ಭಾರತ ಸೇರಿದಂತೆ ಇಡೀ ವಿಶ್ವವೇ ಡಿಜಿಟಲ್ ಆಗುತ್ತಿದೆ. ಇದರ ಲಾಭ ಗಳಿಸಲು ಮುಂದಾದ ಅಮೆಜಾನ್, ನೆಟ್ ಫ್ಲೆಕ್ಸ್ ನಂತಹ ಬೃಹತ್ ಕಂಪನಿಗಳೇ ಕೋಟಿ ಕೋಟಿ ರುಪಾಯಿ ನಷ್ಟ ಅನುಭವಿಸುವಂತಾಗಿದೆ. ಕಂಪನಿಗೆ ಒಂದು ರುಪಾಯಿ ನೀಡುವ ಜನರು ಅದರಿಂದ 10 ರುಪಾಯಿಯಷ್ಟು ಅನುಕೂಲ ಪಡೆದುಕೊಳ್ಳುವ ಕೆಲಸ ಮಾಡುತ್ತಿದ್ದಾರೆ.
ಕಳೆದ 2019ರಲ್ಲಿ ಅಮೆಜಾನ್ ಪ್ರೈಮ್ ಮತ್ತು ನೆಟ್ ಫ್ಲೆಕ್ಸ್ ಕಂಪನಿಗಳು ಬರೋಬ್ಬರಿ 64 ಸಾವಿರದ 610 ಕೋಟಿ ರುಪಾಯಿ ನಷ್ಟ ಅನುಭವಿಸಿವೆ ಎಂದು ವರದಿಯಲ್ಲಿ ಹೇಳಲಾಗಿದೆ. ಅಲ್ಲದೇ, ಈ ನಷ್ಟದ ಪ್ರಮಾಣ 2024ರ ವೇಳೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿದೆ. ಅಂದಿನ ಆದಾಯ 8 ಸಾವಿರದ 875 ಕೋಟಿ ರುಪಾಯಿಗೆ ತಗ್ಗುವ ಅಪಾಯವಿದೆ ಎಂದು ಹೇಳಲಾಗುತ್ತಿದೆ.
ಅಮೆಜಾನ್, ನೆಟ್ ಫ್ಲಿಕ್ಸ್ ಕಂಪನಿ ನಷ್ಟಕ್ಕೆ ಕಾರಣ ಏನು?:
ಅಮೆಜಾನ್ ಹಾಗೂ ನೆಟ್ ಫ್ಲಿಕ್ಸ್ ಕಂಪನಿಗಳಿಂದ ಗ್ರಾಹಕರು ಸೇವೆಯನ್ನು ಪಡೆಯಲು ಉದಾಹರಣೆಗೆ 1 ಸಾವಿರ ರುಪಾಯಿ ಪಾವತಿ ಮಾಡುತ್ತಾರೆ. ಅದಕ್ಕಾಗಿ ಗ್ರಾಹಕರಿಗೆ ಕಂಪನಿಯು ಒಂದು ಲಾಗಿನ್ ಐಡಿ- ಪಾಸ್ ವರ್ಡ್ ನೀಡುತ್ತದೆ. ಅದನ್ನು ಬಳಸಿ ಗ್ರಾಹಕರು ಸೇವೆಯನ್ನು ಪಡೆಯಬಹುದು. ಆದರೆ ಜನರು ಇದೀಗ ಈ ಸೇವೆಯನ್ನೇ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಕಂಪನಿ ಲಾಗಿನ್ ಐಡಿ- ಪಾಸ್ ವರ್ಡ್ ಅನ್ನು ಸ್ನೇಹಿತರು, ಸಂಬಂಧಿಕರೊಂದಿಗೆ ಹಂಚಿಕೊಳ್ಳುತ್ತಿದ್ದಾರೆ.

ಹೀಗೆ ಶೇ.31ರಷ್ಟು ಮಂದಿ ಕಂಪನಿ ನೀಡುವ ಲಾಗಿನ್ ಐಡಿ, ಪಾಸ್ ವರ್ಡ್ ಗಳನ್ನು ಶೇರ್ ಮಾಡಿಕೊಂಡಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಈ ಪೈಕಿ 16-24 ವಯಸ್ಸಿನ ಯುವಕರು ಅತಿಹೆಚ್ಚು ಎಂದರೆ ಶೇ.64ರಷ್ಟು ಗ್ರಾಹಕರು ಹೀಗೆ ಬಳಸಿಕೊಂಡಿದ್ದಾರೆ ಎನ್ನಲಾಗಿದೆ.
ಇನ್ನು, 35 ವರ್ಷಕ್ಕಿಂತ ಮೇಲ್ಪಟ್ಟ ಗ್ರಾಹಕರಿಗೆ ನೀಡಿದ ಲಾಗಿನ್ ಐಡಿ - ಪಾಸ್ ವರ್ಡ್ ಗಳು ಶೇ.16ರಷ್ಟು ಶೇರ್ ಆಗಿವೆ ಎಂದು ವರದಿಯಲ್ಲಿ ತಿಳಿಸಿದೆ. ಇದರಿಂದ ಕಂಪನಿಗಳಿಗೆ ಬರುವ ಗ್ರಾಹಕ ಸಂಖ್ಯೆ ಮತ್ತು ಆದಾಯದಲ್ಲಿ ಗಣನೀಯ ಪ್ರಮಾಣದ ಇಳಿಕೆಯಾಗಿದೆ.


Click it and Unblock the Notifications