For Quick Alerts
ALLOW NOTIFICATIONS  
For Daily Alerts

ಸೆನ್ಸೆಕ್ಸ್‌ ಇಂದು 1400 ಪಾಯಿಂಟ್ಸ್ ಕುಸಿಯಲು ಕಾರಣ ಏನು? 2 ಲಕ್ಷ ಕೋಟಿ ರೂ. ಕಳೆದುಕೊಂಡ ಹೂಡಿಕೆದಾರರು

|

ಭಾರತೀಯ ಷೇರುಪೇಟೆ ಸೋಮವಾರ ಲಾಭದ ಬುಕ್ಕಿಂಗ್ ಜೊತೆಗೆ ಭಾರೀ ಕುಸಿತಕ್ಕೆ ಸಾಕ್ಷಿಯಾಗಿದೆ. ಮುಂಬೈ ಷೇರುಪೇಟೆ ಸೆನ್ಸೆಕ್ಸ್ ಆರಂಭಿಕ ವಹಿವಾಟಿನ ವೇಳೆಯಲ್ಲಿ ಶೇಕಡಾ 2.9 ರಷ್ಟು ಅಥವಾ 1400 ಪಾಯಿಂಟ್ಸ್ ಕುಸಿಯುವ ಮೂಲಕ ಆತಂತಕ್ಕೆ ಕಾರಣವಾಗಿತ್ತು.

ಷೇರುಪೇಟೆಯಲ್ಲಿನ ಈ ದಿಢೀರ್ ಕುಸಿತವು ಭಾರತದಲ್ಲಿ ಕೋವಿಡ್ ಪ್ರಕರಣಗಳ ತೀವ್ರ ಏರಿಕೆ ಮತ್ತು ಪಿಎಂಐ ಉತ್ಪಾದನೆಯು ಏಳು ತಿಂಗಳ ಕನಿಷ್ಠ ಮಟ್ಟಕ್ಕೆ ಇಳಿದಿರುವುದು ಪ್ರಮುಖ ಕಾರಣವಾಗಿದೆ.

ಏಷ್ಯಾದ ಮಾರುಕಟ್ಟೆಗಳ ಪ್ರಬಲತೆ ನಡುವೆ ಕುಸಿತ

ಏಷ್ಯಾದ ಮಾರುಕಟ್ಟೆಗಳ ಪ್ರಬಲತೆ ನಡುವೆ ಕುಸಿತ

ಏಷ್ಯಾದ ಪ್ರಮುಖ ಸೂಚ್ಯಂಕಗಳು ಪ್ರಬಲ ವಹಿವಾಟು ನಡೆಸುತ್ತಿರುವಾಗ ಮತ್ತು ಶೇಕಡಾ 0.5 ರಿಂದ 2 ರವರೆಗೆ ಏರಿಕೆಯಾಗುತ್ತಿದ್ದಂತೆಯೂ ಭಾರತೀಯ ಮಾರುಕಟ್ಟೆಗಳಲ್ಲಿ ಕುಸಿತ ಕಂಡುಬಂದಿದೆ.

ಮಾರುಕಟ್ಟೆ ಏಕೆ ಕುಸಿದಿದೆ?

ಮಾರುಕಟ್ಟೆ ಏಕೆ ಕುಸಿದಿದೆ?

ಕೋವಿಡ್-19 ಪ್ರಕರಣಗಳ ತೀವ್ರ ಏರಿಕೆ ಮತ್ತು ಆರ್ಥಿಕ ಚಟುವಟಿಕೆಯ ಮೇಲೆ ಅದರ ಪ್ರಭಾವದ ಬಗೆಗಿನ ಕಳವಳದಿಂದಾಗಿ ದೇಶೀಯ ಸೂಚ್ಯಂಕಗಳು ಇಂದು ಒತ್ತಡಕ್ಕೆ ಒಳಗಾದವು. ಭಾರತವು ಭಾನುವಾರ ಅತಿ ಹೆಚ್ಚು ಕೋವಿಡ್ ಸಂಖ್ಯೆಯನ್ನು ದಾಖಲಿಸಿದ್ದರಿಂದ, ಆರ್ಥಿಕ ಚಟುವಟಿಕೆಯ ಮೇಲೆ ಅದರ ಪ್ರಭಾವದ ಭೀತಿ ಇದೆ.

