ಒಂದು ಕಾಲದಲ್ಲಿ ಷೇರು ಮಾರುಕಟ್ಟೆಯನ್ನು ಪುರುಷರಿಗಷ್ಟೇ ಸೀಮಿತ ಎಂದು ಪರಿಗಣಿಸಲಾಗುತ್ತಿತ್ತು.ಆದರೆ ಇತ್ತೀಚಿನ ದಿನಮಾನಗಳಲ್ಲಿ ಈ ಚಿತ್ರಣವೇ ಬದಲಾಗಿದೆ. ಮಹಿಳೆಯರು ಸಹ ಷೇರು ಮಾರುಕಟ್ಟೆಯಲ್ಲಿ ಹೂಡಿಕೆದಾರರಾಗಿ ಹೊರಹೊಮ್ಮುತ್ತಿದ್ದಾರೆ. ಈಗ ಮಹಿಳೆಯರು ತಮ್ಮದೇ ಅದ ಕ್ಷೇತ್ರದಲ್ಲಿ ತಮ್ಮ ಗುರುತನ್ನು ಸೃಷ್ಟಿಸಿಕೊಳ್ಳುತ್ತಿದ್ದಾರೆ.
ಹೌದು, ಷೇರು ಮಾರುಕಟ್ಟೆಗಳಲ್ಲಿ ಮಹಿಳೆಯರ ಭಾಗವಹಿಸುವಿಕೆ ಸಂಖ್ಯೆ ಹೆಚ್ಚಾಗಿದ್ದು, ಸ್ಟಾಕ್ ಮಾರುಕಟ್ಟೆಯಲ್ಲಿನ ಪ್ರತಿ 4 ಹೊಸ ಹೂಡಿಕೆದಾರರ ಖಾತೆಗಳ ಪೈಕಿ 1 ಖಾತೆ ಮಹಿಳೆಯರದ್ದಾಗಿರುತ್ತದೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ದ ವರದಿಯಲ್ಲಿ ತಿಳಿಸಿದೆ.

