ಸ್ಥಿರ ಆದಾಯ ಫಂಡ್ ಅಥವಾ ಆರ್ಬಿಟ್ರೇಜ್ ಫಂಡ್; ಯಾವುದು ಉತ್ತಮ? ಇಲ್ಲಿದೆ ಮಾಹಿತಿ

ದೀರ್ಘಾವಧಿಗೆ ಹಣ ತೊಡಗಿಸಲು ಹೆಚ್ಚು ಬಡ್ಡಿದರ ನೀಡುವ ಫಿಕ್ಸೆಡ್ ಡಿಪಾಸಿಟ್ ಯೋಜನೆಗಳು ಬಹಳ ಸೂಕ್ತವಾಗಿವೆ. ಆದರೆ ಕೋವಿಡ್-19 ಬರುವ ಮುಂಚೆ ಇದ್ದ ಆಕರ್ಷಕ ಬಡ್ಡಿದರಗಳು ಈಗ ಫಿಕ್ಸೆಡ್ ಡಿಪಾಸಿಟ್‌ಗಳಿಗೆ ಸಿಗುತ್ತಿಲ್ಲ ಎಂಬುದು ಸಹ ಸತ್ಯ. ಇಂಥ ಸಮಯದಲ್ಲಿ ಶೇರುಗಳು ಹಾಗೂ ಮ್ಯೂಚುವಲ್ ಫಂಡ್ ಗಳು ಹೂಡಿಕೆಯ ಮೇಲೆ ಉತ್ತಮ ಪ್ರತಿಫಲ ನೀಡುವ ಸಾಧನಗಳಾಗಿ ಹೊರಹೊಮ್ಮುತ್ತಿವೆ. ಈ ಹೂಡಿಕೆಗಳು ಬಹಳಷ್ಟು ರಿಸ್ಕ್ ಹೊಂದಿದ್ದು, ಹೂಡಿಕೆಯ ಎಲ್ಲ ಹಂತಗಳಲ್ಲೂ ಅಪಾಯ ಇದ್ದೇ ಇರುತ್ತದೆ.

ಆರ್ಬಿಟ್ರೇಜ್ ಫಂಡ್ ಎಂದರೇನು?

ಆರ್ಬಿಟ್ರೇಜ್ ಫಂಡ್ ಎಂದರೆ ಸ್ಪಾಟ್ ಹಾಗೂ ಫ್ಯೂಚರ್ ಮಾರ್ಕೆಟ್ಗಳಲ್ಲಿ ಇಕ್ವಿಟಿ ಶೇರುಗಳ ತಪ್ಪು ಮೌಲ್ಯೀಕರಣದ ಅವಕಾಶವನ್ನು ಬಳಸಿಕೊಂಡು ಲಾಭಗಳಿಸುವ ಮ್ಯೂಚುವಲ್ ಫಂಡ್ ಗಳಾಗಿವೆ. Present ಹಾಗೂ Future ಸೆಕ್ಯೂರಿಟೀಸ್ ಮಧ್ಯದ ಮೌಲ್ಯಗಳ ಅಂತರದ ಅವಕಾಶವನ್ನು ಬಳಸಿಕೊಂಡು ಹೆಚ್ಚು ಲಾಭ ಗಳಿಸುವುದು ಈ ಫಂಡ್ ಗಳ ಕಾರ್ಯತಂತ್ರವಾಗಿರುತ್ತದೆ. ಫಂಡ್ ಮ್ಯಾನೇಜರ್ ಮೊದಲಿಗೆ ಕ್ಯಾಶ್ ಮಾರುಕಟ್ಟೆಯಿಂದ ಶೇರುಗಳನ್ನು ಖರೀದಿಸುತ್ತಾರೆ ಹಾಗೂ ಅದೇ ಸಮಯದಲ್ಲಿ ಅವುಗಳನ್ನು ಡೆರಿವೇಟಿವ್ಸ್ ಅಥವಾ ಫ್ಯೂಚರ್ಸ್ ಮಾರುಕಟ್ಟೆಗಳಲ್ಲಿ ಮಾರಿಬಿಡುತ್ತಾರೆ. ಹೀಗೆ ಕೊಂಡ ಬೆಲೆ ಹಾಗೂ ಮಾರಾಟದ ಬೆಲೆಯ ನಡುವಿನ ಅಂತರದ ಲಾಭವು ನಿಮಗೆ ಸಿಗುತ್ತದೆ.