ಅತಿ ಹೆಚ್ಚು ಆದಾಯ ತಂದುಕೊಂಡುವ ರಾಜ್ಯವೇ ಲಾಕ್‌ಡೌನ್‌

ಅತಿ ಹೆಚ್ಚು ಆದಾಯ ತಂದುಕೊಂಡುವ ರಾಜ್ಯವೇ ಲಾಕ್‌ಡೌನ್‌

ಮಹಾರಾಷ್ಟ್ರದಂತಹ ದೊಡ್ಡ ಕೈಗಾರಿಕೀಕರಣಗೊಂಡ ರಾಜ್ಯವು ವಾರಾಂತ್ಯದಲ್ಲಿ ಲಾಕ್‌ಡೌನ್ ಅನ್ನು ಆರಂಭಿಕ ಕ್ರಮವಾಗಿ ಘೋಷಿಸುವುದರೊಂದಿಗೆ ಮತ್ತು ಹೆಚ್ಚು ಕಠಿಣ ಕ್ರಮಗಳು ಮುಂದುವರಿಯುವ ಸಾಧ್ಯತೆಯ ಸುಳಿವನ್ನು ನೀಡಿರುವುದರಿಂದ, ಹೂಡಿಕೆದಾರರು ಮಾರುಕಟ್ಟೆಯಲ್ಲಿ ಲಾಭದ ಬುಕ್ಕಿಂಗ್‌ಗೆ ಮುಂದಾಗಿದ್ದಾರೆ. ಜೊತೆಗೆ ಕೋವಿಡ್‌ನ ಹೊಸ ಪರಿಣಾಮಗಳು ಮತ್ತು ಚೇತರಿಕೆಯ ವೇಗದ ಬಗ್ಗೆ ಸಾಕಷ್ಟು ಜಾಗರೂಕರಾಗಿರುತ್ತಾರೆ.

ಪಿಎಂಐ ಸೂಚ್ಯಂಕ ಏಳು ತಿಂಗಳ ಕನಿಷ್ಠ ಮಟಕ್ಕೆ ಇಳಿಕೆ

ಪಿಎಂಐ ಸೂಚ್ಯಂಕ ಏಳು ತಿಂಗಳ ಕನಿಷ್ಠ ಮಟಕ್ಕೆ ಇಳಿಕೆ

ಕಳೆದ ತಿಂಗಳಲ್ಲಿ ಕೋವಿಡ್ ಪ್ರಕರಣಗಳ ಹೆಚ್ಚಳವು ಕೈಗಾರಿಕಾ ಮನೋಭಾವದ ಮೇಲೆ ಪರಿಣಾಮ ಬೀರಿತು. ಮಾರ್ಚ್‌ನಲ್ಲಿ ಭಾರತದ ಉತ್ಪಾದನಾ ವಲಯದ ಚಟುವಟಿಕೆ ತೀವ್ರವಾಗಿ ದುರ್ಬಲಗೊಂಡಿತು, ಐಎಚ್‌ಎಸ್ ಮಾರ್ಕಿಟ್ ಇಂಡಿಯಾ ಉತ್ಪಾದನಾ ಖರೀದಿ ವ್ಯವಸ್ಥಾಪಕರ ಸೂಚ್ಯಂಕ (ಪಿಎಂಐ) ಮಾರ್ಚ್‌ನಲ್ಲಿ ಏಳು ತಿಂಗಳ ಕನಿಷ್ಠ 55.4 ಕ್ಕೆ ಇಳಿದಿದೆ.

ಕೋವಿಡ್ -19 ಸಾಂಕ್ರಾಮಿಕ ಪ್ರಕರಣಗಳಲ್ಲಿನ ಹೊಸ ಉಲ್ಬಣದಿಂದಾಗಿ ನಿರ್ಬಂಧಗಳ ಕಾರಣದಿಂದಾಗಿ ಉತ್ಪಾದನಾ ವಲಯದಲ್ಲಿನ ಮಂದಗತಿಯ ಸೂಚನೆಯನ್ನು ಇದು ಸೂಚಿಸುತ್ತದೆ ಮತ್ತು ಏಪ್ರಿಲ್‌ನಲ್ಲಿ ಪರಿಸ್ಥಿತಿ ಹೆಚ್ಚು ಸವಾಲಾಗಿ ಪರಿಣಮಿಸುತ್ತದೆ. ಇದು ಮಾರುಕಟ್ಟೆಯ ಭಾವನೆಯ ಮೇಲೂ ದೊಡ್ಡ ಪರಿಣಾಮ ಬೀರಿತು.

