ಬೆಂಗಳೂರಿಗೇ ಅಗ್ರಸ್ಥಾನ! ಉದ್ಯೋಗಸ್ಥ ಮಹಿಳೆಯರಿಗೆ ಅತ್ಯುತ್ತಮ ನಗರಗಳಿವು.. ಇಲ್ಲಿದೆ ಪಟ್ಟಿ

ಬೆಂಗಳೂರಿಗೇ ಅಗ್ರಸ್ಥಾನ! ಉದ್ಯೋಗಸ್ಥ ಮಹಿಳೆಯರಿಗೆ ಇವೇ ಅತ್ಯುತ್ತಮ ನಗರಗಳು. ಹೌದು, ಉದ್ಯೋಗಸ್ಥ ಮಹಿಳೆಯರಿಗೆ ಸಿಲಿಕಾನ್ ಸಿಟಿ ಬೆಂಗಳೂರು ಅತ್ಯಂತ ಸುರಕ್ಷಿತ ನಗರವಾಗಿದೆ. ಅವತಾರ್ ಗ್ರೂಪ್ ಬಹಿರಂಗಪಡಿಸಿರುವ ಪಟ್ಟಿಯಲ್ಲಿ ಬ್ರ್ಯಾಂಡ್ ಬೆಂಗಳೂರು ಮೊದಲ ಸ್ಥಾನ ಪಡೆದುಕೊಂಡಿದೆ. ಮಹಿಳೆಯರಿಗೆ ಉದ್ಯೋಗದ ಜೊತೆಗೆ ಕೌಶಲ, ಮೂಲಸೌಕರ್ಯ ಒದಗಿಸುವಲ್ಲಿ ಹೆಚ್ಚಿನ ಅಂಕ ಗಳಿಸಿದೆ.

2024ರ ಅಧ್ಯಾಯನದಲ್ಲಿ 120 ನಗರಗಳ ಸಮೀಕ್ಷೆ ನಡೆಸಲಾಗಿದೆ. ಈ ಪೈಕಿ ಬೆಂಗಳೂರು ಮಹಿಳೆಯರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸುವಲ್ಲಿ ಮುಂಚೂಣಿಯಲ್ಲಿದೆ. ಬೆಂಗಳೂರು ನಗರವು ಮಹಿಳಾ ಉದ್ಯಮಿಗಳು ಮತ್ತು ವೃತ್ತಿಪರರ ಕೇಂದ್ರವಾಗಿದೆ.

ಬೆಂಗಳೂರಿಗೇ ಅಗ್ರಸ್ಥಾನ! ಉದ್ಯೋಗಸ್ಥ ಮಹಿಳೆಯರಿಗೆ ಸೇಫ್ ನಗರಗಳಿವು

ಅವತಾರ್ 2022 ರಲ್ಲಿ ಟಿಸಿಡಬ್ಲ್ಯುಐ ಸೂಚ್ಯಂಕವನ್ನು ಪ್ರಾರಂಭಿಸಿತು. ಇದು ಎಫ್​ಜಿಡಿಗಳು ಮತ್ತು ಫೆಬ್ರವರಿ 2024 ರಿಂದ ನವೆಂಬರ್ 2024 ರವರೆಗೆ ರಾಷ್ಟ್ರವ್ಯಾಪಿ ಸಮೀಕ್ಷೆ ನಡೆಸಿದೆ. ಇದರಲ್ಲಿ 60 ನಗರಗಳ 1,672 ಮಹಿಳೆಯರು ಭಾಗವಹಿಸಿದ್ದಾರೆ. ಬನ್ನಿ, ಟಾಪ್ 10 ನಗರಗಳಿಗೆ ನಗರಗಳು, ಕರ್ನಾಟಕ ನಗರಗಳ ರ‍್ಯಾಂಕಿಂಗ್, ಮಾದರಿ ನಗರಗಳು, ಕರ್ನಾಟಕದ ನಗರಗಳ ಶ್ರೇಯಾಂಕ ಮತ್ತು ಹೆಚ್ಚು ಸರಾಸರಿ ನಗರ ಸೇರ್ಪಡೆ ಸ್ಕೋರ್ ಹೊಂದಿರುವ ಭಾರತೀಯ ರಾಜ್ಯಗಳು ಯಾವುವು? ಎನ್ನುವುದನ್ನು ಈ ಲೇಖನದಲ್ಲಿ ತಿಳಿಯೋಣ.

