ಬೆಂಗಳೂರು, ಏಪ್ರಿಲ್ 4: ದುಬಾರಿ ಫೋನು ಎಂಬ ಖ್ಯಾತಿ ಪಡೆದ ಐಫೋನ್ ಜಗತ್ತಿನಾದ್ಯಂತ ದೊಡ್ಡ ಬ್ರಾಂಡ್ ಆಗಿ ಬೆಳೆದು ನಿಂತಿದೆ. ಮೂಲತಃ ಅಮೆರಿಕದ ಐಫೋನ್ ಬ್ರ್ಯಾಂಡ್ ಭಾರತದಲ್ಲಿ ಕೂಡ ಸಖತ್ ಫೇಮಸ್. ಆದರೆ ಇದೇ ಐಫೋನ್ ಇದೀಗ ಸಂಕಷ್ಟಕ್ಕೆ ಸಿಲುಕಿದೆ ಎಂಬ ಆರೋಪವು ಕೇಳಿ ಬಂದಿದೆ. ದಿಢೀರ್ ಐಫೋನ್ ಬಳಕೆದಾರರಿಗೆ ಎಚ್ಚರಿಕೆಯ ಸಂದೇಶ ನೀಡಲಾಗಿದೆ.
ಲಕ್ಷ ಲಕ್ಷ ಬೆಲೆ ಬಾಳುವ ಐಫೋನ್ ಅಥವಾ ಆಪಲ್ ಕಂಪನಿ ಉತ್ಪನ್ನ ಖರೀದಿ ಮಾಡುವ ಗ್ರಾಹಕರಿಗೆ ಸಾಕಷ್ಟು ಹಣ ಬೇಕಾಗುತ್ತದೆ. ಈ ಕಾರಣಕ್ಕೆ ಇದು ಬಡವರ ಫೋನ್ ಅಲ್ಲ ಎಂಬ ಮಾತು ಇತ್ತು. ಆದರೆ ಈಗ ದೊಡ್ಡ ದೊಡ್ಡ ಆನ್‌ಲೈನ್ ಕಂಪನಿಗಳು ಡಿಸ್ಕೌಂಟ್ ಕೊಡುವ ಕಾರಣಕ್ಕೆ ಐಫೋನ್ ಹಾಗೂ ಆಪಲ್ ಕಂಪನಿ ಉತ್ಪನ್ನಗಳು ಸುಲಭವಾಗಿ ಸಿಗುತ್ತಿವೆ. ಇದೇ ಕಾರಣಕ್ಕೆ ಜನರು ಕೂಡ ಸಾಕಷ್ಟು ಪ್ರಮಾಣದಲ್ಲಿ ಆಪಲ್ ಕಂಪನಿ ಉತ್ಪನ್ನಗಳನ್ನು ಈಗ ಖರೀದಿ ಮಾಡುತ್ತಿದ್ದಾರೆ. ಇದೇ ಸಮಯದಲ್ಲಿ ಐಫೋನ್ ಬಗ್ಗೆ ಎಚ್ಚರಿಕೆ ಸಂದೇಶ ಸಿಕ್ಕಿದೆ.

ಐಫೋನ್ ಬಳಕೆದಾರರಿಗೆ ಎಚ್ಚರಿಕೆ:
ಈಗ ಭಾರತೀಯ ಕಂಪ್ಯೂಟರ್ ತುರ್ತು ಸ್ಪಂದನ ತಂಡವು (ಸಿಇಆರ್‌ಟಿ-ಇನ್) ಆಪಲ್ ಸಂಸ್ಥೆ ಉತ್ಪನ್ನಗಳ ಬಳಕೆದಾರರಿಗೆ ಎಚ್ಚರಿಕೆ ಸಂದೇಶ ನೀಡಿದೆ. ಅದರಲ್ಲೂ ಹ್ಯಾಕರ್‌ಗಳು ಐಫೋನ್ ದುರ್ಬಳಕೆ ಮಾಡಿಕೊಳ್ಳುವ ಅಪಾಯ ಇದೆ ಎಂದು ಎಚ್ಚರಿಕೆ ನೀಡಲಾಗಿದೆ. ಮೊಬೈಲ್ APP & ವೆಬ್ ಬ್ರೌಸರ್ ಮಧ್ಯೆ ಸಂವಹನಕ್ಕೆ ನೆರವಾಗುವ ವೆಬ್‌ಆರ್‌ಟಿಸಿಯ ತಂತ್ರಾಂಶದಲ್ಲಿನ ಲೋಪ ಕಾರಣಕ್ಕೆ ಈ ರೀತಿ ಹ್ಯಾಕರ್ಸ್ ದುರ್ಬಳಕೆ ಮಾಡಿಕೊಳ್ಳುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ಸಂದೇಶ ನೀಡಲಾಗಿದೆ.
