ಭಾರತೀಯ ರೈಲ್ವೇ (Indian Railways) ಇದೀಗ ಹೊಸ ಮೈಲಿಗಲ್ಲು ಸ್ಥಾಪಿಸಿದೆ. ಕೊನೆಗೂ ವಂದೇ ಭಾರತ್ ಸ್ಲೀಪರ್ ರೈಲು ಸೇವೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸಿಗ್ನಲ್ ನೀಡಿದ್ದಾರೆ. ಇನ್ನು ಈ ರೈಲು ಸೆಮಿ ಹೈ ಸ್ಪೀಡ್ ರೈಲಾಗಿದ್ದು, ದೀರ್ಘ ದೂರದ, ಓವರ್‌ನೈಟ್ ಪ್ರಯಾಣಕ್ಕಾಗಿ ಬಹಳ ಪ್ರಯೋಜನವಾಗಲಿದೆ. ಈಗಾಗಲೇ ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಅವರು ಜನವರಿ 17, 2026 ರಂದು ದೇಶದ ಮೊದಲ ವಂದೇ ಭಾರತ್ ಸ್ಲೀಪರ್ ರೈಲಿಗೆ (Vande Bharat Sleeper Train) ಪಶ್ಚಿಮ ಬಂಗಾಳದ ಮಾಲ್ಡಾ ಟೌನ್‌ನಲ್ಲಿ ಶನಿವಾರ ಅಧಿಕೃತವಾಗಿ ಚಾಲನೆ ನೀಡಿದರು. ಪಶ್ಚಿಮ ಬಂಗಾಳದ ಹೌರಾದಿಂದ ಅಸ್ಸಾಂನ ಕಾಮಾಖ್ಯದವರೆಗೆ ಸಂಚರಿಸಲಿರುವ ಈ ರೈಲು, 958 ಕಿಲೋಮೀಟರ್ ದೂರವನ್ನು 14 ಗಂಟೆಗಳಲ್ಲಿ ಪ್ರಯಾಣ ಮಾಡಲಿದೆ..