2021ರಿಂದ ವಾರ್ಷಿಕವಾಗಿ ಸುಮಾರು 30 ಮಿಲಿಯನ್ ಹೊಸ ಡಿಮ್ಯಾಟ್ ಖಾತೆಗಳನ್ನು ಷೇರು ಮಾರುಕಟ್ಟೆಯಲ್ಲಿ ತೆರೆಯಲಾಗುತ್ತಿದೆ. ಈ ಪೈಕಿ ಪ್ರತಿ 4 ಖಾತೆಗಳ ಪೈಕಿ 1 ಖಾತೆ ಮಹಿಳಾ ಹೂಡಿಕೆದಾರರಿಗೆ ಸೇರಿದೆ. ಎಂದು ಎಸ್‌ಬಿಐ ವರದಿಯಲ್ಲಿ ಉಲ್ಲೇಖ ಮಾಡಿದ್ದು, ಭಾರತದಾದ್ಯಂತ ಷೇರು ಮಾರುಕಟ್ಟೆಗಳಲ್ಲಿ ಮಹಿಳೆಯರ ಭಾಗವಹಿಸುವಿಕೆ ಹೆಚ್ಚಳವನ್ನು ದಾಖಲಿಸುತ್ತಿದ್ದಾರೆ.
ಮಹಿಳೆಯರ ಭಾಗವಹಿಸುವಿಕೆ ನಿಜಕ್ಕೂ ಸಂತಸದ ಸಂಗತಿ
ಹಣಕಾಸು ವರ್ಷ 2022 ರಿಂದ ಷೇರು ಮಾರುಕಟ್ಟೆಯಲ್ಲಿ ಮಹಿಳಾ ಹೂಡಿಕೆದಾರರ ಸಂಖ್ಯೆ ಹಂತ ಹಂತವಾಗಿ ಏರಿಕೆಯಾಗುತ್ತಿದೆ. ಹಣಕಾಸು ಮಾರುಕಟ್ಟೆಗಳಲ್ಲಿ ಮಹಿಳೆಯರ ಭಾಗವಹಿಸುವಿಕೆ ನಿಜಕ್ಕೂ ಸಂತಸದ ಸಂಗತಿ ಎಂದು ಎಸ್‌ಬಿಐ ಬಿಡುಗಡೆ ಮಾಡಿರುವ ವರದಿಯಲ್ಲಿ ಹೇಳಲಾಗಿದೆ.
ಮಹಿಳಾ ಹೊಡಿಕೆದಾರರು ದೆಹಲಿಯಲ್ಲಿ ಇದುವರೆಗೂ ಶೇ. 29.8ರಷ್ಟು ಪ್ರಾತಿನಿಧ್ಯವನ್ನು ಹೊಂದಿದ್ದಾರೆ. ಹಾಗೂ ಮಹಾರಾಷ್ಟ್ರದಲ್ಲಿ ಶೇ. 27.7 ಮತ್ತು ತಮಿಳುನಾಡಿನಲ್ಲಿ ಶೇ. 27.5 ರಷ್ಟು ಮಹಿಳಾ ಡಿಮ್ಯಾಟ್ ಅಕೌಂಟ್‌ಗಳನ್ನು ತೆರೆಯಲಾಗಿದೆ. ದೇಶದ ಒಟ್ಟಾರೆ ಸರಾಸರಿ ಶೇ. 23.9ಕ್ಕಿಂತಲೂ ಈ ಅಂಕಿ ಅಂಶಗಳು ಹೆಚ್ಚು ಇದೆ.ಬಿಹಾರದಲ್ಲಿ ಶೇ. 15.4, ಉತ್ತರ ಪ್ರದೇಶದಲಿ ಶೇ. 18.2, ಮತ್ತು ಒಡಿಶಾದಲ್ಲಿ ಶೇ. 19.4 ರಷ್ಟು ಮಹಿಳಾ ಪ್ರಾತಿನಿಧ್ಯ ಕಂಡುಬಂದಿದ್ದು, ಈ ರಾಜ್ಯಗಳು ಶೇ. 20ಕ್ಕಿಂತ ಕಡಿಮೆ ಮಹಿಳಾ ಪ್ರಾತಿನಿಧ್ಯವನ್ನು ಹೊಂದಿವೆ ಎಂದು ವರದಿ ತಿಳಿಸಿದೆ
ಎಸ್‌ಬಿಐ ವರದಿ ಪ್ರಕಾರ ಮಹಿಳೆಯರ ಖಾತೆ ನೋಂದಣಿಯಲ್ಲಿ ದೆಹಲಿ ಮೊದಲ ಸ್ಥಾನದಲ್ಲಿದ್ದರೆ, ಮಹಾರಾಷ್ಟ್ರ ಮತ್ತು ತಮಿಳುನಾಡು ರಾಜ್ಯಗಳು ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿವೆ ಎಂದು ವರದಿಯಲ್ಲಿ ಮಾಹಿತಿ ನೀಡಲಾಗಿದೆ.
ಹಣಕಾಸು ಮಾರುಕಟ್ಟೆಯಲ್ಲಿ ಲಿಂಗ ಸಮಾನತೆಗೆ ಮುನ್ನುಡಿ
ಹಣಕಾಸು ವರ್ಷ 2022ಕ್ಕೆ ಹೋಲಿಸಿದಾಗ 2025ರ ಹಣಕಾಸು ವರ್ಷದಲ್ಲಿ, ಬಹುತೇಕ ರಾಜ್ಯಗಳು ಮಹಿಳೆಯರ ಭಾಗವಹಿಸುವಿಕೆಯ ದರದಲ್ಲಿ ರಾಷ್ಟ್ರೀಯ ಸರಾಸರಿಗಿಂತ ಹೆಚ್ಚಿನ ಏರಿಕೆ ಕಂಡು ಬಂದಿದೆ. ಮಹಿಳಾ ಪ್ರಾತಿನಿಧ್ಯ ಪ್ರದೇಶದಿಂದ ಪ್ರದೇಶಕ್ಕೆ ವ್ಯತ್ಯಾಸ ಕಂಡುಬಂದಿದರೂ ಕೂಡ ಹಣಕಾಸು ಮಾರುಕಟ್ಟೆಯಲ್ಲಿ ಲಿಂಗ ಸಮಾನತೆಗೆ ಇದು ಮುನ್ನುಡಿ ಬರೆದಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
ಭೌಗೋಳಿಕ ಪ್ರಾಬಲ್ಯದ ಬದಲಾವಣೆ
ಸಾಂಪ್ರದಾಯಿಕವಾಗಿ ಬಂಡವಾಳ ಮಾರುಕಟ್ಟೆ ಚಟುವಟಿಕೆಯ ಕೇಂದ್ರವಾಗಿದ್ದ ದೇಶದ ಪಶ್ಚಿಮ ಭಾಗಗಳು ಹಂತ ಹಂತವಾಗಿ ಬೆಂಗಳೂರು, ಹೈದರಾಬಾದ್ ಮತ್ತು ಕಾನ್ಪುರದಂತಹ ನಗರಗಳಿಗೆ ಈ ಸ್ಥಾನವನ್ನು ಬಿಟ್ಟುಕೊಟ್ಟಿದೆ. ಎಂದು ಹಣಕಾಸು ಮಾರುಕಟ್ಟೆಗಳ ಭೌಗೋಳಿಕ ಪ್ರಾಬಲ್ಯದ ಬದಲಾವಣೆಯ ಬಗ್ಗೆಯೂ ಎಸ್‌ಬಿಐ ವರದಿಯಲ್ಲಿ ಸ್ವಷ್ಟವಾಗಿ ತಿಳಿಸಿದೆ.
ಚಿಲ್ಲರೆ ವಹಿವಾಟನ್ನು ಮೀರಿ ಬೆಳೆಯುತ್ತಿವೆ
ನೇರ ಇಕ್ವಿಟಿ ಭಾಗವಹಿಸುವಿಕೆಯೂ ಹೆಚ್ಚು ವ್ಯಾಪಕವಾದ ವಿತರಣೆಗೆ ಸಾಕ್ಷಿಯಾಗುತ್ತಿದೆ. ಏಕೆಂದರೆ ಪ್ರಮುಖ ಪ್ರದೇಶಗಳಲ್ಲಿ ಮ್ಯೂಚುಯಲ್ ಫಂಡ್ ಒಳಹರಿವು ಹೆಚ್ಚಾಗಿದೆ. ಇದರಿಂದ ಚಿಲ್ಲರೆ ವಹಿವಾಟನ್ನು ಮೀರಿ ಷೇರು ಮಾರುಕಟ್ಟೆ ಬೆಳೆಯುತ್ತಿದೆ.
ಮಹಿಳೆಯರು ಹೆಚ್ಚಾಗಿ ಷೇರು ಮಾರುಕಟ್ಟೆಯಲ್ಲಿ ಭಾಗವಹಿಸಿ ಸಂಪತ್ತು ಸೃಷ್ಟಿಗೆ ಒಂದು ಮಾಧ್ಯಮವನ್ನಾಗಿ ಸ್ವೀಕರಿಸಿರುವುದು ದೇಶದ ಆರ್ಥಿಕತೆಗೆ ಸಾಕ್ಷಿ ಎಂದು ಎಸ್‌ಬಿಐ ವರದಿ ತಿಳಿಸಿದೆ
More From GoodReturns

