ಮನೆ ಕೊಳ್ಳುವುದು ಅಥವಾ ನಿರ್ಮಿಸುವುದು ಬಹುತೇಕ ಜನರ ಪರಮ ಗುರಿಯಾಗಿರುತ್ತದೆ. ಕೆಲವರು ಯುವಕರಾಗಿದ್ದಾಗಲೇ ಈ ಸಾಧನೆ ಮಾಡಿದರೆ ಇನ್ನೂ ಕೆಲವರು ತಮ್ಮ ಮಧ್ಯಮ ವಯಸ್ಸಿನಲ್ಲಿ ಈಡೇರಿಸಿಕೊಳ್ಳುತ್ತಾರೆ. ಇನ್ನು ಕೆಲವರು ಮನೆ ನಿರ್ಮಾಣದ ಗುರಿಯನ್ನು ಯಾವ ರೀತಿಯಲ್ಲಿ ಈಡೇರಿಸಿಕೊಳ್ಳುತ್ತಾರೆ ಎಂಬುದಕ್ಕೆ ಹಲವಾರು ಉದಾಹರಣೆಗಳು ಲಭಿಸುತ್ತದೆ. ಸದ್ಯ ಖ್ಯಾತ ಉದ್ಯಮಿ ಸೀಮಾ ಸಿಂಗ್ ಅವರು ಮುಂಬೈನ ವರ್ಲಿ ಪ್ರದೇಶದಲ್ಲಿ 185 ಕೋಟಿ ರೂಪಾಯಿ ಮೌಲ್ಯದ ಐಷಾರಾಮಿ ಪೆಂಟ್ ಹೌಸ್ ಖರೀದಿಸಿದ್ದು, ಭಾರೀ ಸುದ್ದಿಯಲ್ಲಿದ್ದಾರೆ. ಮುಂಬೈನ ಪ್ರಖ್ಯಾತ ಬಿಲ್ಡರ್ ಎಂದೇ ಗುರುತಿಸಿಕೊಂಡಿರುವ ಲೋಧಾ ಸೀ-ಫೇಸ್ ವರ್ಲಿಯಲ್ಲಿರುವ ಯೋಜನೆಯಲ್ಲಿ ಎ-ವಿಂಗ್‌ನ 30 ನೇ ಮಹಡಿಯಲ್ಲಿರುವ ಮನೆಯು 14,866 ಚದರ ಅಡಿಗಳನ್ನು ವ್ಯಾಪಿಸಿದೆ. ಎಲ್ಲರಿಗೂ ತಿಳಿದಿರುವಂತೆ ಪ್ರಖ್ಯಾತ ಲೋಧಾ ಗ್ರೂಪ್ ಅಭಿವೃದ್ಧಿಪಡಿಸಿದ ಲೋಧಾ ಸೀ-ಫೇಸ್ ಯೋಜನೆಯು ಮುಂಬೈನ ಅತ್ಯಂತ ಬೇಡಿಕೆಯ ಅಪಾರ್ಟ್ ಮೆಂಟ್ ಗಳಲ್ಲಿ ಒಂದಾಗಿದೆ. ಇನ್ನು ಮೂಲಗಳ ಪ್ರಕಾರ ಸೀಮಾ ಸಿಂಗ್ ಅವರು ತನ್ನ ಖರೀದಿ ಪ್ರಕ್ರಿಯೆಯಲ್ಲಿ ಪ್ಯಾಂಟ್ ಹೌಸ್ ಸೇರಿದಂತೆ ಒಪ್ಪಂದದ ಭಾಗವಾಗಿ ಸಿಂಗ್ ಒಂಬತ್ತು ಪಾರ್ಕಿಂಗ್ ಸ್ಥಳಗಳನ್ನು ಪಡೆದುಕೊಂಡಿದ್ದಾರೆ. ಅಲ್ಲದೆ ಆಸ್ತಿಯ ಪ್ರತಿ ಚದರ ಅಡಿ ವೆಚ್ಚವು ರೂ. 1,24,446 ಆಗಿದ್ದು, ಅಲ್ಲದೆ ವಹಿವಾಟು 9.25 ಕೋಟಿ ರೂ. ಸ್ಟ್ಯಾಂಪ್ ಡ್ಯೂಟಿಯನ್ನು ಕೂಡ ಒಳಗೊಂಡಿದೆ.