ಟಾಪ್ 10 ನಗರಗಳಿಗೆ ನಗರ ಸೇರ್ಪಡೆ ಸ್ಕೋರ್

ಬೆಂಗಳೂರು, ಚೆನ್ನೈ, ಮುಂಬೈ, ಹೈದರಾಬಾದ್, ಪುಣೆ, ಕೋಲ್ಕತಾ, ಅಹಮದಾಬಾದ್, ದೆಹಲಿ, ಗುರುಗ್ರಾಮ್, ಕೊಯಮತ್ತೂರು 2024 ರಲ್ಲಿ ಮಹಿಳೆಯರಿಗಾಗಿ ಕೆಲಸ ಮಾಡಲು ಟಾಪ್ 10 ನಗರಗಳಾಗಿವೆ. ಚೆನ್ನೈ (46.31), ಮುಂಬೈ (41.11), ಹೈದರಾಬಾದ್ (38.89), ಪುಣೆ (36.88), ಕೋಲ್ಕತಾ (34.18), ಅಹಮದಾಬಾದ್ (30.56), ದೆಹಲಿ (28.5), ಗುರುಗ್ರಾಮ್ (25.52) ಮತ್ತು ಕೊಯಮತ್ತೂರು (24.4) ನಂತರದ ಸ್ಥಾನಗಳಲ್ಲಿವೆ.

ರಾಜ್ಯದ ನಗರಗಳ ಶ್ರೇಯಾಂಕ

ರಾಜ್ಯದ ನಗರಗಳ 2024ರ ಶ್ರೇಯಾಂಕವು 2023ಕ್ಕೆ ಹೋಲಿಸಿದರೆ ಸಾಕಷ್ಷ್ಟು ಬದಲಾವಣೆಯಾಗಿದೆ. ಬೆಂಗಳೂರು ಪ್ರಥಮ ಸ್ಥಾನದಲ್ಲಿದೆ. ಮಂಗಳೂರು 24ನೇ ಸ್ಥಾನದಲ್ಲಿದೆ.

ಕೌಶಲ್ಯ ಮತ್ತು ಉದ್ಯೋಗ

2024 ರಲ್ಲಿ ದೊಡ್ಡ ನಗರಗಳಲ್ಲಿ ಬೆಂಗಳೂರು (7.54), ಮುಂಬೈ (7.60) ದೃಢವಾದ ಉದ್ಯೋಗ ಮಾರುಕಟ್ಟೆಗಳಾಗಿವೆ. ಚೆನ್ನೈ (7.09) ಮತ್ತು ಹೈದರಾಬಾದ್ (6.95) ಸ್ವಲ್ಪ ಹಿಂದುಳಿದಿವೆ.

ಕೇರ್ ಗಿವಿಂಗ್ ಸಪೋರ್ಟ್

ಬೆಂಗಳೂರು (7.44) ಮತ್ತು ಹೈದರಾಬಾದ್ (7.56) ದೊಡ್ಡ ನಗರಗಳಲ್ಲಿ ಆರೈಕೆ ಸೌಲಭ್ಯಗಳಲ್ಲಿ ಮುಂಚೂಣಿಯಲ್ಲಿವೆ.

