ಮಹತ್ವಾಕಾಂಕ್ಷಿಯುಳ್ಳ ಅನೇಕ ಭಾರತೀಯ ಯುವಜನತೆ, ಯುಪಿಎಸ್‌ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿ, ಐಎಎಸ್ ಅಧಿಕಾರಿಗಳಾಗುವ ಕನಸನ್ನು ಕಂಡು ಅದಕ್ಕಾಗಿ ಹಲವು ವರ್ಷಗಳ ಕಠಿಣ ಪರಿಶ್ರಮವನ್ನು ಮುಡಿಪಾಗಿರಿಸುತ್ತಾರೆ. ಒಮ್ಮೆ ಯುಪಿಎಸ್‌ಸಿಯಲ್ಲಿ ಯಶಸ್ಸು ಕಂಡ ಬಳಿಕ ಬೆರಳೆಣಿಕೆಯಷ್ಟು ಮಂದಿ ಮಾತ್ರ ವಿಭಿನ್ನ ಹಾದಿ ತುಳಿಯುತ್ತಾರೆ. ಈ ಪೈಕಿ ಡಾ. ತನು ಜೈನ್ ಕೂಡಾ ಒಬ್ಬರು. 2015 ರ ಬ್ಯಾಚ್‌ನಲ್ಲಿ ಯಶಸ್ವಿಯಾಗಿ ಐಎಎಸ್ ಅಧಿಕಾರಿಯಾಗಿದ್ದರೂ, ಕೆಲ ಸಮಯದ ಬಳಿಕ ವಿಭಿನ್ನ ವೃತ್ತಿಪರ ಹಾದಿಯನ್ನು ಆಯ್ಕೆ ಮಾಡಿಕೊಂಡರು.
ದೆಹಲಿಯ ಸದರ್ ಪ್ರದೇಶದವರಾದ ತನು ಜೈನ್ ಅವರು ಕೇಂಬ್ರಿಡ್ಜ್ ಶಾಲೆಯಲ್ಲಿ ವ್ಯಾಸಂಗ ಮಾಡಿದ ಬಳಿಕ ಸುಭಾರ್ತಿ ವೈದ್ಯಕೀಯ ಕಾಲೇಜಿನಿಂದ BDS (ಬ್ಯಾಚುಲರ್ ಆಫ್ ಡೆಂಟಲ್ ಸರ್ಜರಿ) ನಲ್ಲಿ ಪದವಿ ಪಡೆದರು. ಆದರೆ ದಂತವೈದ್ಯಶಾಸ್ತ್ರವನ್ನು ಅಧ್ಯಯನ ಮಾಡುವ ಸಂದರ್ಭದಲ್ಲಿ ಯುಪಿಎಸ್ಸಿ ಪರೀಕ್ಷೆಗೆ ತಯಾರಿ ಆರಂಭಿಸಿ, ಅಂತಿಮವಾಗಿ ಐಎಎಸ್ ಅಧಿಕಾರಿಯಾಗುವ ಗುರಿ ಸಾಧಿಸಿದರು.

ಮಹತ್ವರವಾದ ಸಾಧನೆಯನ್ನು ಮಾಡಿದ ನಂತರವೂ, ಡಾ. ತನು ಜೈನ್, ಪ್ರೇರಕ ಭಾಷಣ, ಪುಸ್ತಕಗಳನ್ನು ಬರೆಯುವ ಮೂಲಕ ಸಮಾಜಕ್ಕೆ ಹಲವಾರು ಕೊಡುಗೆಗಳನ್ನು ನೀಡುವುದನ್ನು ಮುಂದುವರಿಸಿದರು. ಇಷ್ಟೇ ಅಲ್ಲದೇ ತನು ಅವರು ಸಾಮಾಜಿಕ ಮಾಧ್ಯಮದಲ್ಲೂ ಜನಪ್ರಿಯರಾಗಿದ್ದಾರೆ. Instagram ನಲ್ಲಿ 96k ಗಿಂತ ಹೆಚ್ಚು ಫಾಲೋವರ್ಸ್ ಹೊಂದಿದ್ದಾರೆ.
ಐಎಎಸ್ ಅಧಿಕಾರಿಯಾಗಿ ಏಳೂವರೆ ವರ್ಷಗಳ ಕಾಲ ಯಶಸ್ವಿಯಾಗಿ ಸೇವೆಸಲ್ಲಿಸಿದ ಬಳಿಕ, ತನು ಜೈನ್ ತನ್ನ ನಾಗರಿಕ ಸೇವೆಯ ಕೆಲಸವನ್ನು ತೊರೆದು ಪೂರ್ಣ ಸಮಯವನ್ನು ಬೋಧನೆಗಾಗಿ ಮೀಸಲಿಡುವ ದಿಟ್ಟ ನಿರ್ಧಾರವನ್ನು ತೆಗೆದುಕೊಂಡರು.