ವಂದೇ ಭಾರತ್ ಸ್ಲೀಪರ್ ರೈಲಿನ ಮೂಲಕ ಪ್ರಯಾಣಿಕರು ರಾತ್ರಿ ಪ್ರಯಾಣವನ್ನು ಹೆಚ್ಚು ಆರಾಮದಾಯಕ ಮತ್ತು ವೇಗವಾಗಿ ತಲುಪಬಹುದು. ಇನ್ನು ಪ್ರಯಾಣಿಕರ ಸುರಕ್ಷತೆ, ಸುಗಮ ಪ್ರಯಾಣ ಸೌಲಭ್ಯ ನೀಡುವುದೇ ಈ ರೈಲಿನ ಮುಖ್ಯ ಉದ್ದೇಶ. ವಂದೇ ಭಾರತ್ ಚೇರ್ ಕಾರ್ ಈಗಾಗಲೇ ಅಸ್ತಿತ್ವದಲ್ಲಿದ್ದರೂ, ರಾತ್ರಿ ಪ್ರಯಾಣಕ್ಕಾಗಿ ಈ ಸ್ಲೀಪರ್ ಮಾದರಿಯನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ ಎಂದು ರೈಲ್ವೆ ಇಲಾಖೆ ಸ್ಪಷ್ಟಪಡಿಸಿದೆ.
ವಂದೇ ಭಾರತ್ ಸ್ಲೀಪರ್ ರೈಲು ಇತರ ಎಕ್ಸ್‌ಪ್ರೆಸ್ ಮತ್ತು ಐಷಾರಾಮಿ ರೈಲುಗಳಿಗಿಂತ ತುಂಬಾನೇ ವಿಭಿನ್ನವಾಗಿದೆ. ಇದರ ಟಿಕೆಟ್ ಬುಕಿಂಗ್ ಮತ್ತು ರಿಯಾಯಿತಿ ನಿಯಮಗಳು ಸಾಮಾನ್ಯ ಎಕ್ಸ್‌ಪ್ರೆಸ್ ಅಥವಾ ಸೂಪರ್‌ಫಾಸ್ಟ್ ರೈಲುಗಳಿಗಿಂತ ವ್ಯತ್ಯಾಸವಾಗಿದೆ.
ರೈಲಿನ ವಿಶೇಷತೆ!
ಹೊಸದಾಗಿ ಆರಂಭಗೊಂಡ ವಂದೇ ಭಾರತ್ ಸ್ಲೀಪರ್ ರೈಲಿನಲ್ಲಿ RAC (Reservation Against Cancellation) ವ್ಯವಸ್ಥೆ ಇಲ್ಲ, ಅಂದರೆ ದೃಢಪಡಿಸದ ಟಿಕೆಟ್‌ನೊಂದಿಗೆ ಪ್ರಯಾಣಿಸಲು ಇದರಲ್ಲಿ ಅವಕಾಶವಿರುವುದಿಲ್ಲ. ಮಹಿಳೆಯರು, ಹಿರಿಯ ನಾಗರಿಕರು, ವಿಭಿನ್ನ ಸಾಮರ್ಥ್ಯದ ವ್ಯಕ್ತಿಗಳು ಹಾಗೂ ಡ್ಯೂಟಿ ಪಾಸ್ ಹೊಂದಿರುವವರಿಗೆ ಮಾತ್ರ ವಿಶೇಷ ಕೋಟಾಗಳು ಲಭ್ಯವಿದ್ದು, ಹಿರಿಯ ರೈಲ್ವೇ ಅಧಿಕಾರಿಗಳು ಸಹ ಪಾಸ್‌ನೊಂದಿಗೆ ಪ್ರಯಾಣಿಸುವ ಅವಕಾಶವಿಲ್ಲ. ಇತರೆ ಯಾವುದೇ ವಿಐಪಿ ಕೋಟಾಗಳು ಅಥವಾ ವಿಶೇಷ ರಿಯಾಯಿತಿಗಳು ಸಹ ಈ ವಂದೇ ಭಾರತ್ ಸ್ಲೀಪರ್ ರೈಲಿನಲ್ಲಿ ಅನ್ವಯಿಸುವುದಿಲ್ಲ ಎಂದು ರೈಲ್ವೆ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಸ್ಲೀಪರ್ ರೈಲಿನ ಬಗ್ಗೆ ಭಾರೀ ಗೊಂದಲ
ಪ್ರಸ್ತುತ, ಈ ರೈಲಿಗೆ ಮೋದಿಯವರು ಹಸಿರು ನಿಶಾನೆ ತೋರಿಸಿದಾಗಿನಿಂದ ಪ್ರಯಾಣಿಕರಲ್ಲಿ ಹಲವು ಪ್ರಶ್ನೆಗಳು ಹುಟ್ಟಿಕೊಂಡಿವೆ. ಅದರಲ್ಲೂ ಟಿಕೆಟ್ ಬುಕ್ ಮಾಡಿದ ನಂತರ ಒಂದು ಟಿಕೆಟ್ ರದ್ದು ಮಾಡಿದರೆ ಹಣ ಮರುಪಾವತಿಯಾಗುತ್ತಾ ಎಂಬುದು ಸಾಮಾನ್ಯ ಗೊಂದಲ.
ರೈಲ್ವೇ ಇಲಾಖೆ ಹೇಳಿದ್ದೇನು?
ವಂದೇ ಭಾರತ್ ಸ್ಲೀಪರ್ ರೈಲು ಟಿಕೆಟ್ ರದ್ದು ಮಾಡಿದರೂ, ಹಣ ರಿಫಂಡ್ ಮಾಡಲಾಗುತ್ತದೆ. ಆದರೆ ವಂದೇ ಭಾರತ್ ಸ್ಲೀಪರ್ ರೈಲಿನ ರದ್ದತಿ ಮತ್ತು ಮರುಪಾವತಿ ನಿಯಮಗಳು ಸಾಮಾನ್ಯ ರೈಲುಗಳಿಗಿಂತ ತುಂಬಾನೇ ಕಠಿಣ ಎಂದು ಹೇಳಲಾಗುತ್ತಿದೆ. ರೈಲು ಹೊರಡುವ ಸಮಯಕ್ಕೆ ಎಷ್ಟು ಗಂಟೆಗಳ ಮೊದಲು ಟಿಕೆಟ್ ರದ್ದುಗೊಳಿಸಲಾಗಿದೆ ಎಂಬುದರ ಮೇಲೆ ಮರುಪಾವತಿ ಮೊತ್ತವು ನಿರ್ಧಾರವಾಗುತ್ತದೆ ಎಂದು ರೈಲ್ವೆ ಇಲಾಖೆ ಸ್ಪಷ್ಟನೆ ನೀಡಿದೆ.
ರೈಲ್ವೆ ಇಲಾಖೆಯು ಈ ರೈಲಿಗಾಗಿ ಮೂರು ಪ್ರಮುಖ ಸಮಯದ ಸ್ಲಾಟ್‌ಗಳನ್ನು ಪ್ರಕಟಿಸಿದೆ. ಈ ಅವಧಿಗಳ ಆಧಾರದ ಮೇಲೆ ಮರುಪಾವತಿ ಮೊತ್ತ ರೈಲ್ವೇ ಇಲಾಖೆ ನಿರ್ಧಾರ ಮಾಡುತ್ತದೆ. ಟಿಕೆಟ್ ರದ್ದುಗೊಳಿಸುವಲ್ಲಿ ವಿಳಂಬ ಮಾಡಿದರೆ, ಹೆಚ್ಚು ಶುಲ್ಕ ಕಡಿತವಾಗುತ್ತದೆ. ಆದ್ದರಿಂದ ಮುಂಚಿತವಾಗಿಯೇ ನಿರ್ಧಾರ ತೆಗೆದುಕೊಳ್ಳುವುದು ಉತ್ತಮ ಎಂದು ಅಧಿಕಾರಿಗಳು ಸಲಹೆ ನೀಡಿದ್ದಾರೆ.
ಯಾವಾಗ ರದ್ದು ಮಾಡಬೇಕು?
ಟಿಕೆಟ್ ಬುಕ್ ಮಾಡಿದ ವಂದೇ ಭಾರತ್ ಸ್ಲೀಪರ್ ಟಿಕೆಟ್ ಅನ್ನು ರೈಲು ಹೊರಡುವ 72 ಗಂಟೆಗಳಿಗಿಂತ ಮೊದಲು ರದ್ದುಗೊಳಿಸಿದರೆ, ಸಂಪೂರ್ಣ ಶುಲ್ಕ ಮರುಪಾವತಿಯಾಗುವುದಿಲ್ಲ. ಒಟ್ಟು ಟಿಕೆಟ್ ಬೆಲೆಯಿಂದ 25% ರದ್ದತಿ ಶುಲ್ಕವನ್ನು ಕಡಿತಗೊಳಿಸಿ, ಉಳಿದ ಮೊತ್ತವನ್ನು ಬ್ಯಾಂಕ್ ಖಾತೆಗೆ ರಿಫಂಡ್ ಮಾಡಲಾಗುತ್ತದೆ ಎಂದು ಹೇಳಲಾಗಿದೆ.
ಆದ್ದರಿಂದ ರೈಲು ಹೊರಡುವ 72 ಗಂಟೆಗಳಿಂದ 8 ಗಂಟೆಗಳ ನಡುವೆ ಟಿಕೆಟ್ ರದ್ದುಗೊಳಿಸಿದರೆ, ಮರುಪಾವತಿ ಮೊತ್ತ ಗಮನಾರ್ಹವಾಗಿ ಕಡಿಮೆಯಾಗುತ್ತದೆ. ಈ ಅವಧಿಯಲ್ಲಿ ರದ್ದುಪಡಿಸಿದರೆ, ಟಿಕೆಟ್‌ನ ಒಟ್ಟು ಶುಲ್ಕದಲ್ಲಿ 50% ಕಡಿತಗೊಳಿಸಲಾಗುತ್ತದೆ ಎಂದು ಹೇಳಲಾಗಿದೆ. ಅಂದರೆ ಕೇವಲ 50% ಹಣ ಮಾತ್ರ ಪಾವತಿಯಾಗುತ್ತದೆ.
More From GoodReturns

