ಭಾರತೀಯ ರೂಪಾಯಿ ಮಂಗಳವಾರದಂದು ಯುಎಸ್ ಡಾಲರ್ ವಿರುದ್ಧ 77.24 ನಲ್ಲಿ ದಾಖಲೆಯ ಕನಿಷ್ಠ ಮಟ್ಟಕ್ಕೆ ತಲುಪಿದೆ. ನಿರಂತರವಾಗಿ ಯುಎಸ್ ಡಾಲರ್ ಎದುರು ರೂಪಾಯಿ ಕುಸಿತ ಕಾಣುತ್ತಿದೆ. ಸತತ ಮೂರನೇ ದಿನ ರೂಪಾಯಿ ನಷ್ಟದಲ್ಲಿದೆ.
ಸೋಮವಾರದಂದು ರೂಪಾಯಿ ಮೌಲ್ಯವು 54 ಪೈಸೆಗಳಷ್ಟು ಕುಸಿದು ಯುಎಸ್ ಡಾಲರ್ ಎದುರು 77.44 ರ ದಾಖಲೆಯ ಕನಿಷ್ಠ ಮಟ್ಟಕ್ಕೆ ತಲುಪಿದೆ. ಶುಕ್ರವಾರ ರೂಪಾಯಿ 55 ಪೈಸೆ ಕುಸಿದು 76.90ಕ್ಕೆ ತಲುಪಿತ್ತು. ಯುಎಸ್ ಡಾಲರ್ ಎದುರು ರೂಪಾಯಿ ಕುಸಿತದ ಅಪಾಯ ಹೆಚ್ಚುತಲೇ ಇದೆ. ಜಾಗತಿಕ ಕೇಂದ್ರ ಬ್ಯಾಂಕ್ ನಿರೀಕ್ಷೆಗಿಂತ ಅಧಿಕ ದರ ಹೆಚ್ಚಳ ಮಾಡಲಿದೆ ಎಂಬ ಆತಂಕದ ಹಿನ್ನೆಲೆ ಈ ಬೆಳವಣಿಗೆ ಕಂಡು ಬಂದಿದೆ.
ರಾಯಿಟರ್ಸ್ ವರದಿಯ ಪ್ರಕಾರ ಸೋಮವಾರ ಡಾಲರ್ ಎದುರು ಭಾರತೀಯ ರೂಪಾಯಿ ಮೌಲ್ಯ ಸಾರ್ವಕಾಲಿಕ ಕನಿಷ್ಠ 77.41 ಕ್ಕೆ ಕುಸಿದಿದೆ. ಸೋಮವಾರದ ಆರಂಭಿಕ ವಹಿವಾಟಿನಲ್ಲಿ ಯುಎಸ್ ಡಾಲರ್ ವಿರುದ್ಧ ಭಾರತದ ಅಧಿಕೃತ ಕರೆನ್ಸಿ ರೂಪಾಯಿ 51 ಪೈಸೆ ಕುಸಿದು ಸಾರ್ವಕಾಲಿಕ ಕನಿಷ್ಠ ರೂ 77.41 ಕ್ಕೆ ತಲುಪಿದೆ. ರೂಪಾಯಿಯು ಅಮೆರಿಕನ್ ಡಾಲರ್ ಎದುರು 77.17 ರೂಪಾಯಿಯಲ್ಲಿ ವಹಿವಾಟು ಆರಂಭ ಮಾಡಿತು. ಬಳಿಕ 51 ಪೈಸೆಯ ಕುಸಿತವನ್ನು ದಾಖಲಿಸಿತು. ಮಾರ್ಚ್‌ನಲ್ಲಿ ರೂಪಾಯಿ 76.98ರಷ್ಟು ಕುಸಿತ ಕಂಡಿತ್ತು. ಅದಕ್ಕೂ ಅಧಿಕ ರೂಪಾಯಿ ಮೌಲ್ಯ ಸೋಮವಾರ ಇಳಿದಿದೆ. ಹಾಗಾದರೆ ಯುಎಸ್ ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತಕ್ಕೆ ಪ್ರಮುಖ ಕಾರಣವೇನು ಎಂದು ತಿಳಿಯೋಣ ಮುಂದೆ ಓದಿ....
ಬಲವಾದ ಡಾಲರ್
ಡಾಲರ್ ಬಲವಾಗುತ್ತಿದೆ ಎಂದು ಸಂಶೋಧನಾ ವಿಶ್ಲೇಷಕರು ಹೇಳಿದ್ದಾರೆ. ಈಕ್ವಿಟಿ ಮಾರುಕಟ್ಟೆಯಲ್ಲಿ ತೀವ್ರ ಮಾರಾಟ ಮತ್ತು ಹೆಚ್ಚಿದ ಕಚ್ಚಾ ಬೆಲೆಗಳು ಮತ್ತು ದೇಶೀಯ ಹಣದುಬ್ಬರವು ಭಾರತೀಯ ರೂಪಾಯಿ ಕುಸಿತದ ಹಿಂದಿನ ಕಾರಣಗಳಾಗಿವೆ ಎಂದು ಪಿಟಿಐ ವರದಿ ಮಾಡಿದೆ. ಭಾರತೀಯ ರೂಪಾಯಿಯ ಮೌಲ್ಯವು ದಾಖಲೆಯ ಕನಿಷ್ಠ ಮಟ್ಟಕ್ಕೆ ಕುಸಿದಿದೆ. ಬಲವಾದ ಡಾಲರ್ ಭಾರತದ ರೂಪಾಯಿಯನ್ನು ಕುಸಿಯುವಂತೆ ಮಾಡಿದೆ ಎಂದು ವಿಶ್ಲೇಷಕರು ಹೇಳಿದ್ದಾರೆ.