ಯಾವ ಮಾಡೆಲ್‌ನಲ್ಲಿ ಲೋಪ ಇದೆ?
ಅಲ್ಲದೆ ಲೋಪವನ್ನು ಬಳಸಿಕೊಂಡು ಹ್ಯಾಕರ್‌ಗಳು ಸ್ಮಾರ್ಟ್ ಸಾಧನ ಬಳಕೆದಾರರು ನಿರ್ದಿಷ್ಟ ಲಿಂಕ್ ಮೇಲೆ ಕ್ಲಿಕ್ ಮಾಡುವಂತೆ ವಂಚನೆ ಮಾಡಬಲ್ಲರು. ಆ ಮೂಲಕವೇ ಅವರು ಸ್ಮಾರ್ಟ್ ಸಾಧನದ ಮೇಲೆ ದೂರದಿಂದ ನಿಯಂತ್ರಣ ಸಾಧಿಸಬಲ್ಲರು. ಐಫೋನ್ ಎಕ್ಸ್‌ಎಸ್, ಐಪ್ಯಾಡ್ ಪ್ರೊ (12.9 ಇಂಚು, 10.5 ಇಂಚು, 11 ಇಂಚು ಮಾದರಿಗಳು), ಐಪ್ಯಾಡ್ ಏರ್, ಐಪ್ಯಾಡ್ ಮತ್ತು ಐಪ್ಯಾಡ್ ಮಿನಿ ಸಾಧನಗಳು ಐಒಎಸ್ & ಐಪ್ಯಾಡ್‌ಒಎಸ್ 17.4.1 ಕಾರ್ಯಾಚರಣೆಯ ಆವೃತ್ತಿ ಅಥವಾ ಅದಕ್ಕೂ ಹಿಂದಿನ ಆವೃತ್ತಿಗಳಲ್ಲಿ ಇಂತಹ ಲೋಪ ಇದೆ ಎಂದು ಆರೋಪ ಮಾಡಲಾಗಿದೆ.
ವೈ-ಫೈ ಲಿಂಕ್ ಮಾಡುವಾಗ ಹುಷಾರ್!
ಸಾಕಷ್ಟು ಜನ ಫೋನ್ ಬಳಸುವಾಗ ತಮ್ಮ ಸ್ವಂತ ಡೇಟಾ ಅಥವಾ ಇಂಟರ್‌ನೆಟ್ ಬದಲು ವೈ-ಫೈ ಬಳಕೆ ಮಾಡುವುದೇ ಹೆಚ್ಚಾಗಿರುತ್ತದೆ. ಇದೀಗ, ಐಫೋನ್‌ನಲ್ಲಿ ವೈ-ಫೈ ಸೌಲಭ್ಯ ಬಳಸುವವರಿಗೂ ಎಚ್ಚರಿಕೆ ಸಂದೇಶ ನೀಡಲಾಗಿದೆ. ಐಫೋನ್ ಬಳಕೆದಾರರು ಸಾರ್ವಜನಿಕ ವೈ-ಫೈ ಸೌಲಭ್ಯ ಬಳಸಬಾರದು, ಯಾವುದೇ ಅಪ್ಲಿಕೇಶನ್ ಅಥವಾ ತಂತ್ರಾಂಶ ಡೌನ್‌ಲೋಡ್ ಮಾಡಿಕೊಳ್ಳುವಾಗ ಎಚ್ಚರಿಕೆ ವಹಿಸಬೇಕು ಎಂದು ಸೂಚಿಸಲಾಗಿದೆ.


Click it and Unblock the Notifications