ಮಹಾಶಿವರಾತ್ರಿ ಹಬ್ಬ ಹಿಂದೂ ಧರ್ಮದ ಪ್ರಮುಖ ಹಬ್ಬವಾಗಿದೆ. ಶಿವನನ್ನು ಪೂಜಿಸುವ ವಿಶೇಷವಾಗಿ ಆರಾಧಿಸುವ ದಿನವಾಗಿದೆ. ನಾಳೆ ಮಹಾ ಶಿವರಾತ್ರಿ ಹಬ್ಬದ ಸಂಭ್ರಮ ಮನೆಮಾಡಲಿದೆ.ಈ ದಿನ ಷೇರು ಹೂಡಿಕೆದಾರರಿಗೆ ನಾಳೆ ಷೇರು ಮಾರುಕಟ್ಟೆ ತೆರೆಯುತ್ತಾ ಅಥವಾ ಮುಚ್ಚುತ್ತಾ ಎಂಬ ಗೊಂದಲವಂತೂ ಇದ್ದೇ ಇರುತ್ತದೆ.ಹಾಗಿದ್ರೆ ನಾಳೆ ಬಿಎಸ್‌ಇ ಮತ್ತು ಎನ್‌ಎಸ್‌ಇ ಮಾರುಕಟೆ ಓಪನ್ ಮಾಡುತ್ತಾ ಎಂಬ ಹೆಚ್ಚಿನ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಯೋಣ ಬನ್ನಿ..
ಹೌದು,ಶಿವರಾತ್ರಿಯ ಹಬ್ಬದಂದು ಷೇರು ಮಾರುಕಟ್ಟೆ ಮುಚ್ಚಿರುತ್ತದೆ.ಎನ್‌ಎಸ್‌ಇ ಮತ್ತು ಬಿಎಸ್‌ಇ ಸೂಚ್ಯಂಕಗಳು ಈಕ್ವಿಟಿ, ಡೆರಿವೇಟಿವ್‌ಗಳು ಮತ್ತು ಎಸ್‌ಎಲ್‌ಬಿ ವಿಭಾಗಗಳಲ್ಲಿ ಯಾವುದೇ ವಹಿವಾಟುಗಳು ಇರುವುದಿಲ್ಲ.ಪ್ರಸಕ್ತ ವರ್ಷದ ಎರಡನೇ ರಜಾ ದಿನವು ಇದಾಗಿದ್ದು,ಷೇರು ಮಾರುಕಟ್ಟೆಯಲ್ಲಿ ಯಾವುದೇ ವಹಿವಾಟು ನಡೆಯುವುದಿಲ್ಲ.

ಮಲ್ಟಿ ಕಮೋಡಿಟಿ ಎಕ್ಸ್‌ಚೇಂಜ್ ನಾಳೆ ಓಪನ್ ಇರುತ್ತೋ ಇಲ್ಲವೋ?
ಮಲ್ಟಿ ಕಮೋಡಿಟಿ ಎಕ್ಸ್‌ಚೇಂಜ್ ಕೂಡ ಬುಧವಾರ ಬೆಳಗ್ಗಿನ ಮತ್ತು ಸಂಜೆಯ ಎರಡೂ ಸೆಷನ್‌ಗಳಲ್ಲಿ ಮುಚ್ಚಬಹುದು.
2025ರಲ್ಲಿ ಷೇರು ಮಾರುಕಟ್ಟೆಗೆ ಎಷ್ಟು ದಿನ ರಜೆ?
2025ರಲ್ಲಿ ಷೇರು ಮಾರುಕಟ್ಟೆ ಒಟ್ಟು 14 ದಿನಗಳು ರಜೆ ಇರಲಿದೆ.ಈ ವರ್ಷ ಅಂದ್ರೆ 2025ರಲ್ಲಿ 14 ದಿನಗಳು ಮಾತ್ರ ಎನ್‌ಎಸ್‌ಇ ಮತ್ತು ಬಿಎಸ್‌ಇ ಮುಚ್ಚಿರಲಿದೆ.
ಮಹಾ ಶಿವರಾತ್ರಿಯಂದು ಷೇರು ಮಾರುಕಟ್ಟೆಗೆ ರಜೆ ಇರುವುದರಿಂದ, ಎನ್‌ಎಸ್‌ಇ ಮತ್ತು ಬಿಎಸ್‌ಇ ಎರಡೂ ವಹಿವಾಟು ಅವಧಿ ಪೂರ್ತಿ ಮುಚ್ಚಿರುತ್ತವೆ.
