ಬೈಜೂಸ್‌ನ ಸಿಇಒ ಬೈಜು ರವೀಂದ್ರನ್‌ರ ಬೆಂಗಳೂರಿನಲ್ಲಿರುವ ಕಚೇರಿ ಮತ್ತು ಮನೆಯ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಡೆಸಿದ್ದು ಶೋಧ ಕಾರ್ಯಚರಣೆಯನ್ನು ನಡೆಸಲಾಗಿದೆ. ವಿದೇಶಿ ಹೂಡಿಕೆ ಕಾನೂನುಗಳನ್ನು ಉಲ್ಲಂಘಣೆ ಮಾಡಿದ ಆರೋಪದಲ್ಲಿ ಜಾರಿ ನಿರ್ದೇಶನಾಲಯವು ಬೈಜೂಸ್ ಸಿಇಒ ಮನೆ, ಕಚೇರಿ ಮೇಲೆ ದಾಳಿ ನಡೆಸಿದೆ. ಈ ಸಂದರ್ಭದಲ್ಲಿ ಕೆಲವು ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಜಾರಿ ನಿರ್ದೇಶನಾಲಯ (ಇಡಿ) ಕೆಲವು ದಾಖಲೆಗಳು ಮತ್ತು ಡಿಜಿಟಲ್ ಡೇಟಾವನ್ನು ವಶಕ್ಕೆ ಪಡೆದುಕೊಂಡಿದೆ ಎಂದು ಕೇಂದ್ರ ಸಂಸ್ಥೆ ತಿಳಿಸಿದೆ. ಖಾಸಗಿ ವ್ಯಕ್ತಿಗಳಿಂದ ಹಲವಾರು ದೂರುಗಳು ಬಂದ ಆಧಾರದಲ್ಲಿ ಈ ಕ್ರಮವನ್ನು ಕೈಗೊಳ್ಳಲಾಗಿದೆ ಎಂದೂ ಕೇಂದ್ರ ಸಂಸ್ಥೆಯು ಹೇಳಿದೆ. ಇನ್ನು ಬೈಜು ರವೀಂದ್ರನ್‌ರಿಗೆ ಇಡಿ ಹಲವಾರು ಬಾರಿ ಸಮನ್ಸ್ ನೀಡಿದೆ, ಆದರೆ ರವೀಂದ್ರನ್ ಇಡಿ ಮುಂದೆ ಹಾಜರಾಗಿಲ್ಲ ಎಂದು ಆರೋಪ ಮಾಡಲಾಗಿದೆ.

