For Quick Alerts
ALLOW NOTIFICATIONS  
For Daily Alerts

ಯಾರಾಗಲಿದ್ದಾರೆ ಎಸ್‌ಬಿಐನ ಮುಂದಿನ ಎಂಡಿ?

|

ನವದೆಹಲಿ, ಜೂನ್ 1: ಭಾರತದ ಸಾರ್ವಜನಿಕ ಕ್ಷೇತ್ರದ ಬ್ಯಾಂಕಿಂಗ್ ದಿಗ್ಗಜ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಹುದ್ದೆಗೆ ಮುಂದೆ ಯಾರು? ಎನ್ನುವುದು ತೀವ್ರ ಕುತೂಹಲ ಮೂಡಿಸಿದೆ.

ಈ ಹುದ್ದೆಗಾಗಿ ಎಸ್‌ಬಿಐ ನ ಹಿರಿ ತಲೆ ಅಶ್ವಿನಿ ಭಾಟಿಯಾ ಮುಂಚೂಣಿಯಲ್ಲಿದ್ದಾರೆ. ಮುಂದಿನ ಎಸ್‌ಬಿಐ ಎಂಡಿಗೆ ಭಾಟಿಯಾ ಹೆಸರನ್ನು Banks Board Bureau (BBB) ಶಿಫಾರಸು ಮಾಡಿದೆ.

ಭಾಟಿಯಾ ಅವರ ಜೊತೆ BBB ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದ ಎಂಡಿ ಎಂ.ವಿ.ರಾವ್ ಹಾಗೂ ಇಂಡಿಯನ್ ಓವರಸೀಸ್ ಬ್ಯಾಂಕ್ ಎಂಡಿ ಪಿ ಪಿ ಸೇನಗುಪ್ತಾ ಅವರ ಹೆಸರನ್ನೂ ಶಿಫಾರಸು ಮಾಡಿದೆ. ಆದರೆ, ರೇಸ್‌ನಲ್ಲಿ ಭಾಟಿಯಾ ಮುಂಚೂಣಿಯಲ್ಲಿದ್ದಾರೆ.

ಅಶ್ವಿನಿ ಭಾಟಿಯಾ ಯಾರು?

ಅಶ್ವಿನಿ ಭಾಟಿಯಾ ಯಾರು?

ಅಶ್ವಿನಿ ಭಾಟಿಯಾ ಪ್ರಸ್ತುತ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಲಿಮಿಟೆಡ್‌ನ ಮ್ಯೂಚುವಲ್ ಫಂಡ್ ವಿಭಾಗಕ್ಕೆ ಉಪ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ. ಎಸ್‌ಬಿಐನ ಮ್ಯೂಚುಯಲ್ ಫಂಡ್ ವ್ಯವಹಾರಕ್ಕೆ ಸೇರುವ ಮೊದಲು ಭಾಟಿಯಾ ಎಸ್‌ಬಿಐ ಕ್ಯಾಪಿಟಲ್ ಮಾರ್ಕೆಟ್ಸ್ ಲಿಮಿಟೆಡ್‌ನಲ್ಲಿ ನಿರ್ದೇಶಕರಾಗಿದ್ದರು.

ಚಲ್ಲಾ ಶ್ರೀನಿವಾಸಲು ಶೆಟ್ಟಿ

ಚಲ್ಲಾ ಶ್ರೀನಿವಾಸಲು ಶೆಟ್ಟಿ

ಪ್ರಸ್ತುತ ಎಸ್‌ಬಿಐ ನ ಎಂಡಿಯಾಗಿ ಚಲ್ಲಾ ಶ್ರೀನಿವಾಸಲು ಶೆಟ್ಟಿ ಅವರು ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ಅವಧಿ ಜೂನ್ 30 ಕ್ಕೆ ಅಂತ್ಯಗೊಳ್ಳಲಿದೆ. ಮೂರು ವರ್ಷದ ಅವಧಿಗೆ ಎಂಡಿ ಆಗಿದ್ದರು.

2016 ರಲ್ಲಿ BBB ರಚನೆಯಾಗಿತ್ತು
 

2016 ರಲ್ಲಿ BBB ರಚನೆಯಾಗಿತ್ತು

Banks Board Bureau ವನ್ನು ಪ್ರಧಾನಿ ಮೋದಿ ಅವರು 2016 ರಲ್ಲಿ ರಚಿಸಿದ್ದರು. ಈ ಬ್ಯೂರೋ ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳಿಗೆ ಮುಖ್ಯಸ್ಥರನ್ನು ನೇಮಿಸುತ್ತದೆ. ಮೇ 30 ರಂದು ರಾಷ್ಟ್ರೀಕೃತ ಬ್ಯಾಂಕುಗಳ 20 ಅಭ್ಯರ್ಥಿಗಳೊಂದಿಗೆ ಸಂವಹನ ನಡೆಸಿದ ಬ್ಯೂರೋ ಸದಸ್ಯರು ಅಶ್ವಿನಿ ಭಾಟಿಯಾ, ಎಂ.ವಿ.ರಾವ್ ಮತ್ತು ಪಿ.ಪಿ.ಸೆನ್‌ಗುಪ್ತಾ ಅವರ ಶಿಫಾರಸು ಮಾಡಿದ್ದಾರೆ.

ಸಂಪುಟದ ನೇಮಕಾತಿ ಸಮಿತಿಯಿಂದ ನಿರ್ಧಾರ

ಸಂಪುಟದ ನೇಮಕಾತಿ ಸಮಿತಿಯಿಂದ ನಿರ್ಧಾರ

ಪ್ರಸಕ್ತ ಹಣಕಾಸು ವರ್ಷದಲ್ಲಿ ಸಾರ್ವಜನಿಕ ವಲಯದ ಬ್ಯಾಂಕುಗಳ ಮುಖ್ಯಸ್ಥರನ್ನು ನೇಮಿಸುವ ಪ್ರಕ್ರಿಯೆಯನ್ನು ಸರ್ಕಾರ ಪೂರ್ಣಗೊಳಿಸಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಂಪುಟದ ನೇಮಕಾತಿ ಸಮಿತಿಯು ನೇಮಕಾತಿ ಕುರಿತು ನಿರ್ಧಾರ ತೆಗೆದುಕೊಳ್ಳಲಿದೆ.

English summary

Who Is The State Bank Of Indias Next MD

Who Is The SBI Next MD? Ashwani Bhatia is the nominate for SBI MD Post By Banks Board Bureau (BBB).
Story first published: Monday, June 1, 2020, 20:32 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X