ಅದಾನಿ ಗ್ರೂಪ್ ಸ್ಟಾಕ್ ಮಾರುಕಟ್ಟೆಯಲ್ಲಿ ವಂಚನೆಯನ್ನು ಮಾಡಿದೆ ಎಂದು ಹಿಂಡನ್‌ಬರ್ಗ್ ವರದಿ ಮಾಡಿದೆ. ಇದಾದ ಬೆನ್ನಲ್ಲೇ ಅದಾನಿ ಗ್ರೂಪ್ ಸ್ಟಾಕ್ ಮಾರುಕಟ್ಟಯೆಲ್ಲಿ ಭಾರೀ ನಷ್ಟವನ್ನು ಕಂಡಿದೆ. ಅದಾನಿ ಗ್ರೂಪ್ ಮಾರುಕಟ್ಟೆ ಮೌಲ್ಯ ಅರ್ಧಕ್ಕೂ ಅಧಿಕ ಇಳಿಕೆಯಾಗಿದೆ. ಈ ಎಲ್ಲ ಬೆಳವಣಿಗೆ ನಡುವೆ ಅದಾನಿ ಗ್ರೂಪ್‌ಗೆ ಸಾಲ ನೀಡುವುದನ್ನು ಮುಂದುವರಿಸಲು ನಾವು ಸಿದ್ಧವಾಗಿದ್ದೇವೆ ಎಂದು ಬ್ಯಾಂಕ್ ಆಫ್ ಬರೋಡಾ ಸಿಇಒ ಸಂಜೀವ್ ಚಡ್ಡಾ ತಿಳಿಸಿದ್ದಾರೆ.
ಹಲವಾರು ಬ್ಯಾಂಕುಗಳು, ಹಣಕಾಸು ಸಂಸ್ಥೆಗಳು ಅದಾನಿ ಗ್ರೂಪ್‌ಗೆ ಸಾಲವನ್ನು ನೀಡುವುದನ್ನು ನಿಲ್ಲಿಸಿದೆ. ಹಲವಾರು ಅಂತಾರಾಷ್ಟ್ರೀಯ ಬ್ಯಾಂಕುಗಳು ಅದಾನಿ ಗ್ರೂಪ್‌ನ ಡಾಲರ್ ಬಾಂಡ್ ಮೇಲಾಧಾರವಾಗಿ ಇಟ್ಟುಕೊಂಡು ಸಾಲ ನೀಡಲಾಗದು ಎಂದು ತಿಳಿಸಿದೆ. ಈ ನಡುವೆ ದೇಶದ ಅತೀ ದೊಡ್ಡ ಬ್ಯಾಂಕ್‌ಗಳಲ್ಲಿ ಒಂದಾದ ಬ್ಯಾಂಕ್ ಆಫ್ ಬರೋಡಾ, ಅದಾನಿ ಗ್ರೂಪ್‌ಗೆ ಸಾಲವನ್ನು ನೀಡುವುದನ್ನು ಮುಂದುವರಿಸಲು ಸಿದ್ಧವಾಗಿದ್ದೇವೆ ಎಂದು ಹೇಳಿದೆ.
"ಅದಾನಿ ಗ್ರೂಪ್‌ಗೆ ಸಾಲವನ್ನು ನೀಡುವುದನ್ನು ನಾವು ಮುಂದುವರಿಸುತ್ತೇವೆ. ಅಂಡರ್‌ರೈಟಿಂಗ್ ಮಾನದಂಡಗಳನ್ನು ಪೂರೈಸಿದರೆ ಸಂಸ್ಥೆಗೆ ಸಾಲವನ್ನು ನೀಡಲಾಗುತ್ತದೆ. ಅದಾನಿ ಸ್ಟಾಕ್‌ಗಳ ಸುತ್ತ ನಡೆಯುವ ಬಗ್ಗೆ ಬ್ಯಾಂಕ್ ಯಾವುದೇ ಚಿಂತೆಯನ್ನು ಮಾಡುವುದಿಲ್ಲ," ಎಂದು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ವ್ಯವಸ್ಥಾಪಕ ನಿರ್ದೇಶಕ ಸಂಜೀವ್ ಚಡ್ಡಾ ಮಾಹಿತಿ ನೀಡಿದ್ದಾರೆ.

ಅದಾನಿ ಗ್ರೂಪ್‌ಗೆ ಮುಂದಿನ ತಿಂಗಳಿನವರೆಗೆ 500 ಮಿಲಿಯನ್ ಡಾಲರ್ ಸಾಲವನ್ನು ನೀಡುವುದನ್ನು ಹಲವಾರು ಬ್ಯಾಂಕುಗಳು ನಿರ್ಬಂಧಿಸಿದೆ. ಇದಾದ ಬೆನ್ನಲ್ಲೇ ಗೌತಮ್ ಅದಾನಿಗೆ ಬೆಂಬಲವಾದ ಹೇಳಿಕೆಯನ್ನು ಬ್ಯಾಂಕ್ ಆಫ್ ಇಂಡಿಯಾ ಸಿಇಒ ನೀಡಿದ್ದಾರೆ. ಜನವರಿಯಲ್ಲಿ ಅದಾನಿ ಗ್ರೂಪ್ ವಿರುದ್ಧ ಹಲವಾರು ಆರೋಪಗಳನ್ನು ಮಾಡಿ ಹಿಂಡನ್‌ಬರ್ಗ್ ವರದಿಯನ್ನು ಪ್ರಕಟಿಸಿದೆ.
ಅದಾನಿ ಗ್ರೂಪ್‌ಗೆ ನೀಡಿದ ಸಾಲ
ಬ್ಯಾಂಕ್ ಆಫ್ ಬರೋಡಾ ಈ ಹಿಂದೆಯೂ ಹಲವಾರು ಬಾರಿ ಅದಾನಿ ಗ್ರೂಪ್‌ಗೆ ಸಾಲವನ್ನು ನೀಡಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವು ಕೂಡಾ (ಎಸ್‌ಬಿಐ) ಅದಾನಿ ಗ್ರೂಪ್‌ಗೆ ಸಾಲವನ್ನು ನೀಡಿದೆ. 270 ಬಿಲಿಯನ್ ರೂಪಾಯಿಗೂ ಅಧಿಕ (3.3 ಬಿಲಿಯನ್ ಡಾಲರ್) ಸಾಲವನ್ನು ಅದಾನಿ ಗ್ರೂಪ್‌ಗೆ ಎಸ್‌ಬಿಐ ನೀಡಿದೆ.
ಒಂದು ವರ್ಷದ ಹಿಂದೆ ಯೋಜನೆಯೊಂದಕ್ಕೆ ಅದಾನಿ ಗ್ರೂಪ್‌ಗೆ 50.7 ಬಿಲಿಯನ್ ರೂಪಾಯಿ ಸಾಲವನ್ನು ನೀಡಿದೆ. ಇದಾದ ಬಳಿಕ ಧಾರವಿ ಡೆಲವಪ್‌ಮೆಂಟ್ ಯೋಜನೆಗೆ ಸಾಲವನ್ನು ವಿಸ್ತರಣೆ ಮಾಡುವ ನಿರ್ಧಾರವನ್ನು ಕೂಡಾ ಬ್ಯಾಂಕ್ ಆಫ್ ಬರೋಡಾ ಮಾಡಿದೆ.
More From GoodReturns

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ



Click it and Unblock the Notifications