ಮನೆ ಸ್ವಾಧೀನ ಯಾವಾಗ?
ಮೂಲಗಳ ಪ್ರಕಾರ, ಮನೆ ಸ್ವಾಧೀನದ ದಿನಾಂಕವು 18 ತಿಂಗಳ ಗ್ರೇಸ್ ಅವಧಿ ವಿಸ್ತರಣೆಯೊಂದಿಗೆ 2027ರ ಡಿಸೆಂಬರ್ 31ರಂದು ಆಗಿದೆ. ಮನೆ ಖರೀದಿಗೆ ಈಗಾಗಲೇ ಸೀಮಾ ಸಿಂಗ್ 46.50 ಕೋಟಿ ರೂ. ಪಾವತಿಸಿದ್ದು, ಐಷಾರಾಮಿ ಅಪಾರ್ಟ್‌ಮೆಂಟ್‌ಗೆ ಬಾಕಿ ಹಣವನ್ನು ಕಂತುಗಳಲ್ಲಿ ಪಾವತಿಸದ್ದಾರೆ. ಅದೂ ಅಲ್ಲದೆ ಅಪಾರ್ಟ್‌ಮೆಂಟ್ ಖರೀದಿಗೆ ಅವರು 9.25 ಕೋಟಿ ರೂ. ಸ್ಟ್ಯಾಂಪ್ ತೆರಿಗೆ ಪಾವತಿಸಿದ್ದು, ನೋಂದಣಿ ಶುಲ್ಕ 30,000 ರೂ. ಆಗಿದೆ ಎಂದು ದಾಖಲೆಗಳು ಬಹಿರಂಗಪಡಿಸಿವೆ. ಲೋಧಾ ಸೀ ಫೇಸ್ ಯೋಜನೆಯು ವರ್ಲಿ ಸಮುದ್ರದ ಕಡೆ ಮುಖ ಮಾಡಿದ್ದು, ಐಷಾರಾಮಿ ಕಟ್ಟಡವಾಗಿದೆ. ಅಲ್ಲದೆ ಇದು ಇದು ಬಾಂದ್ರಾ-ವರ್ಲಿ ಸಮುದ್ರ ಸಂಪರ್ಕದ ಹತ್ತಿರದಲ್ಲಿದೆ. ಇನ್ನು ಮನೆ ಖರೀದಿ ಒಪ್ಪಂದದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೆಜೆ ಲೀಗಲ್ ಅಡ್ವೊಕೇಟ್ ಮತ್ತು ಸಲಹೆಗಾರರ ಸಂಸ್ಥಾಪಕ ಮತ್ತು ಸೀಮಾ ಸಿಂಗ್ ಅವರ ಕಾನೂನು ಪ್ರತಿನಿಧಿ ಕುನಾಲ್ ಜೈನ್, ಇಮೇಲ್‌ನಲ್ಲಿ ತಿಳಿಸಲಾದ ವಿಷಯಗಳನ್ನು ನಾವು ಈ ಮೂಲಕ ದೃಢೀಕರಿಸುತ್ತೇವೆ. ಈ ಒಪ್ಪಂದವನ್ನು ಮುಕ್ತಾಯಗೊಳಿಸಲಾಗಿದೆ ಎಂದು ನಾವು ನಿಮಗೆ ತಿಳಿಸಲು ಬಯಸುತ್ತೇವೆ ಎಂದು ತಿಳಿಸಿದ್ದಾರೆ.

ಯಾರಿವರು ಸೀಮಾ ಸಿಂಗ್?
