ಕೊರೊನಾವೈರಸ್‌ನಿಂದಾಗಿ ವಿಶ್ವದ ಎಲ್ಲಾ ರಾಷ್ಟ್ರಗಳು ತತ್ತರಿಸಿ ಹೋಗಿದ್ದು, ಆರ್ಥಿಕ ಬಿಕ್ಕಟ್ಟಿಗೆ ಸಿಲುಕುತ್ತಿವೆ. ಜಾಗತಿಕವಾಗಿ ಆರ್ಥಿಕತೆ ಹಿಂಜರಿತಕ್ಕೆ ಪ್ರವೇಶಿಸಿದೆ ಎಂದು ಆರ್ಥಿಕತೆ ಅಂದಾಜಿಸಿದೆ.
ಕೊರೊನಾವೈರಸ್‌ನಿಂದಾಗಿ ಷೇರು ಮಾರುಕಟ್ಟೆ ಸೇರಿದಂತೆ ಎಲ್ಲಾ ಉದ್ಯಮಗಳು ನೆಲಕಚ್ಚಿ ಹೋಗಿವೆ. ಅಲ್ಲದೆ ಜಾಗತಿಕವಾಗಿ ಟ್ರಿಲಿಯಲ್ ಡಾಲರ್‌ಗಟ್ಟಲೆ ನಷ್ಟ ಅನುಭವಿಸಿದೆ. ಇದರ ನೇರ ಪರಿಣಾಮ ಅಭಿವೃದ್ಧಿಶೀಲ ರಾಷ್ಟ್ರಗಳ ಮೇಲಾಗಲಿದೆ. ಆದರೆ ಇದಕ್ಕೆ ಭಾರತ ಮತ್ತು ಚೀನಾ ಹೊರತಾಗುವ ಸಾಧ್ಯತೆ ಇದೆ ಎಂದು ವಿಶ್ವಸಂಸ್ಥೆ ವ್ಯಾಪಾರ ವಿಭಾಗದ ವರದಿ ಹೇಳಿದೆ.

ಪ್ರಪಂಚದಲ್ಲಿ ಜನಸಂಖ್ಯೆಯ ಮೂರನೇ ಎರಡರಷ್ಟು ಜನರು ಅಭಿವೃದ್ಧಿಶೀಲ ರಾಷ್ಟ್ರಗಳಲ್ಲೇ ಜೀವಿಸುತ್ತಿದ್ದು, ಕೊರೋನಾದಿಂದ ಈ ಅಭಿವೃದ್ಧಿಶೀಲ ರಾಷ್ಟ್ರಗಳು ಹಿಂದೆಂದೂ ಕಾಣದಂತಹ ಆರ್ಥಿಕ ಹೊಡೆತ ಎದುರಿಸುತ್ತಿವೆ. ಇಂತಹ ಪರಿಸ್ಥಿತಿಯಿಂದ ಚೇತರಿಸಿಕೊಳ್ಳುವಂತೆ ಮಾಡುವುದಕ್ಕೆ ಈ ರಾಷ್ಟ್ರಗಳಿಗೆ ವಿಶ್ವಸಮುದಾಯ 2.5 ಟ್ರಿಲಿಯನ್ ಡಾಲರ್ ಪ್ಯಾಕೇಜ್ ನೆರವು ನೀಡುವಂತೆ ವಿಶ್ವಸಂಸ್ಥೆ ಕರೆ ನೀಡಿದೆ.
ವಿಶ್ವಸಂಸ್ಥೆಯ ವ್ಯಾಪಾರ ಅಭಿವೃದ್ಧಿಗೆ ಸಂಬಂಧಿಸಿದ ವಿಭಾಗ (ಯುಎನ್ ಸಿಟಿಎಡಿ)ಯಲ್ಲಿ ಕೊರೋನಾ ಹಾಗೂ ಜಗತ್ತಿನ ಆರ್ಥಿಕತೆ ಮೇಲೆ ಅದರ ಪರಿಣಾಮಗಳನ್ನು ವಿಶ್ಲೇಷಿಸಲಾಗಿದ್ದು, ಸರಕು ರಫ್ತು ಮಾಡುತ್ತಿರುವ ರಾಷ್ಟ್ರಗಳು ವಿದೇಶಿ ಹೂಡಿಕೆಯಲ್ಲಿ ಮುಂದಿನ 2 ವರ್ಷಗಳ ಕಾಲ 2 ಟ್ರಿಲಿಯನ್ ಡಾಲರ್ ನಿಂದ 3 ಟ್ರಿಲಿಯನ್ ಡಾಲರ್ ನಷ್ಟ ಎದುರಿಸಬೇಕಾಗುತ್ತದೆ ಎಂದು ಹೇಳಿದೆ.
ಇನ್ನು ಅಭಿವೃದ್ಧಿ ಹೊಂದಿದ ಆರ್ಥಿಕತೆಗಳಾದ ಚೀನಾ ಸೇರಿದಂತೆ ಹಲವು ರಾಷ್ಟ್ರಗಳು ಸರ್ಕಾರಿ ಪ್ಯಾಕೇಜ್ ಗಳನ್ನು ಒಗ್ಗೂಡಿಸಿದ್ದು, ಜಿ-20 ರಾಷ್ಟ್ರಗಳಿಗೆ 5 ಟ್ರಿಲಿಯನ್ ನೆರವು ನೀಡಲಿದೆ ಎಂದು ಯುಎನ್ಸಿಟಿಎಡಿ ಹೇಳಿದೆ.
ಹೀಗೆ ಕೊರೊನಾಯಿಂದ ಅಭಿವೃದ್ಧಿಶೀಲ ರಾಷ್ಟ್ರಗಳು ಹೆಚ್ಚು ಸಮಸ್ಯೆ ಎದುರಿಸುವಂತೆ ಮಾಡುತ್ತದೆ, ಆದರೆ ಚೀನಾ ಹಾಗೂ ಭಾರತ ಈ ಸಮಸ್ಯೆಯಿಂದ ಬಹುಶಃ ತಪ್ಪಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಯುಎನ್ ಸಿಟಿಎಡಿ ಹೇಳಿದೆ.


Click it and Unblock the Notifications