ಈಕ್ವಿಟಿ ಮಾರುಕಟ್ಟೆಯಲ್ಲಿ ತೀವ್ರ ವಹಿವಾಟು
ಯುಎಸ್‌ನಲ್ಲಿ ದರಗಳು ಉತ್ತಮವಾಗಿ ಮಾರ್ಪಟ್ಟ ಬೆನ್ನಲ್ಲೇ ಈಕ್ವಿಟಿ ಮಾರುಕಟ್ಟೆಗಳಲ್ಲಿ ತೀವ್ರ ವಹಿವಾಟು ನಡೆದಿದೆ. ಹೂಡಿಕೆದಾರರು ಮುಂದೆ ಎದುರಾಗುವ ಹಣದುಬ್ಬರವನ್ನು ಹತ್ತಿಕ್ಕಲು ದರ ಹೆಚ್ಚಳದ ಅಗತ್ಯವನ್ನು ಮೌಲ್ಯಮಾಪನ ಮಾಡುವ ಮೂಲಕ ಅಪಾಯವನ್ನು ಎದುರಿಸುತ್ತಾರೆ ಎಂದು ವಿಶ್ಲೇಷಕರು ಹೇಳಿದ್ದಾರೆ.
ದೇಶೀಯ ಹಣದುಬ್ಬರ
ಏರಿದ ಕಚ್ಚಾ ತೈಲ ಬೆಲೆಗಳು ಮತ್ತು ಹೆಚ್ಚುತ್ತಿರುವ ದೇಶೀಯ ಹಣದುಬ್ಬರ, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ (ಆರ್‌ಬಿಐ) ಮೇಲೆ ಹೊರೆ ಹೆಚ್ಚಿಸಿದೆ. ಈ ನಿಟ್ಟಿನಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ರೆಪೋ ದರವನ್ನು ಹೆಚ್ಚಳ ಮಾಡಿದೆ. ಹಣದುಬ್ಬರ ಹೆಚ್ಚಾದಂತೆ ದೇಶೀಯ ಸೊತ್ತಿನಲ್ಲಿ ವಿದೇಶಿ ಹೂಡಿಕೆದಾರರಿಗೆ ಹೂಡಿಕೆಗೆ ಅವಕಾಶ ನೀಡಬೇಕಾದ ಸ್ಥಿತಿಗೆ ದೂಡಬಹುದು ಎಂದು ಕೂಡಾ ವಿಶ್ಲೇಷಕರು ಅಭಿಪ್ರಾಯಿಸಿದ್ದಾರೆ. ಹಣದುಬ್ಬರವೂ ಕೂಡಾ ಡಾಲರ್ ಎದುರು ರೂಪಾಯಿ ಇಳಿಕೆಗೆ ಕಾರಣವಾಗಿದೆ ಎಂದು ಉಲ್ಲೇಖ ಮಾಡಲಾಗಿದೆ.
ಡಾಲರ್ ಹಾಗೂ ರೂಪಾಯಿ
ಸ್ಪಾಟ್ ಮಾರುಕಟ್ಟೆ ವಹಿವಾಟುಗಳು ಉತ್ತಮವಾಗಿ ನಡೆಯಲಿದೆ ಎಂಬ ನಿರೀಕ್ಷೆಯನ್ನು ನಾವು ಹೊಂದಿದ್ದೇವೆ. ಹಾಗೆಯೇ ರೂಪಾಯಿ 77.20 ಮತ್ತು 77.80 ರ ವ್ಯಾಪ್ತಿಯಲ್ಲಿ ಇರಬಹುದು ಎಂದು ನಿರೀಕ್ಷೆ ಇದೆ ಎಂದು ತಜ್ಞರು ಹೇಳುತ್ತಾರೆ. ಮೇ 4 ರಂದು ಆರ್‌ಬಿಐನ ನಿರ್ಧಾರವು ಸ್ವಲ್ಪಮಟ್ಟಿಗೆ ರೂಪಾಯಿಗೆ ಬಲವನ್ನು ನೀಡಿದೆ. ಆದರೆ ಮುಂದೆ ರೂಪಾಯಿ 77.8 ಮಟ್ಟಕ್ಕೆ ದುರ್ಬಲಗೊಳ್ಳಲಿದೆ ಎಂದು ವಿಶ್ಲೇಷಕ ಜೋಸೆಫ್ ಹೇಳಿದ್ದಾರೆ.


Click it and Unblock the Notifications