ನಾಳೆ ಬ್ಯಾಂಕ್‌ಗಳಿಗೆ ರಜೆ:
ಮಹಾ ಶಿವರಾತ್ರಿ ಸಾರ್ವಜನಿಕ ರಜಾದಿನವಾಗಿರುವ ರಾಜ್ಯಗಳಲ್ಲಿನ ಹೆಚ್ಚಿನ ಬ್ಯಾಂಕ್‌ಗಳು ಮುಚ್ಚಲ್ಪಡುತ್ತವೆ. ಆದಾಗ್ಯೂ, ಆನ್‌ಲೈನ್ ಬ್ಯಾಂಕಿಂಗ್ ಮತ್ತು ಮೊಬೈಲ್ ಬ್ಯಾಂಕಿಂಗ್ ಸೇವೆಗಳು ಕಾರ್ಯನಿರ್ವಹಿಸಲಿವೆ. ರಜೆಯನ್ನು ಆಚರಿಸುವ ರಾಜ್ಯಗಳಲ್ಲಿನ ಹೆಚ್ಚಿನ ಕೇಂದ್ರ ಮತ್ತು ರಾಜ್ಯ ಸರ್ಕಾರಿ ಕಚೇರಿಗಳು ಮುಚ್ಚಲ್ಪಡುತ್ತವೆ.
2025 ರ ಮಹಾ ಶಿವರಾತ್ರಿಯಂದು ಶಾಲೆಗಳು ಮತ್ತು ಕಾಲೇಜುಗಳು ಮತ್ತು ಇತರ ಅನೇಕ ಶಿಕ್ಷಣ ಸಂಸ್ಥೆಗಳಿಗೆ ರಜೆ ಇರುತ್ತದೆ.
ಮಹಾಶಿವರಾತ್ರಿ ಆಚರಣೆಗಳು
ಮಹಾಶಿವರಾತ್ರಿ ಹಬ್ಬವನ್ನು ಕತ್ತಲೆ ಮತ್ತು ಅಜ್ಞಾನವನ್ನು ಹೋಗಲಾಡಿಸಿ ಬೆಳಕನ್ನು ಬೆಳೆಸುವ ಸಾಂಕೇತಿಕವಾಗಿ ಈ ಹಬ್ಬವನ್ನು ಆಚರಣೆ ಮಾಡುತ್ತಾರೆ.
ಪೂಜಾ ಕ್ರಮಗಳು:
ಪ್ರಾತಃಕಾಲ ಎದ್ದು ಸ್ನಾನ ಮಾಡುವುದು: ಮಹಾಶಿವರಾತ್ರಿ ಉಪವಾಸ ವ್ರತವನ್ನು ಆರಂಭಿಸುವ ಮೊದಲು, ಪ್ರಾತಃಕಾಲದಲ್ಲಿ ಸ್ನಾನ ಮಾಡಿ ಶುಭ್ರವಾದ ಶ್ವೇತ ವಸ್ತ್ರಗಳನ್ನು ಧರಿಸುವುದು
ಶಿವನ ಪೂಜೆ: ಶಿವಲಿಂಗವನ್ನು ಶುದ್ಧ ಮಾಡಿ ಅಭಿಷೇಕ ಮಾಡಿ ಅಲಂಕಾರ ಮಾಡುವುದು.
ಹಾಲು: ಶಿವಲಿಂಗಕ್ಕೆ ಹಾಲು ಅರ್ಪಿಸುವುದರಿಂದ ದೇವನ ಅನುಗ್ರಹವನ್ನು ಪಡೆಯಲು ಧಾರ್ಮಿಕ ನಂಬಿಕೆ ಇದೆ.
ಬಿಲ್ವಪತ್ರ: ಇದು ಶಿವನಿಗೆ ಸಮರ್ಪಿಸಿದ ಅತ್ಯಂತ ಪ್ರೀತಿ ಸೂಚಕ ಹಾಗೂ ಶುದ್ಧವಾದ ಹಣ್ಣು.