ಷೇರು ಮಾರುಕಟ್ಟೆ ಇಂದು ಭರ್ಜರಿ ಏರಿಕೆ: ಹೂಡಿಕೆದಾರರಿಗೆ ಬಂಪರ್ ಲಾಭ?

ಓಮ್ ಪವರ್ ಟ್ರಾನ್ಸ್ಮಿಷನ್ ಐಪಿಒ: ಸೋಮವಾರ ಹೂಡಿಕೆದಾರರಿಗೆ ಅಗ್ನಿಪರೀಕ್ಷೆ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಓಂ ಪವರ್ ಟ್ರಾನ್ಸ್ಮಿಷನ್ ಐಪಿಒ: ಹೂಡಿಕೆದಾರರ ಪಾಲಿಗೆ ಲಾಭದಾಯಕವೇ?

ಓಮ್ ಪವರ್ ಟ್ರಾನ್ಸ್ಮಿಷನ್ ಐಪಿಒ: ಹೂಡಿಕೆದಾರರಿಗೆ ಭರ್ಜರಿ ಲಾಭ ಸಿಗುತ್ತಾ?

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಆರ್ಬಿಐ ಪಾಲಿಸಿ: ಇಂದಿನ ನಿರ್ಧಾರ ನಿಮ್ಮ ಹೂಡಿಕೆಯನ್ನು ಬದಲಿಸುತ್ತಾ?

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಷೇರು ಮಾರುಕಟ್ಟೆ ಏರಿಳಿತ: ಇಂದಿನ ಹೂಡಿಕೆದಾರರ ಆತಂಕವೇನು?



Click it and Unblock the Notifications