ನಮ್ಮ ಬೆಂಗಳೂರಿನಲ್ಲೇ ರಾತ್ರೋರಾತ್ರಿ ಒಂದಲ್ಲ ಎರಡಲ್ಲ ಬರೋಬ್ಬರಿ 900 ಎಳೆನೀರುಗಳು ಕಳವಾಗಿದೆ. ಸರ್ಜಾಪುರ ರಸ್ತೆಯಲ್ಲಿ ಎಳೆನೀರು ಮಾರುವ ಮೂಲಕ ಜೀವನ ಸಾಗಿಸುತ್ತಿದ್ದ ಮಹಿಳೆಯು ಈಗ ಭಾರೀ ನಷ್ಟವನ್ನು ಕಂಡಿದ್ದಾರೆ.
58 ವರ್ಷ ವಯಸ್ಸಿನ ಪಿ ಲಕ್ಷ್ಮಮ್ಮ ಅವರಿಗೆ ಕಳೆದ ಕೆಲವು ವರ್ಷಗಳಿಂದ ಸಾಕಷ್ಟು ತೊಂದರೆಯಲ್ಲಿದ್ದಾರೆ. ಪತಿಯಿಂದ ದೂರವಾದ ಬಳಿಕ ಒಬ್ಬರೇ ಜೀವನ ಸಾಗಿಸುತ್ತಿದ್ದಾರೆ. ಅದಾದ ಬಳಿಕ ಅವರ ಇಬ್ಬರು ಮಕ್ಕಳು ಕೂಡಾ ಪ್ರತ್ಯೇಕವಾಗಿ ಜೀವಿಸಲು ಆರಂಭಿಸಿದರು. ತೆಂಗಿನಕಾಯಿ ಮಾರುತ್ತಾ ಜೀವನ ಸಾಗಿಸುತ್ತಿದ್ದರು. ಆದರೆ ದುಷ್ಕರ್ಮಿಗಳು ಆಕೆಗೆ ಸೇರಿದ ಸುಮಾರು 900 ಎಳೆನೀರು ಕದ್ದಿದ್ದಾರೆ.

ಕೊಡತಿ ಗೇಟ್‌ನ ನಿವಾಸಿ ಲಕ್ಷ್ಮಮ್ಮ ಅವರು ತೆಂಗಿನಕಾಯಿ ಮಾರಾಟ ಮಾಡುವ ಮೂಲಕ ದಿನಕ್ಕೆ 500 ರೂಪಾಯಿ ಗಳಿಸಿದ್ದಾರೆ. ಬೇರೆಯವರ ಮೇಲೆ ಅವಲಂಬಿತರಾಗುವುದು ಬೇಡ, ಘನತೆಯಿಂದ ಬದುಕುತ್ತಿದ್ದೆ ಎಂದು ಲಕ್ಷ್ಮಮ್ಮ ಹೇಳಿರುವುದಾಗಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
cyber crime: 48 ಲಕ್ಷ ಕಳೆದುಕೊಂಡ ಬೆಂಗಳೂರಿನ ಹಿರಿಯ ಪತ್ರಕರ್ತೆ
ಜನವರಿ 21 ರಂದು, ಅವರು ಸರಬರಾಜುದಾರರಿಂದ 1,000 ಎಳೆನೀರುಗಳನ್ನು ಖರೀದಿಸಿದರು. ಭಾನುವಾರವಾಗಿದ್ದರೂ ಸುಮಾರು 100 ಎಳೆನೀರುಗಳನ್ನು ಮಾರಾಟ ಮಾಡಿದ್ದೇನೆ ಎಂದು ಅವರು ಹೇಳಿದರು. ಆದರೆ, ಸೋಮವಾರ ಬೆಳಗ್ಗೆ ತನ್ನ ನಿತ್ಯದ ಸ್ಥಳಕ್ಕೆ ಮರಳಿದಾಗ ಉಳಿದ 900 ಎಳೆನೀರುಗಳ ರಾಶಿ ನಾಪತ್ತೆಯಾಗಿತ್ತು. ತೆಂಗಿನಕಾಯಿಯನ್ನು ಕಡಿಯಲು ಬಳಸುತ್ತಿದ್ದ ಕುಡುಗೋಲು, ಒಡೆದ ಪ್ಲಾಸ್ಟಿಕ್ ಕುರ್ಚಿ, ತೆಂಗಿನ ಕಾಯಿಗಳನ್ನು ಮುಚ್ಚಿದ್ದ ಪ್ಲಾಸ್ಟಿಕ್ ಮಾತ್ರ ಉಳಿದಿತ್ತು.
