ಕಚ್ಚಾ ತೈಲದ ದರವು ಭಾರೀ ಏರಿಕೆಯಾಗುತ್ತಿದೆ. ಈ ನಡುವೆ ಕೇಂದ್ರ ಸರ್ಕಾರವು ಪ್ರತಿ ಟನ್‌ಗೆ 3,500 ರೂಪಾಯಿ (42.56 ಯುಎಸ್‌ಡಿ) ಆಗಿದ್ದ ಕಚ್ಚಾ ತೈಲದ ವಿಂಡ್‌ಫಾಲ್ ತೆರಿಗೆಯನ್ನು ಶೂನ್ಯಕ್ಕೆ ಇಳಿಕೆ ಮಾಡಲು ನಿರ್ಧಾರ ಮಾಡಿದೆ. ಈ ನೂತನ ದರವು ಇಂದಿನಿಂದ ಅಂದರೆ ಮಂಗಳವಾರದಿಂದ (ಏಪ್ರಿಲ್ 4, 2023) ಜಾರಿಗೆ ಬರುತ್ತದೆ. ಇನ್ನು ಇದೇ ಸಂದರ್ಭದಲ್ಲಿ ಡೀಸೆಲ್ ಮೇಲಿನ ರಫ್ತು ಸುಂಕವನ್ನು 50 ಪೈಸೆ ಇಳಿಕೆ ಮಾಡಲಾಗಿದೆ.
ಸೆಂಟ್ರಲ್ ಬೋರ್ಡ್ ಆಫ್ ಇನ್‌ಡೈರೆಕ್ಟ್ ಟ್ಯಾಕ್ಸಸ್ ಆಂಡ್ ಕಸ್ಟಮ್ಸ್ (ಸಿಬಿಐಸಿ) ಈ ನಿರ್ಧಾರವನ್ನು ಪ್ರಕಟಿಸಿದೆ. ಪೆಟ್ರೋಲ್ ಮತ್ತು ಅವಿಯೇಷನ್ ಟರ್ಬೈನ್ ಫ್ಯೂಲ್ (ಎಟಿಎಫ್) ರಫ್ತಿನ ಮೇಲಿನ ಸುಂಕದ ವಿನಾಯಿತಿ ಮುಂದುವರೆದಿದೆ. ಜುಲೈನಲ್ಲಿ ಭಾರತವು ಗ್ಯಾಸೋಲಿನ್, ಡೀಸೆಲ್ ಮತ್ತು ಅವಿಯೇಷನ್ ಟರ್ಬೈನ್ ಫ್ಯೂಲ್ (ಎಟಿಎಫ್) ರಫ್ತುಗಳ ಮೇಲೆ ಕಚ್ಚಾ ತೈಲ ಉತ್ಪಾದಕರ ಸುಂಕಗಳ ಮೇಲೆ ವಿಂಡ್‌ಫಾಲ್ ತೆರಿಗೆಯನ್ನು ವಿಧಿಸಿತ್ತು.

ಅದಾದ ನಂತರ ಖಾಸಗಿ ಸಂಸ್ಕರಣಾಗಾರರು ಅದನ್ನು ದೇಶೀಯವಾಗಿ ಮಾರಾಟ ಮಾಡುವ ಬದಲು ಸಾಗರೋತ್ತರ ಮಾರುಕಟ್ಟೆಗಳಲ್ಲಿ ಮಾರಾಟ ಮಾಡುವ ಮೂಲಕ ಲಾಭವನ್ನು ಗಳಿಸುವ ಉದ್ದೇಶವನ್ನು ಹೊಂದಿದ್ದರು. ಈ ಕಾರಣದಿಂದಾಗಿ ಕೇಂದ್ರ ಸರ್ಕಾರವು ವಿಂಡ್‌ಫಾಲ್ ತೆರಿಗೆಯನ್ನು ವಿಧಿಸಿತ್ತು. ವಿಂಡ್‌ಫಾಲ್ ತೆರಿಗೆಯು ಆರ್ಥಿಕ ವಿಸ್ತರಣೆಯಿಂದ ಲಾಭ ಪಡೆದ ವ್ಯವಹಾರಗಳು ಅಥವಾ ಆರ್ಥಿಕ ವಲಯಗಳ ಮೇಲೆ ಸರ್ಕಾರವು ವಿಧಿಸುವ ಹೆಚ್ಚುವರಿ ತೆರಿಗೆಯಾಗಿದೆ.
