ಪ್ರಸ್ತುತ ಹಲವಾರು ಸಂಸ್ಥೆಗಳು ತಮ್ಮ ತ್ರೈಮಾಸಿಕ ನಿವ್ವಳ ಆದಾಯದ ವರದಿಯನ್ನು ಬಿಡುಗಡೆ ಮಾಡುತ್ತಿದೆ. ವಿಪ್ರೋ ಕೂಡಾ ಈಗ ಎರಡನೇ ತ್ರೈಮಾಸಿಕದ ವರದಿಯನ್ನು ಬಿಡುಗಡೆ ಮಾಡಿದೆ. ವಿಪ್ರೋ ನಿವ್ವಳ ಲಾಭವು ಈ ತ್ರೈಮಾಸಿಕದಲ್ಲಿ ಭಾರೀ ಕುಸಿತ ಕಂಡಿದೆ.
ಟೆಕ್ ದೈತ್ಯ, ವಿಪ್ರೋ ಸೆಪ್ಟೆಂಬರ್ 30, 2023 ರ ಅವಧಿಗೆ ಕೊನೆಗೊಂಡ ತ್ರೈಮಾಸಿಕದಲ್ಲಿ 2,646.3 ಕೋಟಿ ರೂಪಾಯಿಗಳ ನಿವ್ವಳ ಲಾಭವನ್ನು ದಾಖಲಿಸಿದೆ. ಹಿಂದಿನ ತ್ರೈಮಾಸಿಕದಲ್ಲಿ ನಿವ್ವಳ ಲಾಭವು 2,870.1 ಕೋಟಿ ರೂಪಾಯಿ ಆಗಿದ್ದು ಇದು ಸುಮಾರು ಶೇಕಡ 7.8 ರಷ್ಟು ಕುಸಿತವನ್ನು ದಾಖಲಿಸಿದೆ. ಹಣಕಾಸು ವರ್ಷ 2023ರ ಎರಡನೇ ತ್ರೈಮಾಸಿಕಕ್ಕೆ 2,659 ಕೋಟಿ ರೂಪಾಯಿಗಳ ಲಾಭಕ್ಕೆ ಹೋಲಿಸಿದರೆ ಈ ತ್ರೈಮಾಸಿಕದಲ್ಲಿ ಲಾಭ ಸಮತಟ್ಟಾಗಿದೆ.

ಹಣಕಾಸು ವರ್ಷ 2024ರ 2ನೇ ತ್ರೈಮಾಸಿಕ ವರದಿಯ ಮುಖ್ಯಾಂಶಗಳು:
- ಒಟ್ಟು ಆದಾಯವು ವರ್ಷದಿಂದ ವರ್ಷಕ್ಕೆ ಶೇಕಡ 0.1 ರಷ್ಟು ಇಳಿಕೆಯಾಗಿ, 225.2 ಬಿಲಿಯನ್ ರೂಪಾಯಿಗೆ ಅಥವಾ 2.7 ಬುಲಿಯನ್ ಡಾಲರ್ ಆಗಿದೆ.
- ಐಟಿ ದೈತ್ಯ ಸಂಸ್ಥೆಯ ಆದಾಯವು ತ್ರೈಮಾಸಿಕದಿಂದ ತ್ರೈಮಾಸಿಕಕ್ಕೆ ಶೇಕಡ 2.3ಕ್ಕೆ ಇಳಿಕೆಯಾಗಿ 2,713.3 ಮಿಲಿಯನ್ ಡಾಲರ್‌ಗೆ ತಲುಪಿದೆ.
- ನಾನ್-GAAP2 ಸ್ಥಿರ ಕರೆನ್ಸಿ ಐಟಿ ಸೇವೆಗಳ ವಿಭಾಗದ ಆದಾಯವು ತ್ರೈಮಾಸಿಕದಿಂದ ತ್ರೈಮಾಸಿಕಕ್ಕೆ ಶೇಕಡ 2.0ರಷ್ಟು ಕಡಿಮೆಯಾಗಿದೆ.
