ದೇಶದ ಪ್ರತಿಷ್ಠಿತ ಉದ್ಯಮಿಗಳಲ್ಲಿ ಒಬ್ಬರಾಗಿರುವ ಮುಕೇಶ್ ಅಂಬಾನಿ ತಮ್ಮ ಮಗನ ಮದುವೆಗೆ ಭರದ ಸಿದ್ಧತೆ ನಡೆಸಿದ್ದಾರೆ. ದೇಶದಲ್ಲಿ ಇಷ್ಟೋಂದು ಪ್ರಸಿದ್ಧ ಸ್ಥಳಗಳು ಶ್ರೀಮಂತರಿಗೆ ಕೈ ಬೀಸಿ ಕರೆಯುತ್ತಿವೆ. ಅಲ್ಲದೆ ವಿದೇಶಗಳು ಸಹ ಹಣವಂತರನ್ನು ಆಕರ್ಷಿಸುತ್ತಿವೆ. ಆದರೆ ಈ ಸ್ಥಳಗಳನ್ನು ಬಿಟ್ಟು ಜಾಮ್‌ನಗರದಲ್ಲಿ ಏಕೆ ಮದುವೆ ಪೂರ್ವ ಕಾರ್ಯಕ್ರಮ ಏರ್ಪಡಿಸಿದ್ದಾರೆ ಎಂಬ ಪ್ರಶ್ನೆಗಳು ಉದ್ಭವಿಸಿವೆ.
ಮದುವೆ ಪೂರ್ವ ಕಾರ್ಯಕ್ರಮಕ್ಕೆ ಸಿದ್ಧತೆಗಳು ಶರವೇಗದಲ್ಲಿ ನಡೆಯುತ್ತಿವೆ. ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಮಾರ್ಚ್ 1-3 ರಿಂದ ಗುಜರಾತ್‌ನ ಜಾಮ್‌ನಗರದಲ್ಲಿ ತಮ್ಮ ಅದ್ಧೂರಿ ವಿವಾಹಪೂರ್ವ ಕಾರ್ಯಕ್ರಮವನ್ನು ಆಯೋಜಿಸಲಿದ್ದಾರೆ. ಬಾಲಿವುಡ್ ತಾರೆಯರಲ್ಲದೆ, ರಾಜಕೀಯ ವ್ಯಕ್ತಿಗಳು, ದೊಡ್ಡ ಉದ್ಯಮಿಗಳು, ಅಂತರರಾಷ್ಟ್ರೀಯ ಅತಿಥಿಗಳು ಸಹ ದಂಪತಿಗಳ ವಿವಾಹಪೂರ್ವ ಆಚರಣೆಯಲ್ಲಿ ಭಾಗವಹಿಸಲಿದ್ದಾರೆ.

ಜಾಮ್ನಗರವೇ ಏಕೆ?
ಸೆಲೆಬ್ರಟಿಗಳು ಈ ಹಿಂಡು ಜಾಮ್‌ನಗರದಲ್ಲಿ ಜಮಾವಣೆ ಆಗಲಿದೆ. ಹಾಗಿದ್ದರೆ ಜಾಮನ್‌ಗರವನ್ನೇ ಆಯ್ಕೆ ಮಾಡಿದ್ದು ಏಕೆ ಎಂಬ ಪ್ರಶ್ನೆಗೆ ಅನಂತ್ ಅಂಬಾನಿ ಉತ್ತರ ನೀಡಿದ್ದಾರೆ. ಅವರ ಅಜ್ಜಿ ಜಾಮ್ನಗರದಲ್ಲಿ ಜನಿಸಿದರು. ಅಲ್ಲದೆ ಅವರ ಅಜ್ಜ ಧೀರೂಭಾಯಿ ಅಂಬಾನಿ ಮತ್ತು ತಂದೆ ಮುಖೇಶ್ ಅಂಬಾನಿ ತಮ್ಮ ವ್ಯಾಪಾರವನ್ನು ಜಾಮ್‌ನಗರದಿಂದಲೇ ಪ್ರಾರಂಭಿಸಿದರು. ಈ ಕಾರಣಕ್ಕಾಗಿ ಅವರಿಗೆ ಜಾಮ್‌ನಗರದೊಂದಿಗೆ ವಿಶೇಷವಾದ ಬಾಂಧವ್ಯವಿದೆ ಎಂದು ತಿಳಿಸಿದರು.
ವೆಡ್ ಇನ್ ಇಂಡಿಯಾ
ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ಭಾರತದಲ್ಲಿ ಅಂದರೆ 'ವೆಡ್ ಇನ್ ಇಂಡಿಯಾ'ದಲ್ಲಿ ಮದುವೆಯಾಗಲು ಮನವಿ ಮಾಡಿದ್ದರು. ಪ್ರಧಾನಿಯವರ ಈ ಮನವಿಯಿಂದ ಅನಂತ್ ಅಂಬಾನಿ ಬಹಳ ಪ್ರಭಾವಿತರಾಗಿದ್ದಾರೆ. ಈ ಕಾರಣಕ್ಕೆ ದೇಶದಲ್ಲೇ ಮದುವೆಯಾಗಲು ನಿರ್ಧರಿಸಿದ್ದಾರೆ.

ಮೋದಿ ಹೇಳಿದ್ದೇನು?
ಪ್ರಧಾನಿ ನರೇಂದ್ರ ಮೋದಿ ಕಳೆದ ವರ್ಷ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ, ಮದುವೆಗೆ ವಿದೇಶಿ ಸ್ಥಳವನ್ನು ಆಯ್ಕೆ ಮಾಡುವ ದಂಪತಿಗಳಿಗೆ ಭಾರತದಲ್ಲಿ ಮದುವೆಯಾಗುವಂತೆ ಮನವಿ ಮಾಡಿದ್ದರು. ಕೆಲವು ದೊಡ್ಡ ಕುಟುಂಬಗಳು ವಿದೇಶಗಳಲ್ಲಿ ಮದುವೆಗಳನ್ನು ಆಯೋಜಿಸುವ ಪ್ರವೃತ್ತಿಯಿಂದ ನಾನು ತೊಂದರೆಗೀಡಾಗಿದ್ದೇನೆ ಎಂದು ಪ್ರಧಾನಿ ಮೋದಿ ಹೇಳಿದ್ದರು.


Click it and Unblock the Notifications