ಆರ್ಬಿಟ್ರೇಜ್ ಫಂಡ್ ಲಾಭ ಗಳಿಸುವುದು ಹೇಗೆ?

ಶೇರ್ ಟ್ರೇಡಿಂಗ್ ಮಾಡುವವರು ಸಾಮಾನ್ಯವಾಗಿ ಶೇರು ಮಾರುಕಟ್ಟೆಯಿಂದ ಶೇರುಗಳನ್ನು ಖರೀದಿಸುತ್ತಾರೆ ಹಾಗೂ ನಂತರ ಫ್ಯೂಚರ್ ಮಾರುಕಟ್ಟೆಯಲ್ಲಿ ಅವನ್ನು ಹೆಚ್ಚಿನ ಬೆಲೆಗೆ ಮಾರುತ್ತಾರೆ. ಈ ವ್ಯವಹಾರದ ಮೂಲಕ ಅವರು ಲಾಭ ಗಳಿಸುತ್ತಾರೆ. ಇನ್ನು ಆರ್ಬಿಟ್ರೇಜ್ ಫಂಡ್ ಬಗ್ಗೆ ನೋಡುವುದಾದರೆ, ಆರ್ಬಿಟ್ರೇಜ್ ಫಂಡ್ ಗಳು ಇಕ್ವಿಟಿಗಳ ಮೇಲೆ ಗುರಿಯನ್ನು ಹೊಂದಿರುವ ಹೈಬ್ರಿಡ್ ಫಂಡ್ಗಳಾಗಿದ್ದು, ಸಾಮಾನ್ಯವಾಗಿ ಮನಿ ಮಾರ್ಕೆಟ್ ಹಾಗೂ ಅಲ್ಪಾವಧಿ ಡೆಬ್ಟ್ ಫಂಡ್ ಗಳಲ್ಲಿ ಹಣ ಹೂಡುತ್ತವೆ. ಹೀಗಾಗಿ ಮಾರುಕಟ್ಟೆಗಳಲ್ಲಿ ಅತಿ ಹೆಚ್ಚು ಏರಿಳಿತಗಳು ಉಂಟಾದಾಗ ಆರ್ಬಿಟ್ರೇಜ್ ಫಂಡ್ಗಳು ಇತರ ಎಲ್ಲ ಇಕ್ವಿಟಿ ಆಧರಿತ ಹೈಬ್ರಿಡ್ ಫಂಡ್ಗಳಿಗಿಂತರ ಹೆಚ್ಚಿನ ಲಾಭ ಮಾಡಿಕೊಳ್ಳುತ್ತವೆ. ಆದರೆ, ಮಾರುಕಟ್ಟೆಗಳಲ್ಲಿ ಏರಿಳಿತಗಳ ಪ್ರಮಾಣ ಕಡಿಮೆ ಇರುವಾಗ ಮಾತ್ರ ಕಡಿಮೆ ಅಪಾಯದ ಡೆಬ್ಟ್ ಫಂಡ್ಗಳು ಹೆಚ್ಚು ಸುರಕ್ಷಿತ. ಆದಾಯ ಹಾಗೂ ತೆರಿಗೆ ದಕ್ಷತೆ ವಿಷಯದಲ್ಲಿ ಆರ್ಬಿಟ್ರೇಜ್ ಫಂಡ್ಗಳು ಸ್ಥಿರ ಆದಾಯ ಫಂಡ್ಗಳಿಗಿಂತ ಉತ್ತಮ ಕಾರ್ಯಕ್ಷಮತೆಯನ್ನು ತೋರುತ್ತವೆ. ಮೂರರಿಂದ ಆರು ತಿಂಗಳುಗಳವರೆಗೆ ಅಲ್ಪಾವಧಿಗೆ ಹೆಚ್ಚುವರಿ ಹಣ ಹೂಡಿಕೆ ಮಾಡಲು ಆರ್ಬಿಟ್ರೇಜ್ ಫಂಡ್‌ಗಳು ಸೂಕ್ತವಾಗಿವೆ.