- ಒಟ್ಟು ಬುಕಿಂಗ್ 3.8 ಬಿಲಿಯನ್ ಡಾಲರ್ ಆಗಿದೆ. ವರ್ಷದಿಂದ ವರ್ಷಕ್ಕೆ ಶೇಕಡ 6 ರಷ್ಟು ಏರಿಕೆಯಾಗಿದೆ. ದೊಡ್ಡ ಡೀಲ್ ಬುಕ್ಕಿಂಗ್ 1.3 ಬಿಲಿಯನ್ ಡಾಲರ್ ಆಗಿತ್ತು. ಇದು ವರ್ಷದಿಂದ ವರ್ಷಕ್ಕೆ ಸುಮಾರು ಶೇಕಡ 79.0 ರಷ್ಟು ಹೆಚ್ಚಳವಾಗಿದೆ.
- ತ್ರೈಮಾಸಿಕದಲ್ಲಿ ಐಟಿ ಸೇವೆಗಳ ವಿಭಾಗದ ಇಬಿಐಟಿ 36.1 ಬಿಲಿಯನ್ ಡಾಲರ್ ಆಗಿದ್ದು, ವರ್ಷದಿಂದ ವರ್ಷಕ್ಕೆ ಶೇಕಡ 6 ರಷ್ಟು ಏರಿಕೆಯಾಗಿದೆ.
- ತ್ರೈಮಾಸಿಕದಲ್ಲಿ ಐಟಿ ಸೇವೆಗಳ ಕಾರ್ಯಾಚರಣೆಯ ಮಾರ್ಜಿನ್ ಶೇಕಡ 16.1 ನಲ್ಲಿದೆ. ತ್ರೈಮಾಸಿಕದಿಂದ ತ್ರೈಮಾಸಿಕಕ್ಕೆ 10 ಬಿಪಿಎಸ್ ಏರಿಕೆಯಾಗಿದೆ. ವರ್ಷದಿಂದ ವರ್ಷಕ್ಕೆ 100 ಬಿಪಿಎಸ್ ಏರಿಕೆಯಾಗಿದೆ.
- ತ್ರೈಮಾಸಿಕದಲ್ಲಿ ಪ್ರತಿ ಷೇರಿನ ಗಳಿಕೆಯು 5.06 ರೂಪಾಯಿ ಅಥವಾ 0.061 ಡಾಲರ್ ಆಗಿದೆ. ವರ್ಷದಿಂದ ವರ್ಷಕ್ಕೆ ಶೇಕಡ 4.1ಕ್ಕೆ ತಲುಪಿದೆ.
- ತ್ರೈಮಾಸಿಕದಲ್ಲಿ ನಿವ್ವಳ ಆದಾಯ 26.5 ಬಿಲಿಯನ್ ರೂಪಾಯಿ ಅಥವಾ 318.5 ಮಿಲಿಯನ್ ಡಾಲರ್ ಆಗಿದೆ. ವರ್ಷದಿಂದ ವರ್ಷಕ್ಕೆ ಶೇಕಡ 0.5ರಷ್ಟು ಇಳಿಕೆಯಾಗಿದೆ.
- ತ್ರೈಮಾಸಿಕದಲ್ಲಿ ನಿವ್ವಳ ಆದಾಯ ಶೇಕಡ 145 ಆಗಿದೆ. ಕಾರ್ಯಾಚರಣೆಯ ನಗದು ಹರಿವು 38.6 ಬಿಲಿಯನ್ ರೂಪಾಯಿ ಅಥವಾ 465.0 ಮಿಲಿಯನ್ ಡಾಲರ್ ಆಗಿದೆ.
- ಹಣಕಾಸು ವರ್ಷ 2024 ರ ಎರಡನೇ ತ್ರೈಮಾಸಿಕದಲ್ಲಿ ತ್ರೈಮಾಸಿಕದಿಂದ ತ್ರೈಮಾಸಿಕಕ್ಕೆ ಶೇಕಡ 13.4 ರಷ್ಟು ಕುಸಿತ ಕಂಡುಬಂದಿದೆ.


Click it and Unblock the Notifications