ಮೂಲಸೌಕರ್ಯ

ಬೆಂಗಳೂರು (7.52) ಮತ್ತು ಹೈದರಾಬಾದ್ (8.01) ದೊಡ್ಡ ನಗರಗಳಲ್ಲಿ ಅತಿ ಹೆಚ್ಚು ಮೂಲಸೌಕರ್ಯ ಸ್ಕೋರ್ ಹೊಂದಿರುವ ಮುಂಬೈ (7.64) ನಂತರದ ಸ್ಥಾನಗಳಲ್ಲಿವೆ.

ಸರ್ಕಾರಿ ಸಂಸ್ಥೆಗಳ ದಕ್ಷತೆ

ಬೆಂಗಳೂರು 6.83 ಅಂಕ ಹೊಂದಿದ್ದು ಪುಣೆ (7.06), ಮುಂಬೈ (6.99), ಹೈದರಾಬಾದ್ (6.85), ಚೆನ್ನೈ (6.68) ನಂತರದ ಸ್ಥಾನಗಳಲ್ಲಿವೆ.

ಜೀವನದ ಗುಣಮಟ್ಟ

ಬೆಂಗಳೂರು (6.97), ಪುಣೆ (7.50) ಮತ್ತು ಚೆನ್ನೈ (7.05), ಮುಂಬೈ (6.67), ಹೈದರಾಬಾದ್ (6.63) ಅತ್ಯುತ್ತಮ ಜೀವನ ಗುಣಮಟ್ಟ ಸೂಚಕಗಳನ್ನು ವರದಿ ಮಾಡಿವೆ.

ಸುರಕ್ಷತೆ

ಬೆಂಗಳೂರು 5 ನೇ ಸ್ಥಾನದಲ್ಲಿದ್ದರೆ, ಮುಂಬೈ (7.19) ಮತ್ತು ಹೈದರಾಬಾದ್ (6.95) ಸುರಕ್ಷತೆಯಲ್ಲಿ ಮುಂಚೂಣಿಯಲ್ಲಿವೆ. ಪುಣೆ (6.71), ಚೆನ್ನೈ (6.48) ನಂತರದ ಸ್ಥಾನಗಳಲ್ಲಿವೆ.

ಬೆಂಗಳೂರು ಮಾದರಿ ನಗರ

ಭಾರತದ ಸಿಲಿಕಾನ್ ವ್ಯಾಲಿ ಎಂದು ಕರೆಯಲ್ಪಡುವ ಬೆಂಗಳೂರು 47.15 ನಗರ ಸೇರ್ಪಡೆ ಸ್ಕೋರ್ ನೊಂದಿಗೆ ಭಾರತದ ಮಹಿಳೆಯರಿಗಾಗಿ ಅಗ್ರ ನಗರಗಳಲ್ಲಿ ನಂ.1 ಸ್ಥಾನದಲ್ಲಿದೆ.

ಕರ್ನಾಟಕದ ನಗರಗಳ ಶ್ರೇಯಾಂಕ

ವರದಿಯ ಪ್ರಕಾರ, ಬೆಂಗಳೂರು ನಗರ ಸೇರ್ಪಡೆ ಸ್ಕೋರ್ (ಸಿಐಎಸ್) 47.15 ಅನ್ನು ಸಾಧಿಸಿದೆ. ಮಂಗಳೂರು 17.99 ಸಿಐಎಸ್ ನೊಂದಿಗೆ 24ನೇ ಸ್ಥಾನದಲ್ಲಿದೆ. ಬೆಳಗಾವಿ 27ನೇ ಸ್ಥಾನ, ಹುಬ್ಬಳ್ಳಿ-ಧಾರವಾಡ 28ನೇ ಸ್ಥಾನ, ಮೈಸೂರು 50ನೇ ಸ್ಥಾನ, ತುಮಕೂರು 91ನೇ ಸ್ಥಾನ, ಶಿವಮೊಗ್ಗ 94ನೇ ಸ್ಥಾನ, ಮತ್ತು ದಾವಣಗೆರೆ 98ನೇ ಸ್ಥಾನ ಪಡೆದಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+