ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಕ್ರಮೇಣವಾಗಿ ಈಗ ಎಲ್ಲ ಕ್ಷೇತ್ರಗಳಲ್ಲೂ ಆವರಿಸಿಕೊಂಡಿದೆ. ಎಲ್ಲ ಕ್ಷೇತ್ರಗಳಲ್ಲಿ ಇದರ ಅಡಿಯಲ್ಲಿ ಪ್ರಯೋಗಗಳು ನಡೆದಿವೆ. ಇನ್ನು ಹಲವು ಕ್ಷೇತ್ರಗಳು ಇವುಗಳನ್ನು ಬಳಸಿಕೊಂಡು ಯಶವನ್ನು ಕಾಣುತ್ತಿವೆ. ಈ ತಂತ್ರಜ್ಞಾನದಿಂದ ಕೆಲಸವು ಸುಲಭ ಹಾಗೂ ನಿಖರವಾಗುತ್ತದೆ. ಆದ್ದರಿಂದ ಜಗತ್ತು ಈ ತಂತ್ರಜ್ಞಾನಕ್ಕೆ ಮಾರು ಹೋಗಿದೆ.
ಮೊಬೈಲ್ ಕಂಪನಿಗಳು ಸಹ ಈ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ಮುಂದೆ ಬಂದಿವೆ. ಈಗಾಗಲೇ ಹಲವು ಮೊಬೈಲ್ ಕಂಪನಿಗಳು ಇದನ್ನು ಅಳವಡಿಸಿಕೊಂಡಿವೆ. ಈ ದಿಸೇಯಲ್ಲಿ ಸ್ಯಾಮಸಾಂಗ್ ತನ್ನ ಇತ್ತೀಚಿನ ಪ್ರಮುಖ ಸ್ಮಾರ್ಟ್‌ಫೋನ್‌ನಲ್ಲಿ AI ವೈಶಿಷ್ಟ್ಯಗಳನ್ನು ಪರಿಚಯಿಸಿತು. ಮತ್ತು ಅದನ್ನು ಗ್ಯಾಲಕ್ಸಿ AI ವೈಶಿಷ್ಟ್ಯಗಳ ಹೆಸರಿನೊಂದಿಗೆ ಬಿಡುಗಡೆ ಮಾಡಿದೆ. ಸ್ಯಾಮಸಾಂಗ್ ಗ್ಯಾಲಕ್ಸಿ S24 ಸರಣಿಯ ಫೋನ್‌ಗಳಲ್ಲಿ ಗ್ಯಾಲಕ್ಸಿ AI ವೈಶಿಷ್ಟ್ಯಗಳನ್ನು ಪರಿಚಯಿಸಿದ್ದು, ಬೇರೆ ಉಪಕರಣಗಳಲ್ಲಿ ಎಐ ತಂತ್ರಜ್ಞಾನ ಪರಿಚಯಿಸಲು ಹೊರಟಿದೆ.

ಜನವರಿ 17, 2024 ರಂದು ಕ್ಯಾಲಿಫೋರ್ನಿಯಾದಲ್ಲಿ ಸ್ಯಾಮಸಾಂಗ್ ಗ್ಯಾಲಕ್ಸಿ S24 ಸರಣಿಯನ್ನು ಬಿಡುಗಡೆ ಮಾಡಿತು. ಇದರಲ್ಲಿ ಕಂಪನಿಯು ಮೂರು ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿತು. ಇವುಗಳಲ್ಲಿ ಸ್ಯಾಮಸಾಂಗ್ ಗ್ಯಾಲಕ್ಸಿ S24, ಸ್ಯಾಮಸಾಂಗ್ ಗ್ಯಾಲಕ್ಸಿ S24 Plus, ಸ್ಯಾಮಸಾಂಗ್ ಗ್ಯಾಲಕ್ಸಿ S24 Ultra ಸೇರಿವೆ. ಸ್ಯಾಮ್‌ಸಂಗ್ ಈ ಮೂರು ಫೋನ್‌ಗಳಲ್ಲಿ AI ವೈಶಿಷ್ಟ್ಯಗಳನ್ನು ನೀಡಿದೆ.