ಶೋಧದ ಸಂದರ್ಭದಲ್ಲಿ ಬೈಜೂಸ್ ಸಂಸ್ಥೆಯ ಥಿಂಕ್ & ಲರ್ನ್ ಪ್ರೈವೆಟ್ ಲಿಮಿಟೆಡ್ ವಿದೇಶಿ ನೇರ ಹೂಡಿಕೆ (ಎಫ್‌ಡಿಐ) ಆಗಿ 28,000 ಕೋಟಿ ರೂಪಾಯಿಯನ್ನು 2011-2023ರ ನಡುವೆ ಪಡೆದಿದೆ ಎಂಬ ಮಾಹಿತಿ ತಿಳಿದುಬಂದಿದೆ. ಇನ್ನು ಸಂಸ್ಥೆಯು ಸಾಗರೋತ್ತರ ನೇರ ಹೂಡಿಕೆಯ ಹೆಸರಿನಲ್ಲಿ ಅದೇ ಅವಧಿಯಲ್ಲಿ 9,754 ಕೋಟಿ ರೂಪಾಯಿ ಮೊತ್ತವನ್ನು ಬೇರೆ ಬೇರೆ ಸಂಸ್ಥೆಗಳಿಗೆ ರವಾನೆ ಮಾಡಿದೆ ಎಂದು ಕೂಡಾ ಇಡಿ ತಿಳಿಸಿದೆ.
ದಾಳಿಗೆ ಪ್ರಮುಖವಾದ ಕಾರಣ
ದಾಳಿ ವೇಳೆ ಪ್ರಮುಖವಾಗಿ ಮೂರು ಅಂಶಗಳು ಕಂಡು ಬಂದಿದೆ. ಬೈಜೂಸ್ ಸಂಸ್ಥೆಯು ಹಣಕಾಸು ವರ್ಷ 2020-21ರಿಂದ ಹಣಕಾಸು ಸ್ಟೇಟ್‌ಮೆಂಟ್ ಅನ್ನು ಸಿದ್ಧಪಡಿಸಿಲ್ಲ. ಆಡಿಟ್ ಕೂಡಾ ಮಾಡಲಾಗಿದೆ ಎಂಬುವುದು ತಿಳಿದು ಬಂದಿದೆ. ಸಾಮಾನ್ಯವಾಗಿ ಯಾವುದೇ ಸಂಸ್ಥೆಯು ಒಂದು ಹಣಕಾಸು ವರ್ಷದಲ್ಲಿ ಆಡಿಟ್ ಮಾಡಿಕೊಳ್ಳುವುದು ಕಡ್ಡಾಯವಾಗಿದೆ.
ಸಿಇಒ ನಿರಂತರವಾಗಿ ಸಮನ್ಸ್‌ಗೆ ಪ್ರತಿಕ್ರಿಯೆ ನೀಡದೆ ಹಾಜರಾಗದೆ ಇರುವುದು ಕೂಡಾ ಈ ದಾಳಿಗೆ ಕಾರಣವಾಗಿದೆ. ಬೈಜೂಸ್‌ನ ಸಿಇಒ ಬೈಜು ರವೀಂದ್ರನ್ ಇಡಿಯ ಸಮನ್ಸ್‌ಗಳ ಬಳಿಕ ಹಾಜರು ಆಗಿಲ್ಲ. ಯಾವಾಗಲೂ ಕೂಡಾ ತಪ್ಪಿಸಿಕೊಳ್ಳುತ್ತಿದ್ದಾರೆ, ತನಿಖೆಗೆ ಹಾಜರಾಗಿಲ್ಲ ಎಂದು ಜಾರಿ ನಿರ್ದೇಶನಾಲಯ (ಇಡಿ) ಆರೋಪ ಮಾಡಿದೆ. ಮೂರನೇಯದಾಗಿ ವಿದೇಶಿ ನೇರ ಹೂಡಿಕೆ (ಎಫ್‌ಡಿಐ) ಆಗಿ 28,000 ಕೋಟಿ ರೂಪಾಯಿಯನ್ನು ಸಂಸ್ಥೆಯು ಪಡೆದುಕೊಂಡಿದೆ.
ಈ ಹಿಂದೆ ಬೈಜೂಸ್ ವಿರುದ್ಧ ದೂರು
ತನ್ನ ಪತ್ನಿ ದಿವ್ಯಾ ಗೋಕುಲ್‌ನಾಥ್ ಜೊತೆ ಸೇರಿ ರವೀಂದ್ರನ್ ಬೈಜೂಸ್ ಸಂಸ್ಥೆಯನ್ನು 2011ರಲ್ಲಿ ಆರಂಭ ಮಾಡಿದ್ದಾರೆ. ಅದಾದ ಬಳಿಕ ಸಂಸ್ಥೆಯು ಸಾಕಷ್ಟು ಬೆಳವಣಿಗೆಯನ್ನು ಕಂಡಿದೆ. ಆದರೆ ಕಳೆದ ಒಂದು ವರ್ಷದಿಂದ ಬೈಜೂಸ್ ಸಂಸ್ಥೆಯ ವಿರುದ್ಧ ಸಾಕಷ್ಟು ಆರೋಪಗಳು ಕೇಳಿಬಂದಿದೆ. ಈ ಹಿಂದೆ ಬೈಜೂಸ್‌ನ ಹಳೆ ಉದ್ಯೋಗಿಗಳು ಹಾಗೂ ಪೋಷಕರು ಹಲವಾರು ಆರೋಪಗಳನ್ನು ಮಾಡಿದ್ದರು.
ಈ ಹಿಂದೆ ಬೈಜೂಸ್ ಆಪ್‌ನಲ್ಲಿ ಪೋಷಕರಿಗೆ ಆಮಿಷ ಒಡ್ಡಲಾಗಿದೆ ಹಾಗೂ ಸಾಲ ಒಪ್ಪಂದಗಳನ್ನು ಕೂಡಾ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಇದಕ್ಕೆ ಸಂಬಂಧಿಸಿ ಭಾರತದ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಬೈಜೂಸ್‌ನ ಸಿಇಒ ರವೀಂದ್ರನ್‌ಗೆ ಸಮನ್ಸ್ ನೀಡಿದೆ. ಬೈಜೂಸ್ ಆರ್ಥಿಕ ನಷ್ಟ ಕಾಣುತ್ತಿರುವ ನಡುವೆಯೇ ಸಂಸ್ಥೆಯ ವಿರುದ್ಧ ಹಲವಾರು ಆರೋಪಗಳು ಕೇಳಿಬಂದಿದೆ.
ಬೈಜೂಸ್‌ನಲ್ಲಿ ಸಾಲ ನೀಡುವ ಒಪ್ಪಂದಗಳನ್ನು ಮಾಡಲಾಗುತ್ತಿದೆ. ಪೋಷಕರಿಗೆ ಆಮಿಷ ಒಡ್ಡಲಾಗುತ್ತಿದೆ. ಹಾಗೆಯೇ ಉದ್ಯೋಗಿಗಳ ಮೇಲೆ ದೌರ್ಜನ್ಯ ನಡೆಯುತ್ತಿದೆ ಎಂಬ ಆರೋಪಗಳು ಕೇಳಿಬಂದಿದೆ. ಬೈಜೂಸ್‌ನಲ್ಲಿ ಕೋರ್ಸ್‌ಗಳನ್ನು ಖರೀದಿ ಮಾಡುವಂತೆ ಒತ್ತಡ ಹೇರಲಾಗುತ್ತಿದೆ. ಸಾಲ ಒಪ್ಪಂದಗಳನ್ನು ಮಾಡಿದ್ದಾರೆ. ದಬ್ಬಾಳಿಕೆ ಮಾಡಿ ಹಣ ಪಾವತಿಸುವಂತೆ ಒತ್ತಾಯಿಸಿದ್ದಾರೆ ಎಂಬ ಆರೋಪ
More From GoodReturns

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ

ಆರ್ಬಿಐ ರೆಪೋ ದರ: ನಿಮ್ಮ ಇಎಂಐ ಹೊರೆ ಹೆಚ್ಚಾಗುತ್ತಾ?



Click it and Unblock the Notifications