ತಾನು ಐಎಎಸ್ ತೊರೆದು ಬೋಧಕಿಯಾಗುವ ತನ್ನ ನಡೆಯನ್ನು ಸಮರ್ಥಿಸಿಕೊಂಡ ಅವರು, " ನಾನು ಏಳೂವರೆ ವರ್ಷಗಳ ಕಾಲ ಶೃದ್ಧೆಯಿಂದ ಕೆಲಸ ಮಾಡಿದ್ದೇನೆ.ನನ್ನ ಕನಸುಗಳು ಈಡೇರಿವೆ. ಆದರೆ UPSC ತಯಾರಿಯ ಸಮಯದಲ್ಲಿ ನಾನು ಸಾಕಷ್ಟು ಕಷ್ಟಗಳನ್ನು ಎದುರಿಸಿದ್ದೇನೆ, ಆದ್ದರಿಂದ ತಯಾರಿ ಪ್ರಕ್ರಿಯೆಯಲ್ಲಿ ಅಭ್ಯರ್ಥಿಗಳು ಎದುರಿಸುವ ತೊಂದರೆಗಳು ನಾನು ಚೆನ್ನಾಗಿ ಬಲ್ಲೆ.
ಆಕಾಂಕ್ಷಿಗಳು ಎದುರಿಸುತ್ತಿರುವ ತೊಂದರೆಗಳನ್ನು ನಾನು ಅರ್ಥಮಾಡಿಕೊಂಡಿದ್ದೇನೆ. ಜೀವನವು ಬೆಳವಣಿಗೆಯ ಅವಕಾಶಗಳನ್ನು ಒದಗಿಸುತ್ತದೆ. ನನ್ನ ಜೀವನದಲ್ಲಿ ಹೊಸ ಅಧ್ಯಾಯವನ್ನು ಮುಂದುವರಿಸಲು ಅಧಿಕಾರ ಹೊಂದಿದ್ದೇನೆ.

ನನ್ನ ಪತಿ ಸಿವಿಲ್ ಸರ್ವಿಸ್‌ನಲ್ಲಿರುವ ಕಾರಣ, ನನಗೆ ಐಎಎಸ್ ಕೋಚಿಂಗ್ ಸೆಂಟರ್ ಅನ್ನು ತೆರೆಯಲು ಹಾಗೂ ಅಭ್ಯರ್ಥಿಗಳಿಗೆ ಬೋಧನೆ ಮಾಡುವ ಅವಕಾಶ ಸಿಕ್ಕಿತು. ನಾನು ಜೀವನದಲ್ಲಿ ಮುಂದೆ ಬರುವ ಎಲ್ಲಾ ಅಪಾಯವನ್ನು ತೆಗೆದುಕೊಳ್ಳಲು ಸಿದ್ಧವಿದ್ದೇನೆ" ಎನ್ನುತ್ತಾರೆ.
ಯುಪಿಎಸ್‌ಸಿ ಎದುರಿಸುವ ತನು ಜೈನ್ ಅವರ ಪ್ರಯಾಣವು ಅದರ ಸವಾಲುಗಳಿಲ್ಲದೆ ಇರಲಿಲ್ಲ. ತಮ್ಮ ಮೊದಲ ಪ್ರಯತ್ನದಲ್ಲಿ, ಾವರು ಕೇವಲ ಎರಡು ತಿಂಗಳ ಪ್ರಯತ್ನದಲ್ಲಿ ಪ್ರಿಲಿಮ್ಸ್ ಪರೀಕ್ಷೆ ಉತ್ತೀರ್ಣರಾದರು. ಆದರೆ ಮುಖ್ಯ ಪರೀಕ್ಷೆಯಲ್ಲಿ ಸಫಲರಾಗಿರಲಿಲ್ಲ.
2014 ರಲ್ಲಿ ಅವರು ತಮ್ಮ ಮೂರನೇ ಪ್ರಯತ್ನದಲ್ಲಿ 648 ನೇ ರ್ಯಾಂಕ್‌ನೊಂದಿಗೆ UPSC ಉತ್ತೀರ್ಣರಾದರು ಮತ್ತು 2015 ರಲ್ಲಿ ಅವರು ಸಶಸ್ತ್ರ ಪಡೆಗಳ ಪ್ರಧಾನ ಕಚೇರಿಯ ಸೇವೆಗೆ ನೇಮಕಗೊಂಡರು. ಒಟ್ಟಾರೆ ತನು ಜೈನ್ ಅವರ ಪಯಣವು ವೈಯಕ್ತಿಕ ಮತ್ತು ವೃತ್ತಿಪರವಾಗಿ ಮಹತ್ವಾಕಾಂಕ್ಷಿಯುಳ್ಳ ಯುವ ಜನತೆಗೆ ಸ್ಪೂರ್ತಿದಾಯಕವಾಗಿದೆ.


Click it and Unblock the Notifications