ನವದೆಹಲಿ, ಫೆಬ್ರವರಿ 1: ಕೆಲವೊಂದು ಹೋರಾಟಗಳು ಹೇಗಿರುತ್ತವೆ ಅಂದರೆ, ಅದು ಯಶಸ್ಸಿನ ಗಮ್ಯಸ್ಥಾನವನ್ನು ಮೀರಿ ಬೆಳೆದು ನಿಂತಿರುತ್ತದೆ. ಇದಕ್ಕೆ " ಶಶಿ ಸೋನಿ" ಅವರ ಕಥೆಯೂ ಚೆನ್ನಾಗಿ ಹೊಂದಿಕೊಳ್ಳುತ್ತದೆ. ಈಗ ಅವರು ಸುಮಾರು 4,000 ಕೋಟಿ ರೂ. ಗಿಂತ ಹೆಚ್ಚು ಮೌಲ್ಯಯುತ ಕಂಪನಿಯ ಒಡೆಯರಾಗಿದ್ದಾರೆ ಎಂದು ನೋಡುವಾಗ, ಇದು ಸಾಮಾನ್ಯವೆಂಬಂತೆ ಕಂಡರೂ, ಅದರ ಹಿಂದಿನ ಹೋರಾಟದ ಪ್ರಯಾಣವನ್ನು ಗಮನಿಸಿದಾದ ಒಂದು ಅದ್ಭುತ ನಡೆದದಂತೆ ಕಂಡುಬರುತ್ತದೆ.
ಶಶಿ ಸೋನಿಯವರು ಕೇವಲ 10,000 ರೂ. ಆರಂಭಿಕ ಹೂಡಿಕೆಯೊಂದಿಗೆ ಶಶಿ ಅವರು ತಮ್ಮ ವ್ಯಾಪಾರ ಸಾಮ್ರಾಜ್ಯದ ಅಡಿಪಾಯವನ್ನು ಹಾಕಿದರು ಅಂದರೆ ಅದನ್ನುಯಾರು ನಂಬಲಾರರು. ಗಣರಾಜ್ಯೋತ್ಸವದ ವೇಳೆ ಈ ವರ್ಷ ಪದ್ಮಶ್ರೀ ಮತ್ತು ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತರ ಪಟ್ಟಿಯಲ್ಲಿ ಸೇರ್ಪಡೆಗೊಂಡ ಉದ್ಯಮ ಜಗತ್ತಿನ ನಾಲ್ವರಲ್ಲಿ ಅವರು ಕೂಡ ಒಬ್ಬರು. ವಿನೀತವಾಗಿ ಪ್ರಯಾಣ ಆರಂಭಿಸಿ ಅಸಾಧಾರಣ ಯಶಸ್ಸಿನ ಶಿಖರವೇರಿದ ಶಶಿಯವರ ಗಮನಾರ್ಹ ಪ್ರಯಾಣ ಹೇಗಿದೆ ನೋಡೋಣ...

ಶಶಿ 1971 ರಲ್ಲಿ ತನ್ನ ಮೊದಲ ವ್ಯವಹಾರವನ್ನು 10,000 ರೂ.ಗಳ ಸಾಧಾರಣ ಬಂಡವಾಳದೊಂದಿಗೆ ದೀಪ್ ಟ್ರಾನ್ಸ್‌ಪೋರ್ಟ್ ಸ್ಥಾಪಿಸಿ 1975 ರವರೆಗೆ ಅವರು ತಮ್ಮನ್ನು ಸಿನೆಮಾ ಜಗತ್ತಿನಲ್ಲಿ ತೊಡಗಿಸಿಕೊಳ್ಳುವವರೆಗೂ ಅದರ ಕಾರ್ಯಾಚರಣೆಗಳನ್ನು ಯಶಸ್ವಿಯಾಗಿ ನಿರ್ವಹಿಸಿದರು.1975 ರಲ್ಲಿ ಮುಂಬೈನ ಮುಲುಂಡ್ ಪ್ರದೇಶದಲ್ಲಿ ಡೀಪ್ ಮಂದಿರ್ ಸಿನೆಮಾ ಟಾಕೀಸ್ ತೆರೆದ ಬಳಿಕ 1980 ರವರೆಗೆ ಕಾರ್ಯಾಚರಿಸಿತು. ಹೀಗೆ ದಶಕಗಳ ಪರಿಶ್ರಮದ ಬಳಿಕ ಶಶಿ ಸೋನಿ ಯಶಸ್ಸಿನ ಸಿಹಿ ಸವಿದರು.