ಇತ್ತೀಚಿಗಿನ ಭಾರತದಲ್ಲಿ ಬಿಲಿಯನೇರ್ ಗಳ ಸಂಖ್ಯೆಯಲ್ಲಿ ಭಾರೀ ಏರಿಕೆ ಕಾಣುತ್ತಿದ್ದು, ಹತ್ತು ಹಲವು ಮಂದಿ ಉದ್ಯಮಗಳ ಆರಂಭಿಸಲು ಯೋಜಿಸುತ್ತಾರೆ. ಸದ್ಯ 185 ಕೋಟಿ ರೂಪಾಯಿ ಮೌಲ್ಯದ ಐಷಾರಾಮಿ ಪೆಂಟ್ ಹೌಸ್ ಖರೀದಿಸಿ ಸುದ್ದಿಯಲ್ಲಿರುವ ಸೀಮಾ ಸಿಂಗ್ ಬಗ್ಗೆ ಹೆಚ್ಚಿನವರು ಗೂಗಲ್ ನಲ್ಲಿ ಸರ್ಚ್ ಮಾಡಲು ಆರಂಭಿಸಿದ್ದಾರೆ ಎನ್ನಲಾಗಿದೆ. ಇನ್ನು ಸೀಮಾ ಸಿಂಗ್ ಯಾರೆಂದು ಹೇಳಿದರೆ ಪ್ರಮುಖ ಔಷಧೀಯ ಕಂಪನಿಯಾದ ಆಲ್ಕೆಮ್ ಲ್ಯಾಬೊರೇಟರೀಸ್ ಸಂಸ್ಥೆಯಲ್ಲಿ ಪ್ರವರ್ತಕರಾಗಿದ್ದಾರೆ. ಇವರ ಕಂಪೆನಿ ಸುಮಾರು 64,278 ಕೋಟಿ ರೂಪಾಯಿಗಳ ಮಾರುಕಟ್ಟೆ ಮೌಲ್ಯವನ್ನು ಹೊಂದಿದೆ. ಅಲ್ಲದೆ ಸಿಂಗ್ ಅವರು ಕಂಪೆನಿಯಲ್ಲಿ 2.16 ಪ್ರತಿಶತ ಪಾಲನ್ನು ಹೊಂದಿದ್ದಾರೆ. ಮುಖ್ಯವಾಗಿ ಈ ವರ್ಷದ ಜೂನ್ ತಿಂಗಳಲ್ಲಿ ಸಿಂಗ್ ಅವರು ತಮ್ಮ ಷೇರಿನ 0.3 ಭಾಗವನ್ನು ಮಾರಾಟ ಮಾಡುವ ಮೂಲಕ 177 ಕೋಟಿ ರೂ. ಗಳಿಸಿದ್ದರು. ಸೀಮಾ ನಾಯಕತ್ವದಲ್ಲಿ ಆಲ್ಕೆಮ್ ಲ್ಯಾಬೋರೇಟರೀಸ್ ಭಾರತದಲ್ಲಿ ಅಲ್ಲದೆ ವಿದೇಶಗಳಲ್ಲೂ ತನ್ನ ವ್ಯಾಪ್ತಿಯನ್ನು ಹೊಂದಿದೆ. ಕಂಪೆನಿಯು ಜೆನೆರಿಕ್ ಔಷಧಿಗಳು ಮತ್ತು ಸಕ್ರಿಯ ಔಷಧೀಯ ವಸ್ತುಗಳ ಅಭಿವೃದ್ಧಿ ಮತ್ತು ಮಾರುಕಟ್ಟೆಯ ಮೇಲೆ ಕೂಡ ಕೇಂದ್ರೀಕರಿಸಿದೆ.
ಲೋಧಾ ಕಂಪೆನಿ ಬಗ್ಗೆ
ದೇಶದ ಖ್ಯಾತ ಬಿಲ್ಡರ್ ಗಳಲ್ಲಿ ಒಂದಾಗಿರುವ ಲೋಧಾ ಸಂಸ್ಥೆಯು ತನ್ನ ಪ್ರೀಮಿಯಂ ರಿಯಲ್ ಎಸ್ಟೇಟ್ ಯೋಜನೆಗಳಿಗೆ ಭಾರೀ ಹೆಸರುವಾಸಿಯಾಗಿದೆ. ಅದೂ ಅಲ್ಲದೆ ಮುಂಬೈನಲ್ಲಿ ಈಗಾಗಲೇ ಹತ್ತು ಹಲವು ಯೋಜನೆಗಳನ್ನು ಹೊಂದಿರುವ ಸಂಸ್ಥೆಯು 100 ಮಿಲಿಯನ್ ಚದರ ಅಡಿ ಜಾಗವನ್ನು ಅಭಿವೃದ್ಧಿಪಡಿಸಿದೆ.


Click it and Unblock the Notifications