ವರದಿಯ ಪ್ರಕಾರ, ಇಂಧನ ಕಂಪನಿಗಳ ಲಾಭದ ಮೇಲೆ ತೆರಿಗೆ ವಿಧಿಸುವ ರಾಷ್ಟ್ರಗಳಿಗೆ ಭಾರತವು ಕಳೆದ ವರ್ಷ ಸೇರಿದೆ. ಹಲವಾರು ದೇಶಗಳು ಲಾಭವನ್ನು ಪಡೆಯು ಸಂಸ್ಥೆಗಳ ಮೇಲೆ ಹೆಚ್ಚುವರಿ ತೆರಿಗೆಯನ್ನು ವಿಧಿಸುತ್ತದೆ. ಭಾರತವು ಕಳೆದ ವರ್ಷ ಜುಲೈನಲ್ಲಿ ಮೊದಲ ಬಾರಿಗೆ ವಿಂಡ್‌ಫಾಲ್ ಲಾಭ ತೆರಿಗೆಯನ್ನು ವಿಧಿಸಿತು. ಆ ಸಮಯದಲ್ಲಿ, ಪ್ರತಿ ಲೀಟರ್‌ಗೆ ರೂಪಾಯಿ 6 (ಪ್ರತಿ ಬ್ಯಾರೆಲ್‌ಗೆ 12 ಯುಎಸ್ ಡಾಲರ್) ರಫ್ತು ಸುಂಕವನ್ನು ಪೆಟ್ರೋಲ್ ಮೇಲೆ ಮತ್ತು ಡೀಸೆಲ್ ಮೇಲೆ ರೂಪಾಯಿ 13 (ಒಂದು ಬ್ಯಾರೆಲ್‌ಗೆ 26 ಯುಎಸ್ ಡಾಲರ್) ವಿಧಿಸಲಾಯಿತು.
ನಂತರ ಸರ್ಕಾರವು ಪೆಟ್ರೋಲ್ ಮೇಲಿನ ರಫ್ತು ತೆರಿಗೆಯನ್ನು ಮೊದಲ ವಿಮರ್ಶೆಯಲ್ಲಿ ರದ್ದುಗೊಳಿಸಿದೆ. ಎಟಿಎಫ್‌ನಲ್ಲಿ ಮಾರ್ಚ್ 4 ರಂದು ಕೊನೆಯ ವಿಮರ್ಶೆಯಲ್ಲಿ ತೆಗೆದುಹಾಕಲಾಯಿತು. ಹಿಂದಿನ ಎರಡು ವಾರಗಳಲ್ಲಿ ಸರಾಸರಿ ತೈಲ ಬೆಲೆಗಳ ಆಧಾರದ ಮೇಲೆ ಪ್ರತಿ ಹದಿನೈದು ದಿನಗಳಿಗೊಮ್ಮೆ ತೆರಿಗೆ ದರಗಳನ್ನು ಪರಿಶೀಲಿಸಲಾಗುತ್ತದೆ. ಪ್ರತಿ ಬ್ಯಾರೆಲ್‌ಗೆ 75 ಯುಎಸ್ ಡಾಲರ್‌ನ ಮಿತಿಗಿಂತ ಹೆಚ್ಚಿನ ಬೆಲೆಯನ್ನು ಪಡೆಯುವ ಯಾವುದೇ ಬೆಲೆಯಲ್ಲಿ ತೈಲ ಉತ್ಪಾದಕರು ಗಳಿಸಿದ ವಿಂಡ್‌ಫಾಲ್ ಲಾಭದ ಮೇಲೆ ಸರ್ಕಾರವು ತೆರಿಗೆಯನ್ನು ವಿಧಿಸುತ್ತದೆ.
ಈ ಹಿಂದೆ ಕೇಂದ್ರ ಸರ್ಕಾರವು ಸ್ಥಳೀಯವಾಗಿ ಉತ್ಪಾದಿಸುವ ಕಚ್ಚಾತೈಲದ ವಿಂಡ್‌ಫಾಲ್ ತೆರಿಗೆಯನ್ನು ಪ್ರತಿ ಟನ್‌ಗೆ 5,050 ರೂಪಾಯಿಯಿಂದ 4,350ಕ್ಕೆ ಇಳಿಸಲಾಗಿದೆ. ಅದಕ್ಕೂ ಮುನ್ನ ಕಚ್ಚಾ ತೈಲದ ವಿಂಡ್‌ಫಾಲ್ ತೆರಿಗೆ ಪ್ರತಿ ಟನ್‌ಗೆ 3,500 ರೂಪಾಯಿಗೆ ಇಳಿಸಿದೆ. ಅದಾದ ಬಳಿಕ ಈಗ ಕಚ್ಚಾ ತೈಲದ ವಿಂಡ್‌ಫಾಲ್ ತೆರಿಗೆಯನ್ನು ಶೂನ್ಯಕ್ಕೆ ಇಳಿಸಿದೆ. ಇನ್ನು ಪ್ರತಿ ದಿನಕ್ಕೆ 1.16 ಮಿಲಿಯನ್ ಬ್ಯಾರೆಲ್‌ಗಳ ಉತ್ಪಾದನೆಯನ್ನು ಕಡಿತಗೊಳಿಸುವುದಾಗಿ ಒಪೆಕ್ಸ್ ಘೋಷಣೆ ಮಾಡಿದೆ. ಇದಾದ ಬಳಿಕ ಸೋಮವಾರದ ವಹಿವಾಟಿನಲ್ಲಿ ಕಚ್ಚಾತೈಲ ದರವು ಸುಮಾರು ಶೇಕಡ 8ರಷ್ಟು ಏರಿಕೆ ಕಂಡಿದೆ. ಈ ಸಮಯಕ್ಕೆ ಕಚ್ಚಾ ತೈಲ ದರವು ಏರಿಕೆಯಾಗಿ, ಪ್ರತಿ ಡಾಲರ್‌ಗೆ 85.80ಗೆ ತಲುಪಿದೆ.


Click it and Unblock the Notifications