ಕೊರೊನಾ ಎಫೆಕ್ಟ್‌ನಿಂದ ಮನೆಯಿಂದಲೇ ಮಾಡುವ ಕೆಲಸಕ್ಕೆ ತೀವ್ರ ಹುಡುಕಾಟ : ಇನ್‌ಡೀಡ್ ವರದಿ

ಕೊರೊನಾವೈರಸ್ ಸೃಷ್ಟಿಸಿರುವ ಆತಂಕದಿಂದಾಗಿ ಜನರು ಮನೆಯಿಂದ ಹೊರಹೋಗಲು ಯೋಚನೆ ಮಾಡುವ ಪರಿಸ್ಥಿತಿ ಇರುವುದರಿಂದ ಜನರು ಆದಷ್ಟು ಮನೆಯಿಂದಲೇ ಕೆಲಸ ಮಾಡುವ ವೃತ್ತಿಯ ಹುಡುಕಾಟ ಹೆಚ್ಚಿಸಿದ್ದಾರೆ. ಫೆಬ್ರವರಿಯಿಂದ ಮೇ ಅವಧಿಯಲ್ಲಿ ದೇಶದಲ್ಲಿ ಮನೆಯಿಂದಲೇ ಕೆಲಸ ಮಾಡುವುದಕ್ಕೆ ಇರುವ ಅವಕಾಶಗಳ ಬಗ್ಗೆ ಅತಿ ಹೆಚ್ಚಿನ ಹುಡುಕಾಟ ನಡೆದಿದೆ ಎಂದು ವರದಿಯೊಂದು ಹೇಳಿದೆ.

ಉದ್ಯೋಗ ತಾಣವಾಗಿರುವ 'ಇನ್‌ಡೀಡ್' ವರದಿ ಪ್ರಕಾರ ಕೊರೊನಾ ಲಾಕ್‌ಡೌನ್‌ದಿಂದಾಗಿ ಜನರು ಮನೆಯಲ್ಲಿಯೇ ಮಾಡಬಹುದಾದ ಕೆಲಸಗಳಿಗೆ ತೀವ್ರ ಹುಡುಕಾಟ ನಡೆಸಿದಿದ್ದಾರೆ. ಬೇರೆ ಕೆಲಸಗಳಿಗೆ ಹೋಲಿಸಿದರೆ ಇದರ ಹುಡುಕಾಟವು 377 ಪರ್ಸೆಂಟ್ ಏರಿಕೆ ಕಂಡಿದೆ.

ಕೊರೊನಾ ಎಫೆಕ್ಟ್‌ನಿಂದ ಮನೆಯಿಂದಲೇ ಮಾಡುವ ಕೆಲಸಕ್ಕೆ ತೀವ್ರ ಹುಡುಕಾಟ

''ಕೋವಿಡ್-19 ನಮ್ಮಲ್ಲಿ ಹಲವರು ನಾವು ಕೆಲಸ ಮಾಡುವ ವಿಧಾನವನ್ನು ಬದಲಾಯಿಸುವಂತೆ ಒತ್ತಾಯಿಸಿದೆ. ದೂರದ ಪ್ರದೇಶಕ್ಕೆ ಹೋಗಿ ಮಾಡುವ ಕೆಲಸದ ಕಡೆಗೆ ಭಾರಿ ಬದಲಾವಣೆಯನ್ನು ಉಂಟುಮಾಡುತ್ತದೆ, ಅದು ಮುಂದುವರಿಯುವ ನಿರೀಕ್ಷೆಯಿದೆ'' ಎಂದು ವರದಿ ಹೇಳಿದೆ.

ಲಾಕ್‌ಡೌನ್‌ದಿಂದಾಗಿ ಜನರ ಖರೀದಿ ಪ್ರವೃತ್ತಿಯಲ್ಲೂ ಗಣನೀಯ ಬದಲಾವಣೆ ಕಂಡು ಬಂದಿದೆ. ಲಾಕ್‌ಡೌನ್ ಬಿಗಿಗೊಂಡರೆ ಅಗತ್ಯ ವಸ್ತುಗಳ ಕೊರತೆ ಇರಬಾರದು ಎಂದು ಈ ರೀತಿಯಲ್ಲಿ ಖರೀದಿಸುತ್ತಿದ್ದಾರೆ. ಆದರೆ ಗ್ರಾಮೀಣ ಪ್ರದೇಶದಲ್ಲಿ ಮೌಲ್ಯಯುತ ಖರೀದಿಗೆ ಹೆಚ್ಚು ಗಮನ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+