Explainer: ಸ್ಥಿರ ಆದಾಯ ಫಂಡ್ ಮತ್ತು ಆರ್ಬಿಟ್ರೇಜ್ ಫಂಡ್

ಆರ್ಬಿಟ್ರೇಜ್ ಫಂಡ್ ಹಾಗೂ ಸ್ಥಿರ ಠೇವಣಿ ಫಂಡ್‌ಗಳ ಹೋಲಿಕೆ

ಸ್ಥಿರ ಠೇವಣಿ ಫಂಡ್‌ಗಳಿಗೆ ಹೋಲಿಸಿದರೆ ಆರ್ಬಿಟ್ರೇಜ್ ಫಂಡ್‌ಗಳು ತುಂಬಾನೇ ರಿಸ್ಕಿ. ಆದಾಗ್ಯೂ ಆರ್ಬಿಟ್ರೇಜ್ ಫಂಡ್ ಗಳ ಆದಾಯ ಉತ್ತಮವಾಗಿರುತ್ತದೆ, ಆದರೆ ಹಾಗಂತ ಆದಾಯ ಬರುವ ಬಗ್ಗೆ ನಿಶ್ಚಿತತೆ ಇರುವುದಿಲ್ಲ. ಸ್ಥಿರ ಠೇವಣಿ ಫಂಡ್‌ಗಳಲ್ಲಿ ಎಷ್ಟು ಆದಾಯ ಬರುತ್ತದೆ ಎಂಬುದನ್ನು ಮೊದಲೇ ತಿಳಿಸಲಾಗಿರುತ್ತದೆ ಹಾಗೂ ಇದು ಖಾತರಿದಾಯಕವಾಗಿರುತ್ತದೆ. ಆರ್ಬಿಟ್ರೇಜ್ ಫಂಡ್ಗಳಿಂದ ಬರುವ ಆದಾಯವು ಮಾರುಕಟ್ಟೆಯ ಸ್ಥಿತಿಗತಿಗಳನ್ನು ಆಧರಿಸಿರುತ್ತದೆ. ಆರ್ಬಿಟ್ರೇಜ್ ಫಂಡ್ ಅಥವಾ ಸ್ಥಿರ ಆದಾಯ ಫಂಡ್‌ನಿಂದ ಅವಧಿಗೂ ಮೊದಲೇ ಹೂಡಿಕೆಯನ್ನು ಹಿಂಪಡೆದರೆ ಹೂಡಿಕೆದಾರನು ನಿರ್ದಿಷ್ಟ ಮೊತ್ತದ ದಂಡವನ್ನು ಪಾವತಿಸಬೇಕಾಗುತ್ತದೆ. ಹೂಡಿಕೆದಾರನು ಆರ್ಬಿಟ್ರೇಜ್ ಫಂಡ್ ಅನ್ನು 1 ರಿಂದ 2 ತಿಂಗಳು ಅಥವಾ 30 ರಿಂದ 60 ದಿನಗಳ ಮಧ್ಯೆ ನಗದೀಕರಣ ಮಾಡಿಕೊಂಡಲ್ಲಿ ಆತ ಎಕ್ಸಿಟ್ ಲೋಡ್ (ನಿರ್ಗಮನ ಶುಲ್ಕ) ಪಾವತಿಸಬೇಕಾಗುತ್ತದೆ. ಸ್ಥಿರ ಠೇವಣಿ ಫಂಡ್‌ಗಳಲ್ಲಿನ ಹೂಡಿಕೆಯನ್ನು ಅವಧಿಗೆ ಮೊದಲೇ ಹಿಂಪಡೆದಲ್ಲಿ ಬ್ಯಾಂಕುಗಳ ನಿಯಮದಂತೆ ದಂಡವನ್ನು ಪಾವತಿಸಬೇಕಾಗುತ್ತದೆ.