ಲಕ್ಷ್ಮಮ್ಮ ಅವರ ಪ್ರಕಾರ, ಕಳೆದ 10 ವರ್ಷಗಳಲ್ಲಿ ಅವರು ಇಲ್ಲದ ಸಮಯದಲ್ಲಿ ಈ ಪ್ರದೇಶದಲ್ಲಿ ಒಂದು ಎಳನೀರು ಅಥವಾ ಯಾವುದೇ ವಸ್ತು ಕಳವು ಆಗಿಲ್ಲ. "ಭಾನುವಾರ ಸಂಜೆ ವ್ಯಕ್ತಿಯೊಬ್ಬ 8,000 ರೂಪಾಯಿ ಸಾಲದ ವಿಚಾರವಾಗಿ ನನ್ನೊಂದಿಗೆ ಜಗಳವಾಡಿದ್ದು, ಸಾಲ ಮರುಪಾವತಿಸಲು ಇನ್ನೂ ಕೆಲವು ದಿನಗಳ ಕಾಲಾವಕಾಶ ನೀಡುವಂತೆ ಮನವಿ ಮಾಡಿದೆ," ಎಂದು ಈ ಸಂದರ್ಭದಲ್ಲೇ ಲಕ್ಷ್ಮಮ್ಮ ಹೇಳಿಕೊಂಡಿದ್ದಾರೆ.
"ಈ ತಿಂಗಳ ಆರಂಭದಲ್ಲಿ ಮಹಿಳೆಯೊಬ್ಬರಿಂದ 10,000 ರೂಪಾಯಿ ಕೈಸಾಲ ಪಡೆದು 2,000 ರೂಪಾಯಿ ಮರುಪಾವತಿ ಮಾಡಿದೆ. ಆ ದಿನ ಉಳಿದ ಮೊತ್ತಕ್ಕೆ ಆಕೆಯ ಸಂಬಂಧಿ ಬಂದಿದ್ದರು. ನಾನು 1,000 ಎಳನೀರು ಖರೀದಿಸಲು ನನ್ನ ಎಲ್ಲ ಉಳಿತಾಯವನ್ನು ಹೂಡಿಕೆ ಮಾಡಿದ್ದೇವೆ. ಕೆಲವೇ ದಿನಗಳಲ್ಲಿ ನಾನು ಮೊತ್ತವನ್ನು ಮರುಪಾವತಿ ಮಾಡುವುದಾಗಿ ಹೇಳಿದೆ," ಎಂದು ಲಕ್ಷ್ಮಮ್ಮ ತಿಳಿಸಿದರು.
"ಆದರೆ ಆ ವ್ಯಕ್ತಿ ಕೋಪಗೊಂಡು ನನ್ನ ಮೇಲೆ ಕೂಗಾಡಿದ್ದಾನೆ. ನೀನು ಹೇಗೆ ಎಳೆನೀರು ವ್ಯಾಪಾರ ಮಾಡುತ್ತೇನೆಂದು ನಾನು ನೋಡುತ್ತೇನೆ ಎಂದು ಹೇಳಿಕೊಂಡಿದ್ದ. ಆದರೆ ಅವರು ನನ್ನ ಎಳೆನೀರನ್ನು ಕಳ್ಳತನ ಮಾಡಿದ್ದಾರೆ ಎಂದು ಆರೋಪಿಸಲು ನನ್ನ ಬಳಿಕ ಬೇರೆ ಯಾವುದೇ ಪುರಾವೆಗಳು ಇಲ್ಲ," ಎಂದು ಲಕ್ಷ್ಮಮ್ಮ ಮಾಧ್ಯಮಕ್ಕೆ ಮಾಹಿತಿ ನೀಡಿದರು.
ನಂತರ ಪೊಲೀಸ್ ಠಾಣೆಗೆ ತೆರಳಿ ಲಕ್ಷ್ಮಮ್ಮ ದೂರು ನೀಡಿದ್ದಾರೆ. "ನಾವು ಆಕೆಯನ್ನು ಬಹಳ ಸಮಯದಿಂದ ತಿಳಿದಿದ್ದೇವೆ ಮತ್ತು ಘಟನೆಯಿಂದ ಮನನೊಂದಿದ್ದೇವೆ. ತಕ್ಷಣವೇ, ನಾವು ಎಫ್‌ಐಆರ್ ಅನ್ನು ದಾಖಲಿಸಿದ್ದೇವೆ. ದುರದೃಷ್ಟವಶಾತ್, ಘಟನೆ ನಡೆದ ಸ್ಥಳದಲ್ಲಿ ಸಿಸಿಟಿವಿ ಇಲ್ಲ. ಆದರೂ, ನಾವು ದುಷ್ಕರ್ಮಿಗಳನ್ನು ಹಿಡಿಯಲು ಪರ್ಯಾಯ ದಾರಿ ಹುಡುಕುತ್ತಿದ್ದೇವೆ," ಎಂದು ಬೆಳ್ಳಂದೂರು ಪೊಲೀಸ್ ಠಾಣೆಯ ತನಿಖಾಧಿಕಾರಿಯೊಬ್ಬರು ತಿಳಿಸಿದ್ದಾರೆ.


Click it and Unblock the Notifications