Samsung Galaxy S24 ಹಾಗೂ Samsung Galaxy S24 Plus ಭಾರತದಲ್ಲಿ ಸುಮಾರು 80 ಸಾವಿರ, Samsung Galaxy S24 Ultra ಬೆಲೆ 1.30 ಲಕ್ಷದಲ್ಲಿ ಲಭ್ಯವಿದೆ. ಫೆಬ್ರವರಿ 22 ರಂದು, ಸ್ಯಾಮಸಾಂಗ್ ತನ್ನ ಇತರ ಕೆಲವು ಸ್ಮಾರ್ಟ್‌ಫೋನ್‌ಗಳು ಮತ್ತು ಟ್ಯಾಬ್ಲೆಟ್‌ಗಳಲ್ಲಿ OneUI 6.1 ಅಪ್‌ಡೇಟ್ ಮಾಡುವ ಮೂಲಕ AI ವೈಶಿಷ್ಟ್ಯಗಳನ್ನು ಪರಿಚಯಿಸಲಿದೆ ಎಂದು ಘೋಷಿಸಿದೆ.
ಅವುಗಳಲ್ಲಿ ಪ್ರಮುಖವಾದವು ಗ್ಯಾಲಕ್ಸಿ S23 ಸರಣಿ, ಗ್ಯಾಲಕ್ಸಿ S23 FE, ಸ್ಯಾಮಸಾಂಗ್ ಗ್ಯಾಲಕ್ಸಿ Z Fold 5, ಸ್ಯಾಮಸಾಂಗ್ ಗ್ಯಾಲಕ್ಸಿ Z ಫ್ಲಿಪ್ 5, ಮತ್ತು ಸ್ಯಾಮಸಾಂಗ್ ಗ್ಯಾಲಕ್ಸಿ Tab S9 ಸರಣಿ ಸೇರಿವೆ. ಈ ವರ್ಷದ ಮಾರ್ಚ್‌ನಿಂದ ಈ ಸಾಧನಗಳಲ್ಲಿ AI ವೈಶಿಷ್ಟ್ಯಗಳನ್ನು ಹೊರತರಲು ಪ್ರಾರಂಭಿಸುತ್ತದೆ ಎಂದು ಕಂಪನಿ ಹೇಳಿದೆ.
ಗ್ಯಾಲಕ್ಸಿ AI ವೈಶಿಷ್ಟ್ಯಗಳ ಮೂಲಕ ಬಳಕೆದಾರರು ಲೈವ್ ಅನುವಾದ, ಚಾಟ್ ಅಸಿಸ್ಟ್ ವೈಶಿಷ್ಟ್ಯಗಳು, ಸರ್ಕಲ್ ಟು ಸರ್ಚ್ ವೈಶಿಷ್ಟ್ಯದಂತಹ ಹಲವು ವಿಶೇಷ ವೈಶಿಷ್ಟ್ಯಗಳನ್ನು ನೀಡಲಿದೆ. ಸ್ಯಾಮಸಾಂಗ್ ಪ್ರಸ್ತುತ ಗ್ಯಾಲಕ್ಸಿ AI ನಲ್ಲಿ ಕೆಲವು ಆಯ್ದ ವಿಶೇಷ ವೈಶಿಷ್ಟ್ಯಗಳನ್ನು ಸೇರಿಸಿದೆ, ಆದರೆ ಕಂಪನಿಯು ಗ್ಯಾಲಕ್ಸಿ AI ನ ವೈಶಿಷ್ಟ್ಯಗಳನ್ನು ಕ್ರಮೇಣ ವಿಸ್ತರಿಸುವುದಾಗಿ ಹೇಳಿಕೊಂಡಿದೆ.


Click it and Unblock the Notifications