ವಿಪ್ರೋ ಸಿಇಒ ಥಿಯೆರ್ರಿ ಡೆಲಾಪೋರ್ಟ್ ವೇತನ ಕೇಳಿದ್ರೆ ಆಶ್ಚರ್ಯವಾಗೋದ್ರಲ್ಲಿ ಅನುಮಾನವಿಲ್ಲ. ಏಕೆಂದರೆ ಭಾರತದ ಇತರೆ ಐಟಿ ಕಂಪನಿಗಳ ಸಿಇಒಗಳಿಗಿಂತ ಹೆಚ್ಚಿನ ವೇತನ ಪಡೆಯುವ ಸಿಇಒ ಇವರಾಗಿದ್ದಾರೆ.
2020-21ರ ಹಣಕಾಸು ವರ್ಷದಲ್ಲಿ ಥಿಯೆರ್ರಿ ಡೆಲಾಪೋರ್ಟ್ ಬರೋಬ್ಬರಿ 8.8 ಮಿಲಿಯನ್ ಡಾಲರ್ ಅಥವಾ ಭಾರತದ ರೂಪಾಯಿಗಳಲ್ಲಿ 64 ಕೋಟಿ ರೂಪಾಯಿ ವೇತನ ಪಡೆದಿದ್ದಾರೆ ಎಂದು ಕಂಪನಿಯು ರೆಗ್ಯುಲೇಟರಿ ಫೈಲಿಂಗ್‌ನಲ್ಲಿ ತಿಳಿಸಿದೆ. ಈ ಮೂಲಕ ಪ್ರತಿಸ್ಪರ್ಧಿ ಕಂಪನಿಗಳಾದ ಇನ್ಫೋಸಿಸ್, ಟಿಸಿಎಸ್‌ನಲ್ಲಿ ಸಿಇಒಗಳಿಗಿಂತ ಅತಿ ಹೆಚ್ಚು ಸಂಭಾವನೆ ಪಡೆಯುವ ಸಿಇಒ ಎಂಬ ಹೆಗ್ಗಳಿಕೆ ಇವರದ್ದಾಗಿದೆ.

ಜುಲೈ 6, 2020 ರಂದು ವಿಪ್ರೊ ಸಿಇಒ ಆದ ಡೆಲಾಪೋರ್ಟ್ ಅವರ ವಾರ್ಷಿಕ ವೇತನ 40 ಕೋಟಿ ರುಪಾಯಿ ಇರಲಿದೆ. ಇದರ ಜೊತೆಗೆ ಷೇರು ಆದಾಯವು ಅವರಿಗೆ ದೊರೆಯಲಿದ್ದು ಒಟ್ಟಾರೆ 64 ಕೋಟಿ ರುಪಾಯಿವರೆಗೂ ವೇತನ ಪಡೆಯಲಿದ್ದಾರೆ.
ವಿಪ್ರೊದ ಸಿಇಒ ಮತ್ತು ಎಂಡಿ ಸ್ಥಾನಕ್ಕೆ ಥಿಯೆರ್ರಿ ಅವರನ್ನು ಕಳೆದ ಮೇನಲ್ಲಿ ನೇಮಕ ಮಾಡಲಾಗಿತ್ತು. ಜುಲೈ 6, 2020 ರಿಂದ ಆಡಳಿತಾವಧಿ ಆರಂಭವಾಗಿದ್ದು, ಜುಲೈ 5, 2025ರವರೆಗೆ ಇರಲಿದ್ದಾರೆ.
ಬೆಂಗಳೂರು ಮೂಲಕ ಐಟಿ ಕಂಪನಿಯಲ್ಲಿ ಸಿಇಒ ಆಗುವ ಮೊದಲು ಡೆಲಾಪೋರ್ಟ್ ಫ್ರೆಂಚ್ ಐಟಿ ದೈತ್ಯ ಕ್ಯಾಪ್ಜೆಮಿನಿಯ ಸಿಒಒ (ಮುಖ್ಯ ಕಾರ್ಯನಿರ್ವಹಣಾಧಿಕಾರಿ) ಆಗಿದ್ದರು.


Click it and Unblock the Notifications