World water Day: ಜಲ ಸಂರಕ್ಛಣೆ ನಮ್ಮೆಲ್ಲರ ಜವಾಬ್ದಾರಿ; ನೀರು ಉಳಿಸಿ..ನೀರಿಲ್ಲವಾದರೆ ನಮ್ಮೆಲ್ಲರ ಅಳಿವು ಖಚಿತ

ನೀರಿನ ಸಮಸ್ಯೆ ದಿನೇ ದಿನೇ ಹೆಚ್ಚಾಗುತ್ತಲೇ ಇದ್ದು, ಇಂದು ಜಾಗತಿಕ ಸಮಸ್ಯೆಯಾಗಿ ಬೆಳೆಯುತ್ತಿದೆ. ಅದರಲ್ಲೂ ಬೆಂಗಳೂರಿನಲ್ಲಿ ನೀರಿನ ಅಭಾವ ಹೆಚ್ಚಿದೆ. ಅಂತರ್ಜಾಲ ಮಟ್ಟ ಕ್ಷೀಣಿಸುತ್ತಿದೆ. ನೀರಿನ ಉಳಿವಿಗಾಗಿ ಪ್ರತಿ ವರ್ಷ ಮಾರ್ಚ್ 22 ರಂದು ವಿಶ್ವ ಜಲ ದಿನವನ್ನು ಆಚರಣೆ ಮಾಡಲಾಗುತ್ತದೆ.

ಹೌದು, ಸಕಲ ಜೀವ ರಾಶಿಗಳಿಗೂ ನೀರು ಬೇಕೇ ಬೇಕು.ನಮ್ಮ ಉಳಿವಿಗೆ ಆಹಾರ ಹಾಗೂ ಗಾಳಿ ಎಷ್ಟು ಮುಖ್ಯವೋ ಅಷ್ಟೇ ನೀರು ಕೂಡ ಮುಖ್ಯವಾಗಿ ಬೇಕು. ಅಸಮರ್ಪಕ ನಿರ್ವಹಣೆ, ಅತಿಯಾದ ಬಳಕೆ, ನೀರು ಪೋಲು ಮತ್ತು ಹವಾಮಾನ ಬದಲಾವಣೆ ಇತ್ಯಾದಿ ಕಾರಣಗಳಿಂದ ನೀರಿನ ಕೊರತೆ ಹೆಚ್ಚಾಗುತ್ತಿದೆ. ಇದರಿಂದ ಕೈಗಾರಿಕೆ, ಕೃಷಿ ಮತ್ತು ಆರ್ಥಿಕತೆಯ ಮೇಲೆ ಹೆಚ್ಚಿನ ಪ್ರಭಾವ ಬೀರುತ್ತದೆ.

ಜಲ ಸಂರಕ್ಛಣೆ ನಮ್ಮೆಲ್ಲರ ಜವಾಬ್ದಾರಿ; ನೀರು ಉಳಿಸಿ ಪರಿಸರ ಬೆಳಸಿ

ವಿಶ್ವ ಸಂಪನ್ಮೂಲ ಸಂಸ್ಥೆಯ ವಾಟರ್ ರಿಸ್ಕ್ ಅಟ್ಲಾಸ್ ವರದಿಯ ಪ್ರಕಾರ ಅತಿ ಹೆಚ್ಚು ನೀರಿನ ಸಮಸ್ಯೆ ಎದುರಿಸುತ್ತಿರುವ ಜಗತ್ತಿನ 17 ದೇಶಗಳಲ್ಲಿ ಭಾರತ 13ನೇ ಸ್ಥಾನ ಪಡೆದುಕೊಂಡಿರುವುದು ಈ ಸಮಸ್ಯೆಯ ತೀವ್ರತೆ ತಿಳಿಸುತ್ತದೆ. 2050ರ ವೇಳೆಗೆ ಶೇ.20-25ರಷ್ಟು ನೀರಿನ ಬೇಡಿಕೆ ಹೆಚ್ಚಾಗುವ ನಿರೀಕ್ಷೆಯಿದೆ.

Take a Poll

ವಿಶ್ವ ಜಲ ದಿನದ ಇತಿಹಾಸ

1992ರಲ್ಲಿ ರಿಯೊ ಡಿ ಜನೈರೋದಲ್ಲಿ ನಡೆದ ವಿಶ್ವ ಸಂಸ್ಥೆಯ ಪರಿಸರ ಮತ್ತು ಅಭಿವೃದ್ಧಿಯ ಸಮ್ಮೇಳನದಲ್ಲಿ ಅಂತಾರಾಷ್ಟ್ರೀಯ ಸಿಹಿ ನೀರಿನ ದಿನವನ್ನು ಆಚರಿಸುವ ಬಗ್ಗೆ ಶಿಫಾರಸ್ಸು ಮಾಡಲಾಯಿತು. ನಂತರ ಡಿಸೆಂಬರ್ 22ರಂದು ವಿಶ್ವಸಂಸ್ಥೆ ಸಂಸತ್ತಿನಲ್ಲಿ ಇದಕ್ಕೆ ಒಪ್ಪಿಗೆಯನ್ನು ನೀಡಲಾಗಿತ್ತು.1993 ಮಾರ್ಚ್‌ 22ರಂದು ಮೊದಲ ವಿಶ್ವ ಜಲ ದಿನವೆಂದು ಘೋಷಿಸಲಾಯಿತು. ಅಂದಿನಿಂದ ಪ್ರತಿ ವರ್ಷ ವಿಶ್ವ ಜಲದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಪ್ರತಿ ವರ್ಷ ಮಾರ್ಚ್ 22 ರಂದು ವಿಶ್ವ ಜಲ ದಿನವನ್ನು ಆಚರಣೆ ಮಾಡಿ ನೀರಿನ ಪೂರೈಕೆಯ ಕುರಿತು ಜಾಗೃತಿ ಮೂಡಿಸಲಾಗುತ್ತದೆ.