ಮೈಸೂರಿನಲ್ಲಿ ಆಕ್ಸಿಜನ್ ಪ್ರೈವೇಟ್ ಲಿಮಿಟೆಡ್ ಎಂಬ ಗ್ಯಾಸ್ ಉತ್ಪಾದನಾ ಘಟಕವನ್ನು ಸ್ಥಾಪಿಸಿದ ಬಳಿಕ ಅವರ ಪಾಲಿನ ಅದೃಷ್ಟ ಬಾಗಿಲು ತೆರೆದುಕೊಂಡಿತು. ತಮ್ಮ ವ್ಯವಹಾರ ವಿಸ್ತರಿಸುತ್ತಾ ತಾಂತ್ರಿಕ ಕ್ಷೇತ್ರಕ್ಕೂ ಕಾಲಿಟ್ಟರು. 2005 ರಲ್ಲಿ, ಶಶಿ Izmo ಲಿಮಿಟೆಡ್ ಹೆಸರಿನ ಕಂಪನಿಯನ್ನು ಸ್ಥಾಪಿಸಿದರು. ಇದು IZMO ಲಿಮಿಟೆಡ್ ಹೆಸರಿನಲ್ಲಿ ಕಾರ್ಯನಿರ್ವಹಿಸುತ್ತದೆ. ಮೈಸೂರಿನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಈ ಕಂಪನಿಯು ಜಾಗತಿಕವಾಗಿ ಹೈಟೆಕ್ ಆಟೋಮೋಟಿವ್ ಮತ್ತು ಇ-ರೀಟೇಲಿಂಗ್ ಪರಿಹಾರಗಳನ್ನು ಒದಗಿಸುತ್ತದೆ. BSE (ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್) ಮತ್ತು NSE (ನ್ಯಾಷನಲ್ ಸ್ಟಾಕ್ ಎಕ್ಸ್‌ಚೇಂಜ್) ನಲ್ಲಿಯೂ ಪಟ್ಟಿ ಮಾಡಲಾಗಿರುವ ಅವರ ಕಂಪನಿಯಲ್ಲಿ ಶಶಿ ಅಧ್ಯಕ್ಷ ಸ್ಥಾನದಲ್ಲಿದ್ದಾರೆ.
ವ್ಯವಹಾರವನ್ನು ಹೊರತುಪಡಿಸಿ, ಶಶಿ ವಿವಿಧ ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು.ಅವರು ದೀಪ್ ಜನಸೇವಾ ಸಮಿತಿಯ ಸದಸ್ಯರಾಗಿದ್ದಾರೆ. ಇದರ ಮೂಲಕ ಉದ್ಯೋಗ ನೀಡುವಿಕೆ, ಮಹಿಳೆಯರಿಗೆ ಶಿಕ್ಷಣ, ಪಿಂಚಣಿ ಯೋಜನೆಗಳನ್ನು ಪ್ರಾರಂಭಿಸುವುದು ಮತ್ತು ವಿಕಲಾಂಗ ವ್ಯಕ್ತಿಗಳಿಗೆ ನಿಧಿಯನ್ನು ಸಂಗ್ರಹಿಸುವಲ್ಲಿ ಸಕ್ರಿಯವಾಗಿ ಕೊಡುಗೆ ನೀಡುತ್ತಿದ್ದಾರೆ. ಅಂಗವಿಕಲರ ಮತ್ತು ಮಹಿಳೆಯರ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತ್ತಿರುವ ಪರೋಪಕಾರಿಯಾಗಿದ್ದಾರೆ.
ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿಯನ್ನು ಸ್ವೀಕರಿಸುವ ಮೊದಲು, ಶಶಿ ಸೋನಿ ವ್ಯಾಪಾರ ಮತ್ತು ಸಾಮಾಜಿಕ ಕಲ್ಯಾಣ ಕ್ಷೇತ್ರಗಳ್ ಮೂಲಕ ಜನಪ್ರಿಯತೆ ಗಳಿಸಿದರು. 1990ರಲ್ಲಿ, ಅವರು ಭಾರತೀಯ ಉದ್ಯಮಕ್ಕೆ ನೀಡಿದ ಕೊಡುಗೆಗಾಗಿ ವರ್ಷದ ಮಹಿಳೆ ಪ್ರಶಸ್ತಿಗೆ ಭಾಜನರಾದರು. ಇದಲ್ಲದೆ ಶಶಿ ಅವರು ಆಲ್ ಇಂಡಿಯಾ ಇಂಡಸ್ಟ್ರಿಯಲ್ ಗ್ಯಾಸ್ ಮ್ಯಾನುಫ್ಯಾಕ್ಚರಿಂಗ್ ಅಸೋಸಿಯೇಷನ್ ಮತ್ತು ತಾಂತ್ರಿಕ ಅಭಿವೃದ್ಧಿ ನಿರ್ದೇಶನಾಲಯದಲ್ಲಿ ವ್ಯವಸ್ಥಾಪಕ ಸಮಿತಿಯಲ್ಲೂ ಸೇವೆ ಸಲ್ಲಿಸಿದ್ದರು. ಜೊತೆಗೆ ತಾಂತ್ರಿಕ ಅಭಿವೃದ್ಧಿ ನಿರ್ದೇಶನಾಲಯದಲ್ಲಿ ಸ್ಥಾನವನ್ನು ಪಡೆದುಕೊಂಡಿದ್ದರು.


Click it and Unblock the Notifications