ಶ್ರೀಗಂಧ: ಪೂಜೆಗೆ ಘಮುದಾರವಾದ ಮತ್ತು ಶುಭವಾದ ಶ್ರೀಗಂಧವನ್ನು ಹಚ್ಚುವುದು. ತುಪ್ಪ: ತುಪ್ಪವನ್ನು ಅರ್ಪಿಸುವುದರಿಂದ ಮನಸ್ಸು ಶುದ್ಧಗೊಳ್ಳುತ್ತದೆ ಮತ್ತು ಇದು ದೇವನಿಗೆ ಅತ್ಯಂತ ಪ್ರಿಯವಾಗಿದೆ.
ಸಕ್ಕರೆ: ಸಕ್ಕರೆ ಅರ್ಪಿಸುವುದು ಧಾರ್ಮಿಕವಾಗಿ ಪವಿತ್ರ ಮತ್ತು ಶಿವನ ಭಕ್ತಿಗೆ ಭಾಗ್ಯವನ್ನು ತರುತ್ತದೆ. ಈ ಎಲ್ಲಾ ವಸ್ತುಗಳನ್ನು ಶಿವಲಿಂಗಕ್ಕೆ ಅರ್ಪಿಸಿ, ಭಕ್ತರು ಶ್ರದ್ಧೆಯಿಂದ ಪೂಜೆ ಮಾಡುತ್ತಾರೆ.
ಈ ಪೂಜೆಯ ನಂತರ, ಕೆಲವು ಮಂದಿ ಉಪವಾಸ ವ್ರತವನ್ನು 24 ಗಂಟೆಗಳವರೆಗೆ ಮುಂದುವರೆಸುತ್ತಾರೆ, ಇದರ ಮೂಲಕ ದೈಹಿಕ, ಮನೋಭಾವದ ಶುದ್ಧತೆ ಹಾಗೂ ದೇವನ ಅನುಗ್ರಹವನ್ನು ಪಡೆಯಲು ನಂಬಿಕೆ ಇರುತ್ತದೆ.
ಮಹಾಶಿವರಾತ್ರಿಯ ಮಹತ್ವ
ವರ್ಷದ ಅತ್ಯಂತ ಕತ್ತಲೆಯ ರಾತ್ರಿಯಾದ ಈ ರಾತ್ರಿಯ ಗ್ರಹಗಳ ಸ್ಥಾನಗಳು ಮಾನವ ವ್ಯವಸ್ಥೆಯಲ್ಲಿ ಶಕ್ತಿಯ ಪ್ರಬಲ ನೈಸರ್ಗಿಕ ಉತ್ಕರ್ಷವನ್ನು ಸೃಷ್ಟಿಸುತ್ತವೆ. ರಾತ್ರಿಯಿಡೀ ಎಚ್ಚರವಾಗಿ ಮತ್ತು ಜಾಗೃತವಾಗಿರುವುದು ದೈಹಿಕ ಮತ್ತು ಆಧ್ಯಾತ್ಮಿಕ ಯೋಗಕ್ಷೇಮಕ್ಕೆ ಅಗಾಧ ಪ್ರಯೋಜನವನ್ನು ನೀಡುತ್ತದೆ. ಈ ಹಬ್ಬವು ಪ್ರಕೃತಿಯ ಶಕ್ತಿಗಳನ್ನು ನಮ್ಮ ಯೋಗಕ್ಷೇಮಕ್ಕಾಗಿ ಬಳಸಿಕೊಳ್ಳಲು ನಮಗೆ ಅವಕಾಶವನ್ನು ನೀಡುತ್ತದೆ. ಭಕ್ತರು ರಾತ್ರಿಯಿಡೀ ನಿದ್ರಿಸುವುದನ್ನು ತಪ್ಪಿಸುತ್ತಾರೆ ಮತ್ತು ಶಿವನ ಆಶೀರ್ವಾದವನ್ನು ಪಡೆಯಲು 'ಓಂ ನಮಃ ಶಿವಾಯ' ಮಂತ್ರವನ್ನು ನಿರಂತರವಾಗಿ ಜಪಿಸುತ್ತಾರೆ.ಶಿವನ ಕೃಪೆ ಪಾತ್ರರಾಗುತ್ತಾರೆ ಎಂಬ ನಂಬಿಕೆ ಇದೆ.


Click it and Unblock the Notifications