ಹೂಡಿಕೆಗೆ ಯಾವುದು ಸೂಕ್ತ?

ಹೂಡಿಕೆದಾರನು ತನಗೆ ಆಯಾ ಸಂದರ್ಭಗಳಲ್ಲಿ ಯಾವ ಬಗೆಯ ಹೂಡಿಕೆ ವಿಧಾನ ಸೂಕ್ತ ಎಂಬುದನ್ನು ಗುರುತಿಸುವುದು ಅಗತ್ಯ. ಹೀಗಾಗಿ ಆರ್ಬಿಟ್ರೇಜ್ ಫಂಡ್ ಅಥವಾ ಸ್ಥಿರ ಠೇವಣಿ ಫಂಡ್ ಹೀಗೆ ಯಾವುದರಲ್ಲಾದರೂ ಹೂಡಿಕೆ ಮಾಡುವ ಮುನ್ನ ತನ್ನ ಅಗತ್ಯತೆಗಳೆನು ಎಂಬುದನ್ನು ಹೂಡಿಕೆದಾರ ನಿರ್ಧರಿಸಬೇಕು. ಆರ್ಬಿಟ್ರೇಜ್ ಫಂಡ್ ಫಂಡ್ಗಳು ಅತಿ ಹೆಚ್ಚು ಬಡ್ಡಿದರ ನೀಡುವುದಾಗಿ ಹೇಳುತ್ತವೆ. ಆದರೆ ಏರಿಳಿತದ ಮಾರುಕಟ್ಟೆಗಳಲ್ಲಿ ಇಂತ ಹೂಡಿಕೆ ತೀರಾ ಅಪಾಯಕಾರಿಯಾಗಿರುತ್ತದೆ ಹಾಗೂ ಆದಾಯ ನಿಶ್ಚಿತವಾಗಿರುವುದಿಲ್ಲ. ಸ್ಥಿರ ಠೇವಣಿ ಫಂಡ್ಗಳಲ್ಲಿ ಅವಧಿ ಮುಗಿಯುವವರೆಗೂ ಹೂಡಿಕೆ ಮುಂದುವರೆಸಿದಲ್ಲಿ ಉತ್ತಮ ಆದಾಯ ಪಡೆಯಬಹುದು.

(ಹೂಡಿಕೆದಾರರಿಗೆ ಎಚ್ಚರಿಕೆ: ಹೂಡಿಕೆಗಳು ಮಾರುಕಟ್ಟೆಯ ಅಪಾಯಕ್ಕೆ ಒಳಪಟ್ಟಿರುತ್ತವೆ. ಹೂಡಿಕೆ ಮಾಡುವ ಮೊದಲು ಎಲ್ಲಾ ದಾಖಲೆಗಳು ಮತ್ತು ಯೋಜನೆಗೆ ಸಂಬಂಧಿಸಿದ ಷರತ್ತುಗಳನ್ನು ಎಚ್ಚರಿಕೆಯಿಂದ ಓದಿ. ಮೇಲೆ ತಿಳಿಸಿದ ಮಾಹಿತಿಯು ಕೇವಲ ಮಾಹಿತಿಗಾಗಿ ಮಾತ್ರ. ಲೇಖನದ ಆಧಾರದ ಮೇಲೆ ಕೈಗೊಂಡ ನಿರ್ಧಾರದ ಪರಿಣಾಮವಾಗಿ ಉಂಟಾದ ಯಾವುದೇ ನಷ್ಟಗಳಿಗೆ ಗ್ರೇನಿಯಮ್ ಇನ್ಫರ್ಮೇಶನ್ ಟೆಕ್ನಾಲಜಿ ಸಂಸ್ಥೆ ಮತ್ತು ಲೇಖಕರು ಜವಾಬ್ದಾರರಾಗಿರುವುದಿಲ್ಲ.)

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+