ವಿಶ್ವ ಜಲ ದಿನದ ಮಹತ್ವವೇನು?

ಸಿಹಿನೀರಿನ ಮೂಲಗಳನ್ನು ಕಾಪಾಡುವ ಮೂಲಕ ಮುಂದಿನ ಸಮೂದಾಯಕ್ಕೆ ನೀರನ್ನು ಉಳಿಸುವುದಕ್ಕಾಗಿ ಈ ದಿನವನ್ನು ಮೀಸಲಿಡಲಾಗುತ್ತದೆ.ಈ ದಿನದಂದು ಸಿಹಿ ನೀರಿನ ಸಂಪನ್ಮೂಲಗಳ ಸುಸ್ಥಿರ ನಿರ್ವಹಣೆಗಾಗಿ ಆಚರಣೆ ಮಾಡಲಾಗುತ್ತದೆ. ನಾವು ನೀರನ್ನು ಮಿತವಾಗಿ ಬಳಸಬೇಕು. ನೀರಿನ ಮೂಲಗಳನ್ನು ಸಂರಕ್ಷಣೆ ಮಾಡುವುದು ನಮ್ಮೆಲ್ಲರ ಗುರಿಯಾಗಿದೆ. ಈ ದಿನದಂದು ವಿವಿಧ ಸಂಸ್ಥೆಗಳು,ಎನ್‌ಜಿಒಗಳು ಹಾಗೂ ಖಾಸಗಿ ಸಂಸ್ಥೆಗಳು ನೀರಿನ ಸಂರಕ್ಷಣೆಯ ಬಗ್ಗೆ ಜಾಗೃತಿ ಹಾಗೂ ಕಾರ್ಯಾಗಾರ ಅಭಿಯಾನವನ್ನು ಹಮ್ಮಿಕೊಳ್ಳಲಾಗುತ್ತದೆ.

ನೀರಿನ ಸಂರಕ್ಷಣೆ: ಜಲವೇ ಜೀವನ, ಮತ್ತು ಇದನ್ನು ಸಂಪೂರ್ಣವಾಗಿ ರಕ್ಷಿಸಲು ನಾವು ಜಾಗೃತರಾಗಬೇಕಾಗಿದೆ. ನೀರಿನ ಮೂಲಗಳನ್ನು ಅತಿ ಹೆಚ್ಚು ಬಳಸುವುದು ಹಾಗೂ ನಾಶ ಮಾಡುವುದು ಪರಿಸರಕ್ಕೆ ಹಾನಿ ಮಾಡುತ್ತದೆ. ಜಲ ಸಂರಕ್ಷಣೆಯ ಮೂಲಕ ನಾವು ಪ್ರಾಕೃತಿಕ ಸಂಪನ್ಮೂಲಗಳನ್ನು ಉಳಿಸಬಹುದು.

ಅಗತ್ಯವಾದ ಸಂಪನ್ಮೂಲ: ನಾವು ಕುಡಿಯಲು, ಕೃಷಿಗೆ, ಕೈಗಾರಿಕೆಗೆ, ಮತ್ತು ಇತರ ಹಲವು ಉದ್ದೇಶಗಳಿಗೆ ನೀರನ್ನು ಬಳಕೆ ಮಾಡುತ್ತೇವೆ. ಇದರ ಸರಿಯಾದ ಬಳಕೆಯಿಂದ ನಮ್ಮ ಮುಂದಿನ ಪೀಳಿಗೆಗೂ ಉತ್ತಮವಾಗಿ ಇದನ್ನು ಸಮರ್ಥವಾಗಿ ಬಳಕೆ ಮಾಡುವುದು ಅಗತ್ಯ.

ನೀರಿನ ಕೊರತೆ: ಪ್ರಪಂಚದಲ್ಲಿ ಅನೇಕ ಪ್ರದೇಶಗಳಲ್ಲಿ ನೀರಿನ ಕೊರತೆ ಇದ್ದು, ಅನೇಕ ಜನರು ಖಚಿತವಾಗಿ ಕುಡಿಯಲು ಸಾಕಷ್ಟು ಶುದ್ಧ ನೀರು ಪಡೆಯಲು ಹಸಿವಾಗಿದ್ದಾರೆ. ಇದರ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಮಹತ್ವಪೂರ್ಣ.

ಪರಿಸರ ಪ್ರೇಮ: ಜಲ ಸಂರಕ್ಷಣೆಯ ಮೂಲಕ ನೈಸರ್ಗಿಕ ಪರಿಸರವನ್ನು ಉಳಿಸಬಹುದು. ನಿಯಮಿತವಾಗಿ ನೀರಿನ ಸರಿಯಾದ ಬಳಕೆ, ಅದರ ಮಾಲಿನ್ಯವನ್ನು ತಪ್ಪಿಸುವುದು ಪರಿಸರಕ್ಕೆ ಮಹತ್ವವಾಗಿದೆ

ನೀರಿದ್ದರೆ ಮಾತ್ರವೇ ನಮ್ಮೆಲ್ಲರ ಉಳಿವು, ನೀರಿಲ್ಲವಾದರೆ ನಮ್ಮೆಲ್ಲರ ಶಾಶ್ವತ ಅಳಿವು ಮಿತವಾಗಿ ನೀರನ್ನು ಬಳಸಿ ಉಳಿಸಿ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+