NSE ಆಯಿಲ್ ಫ್ಯೂಚರ್ಸ್ ಆರಂಭ: ಹೂಡಿಕೆದಾರರಿಗೆ ಸಿಗಲಿದೆ ಭಾರಿ ಲಾಭ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಸಗಟು ಬೆಲೆ ಸೂಚ್ಯಂಕ: ನಿಮ್ಮ ಜೇಬಿಗೆ ಕಾದಿದೆಯಾ ಶಾಕ್?

ಚಿನ್ನದ ಬೆಲೆ ಏರಿಕೆ: ಅಕ್ಷಯ ತೃತೀಯಕ್ಕೆ ಹೂಡಿಕೆ ಮಾಡುವುದು ಹೇಗೆ?

ನಿಫ್ಟಿ ಏರಿಕೆ: ಈಗಲೇ ಹೂಡಿಕೆ ಮಾಡಬೇಕಾ ಅಥವಾ ಕಾಯಬೇಕಾ?

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಭಾರತೀಯ ಷೇರು ಮಾರುಕಟ್ಟೆ: ಇಂದಿನ ವಹಿವಾಟಿನಲ್ಲಿ ಅಡಗಿದೆ ಅಚ್ಚರಿಯ ತಿರುವು!

ಅಂಬೇಡ್ಕರ್ ಜಯಂತಿ ರಜೆ: ನಿಮ್ಮ ಎಸ್ಐಪಿ ಹಣಕ್ಕೆ ಕಾದಿದೆಯಾ ಸಂಕಷ್ಟ?

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!



Click it and Unblock the Notifications