 

ಉದ್ಯಮವಲಯ ಏನು ಹೇಳುತ್ತೆ?

ಉದ್ಯಮವಲಯ ಏನು ಹೇಳುತ್ತೆ?

ಕಳೆದ ವರ್ಷ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಮಾಡಿದಂತೆ ಸರ್ಕಾರವು ಕಠಿಣವಾದ ಲಾಕ್‌ಡೌನ್‌ಗೆ ಹೋಗುವುದಿಲ್ಲ ಹಾಗೂರೆ ಉತ್ಪಾದನಾ ಚಟುವಟಿಕೆಯು ಪರಿಣಾಮ ಬೀರುವುದಿಲ್ಲ ಎಂಬ ಸಾಮಾನ್ಯ ಪ್ರಜ್ಞೆ ಇದ್ದರೂ, ಗ್ರಾಹಕರ ಭಾವನೆ ಮತ್ತು ಬೇಡಿಕೆಯ ಬಗ್ಗೆ ಹೆಚ್ಚುತ್ತಿರುವ ಬಗ್ಗೆ ಕಾಳಜಿ ಇದೆ.

ಉದಾಹರಣೆಗೆ, ಕಳೆದ ಕೆಲವು ತಿಂಗಳುಗಳಿಂದ ವಾಹನ ಮಾರಾಟದ ಸಂಖ್ಯೆಗಳು ಪ್ರಬಲವಾಗಿದ್ದರೂ, ಉದ್ಯಮದ ಒಳಗಿನವರು ಭವಿಷ್ಯದ ಬಗ್ಗೆ ವಿಶ್ವಾಸ ಹೊಂದಿಲ್ಲ.

 

ಮಾರುಕಟ್ಟೆ ಈಗಲೂ ಒತ್ತಡದಲ್ಲಿ ಸಿಲುಕಿದೆಯೇ?

ಮಾರುಕಟ್ಟೆ ಈಗಲೂ ಒತ್ತಡದಲ್ಲಿ ಸಿಲುಕಿದೆಯೇ?

2020 ರಲ್ಲಿ ಇದ್ದಂತೆ ಈಗ ಲಾಕ್‌ಡೌನ್ ತೀವ್ರವಾಗಿರುವುದಿಲ್ಲ ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಕಳೆದ ವರ್ಷ ಕಂಡಂತೆ ಮಾರುಕಟ್ಟೆ ಹೆಚ್ಚು ಏರಿಳಿತ ಕಾಣದಿರಬಹುದು. ಏಕೆಂದರೆ ಕೊರೊನಾವೈರಸ್ ಹೊಸತಲ್ಲ ಮತ್ತು ವ್ಯಾಕ್ಸಿನೇಷನ್ ಚುರುಕಾದ ವೇಗದಲ್ಲಿ ನಡೆಯುತ್ತಿರುವುದರಿಂದ, ಮಾರುಕಟ್ಟೆಯಲ್ಲಿ ಸ್ವಲ್ಪ ಆರಾಮವಿದೆ.

ಅದೇನೆ ಇದ್ದರೂ, ಮಾರುಕಟ್ಟೆಯು ಸದ್ಯ ಚಿಂತೆಯಲ್ಲಿ ಮುಳುಗಿರುವುದು ಸುಳ್ಳಲ್ಲ. ಕೋವಿಡ್-19 ಪ್ರಕರಣಗಳ ಹೆಚ್ಚಳ ಮತ್ತು ಆರ್ಥಿಕ ಚಟುವಟಿಕೆ ಮೇಲೆ ಅದರ ಪರಿಣಾಮ ಬೀರಬಹುದಾದ ಅಂಶಗಳು ಚಿಂತೆಯನ್ನು ಮೂಡಿಸಿದೆ.

 

English summary

Why Sensex Crash Over 1400 Points Today: Here The Details

Sensex down 2.9 per cent in the early trading hours on Monday in line with a sharp rise in Covid cases in India and a decline in manufacturing PMI to a seven-month low.
Story first published: Monday, April 5, 2021, 23:02 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X