ಆಚರಿಸಲಾಗುತ್ತದೆ. ಇದೀಗ ಶಾಲಾ-ಕಾಲೇಜುಗಳಿಗೂ ರಜೆ ಘೋಷಣೆ ಮಾಡಲಾಗಿದೆ. ಹಾಗಿದ್ರೆ ಬೆಂಗಳೂರಿನಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಯಾವಾಗ ಇರಲಿದೆ ಗೊತ್ತಾ?
ಯಾವಾಗ ಶಾಲೆಗಳಿಗೆ ರಜೆ?
ಬೆಂಗಳೂರಿನಲ್ಲೊಂದು ಶಾಲೆಯಲ್ಲಿ ಮಕರ ಸಂಕ್ರಾಂತಿ ಪ್ರಯುಕ್ತ ಜನವರಿ 15 ರಂದು ರಜೆ ಘೋಷಣೆ ಮಾಡಲಾಗಿದೆ. ಶಾಲಾ ಮುಖ್ಯೋಪಾಧ್ಯಾಯರು ರಜಾ ದಿನವನ್ನು ಘೋಷಿಸಿದ್ದು, "ಮಕರ ಸಂಕ್ರಾಂತಿ ಪ್ರಯುಕ್ತ ಶಾಲಾ ಕ್ಯಾಲೆಂಡರ್‌ನಲ್ಲಿ ತಿಳಿಸಲಾದ ಜನವರಿ 14 ರ ರಜಾದಿನವನ್ನು ಪರಿಷ್ಕರಿಸಲಾಗಿದೆ. ಆದ್ದರಿಂದ ಮಕರ ಸಂಕ್ರಾಂತಿ ಪ್ರಯುಕ್ತ 15 ರಜೆ ನೀಡಲಾಗಿದೆ.
ಸದ್ಯ ಇದು ಒಂದು ಶಾಲೆಯಲ್ಲಿ ಘೋಷಿಸಲಾದ ಶಾಲಾ ರಜಾ ಪ್ರಕಟಣೆಯಾಗಿದ್ದು, ಇನ್ನುಳಿದ ಸಂಸ್ಥೆಗಳು, ಸರ್ಕಾರಿ ಶಾಲಾ-ಕಾಲೇಜುಗಳಿಗೆ ಯಾವಾಗ ರಜೆ ಘೋಷಣೆಯಾಗುತ್ತೆ ಎಂದು ಕಾದು ನೋಡಬೇಕಿದೆ. ಆದ್ರೆ ಕಳೆದ ತಿಂಗಳು ಸರ್ಕಾರದಿಂದ ಸಾರ್ವತ್ರಿಕ ರಜಾ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಈ ಪಟ್ಟಿಯಲ್ಲಿ ಕರ್ನಾಟಕದಲ್ಲಿ ಸಾರ್ವತ್ರಿಕ ರಜೆಯನ್ನು ಜನವರಿ 15 ರಂದು ರಜೆ ಘೋಷಿಸಲಾಗಿದೆ.
ಬ್ಯಾಂಕ್‌ಗಳಿಗೆ ಯಾವಾಗ ರಜೆ?
ನೀವು ಜನವರಿ 14 ರಂದು ಯಾವುದೇ ಬ್ಯಾಂಕ್ ಕೆಲಸಗಳನ್ನು ಬಾಕಿ ಉಳಿಸಿದ್ದರೆ, ಈಗಲೇ ಮಾಡಿಕೊಳ್ಳಿ. ಏಕೆಂದರೆ ಮಕರ ಸಂಕ್ರಾಂತಿ ಪ್ರಯುಕ್ತ ಜನವರಿ 14 ರಂದು ಕರ್ನಾಟಕದಲ್ಲಿ ಎಲ್ಲಾ ಬ್ಯಾಂಕ್‌ಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಭಾರತೀಯ ರಿಸರ್ವ್ ಬ್ಯಾಂಕ್ (RBI) ಬಿಡುಗಡೆ ಮಾಡಿದ ಜನವರಿ ತಿಂಗಳ ಬ್ಯಾಂಕ್ ರಜಾದಿನಗಳ ಪಟ್ಟಿಯ ಪ್ರಕಾರ, ಜನವರಿ 14 ರಂದು ಮಕರ ಸಂಕ್ರಾಂತಿ ಹಬ್ಬದ ಪ್ರಯುಕ್ತ ದೇಶಾದ್ಯಂತ ಬ್ಯಾಂಕುಗಳು ಮುಚ್ಚಿರುವುದಿಲ್ಲ. ಜನವರಿ 14 ರಂದು ಗುಜರಾತ್, ಒಡಿಶಾ, ಅಸ್ಸಾಂ, ಅರುಣಾಚಲ ಪ್ರದೇಶಗಳಲ್ಲಿ ಬ್ಯಾಂಕ್‌ಗಳಿಗೆ ರಜೆ ಇರಲಿದೆ. ಆದರೆ ಕರ್ನಾಟಕದಲ್ಲಿ ಜನವರಿ 15 ರಂದು ಕರ್ನಾಟಕದಲ್ಲಿ ಬ್ಯಾಂಕ್‌ಗಳಿಗೆ ರಜೆ ನೀಡಲಾಗಿದೆ. ಈ ದಿನ ಕರ್ನಾಟಕ, ತಮಿಳುನಾಡು, ಸಿಕ್ಕಿಂ, ತೆಲಂಗಾಣ ಮತ್ತು ಆಂಧ್ರ ಪ್ರದೇಶದಲ್ಲಿ ಎಲ್ಲಾ ಬ್ಯಾಂಕುಗಳು ಮುಚ್ಚಿರುತ್ತದೆ.
ಆದ್ದರಿಂದ ಯಾರಾದರು ಬ್ಯಾಂಕ್ ವಹಿವಾಟುಗಳನ್ನು 14ರಂದು ಮುಗಿಸಲು ಪ್ಲಾನ್ ಮಾಡಿದ್ದರೆ ಇಂದೇ ಮುಗಿಸಿ. ಹಣ ವಿಥ್ ಡ್ರಾ ಪ್ರಕ್ರಿಯೆಗಳಿಗೆ ಎಟಿಎಂ ಅಥವಾ ಯುಪಿಐ ಪೇಮೆಂಟ್ ವಿಧಾನವನ್ನು ಬಳಸಬಹುದು. ಯಾವುದೇ ಸಾಲ ಸೌಲಭ್ಯ ಅಥವಾ ಬ್ಯಾಂಕ್ ಅಕೌಂಟ್ ಸಂಬಂಧಿತ ಅಪ್ಡೇಟ್‌ಗಳಿಗಾಗಿ ಜನವರಿ 15 ರಂದು ಬ್ಯಾಂಕ್‌ಗೆ ತೆರಳಬೇಡಿ.


Click it and Unblock the Notifications