Karnataka Budget 2026: ಕರ್ನಾಟಕ ಬಜೆಟ್‌ ಮಂಡನೆ ಯಾವಾಗ? ಜನವರಿ ಆರಂಭದಲ್ಲೇ ಪ್ಲಾನ್‌ ಶುರು

2026-27ನೇ ಸಾಲಿನ ಕೇಂದ್ರ ಬಜೆಟ್‌ (Union Budget 2026) ಫೆಬ್ರವರಿ 1 ರಂದು ಮಂಡನೆಯಾಗಲಿದೆ. ಕೇಂದ್ರ ಬಜೆಟ್‌ ಬಗ್ಗೆ ದೇಶದೆಲ್ಲೆಡೆ ಭಾರೀ ಕುತೂಹಲ ಸೃಷ್ಟಿಯಾಗಿದೆ. ಕೇಂದ್ರ ಬಜೆಟ್‌ನಿಂದ ಯಾರಿಗೆ ಲಾಭ ಸಿಗಲಿದೆ ಎಂಬುದನ್ನು ನೋಡಲು ಆರ್ಥಿಕ ತಜ್ಞರು ಕಾದು ಕುಳಿತಿದ್ದಾರೆ. ಈ ಮಧ್ಯೆ ರಾಜ್ಯದ ಜನರಿಗೆ ಸರ್ಕಾರ ಮಹತ್ವದ ಸುದ್ದಿಯೊಂದನ್ನು ನೀಡಿದೆ. ಕರ್ನಾಟಕ ಸರ್ಕಾರ (Karnataka Govt) ಇದೀಗ 2026-27ರ ಆರ್ಥಿಕ ವರ್ಷದ ಬಜೆಟ್‌ ಅನ್ನು ಮಾರ್ಚ್‌ ತಿಂಗಳಲ್ಲಿ ಮಂಡಿಸುವ ನಿರೀಕ್ಷೆಯಿದೆ. ಬಜೆಟ್‌ ಮಂಡನೆಗೆ ಈಗಾಗಲೇ ಸಿದ್ದರಾಮಯ್ಯ (Siddaramaiah) ನೇತೃತ್ವದ ರಾಜ್ಯ ಸರ್ಕಾರ ಚಿಂತನೆ ನಡೆಸುತ್ತಿದೆ ಎನ್ನಲಾಗಿದೆ.

ಕರ್ನಾಟಕ ಬಜೆಟ್‌ ಮಂಡನೆ ಯಾವಾಗ? ಜನವರಿ ಆರಂಭದಲ್ಲೇ ಪ್ಲಾನ್‌ ಶುರು

ಹೌದು, ಕರ್ನಾಟಕ ಸರ್ಕಾರ ಈ ಬಾರಿಯ ಆರ್ಥಿಕ ವರ್ಷದ ಬಜೆಟ್‌ ಮಂಡನೆಗೆ ಚಿಂತನೆ ನಡೆಸಿದೆ ಎಂದು ವರದಿಯಾಗಿದೆ. ಹಾಗಿದ್ರೆ 2026-27ನೇ ಸಾಲಿನ ಕರ್ನಾಟಕ ಬಜೆಟ್‌ ಯಾವಾಗ ಮಂಡನೆಯಾಗಬಹುದು ಎಂಬುದರ ಮಾಹಿತಿ ಇಲ್ಲಿದೆ ಓದಿ.

ಕರ್ನಾಟಕ ಬಜೆಟ್‌ ಮಂಡನೆ ಯಾವಾಗ?
ಮುಂಬರುವ ಮಾರ್ಚ್‌ ತಿಂಗಳಲ್ಲೇ ಕರ್ನಾಟಕ ಬಜೆಟ್‌ 2026-27 ಮಂಡಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ ಎನ್ನಲಾಗಿದೆ. ಮಾರ್ಚ್‌ 6 ರಂದು ಬಜೆಟ್‌ ಮಂಡನೆಯಾಗುವ ಸಾಧ್ಯತೆ ಇದ್ದು, ಈ ಕುರಿತು ಸಿಎಂ ಸಿದ್ದರಾಮಯ್ಯನವರು ಈಗಾಗಲೇ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.

