ಜೂನ್ ತಿಂಗಳಿನಲ್ಲಿ ಚಿಲ್ಲರೆ ಹಣದುಬ್ಬರ ಇಳಿಕೆ ದಾಖಲಾದ ಬಳಿಕ ಸಗಟು ಹಣದುಬ್ಬರ (ವೋಲ್‌ಸೇಲ್) ಕೂಡ ಇಳಿಕೆಯಾಗಿದ್ದು ಶೇಕಡಾ 12.07ಕ್ಕೆ ತಲುಪಿದೆ. ಮೇ ತಿಂಗಳಿನಲ್ಲಿ ಸಗಟು ಹಣದುಬ್ಬರವು ಶೇ. 12.94ರಷ್ಟು ದಾಖಲಾಗಿತ್ತು.
ಕಳೆದ ತಿಂಗಳಿನಲ್ಲಿ ಸಗಟು ಹಣದುಬ್ಬರ ಇಳಿಕೆಯಾದರೂ ಕೂಡ ಇನ್ನೂ ಶೇಕಡಾ 12.07ರಷ್ಟು ಉಳಿದಿರುವುದು ಕಳವಳಕ್ಕೆ ಕಾರಣವಾಗಿದೆ. ಕಳೆದ ತಿಂಗಳು ಕಚ್ಚಾ ತೈಲ ಮತ್ತು ಆಹಾರ ಬೆಲೆಯು ಹೆಚ್ಚು ಏರಿಕೆಯಾಗದೆ ಇರುವುದರಿಂದ ಸಗಟು ಹಣದುಬ್ಬರ ಇಳಿಕೆಗೆ ಕಾರಣವಾಗಿದೆ.

ಜೂನ್ ತಿಂಗಳಿನಲ್ಲಿ ಹಣದುಬ್ಬರ ಕಡಿಮೆಯಾಗುವ ಮುನ್ನ ಸತತ ಐದು ತಿಂಗಳವರೆಗೆ ಸಗಟು ಹಣದುಬ್ಬರ ಏರಿಕೆಯಾಗಿದೆ. ತಯಾರಿಸಿದ ಉತ್ಪನ್ನಗಳ ಬೆಲೆಗಳು ಏರುತ್ತಿದ್ದರೂ, ಆಹಾರ ಪದಾರ್ಥಗಳು ಮತ್ತು ಕಚ್ಚಾ ತೈಲ ಬೆಲೆಗಳು ಮಧ್ಯಮವಾಗಿದ್ದು, ಸಗಟು ಹಣದುಬ್ಬರವನ್ನು ಕಡಿಮೆ ಮಾಡುತ್ತದೆ. ಇಂಧನ ಮತ್ತು ವಿದ್ಯುತ್ ಹಣದುಬ್ಬರವು ಜೂನ್‌ನಲ್ಲಿ ಶೇಕಡಾ 32.83 ಕ್ಕೆ ಇಳಿದಿದ್ದು, ಮೇ ತಿಂಗಳಲ್ಲಿ ಇದು 37.61 ರಷ್ಟಿತ್ತು.
ಮೇ ತಿಂಗಳಲ್ಲಿ ಶೇ 4 ರಿಂದ ಆಹಾರ ಹಣದುಬ್ಬರವು ಜೂನ್‌ನಲ್ಲಿ ಶೇ 3.09 ಕ್ಕೆ ಇಳಿದಿದ್ದರೆ, ಈರುಳ್ಳಿ ಬೆಲೆ ಏರಿಕೆಯಾಗಿದೆ. ತಯಾರಿಸಿದ ಉತ್ಪನ್ನಗಳ ಹಣದುಬ್ಬರವು ಜೂನ್‌ನಲ್ಲಿ ಶೇಕಡಾ 10.88 ರಷ್ಟಿದ್ದರೆ ಹಿಂದಿನ ತಿಂಗಳಿನ ಶೇಕಡಾ 10.83 ರಷ್ಟಿತ್ತು.
ಅಂಕಿಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ(ಎಂಒಎಸ್‌ಪಿಐ) ಸೋಮವಾರ ಬಿಡುಗಡೆ ಮಾಹಿತಿ ಪ್ರಕಾರ ಚಿಲ್ಲರೆ ಹಣದುಬ್ಬರವು ಕೊಂಚ ಇಳಿಕೆಯಾಗಿದ್ದರೂ ಸತತ ಎರಡನೇ ಬಾರಿಗೆ ಶೇಕಡಾ 6ಕ್ಕಿಂತ ಹೆಚ್ಚಾಗಿದೆ. ಈ ಮೊದಲು ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ) ಸತತ ಐದು ತಿಂಗಳಿನಿಂದ ಶೇಕಡಾ 6 ಕ್ಕಿಂತ ಕಡಿಮೆಯಿತ್ತು.


Click it and Unblock the Notifications