ಹಲವು ಸಭೆ, ತೀರ್ಮಾನಗಳ ನಂತರ ಅಧಿಕೃತ ದಿನಾಂಕ ಹೊರಬೀಳಲಿದ್ದು, ಒಂದು ವೇಳೆ ನಿಜವಾಗಿಯೂ ಮಾರ್ಚ್‌ 6 ರಂದು ಬಜೆಟ್‌ ಮಂಡಿಸುವುದಾದ್ರೆ, ಮಾರ್ಚ್‌ 5 ರಿಂದಲೇ ಬಜೆಟ್‌ ಅಧಿವೇಶನ ಶುರುವಾಗುವ ಸಾಧ್ಯತೆ ಇದೆ.

2025ರ ಬಜೆಟ್‌ ಮಂಡನೆ:
2025ರಲ್ಲಿ ಕರ್ನಾಟಕ ಬಜೆಟ್‌ ಮಂಡನೆ ಮಾರ್ಚ್‌ 7 ರಂದು ಆಗಿತ್ತು. ಅದೇ ರೀತಿ ಅದರ ಸಮೀಪದಲ್ಲೇ ಈ ಬಾರಿಯೂ ಬಜೆಟ್‌ ಮಂಡಿಸಲು ಸರ್ಕಾರ ಪ್ಲಾನ್‌ ಮಾಡಿದೆ. ಇನ್ನು ಬಜೆಟ್‌ ಮಂಡನೆಗೂ ಮುನ್ನ ವಿಧಾನಸಭಾ ಸೆಷನ್‌ ನಡೆಯುತ್ತದೆ. ಅಂದರೆ ಬಜೆಟ್‌ ಮಂಡನೆಯ ಹಿಂದಿನ ದಿನ ಗವರ್ನರ್‌ ಘೋಷಣೆ ಮಾಡುತ್ತಾರೆ. ಆ ನಂತರ ಬಜೆಟ್‌ ಮಂಡಿಸಲಾಗುತ್ತದೆ.

ಸಿಎಂ ಸಿದ್ದರಾಮಯ್ಯ ದಾಖಲೆ!
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರ್ನಾಟಕದ ಇತಿಹಾಸದಲ್ಲೇ ಅತೀ ಹೆಚ್ಚು ಬಜೆಟ್‌ ಮಂಡಿಸಿ, ಹೊಸ ದಾಖಲೆ ಬರೆದಿದ್ದಾರೆ. ಇದು ರಾಜ್ಯ ರಾಜಕಾರಣದ ಇತಿಹಾಸ ಪುಟಗಳಲ್ಲೂ ಸೇರಿದೆ. ಸಿದ್ದರಾಮಯ್ಯ ಅವರು ಈಗಾಗಲೇ 16 ಬಜೆಟ್‌ಗಳನ್ನು ಮಂಡಿಸಿದ್ದಾರೆ. ಇದು ರಾಜ್ಯದಲ್ಲಿ ಅತೀ ಹೆಚ್ಚು ಬಾರಿ ಬಜೆಟ್‌ ಮಂಡಿಸಿದ ದಾಖಲೆಯಾಗಿದೆ. ಇನ್ನು ಎರಡನೇ ಸ್ಥಾನದಲ್ಲಿ 13 ಬಜೆಟ್‌ ಮಂಡಿಸುವ ಮೂಲಕ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಇದ್ದಾರೆ.

2025-26ನೇ ಸಾಲಿನ ಬಜೆಟ್‌ ಮಂಡನೆ ಮಾರ್ಚ್‌ 7 ರಂದು ಆಗಿತ್ತು. ಅದು ಸಿದ್ದರಾಮಯ್ಯ ಅವರು ಮಂಡಿಸಿದ 16ನೇ ದಾಖಲೆಯ ಬಜೆಟ್‌ ಆಗಿದೆ. ಇನ್ನು ಇದರ ಗಾತ್ರ 4,09,549 ಕೋಟಿ ರೂ. ಆಗಿತ್ತು. ಇದೀಗ ಮುಂದಿನ 2026-27ನೇ ಸಾಲಿನ ಬಜೆಟ್‌ ಮಾರ್ಚ್‌ನಲ್ಲಿ ಮಂಡನೆಯಾಗುವ ನಿರೀಕ್ಷೆಯಿದೆ. ಇದು ಸಿದ್ದರಾಮಯ್ಯ ಅವರು ಮಂಡಿಸುವ 17ನೇ ಬಜೆಟ್‌ ಆಗಲಿದೆ. ಈ ಮೂಲಕ ಸಿದ್ದರಾಮಯ್ಯ ಅವರು ತಮ್ಮ ದಾಖಲೆಯನ್ನು ಮತ್ತಷ್ಟು ಬಲಪಡಿಸಲಿದ್ದಾರೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+